Millat al-Islam

Chapter 98 · 8 verses · Abdussalam Puthige

Surah Al-Bayyina in Kannada

Arabic with tafsir Listen to Surah Al-Bayyina (1270 reciters)
Medinanسورة البينة8 verses

بِسۡمِ ٱللَّهِ ٱلرَّحۡمَٰنِ ٱلرَّحِيمِ

لَمۡ يَكُنِ ٱلَّذِينَ كَفَرُواْ مِنۡ أَهۡلِ ٱلۡكِتَٰبِ وَٱلۡمُشۡرِكِينَ مُنفَكِّينَ حَتَّىٰ تَأۡتِيَهُمُ ٱلۡبَيِّنَةُ ١ಗ್ರಂಥದವರ ಮತ್ತು ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು, ತಮ್ಮ ಬಳಿಗೆ ಸ್ಪಷ್ಟ ಪುರಾವೆಯು ಬಂದು ಬಿಡುವ ತನಕ (ತಮ್ಮ ಧೋರಣೆಯನ್ನು) ಕೈ ಬಿಡುವವರಾಗಿರಲಿಲ್ಲ رَسُولٌ مِّنَ ٱللَّهِ يَتۡلُواْ صُحُفًا مُّطَهَّرَةً ٢(ಇದೀಗ) ಪಾವನ ಪುಟಗಳನ್ನು ಓದಿ ಕೇಳಿಸುವ ಅಲ್ಲಾಹನ ದೂತರು (ಅವರ ಬಳಿಗೆ ಬಂದಿರುವರು) فِيهَا كُتُبٌ قَيِّمَةٌ ٣ಅದರಲ್ಲಿ ಖಚಿತ ಆದೇಶಗಳು ಲಿಖಿತವಾಗಿವೆ وَمَا تَفَرَّقَ ٱلَّذِينَ أُوتُواْ ٱلۡكِتَٰبَ إِلَّا مِنۢ بَعۡدِ مَا جَآءَتۡهُمُ ٱلۡبَيِّنَةُ ٤(ಈ ಹಿಂದೆಯೂ) ಗ್ರಂಥದವರು, ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ಬಳಿಕವಷ್ಟೇ, ಛಿನ್ನ ಭಿನ್ನರಾಗಿದ್ದರು وَمَآ أُمِرُوٓاْ إِلَّا لِيَعۡبُدُواْ ٱللَّهَ مُخۡلِصِينَ لَهُ ٱلدِّينَ حُنَفَآءَ وَيُقِيمُواْ ٱلصَّلَوٰةَ وَيُؤۡتُواْ ٱلزَّكَوٰةَۚ وَذَٰلِكَ دِينُ ٱلۡقَيِّمَةِ ٥ನಿಷ್ಠೆಯನ್ನು ಅವನಿಗೇ (ಅಲ್ಲಾಹನಿಗೇ) ಮೀಸಲಾಗಿಟ್ಟು, ಏಕಾಗ್ರತೆಯೊಂದಿಗೆ ಅಲ್ಲಾಹನನ್ನು ಆರಾಧಿಸಬೇಕು, ನಮಾಝನ್ನು ಸಲ್ಲಿಸಬೇಕು ಮತ್ತು ಝಕಾತನ್ನು ಪಾವತಿಸಬೇಕು – ಇದುವೇ ಸ್ಥಿರವಾದ ಧರ್ಮ ಎಂದೇ (ಈ ಹಿಂದೆಯೂ) ಅವರಿಗೆ ಆದೇಶಿಸಲಾಗಿತ್ತು إِنَّ ٱلَّذِينَ كَفَرُواْ مِنۡ أَهۡلِ ٱلۡكِتَٰبِ وَٱلۡمُشۡرِكِينَ فِي نَارِ جَهَنَّمَ خَٰلِدِينَ فِيهَآۚ أُوْلَٰٓئِكَ هُمۡ شَرُّ ٱلۡبَرِيَّةِ ٦ಗ್ರಂಥದವರ ಹಾಗೂ ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು ಸದಾಕಾಲ ನರಕದಲ್ಲಿರುವರು – ಅವರೇ ಅತ್ಯಂತ ನೀಚ ಜೀವಿಗಳು إِنَّ ٱلَّذِينَ ءَامَنُواْ وَعَمِلُواْ ٱلصَّٰلِحَٰتِ أُوْلَٰٓئِكَ هُمۡ خَيۡرُ ٱلۡبَرِيَّةِ ٧ವಿಶ್ವಾಸಿಗಳು ಮತ್ತು ಸತ್ಕರ್ಮಗಳನ್ನು ಮಾಡಿದವರು – ಖಂಡಿತ ಅವರೇ ಅತ್ಯುತ್ತಮ ಜೀವಿಗಳು جَزَآؤُهُمۡ عِندَ رَبِّهِمۡ جَنَّٰتُ عَدۡنٍ تَجۡرِي مِن تَحۡتِهَا ٱلۡأَنۡهَٰرُ خَٰلِدِينَ فِيهَآ أَبَدًاۖ رَّضِيَ ٱللَّهُ عَنۡهُمۡ وَرَضُواْ عَنۡهُۚ ذَٰلِكَ لِمَنۡ خَشِيَ رَبَّهُۥ ٨ಅವರ ಪ್ರತಿಫಲವು ಅವರ ಒಡೆಯನ ಬಳಿ – ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗದ ರೂಪದಲ್ಲಿದೆ. ಅದರಲ್ಲಿ ಅವರು ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅಲ್ಲಾಹನಿಂದ ಸಂತುಷ್ಟರಾಗಿರುವರು. ಇದು ತಮ್ಮ ಒಡೆಯನಿಗೆ ಅಂಜುತ್ತಿದ್ದವರಿಗಾಗಿ ಇರುವ ಪ್ರತಿಫಲ

Translation: Abdussalam Puthige.