Millat al-Islam

Chapter 88 · 26 verses · Abdussalam Puthige

Surah Al-Ghashiya in Kannada

Arabic with tafsir Listen to Surah Al-Ghashiya (1299 reciters)

بِسۡمِ ٱللَّهِ ٱلرَّحۡمَٰنِ ٱلرَّحِيمِ

هَلۡ أَتَىٰكَ حَدِيثُ ٱلۡغَٰشِيَةِ ١ಎಲ್ಲವನ್ನೂ ಆವರಿಸುವ (ಲೋಕಾಂತ್ಯ) ದಿನದ ವಾರ್ತೆಯು ನಿಮಗೆ ತಲುಪಿದೆಯೇ وُجُوهٌ يَوۡمَئِذٍ خَٰشِعَةٌ ٢ಅಂದು ಕೆಲವು ಮುಖಗಳು ಭೀತವಾಗಿರುವವು عَامِلَةٌ نَّاصِبَةٌ ٣ತೀವ್ರವಾಗಿ ದಣಿದು ಸೋತಿರುವವು تَصۡلَىٰ نَارًا حَامِيَةً ٤ಅವರು ಉರಿಯುವ ಬೆಂಕಿಯನ್ನು ಸೇರುವರು تُسۡقَىٰ مِنۡ عَيۡنٍ ءَانِيَةٍ ٥ಕುದಿಯುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು لَّيۡسَ لَهُمۡ طَعَامٌ إِلَّا مِن ضَرِيعٍ ٦ಮುಳ್ಳಿನ ಗಿಡದ ಹೊರತು ಬೇರೆ ಯಾವ ಆಹಾರವೂ ಅವರಿಗೆ ಸಿಗದು لَّا يُسۡمِنُ وَلَا يُغۡنِي مِن جُوعٍ ٧ಅದರಿಂದ ಅವರಿಗೆ ಪುಷ್ಟತೆಯೂ ಸಿಗದು ಮತ್ತು ಅವರ ಹಸಿವೂ ನೀಗದು وُجُوهٌ يَوۡمَئِذٍ نَّاعِمَةٌ ٨ಕೆಲವು ಮುಖಗಳು ಅಂದು ಸಂಭ್ರಮಿಸುತ್ತಿರುವವು لِّسَعۡيِهَا رَاضِيَةٌ ٩ತಮ್ಮ ಗಳಿಕೆಯಿಂದ ಅವರು ಸಂತೃಪ್ತರಾಗಿರುವರು فِي جَنَّةٍ عَالِيَةٍ ١٠ಅವರು ಉನ್ನತವಾದ ತೋಟಗಳಲ್ಲಿರುವರು لَّا تَسۡمَعُ فِيهَا لَٰغِيَةً ١١ವ್ಯರ್ಥವಾದ ಯಾವುದನ್ನೂ ಅವರು ಅಲ್ಲಿ ಕೇಳಲಾರರು فِيهَا عَيۡنٌ جَارِيَةٌ ١٢ಅಲ್ಲಿ ಚಿಲುಮೆಗಳು ಹರಿಯುತ್ತಿರುವವು فِيهَا سُرُرٌ مَّرۡفُوعَةٌ ١٣ಅಲ್ಲಿ ಎತ್ತರದಲ್ಲಿ ಹಾಸಿರುವ ಪೀಠಗಳಿರುವವು وَأَكۡوَابٌ مَّوۡضُوعَةٌ ١٤ಸಾಲಾಗಿಟ್ಟ ಪಾನ ಪಾತ್ರೆಗಳಿರುವವು وَنَمَارِقُ مَصۡفُوفَةٌ ١٥ಸಾಲುಸಾಲಾಗಿ ದಿಂಬುಗಳಿರುವವು وَزَرَابِيُّ مَبۡثُوثَةٌ ١٦ಮತ್ತು ನುಣುಪಾದ ಹಾಸುಗಳು ಇರುವವು أَفَلَا يَنظُرُونَ إِلَى ٱلۡإِبِلِ كَيۡفَ خُلِقَتۡ ١٧ಅವರು ಹೆಣ್ಣೊಂಟೆಯತ್ತ ನೋಡುವುದಿಲ್ಲವೇ – ಅವುಗಳನ್ನು ಯಾವ ರೀತಿ ಸೃಷ್ಟಿಸಲಾಗಿದೆ ಎಂದು وَإِلَى ٱلسَّمَآءِ كَيۡفَ رُفِعَتۡ ١٨ಮತ್ತು ಆಕಾಶದೆಡೆಗೆ, (ನೋಡುವುದಿಲ್ಲವೇ,) ಅದನ್ನು ಯಾವ ರೀತಿ ಎತ್ತರಿಸಲಾಗಿದೆ ಎಂದು وَإِلَى ٱلۡجِبَالِ كَيۡفَ نُصِبَتۡ ١٩ಮತ್ತು ಪರ್ವತಗಳೆಡೆಗೆ, (ನೋಡುವುದಿಲ್ಲವೇ) ಅವುಗಳನ್ನು ಯಾವ ರೀತಿ ನೆಡಲಾಗಿದೆ ಎಂದು وَإِلَى ٱلۡأَرۡضِ كَيۡفَ سُطِحَتۡ ٢٠ಮತ್ತು ಭೂಮಿಯೆಡೆಗೆ, (ನೋಡುವುದಿಲ್ಲವೇ) ಅದನ್ನು ಯಾವ ರೀತಿ ಹಾಸಲಾಗಿದೆ ಎಂದು فَذَكِّرۡ إِنَّمَآ أَنتَ مُذَكِّرٌ ٢١(ದೂತರೇ,) ನೀವು ಬೋಧಿಸಿರಿ, ಏಕೆಂದರೆ ನೀವು ಬೋಧಕರೇ ಆಗಿದ್ದೀರಿ لَّسۡتَ عَلَيۡهِم بِمُصَيۡطِرٍ ٢٢ನೀವು ಅವರ ಕಾವಲುಗಾರರೇನಲ್ಲ إِلَّا مَن تَوَلَّىٰ وَكَفَرَ ٢٣ಇನ್ನು ಕಡೆಗಣಿಸಿದವನ ಮತ್ತು ಧಿಕ್ಕರಿಸಿದವನ ವಿಚಾರ – فَيُعَذِّبُهُ ٱللَّهُ ٱلۡعَذَابَ ٱلۡأَكۡبَرَ ٢٤ಅಲ್ಲಾಹನು ಅವನನ್ನು ದೊಡ್ಡ ಶಿಕ್ಷೆಗೆ ಗುರಿಪಡಿಸುವನು إِنَّ إِلَيۡنَآ إِيَابَهُمۡ ٢٥ಅವರು ಖಂಡಿತ ನಮ್ಮೆಡೆಗೇ ಮರಳಿ ಬರಬೇಕಾಗಿದೆ ثُمَّ إِنَّ عَلَيۡنَا حِسَابَهُم ٢٦ಮತ್ತು ಅವರ ವಿಚಾರಣೆಯ ಹೊಣೆಯು ನಮ್ಮ ಮೇಲಿದೆ

Translation: Abdussalam Puthige.