Millat al-Islam

Chapter 15 · 99 verses · Abdussalam Puthige

Surah Al-Hijr in Kannada

Arabic with tafsir Listen to Surah Al-Hijr (1257 reciters)
Meccanسورة الحجر99 verses

بِسۡمِ ٱللَّهِ ٱلرَّحۡمَٰنِ ٱلرَّحِيمِ

الٓرۚ تِلۡكَ ءَايَٰتُ ٱلۡكِتَٰبِ وَقُرۡءَانٍ مُّبِينٍ ١ಒಂದು ಲಿಖಿತ ಕಾಲವನ್ನು ನಿಗದಿಪಡಿಸದೆ ನಾವು ಯಾವ ಜನಾಂಗವನ್ನೂ ನಾಶ ಮಾಡಿದ್ದಿಲ್ಲ رُّبَمَا يَوَدُّ ٱلَّذِينَ كَفَرُواْ لَوۡ كَانُواْ مُسۡلِمِينَ ٢ತನ್ನ ನಿಗದಿತ ಅವಧಿಯನ್ನು ಮೀರಿ ಮುನ್ನಡೆಯಲು ಅಥವಾ ಅದರಿಂದ ಹಿಂದೆ ಉಳಿಯಲು ಯಾವ ಸಮುದಾಯಕ್ಕೂ ಸಾಧ್ಯವಾಗದು ذَرۡهُمۡ يَأۡكُلُواْ وَيَتَمَتَّعُواْ وَيُلۡهِهِمُ ٱلۡأَمَلُۖ فَسَوۡفَ يَعۡلَمُونَ ٣ಅವರು (ಧಿಕ್ಕಾರಿಗಳು) ಹೇಳಿದರು; ‘‘ದಿವ್ಯ ಉಪದೇಶ ಇಳಿಸಿ ಕೊಡಲಾಗಿರು ವವನೇ, ನೀನೊಬ್ಬ ಹುಚ್ಚನೇ ಸರಿ وَمَآ أَهۡلَكۡنَا مِن قَرۡيَةٍ إِلَّا وَلَهَا كِتَابٌ مَّعۡلُومٌ ٤ನೀನು ಸತ್ಯವಂತನಾಗಿದ್ದರೆ, ನೀನೇಕೆ ನಮ್ಮ ಬಳಿಗೆ ಮಲಕ್‌ಗಳನ್ನು ಕರೆತರುವುದಿಲ್ಲ?’’ مَّا تَسۡبِقُ مِنۡ أُمَّةٍ أَجَلَهَا وَمَا يَسۡتَـٔۡخِرُونَ ٥ನಿಜವಾಗಿ ನಾವು ಮಲಕ್‌ಗಳನ್ನು ಸತ್ಯದೊಂದಿಗೆ ಮಾತ್ರ ಕಳುಹಿಸುತ್ತೇವೆ. ಆದರೆ ಆಗ ಅವರಿಗೆ (ಧಿಕ್ಕಾರಿಗಳಿಗೆ) ಹೆಚ್ಚಿನ ಕಾಲಾವಧಿ ನೀಡಲಾಗುವುದಿಲ್ಲ وَقَالُواْ يَٰٓأَيُّهَا ٱلَّذِي نُزِّلَ عَلَيۡهِ ٱلذِّكۡرُ إِنَّكَ لَمَجۡنُونٌ ٦ಖಂಡಿತವಾಗಿಯೂ ನಾವೇ ಈ ದಿವ್ಯ ಬೋಧನೆಯನ್ನು ಇಳಿಸಿ ಕೊಟ್ಟವರು ಮತ್ತು ಖಂಡಿತವಾಗಿಯೂ ನಾವೇ ಇದರ ಸಂರಕ್ಷಕರಾಗಿದ್ದೇವೆ لَّوۡمَا تَأۡتِينَا بِٱلۡمَلَٰٓئِكَةِ إِن كُنتَ مِنَ ٱلصَّٰدِقِينَ ٧ನಿಮಗಿಂತ ಹಿಂದಿನ ಜನವರ್ಗಗಳಲ್ಲೂ ನಾವು (ದೂತರನ್ನು) ರವಾನಿಸಿದ್ದೆವು مَا نُنَزِّلُ ٱلۡمَلَٰٓئِكَةَ إِلَّا بِٱلۡحَقِّ وَمَا كَانُوٓاْ إِذًا مُّنظَرِينَ ٨ಅವರ ಬಳಿಗೆ ಬಂದ ದೂತರಲ್ಲಿ ಯಾರೂ ಅಪಹಾಸ್ಯಕ್ಕೆ ತುತ್ತಾಗದೆ ಇರಲಿಲ್ಲ إِنَّا نَحۡنُ نَزَّلۡنَا ٱلذِّكۡرَ وَإِنَّا لَهُۥ لَحَٰفِظُونَ ٩ಈ ರೀತಿ ನಾವು ಅದನ್ನು (ಅಪಹಾಸ್ಯವನ್ನು) ಅಪರಾಧಿಗಳ ಮನಸ್ಸುಗಳೊಳಗೆ ಬಿತ್ತಿರುತ್ತೇವೆ وَلَقَدۡ أَرۡسَلۡنَا مِن قَبۡلِكَ فِي شِيَعِ ٱلۡأَوَّلِينَ ١٠ಅವರು ಇದನ್ನು (ಈ ಉಪದೇಶವನ್ನು) ನಂಬಲಾರರು. ಅದುವೇ, ಹಿಂದಿನವರ ಸಂಪ್ರದಾಯವಾಗಿದೆ وَمَا يَأۡتِيهِم مِّن رَّسُولٍ إِلَّا كَانُواْ بِهِۦ يَسۡتَهۡزِءُونَ ١١ಒಂದು ವೇಳೆ ನಾವು ಅವರ ಪಾಲಿಗೆ ಆಕಾಶದ ಒಂದು ಬಾಗಿಲನ್ನು ತೆರೆದಿದ್ದರೆ ಮತ್ತು ಅವರು ಆ ಮೂಲಕ ಮೇಲೇರುತ್ತಲೇ ಇದ್ದಿದ್ದರೆ – كَذَٰلِكَ نَسۡلُكُهُۥ فِي قُلُوبِ ٱلۡمُجۡرِمِينَ ١٢ಆಗಲೂ ಅವರು, ‘‘ನಮ್ಮ ದೃಷ್ಟಿಗಳನ್ನು ವಂಚಿಸಲಾಗಿದೆ, ನಿಜವಾಗಿ ನಮ್ಮನ್ನು ಮಂತ್ರ ಮುಗ್ಧಗೊಳಿಸಲಾಗಿದೆ’’ ಎಂದೇ ಹೇಳುತ್ತಿದ್ದರು لَا يُؤۡمِنُونَ بِهِۦ وَقَدۡ خَلَتۡ سُنَّةُ ٱلۡأَوَّلِينَ ١٣ಖಂಡಿತವಾಗಿಯೂ ನಾವು ಆಕಾಶದಲ್ಲಿ ತಾರಾ ಮಂಡಲಗಳನ್ನು ನಿರ್ಮಿಸಿದೆವು ಮತ್ತು ನಾವು ಅವುಗಳನ್ನು ನೋಡುವವರ ಪಾಲಿಗೆ ಅಲಂಕಾರವಾಗಿಸಿದೆವು وَلَوۡ فَتَحۡنَا عَلَيۡهِم بَابًا مِّنَ ٱلسَّمَآءِ فَظَلُّواْ فِيهِ يَعۡرُجُونَ ١٤ಮತ್ತು ನಾವು ಅವುಗಳನ್ನು ಎಲ್ಲ ಶಪಿತ ಶೈತಾನರಿಂದ ಸುರಕ್ಷಿತವಾಗಿಟ್ಟೆವು لَقَالُوٓاْ إِنَّمَا سُكِّرَتۡ أَبۡصَٰرُنَا بَلۡ نَحۡنُ قَوۡمٌ مَّسۡحُورُونَ ١٥ಕದ್ದು ಆಲಿಸಲು ಪ್ರಯತ್ನಿಸುವಾತನನ್ನು ಒಂದು ಉಜ್ವಲ ಬೆಂಕಿಯು ಹಿಂಬಾಲಿಸುತ್ತದೆ وَلَقَدۡ جَعَلۡنَا فِي ٱلسَّمَآءِ بُرُوجًا وَزَيَّنَّٰهَا لِلنَّٰظِرِينَ ١٦ಹಾಗೆಯೇ ನಾವು ಭೂಮಿಯನ್ನು ಹರಡಿದೆವು ಮತ್ತು ಅದರಲ್ಲಿ ಬೆಟ್ಟಗಳನ್ನು ನೆಟ್ಟೆವು ಹಾಗೂ ಅದರಲ್ಲಿ ಎಲ್ಲವನ್ನೂ ಸಮರ್ಪಕ ಪ್ರಮಾಣದಲ್ಲಿ ಬೆಳೆಸಿದೆವು وَحَفِظۡنَٰهَا مِن كُلِّ شَيۡطَٰنٍ رَّجِيمٍ ١٧ಅದರಲ್ಲಿ ನಾವು ನಿಮಗೂ ನೀವು ಯಾರ ಅನ್ನದಾತರಲ್ಲವೋ ಅವರಿಗೂ ಜೀವನೋಪಾಯಗಳನ್ನು ಒದಗಿಸಿದೆವು إِلَّا مَنِ ٱسۡتَرَقَ ٱلسَّمۡعَ فَأَتۡبَعَهُۥ شِهَابٌ مُّبِينٌ ١٨ನಮ್ಮ ಬಳಿ ಪ್ರತಿಯೊಂದು ವಸ್ತುವಿನ ಭಂಡಾರಗಳೇ ಇವೆ. (ಆದರೆ) ನಾವು ಅವುಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಇಳಿಸಿಕೊಡುತ್ತೇವೆ وَٱلۡأَرۡضَ مَدَدۡنَٰهَا وَأَلۡقَيۡنَا فِيهَا رَوَٰسِيَ وَأَنۢبَتۡنَا فِيهَا مِن كُلِّ شَيۡءٍ مَّوۡزُونٍ ١٩ನಾವು ನೀರು ತುಂಬಿದ ಗಾಳಿಯನ್ನು ರವಾನಿಸಿದೆವು ಮತ್ತು ನಾವು ಆಕಾಶದಿಂದ ನೀರನ್ನು ಇಳಿಸಿ ಅದನ್ನು ನಿಮಗೆ ಕುಡಿಸಿದೆವು. ಅದೇನೂ ನಿಮ್ಮ ಸಂಗ್ರಹದಲ್ಲಿರಲಿಲ್ಲ وَجَعَلۡنَا لَكُمۡ فِيهَا مَعَٰيِشَ وَمَن لَّسۡتُمۡ لَهُۥ بِرَٰزِقِينَ ٢٠ಖಂಡಿತ ನಾವೇ (ಎಲ್ಲರನ್ನೂ) ಜೀವಂತಗೊಳಿಸುವವರು ಹಾಗೂ ಸಾಯಿಸುವವರಾಗಿದ್ದೇವೆ ಮತ್ತು (ಅಂತಿಮವಾಗಿ) ನಾವೇ ಎಲ್ಲರ ಉತ್ತರಾಧಿಕಾರಿಗಳಾಗಿರುತ್ತೇವೆ وَإِن مِّن شَيۡءٍ إِلَّا عِندَنَا خَزَآئِنُهُۥ وَمَا نُنَزِّلُهُۥٓ إِلَّا بِقَدَرٍ مَّعۡلُومٍ ٢١ನಿಮ್ಮಲ್ಲಿ ಮುಂದೆ ದಾಟಿ ಹೋದವರನ್ನೂ ನಾವು ಖಂಡಿತ ಬಲ್ಲೆವು ಮತ್ತು ಹಿಂದೆ ಉಳಿದಿರುವವರನ್ನೂ ನಾವು ಖಂಡಿತ ಬಲ್ಲೆವು وَأَرۡسَلۡنَا ٱلرِّيَٰحَ لَوَٰقِحَ فَأَنزَلۡنَا مِنَ ٱلسَّمَآءِ مَآءً فَأَسۡقَيۡنَٰكُمُوهُ وَمَآ أَنتُمۡ لَهُۥ بِخَٰزِنِينَ ٢٢ಖಂಡಿತ ನಿಮ್ಮ ಒಡೆಯನೇ ಅವರೆಲ್ಲರನ್ನೂ ಒಂದೆಡೆ ಸೇರಿಸುವನು. ಅವನು ಖಂಡಿತ ತುಂಬಾ ಯುಕ್ತಿವಂತನೂ ಅರಿವು ಉಳ್ಳವನೂ ಆಗಿದ್ದಾನೆ وَإِنَّا لَنَحۡنُ نُحۡيِۦ وَنُمِيتُ وَنَحۡنُ ٱلۡوَٰرِثُونَ ٢٣ಖಂಡಿತವಾಗಿಯೂ ನಾವೇ ಮಾನವನನ್ನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವೆವು وَلَقَدۡ عَلِمۡنَا ٱلۡمُسۡتَقۡدِمِينَ مِنكُمۡ وَلَقَدۡ عَلِمۡنَا ٱلۡمُسۡتَـٔۡخِرِينَ ٢٤ಅದಕ್ಕಿಂತಲೂ ಮುನ್ನ ನಾವು ತೀಕ್ಷ್ಣವಾದ ಬೆಂಕಿಯಿಂದ ಜಿನ್ನ್‌ಗಳನ್ನು ಸೃಷ್ಟಿಸಿದ್ದೆವು وَإِنَّ رَبَّكَ هُوَ يَحۡشُرُهُمۡۚ إِنَّهُۥ حَكِيمٌ عَلِيمٌ ٢٥ನಿಮ್ಮ ಒಡೆಯನು, ಮಲಕ್‌ಗಳೊಡನೆ ಹೀಗೆಂದಿದ್ದನು; ನಾನು ಕರಿ ಆವೆ ಮಣ್ಣಿನ ಒಣಗಾರೆಯಿಂದ ಒಬ್ಬ ಮಾನವನನ್ನು ಸೃಷ್ಟಿಸಲಿದ್ದೇನೆ وَلَقَدۡ خَلَقۡنَا ٱلۡإِنسَٰنَ مِن صَلۡصَٰلٍ مِّنۡ حَمَإٍ مَّسۡنُونٍ ٢٦ನಾನು ಅವನನ್ನು ಸಜ್ಜುಗೊಳಿಸಿ ಅವನಲ್ಲಿ ನನ್ನ ಆತ್ಮವನ್ನು ಊದಿದಾಗ ನೀವು ಅವನಿಗೆ ಸಾಷ್ಟಾಂಗವೆರಗಿರಿ وَٱلۡجَآنَّ خَلَقۡنَٰهُ مِن قَبۡلُ مِن نَّارِ ٱلسَّمُومِ ٢٧ಅದರಂತೆ, ಎಲ್ಲ ಮಲಕ್‌ಗಳೂ ಸಾಷ್ಟಾಂಗವೆರಗಿದರು وَإِذۡ قَالَ رَبُّكَ لِلۡمَلَٰٓئِكَةِ إِنِّي خَٰلِقُۢ بَشَرًا مِّن صَلۡصَٰلٍ مِّنۡ حَمَإٍ مَّسۡنُونٍ ٢٨ಆದರೆ ಇಬ್ಲೀಸನ ಹೊರತು. ಅವನು, ಸಾಷ್ಟಾಂಗ ವೆರಗಿದವರ ಜೊತೆ ಸೇರಲು ನಿರಾಕರಿಸಿದನು فَإِذَا سَوَّيۡتُهُۥ وَنَفَخۡتُ فِيهِ مِن رُّوحِي فَقَعُواْ لَهُۥ سَٰجِدِينَ ٢٩ಅವನು (ಅಲ್ಲಾಹನು) ಕೇಳಿದನು; ಓ ಇಬ್ಲೀಸ್, ನೀನೇಕೆ ಸಾಷ್ಟಾಂಗವೆರಗಿದವರ ಜೊತೆ ಸೇರಲಿಲ್ಲ فَسَجَدَ ٱلۡمَلَٰٓئِكَةُ كُلُّهُمۡ أَجۡمَعُونَ ٣٠ಅವನು (ಇಬ್ಲೀಸ್) ಹೇಳಿದನು; ನೀನು ಆವೆಮಣ್ಣಿನ ಒಣಗಾರೆಯಿಂದ ಸೃಷ್ಟಿಸಿರುವ ಮಾನವನಿಗೆ ಸಾಷ್ಟಾಂಗ ವೆರಗುವವನು ನಾನಲ್ಲ إِلَّآ إِبۡلِيسَ أَبَىٰٓ أَن يَكُونَ مَعَ ٱلسَّٰجِدِينَ ٣١ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ತೊಲಗು. ಖಂಡಿತವಾಗಿಯೂ ನೀನು ಶಪಿತನು قَالَ يَٰٓإِبۡلِيسُ مَا لَكَ أَلَّا تَكُونَ مَعَ ٱلسَّٰجِدِينَ ٣٢ಅಂತಿಮ ವಿಚಾರಣೆಯ ದಿನದವರೆಗೂ ನಿನ್ನ ಮೇಲೆ ಶಾಪವಿರುವುದು قَالَ لَمۡ أَكُن لِّأَسۡجُدَ لِبَشَرٍ خَلَقۡتَهُۥ مِن صَلۡصَٰلٍ مِّنۡ حَمَإٍ مَّسۡنُونٍ ٣٣ಅವನು ಹೇಳಿದನು; ‘‘ನನ್ನೊಡೆಯಾ, (ಎಲ್ಲ ನಿರ್ಜೀವಿಗಳನ್ನು) ಜೀವಂತಗೊಳಿಸಲಾಗುವ ದಿನದ ತನಕ ನನಗೆ ಕಾಲಾವಕಾಶವನ್ನು ನೀಡು.’’ قَالَ فَٱخۡرُجۡ مِنۡهَا فَإِنَّكَ رَجِيمٌ ٣٤ಅವನು (ಅಲ್ಲಾಹನು) ಹೇಳಿದನು; ಇದೋ, ನಿನಗೆ ಕಾಲಾವಕಾಶ ನೀಡಲಾಗಿದೆ وَإِنَّ عَلَيۡكَ ٱللَّعۡنَةَ إِلَىٰ يَوۡمِ ٱلدِّينِ ٣٥– ಒಂದು ನಿರ್ದಿಷ್ಟ ದಿನದ ವರೆಗೆ قَالَ رَبِّ فَأَنظِرۡنِيٓ إِلَىٰ يَوۡمِ يُبۡعَثُونَ ٣٦ಅವನು (ಇಬ್ಲೀಸ್) ಹೇಳಿದನು; ನನ್ನೊಡೆಯಾ, ನೀನು ನನ್ನನ್ನು ದಾರಿ ತಪ್ಪಿಸಿರುವುದರಿಂದ ನಾನು (ತಪ್ಪು ದಾರಿಯನ್ನು) ಭೂಮಿಯಲ್ಲಿರುವವರಿಗೆ ಚಂದಗಾಣಿಸುವೆನು ಮತ್ತು ಅವರೆಲ್ಲರನ್ನೂ ದಾರಿತಪ್ಪಿಸಿ ಬಿಡುವೆನು قَالَ فَإِنَّكَ مِنَ ٱلۡمُنظَرِينَ ٣٧ಅವರ ಪೈಕಿ ನಿನ್ನ ಆಯ್ದ ದಾಸರ ಹೊರತು إِلَىٰ يَوۡمِ ٱلۡوَقۡتِ ٱلۡمَعۡلُومِ ٣٨ಅವನು (ಅಲ್ಲಾಹನು) ಹೇಳಿದನು; ಇದು ನನ್ನ ಕಡೆಗಿರುವ ನೇರ ಮಾರ್ಗ قَالَ رَبِّ بِمَآ أَغۡوَيۡتَنِي لَأُزَيِّنَنَّ لَهُمۡ فِي ٱلۡأَرۡضِ وَلَأُغۡوِيَنَّهُمۡ أَجۡمَعِينَ ٣٩ಖಂಡಿತವಾಗಿಯೂ ಆ ನನ್ನ ದಾಸರ ಮೇಲೆ ನಿನ್ನ ಅಧಿಕಾರವೇನೂ ನಡೆಯದು – ನಿನ್ನನ್ನು ಅನುಸರಿಸಿದ ದಾರಿಗೇಡಿಗಳ ಹೊರತು إِلَّا عِبَادَكَ مِنۡهُمُ ٱلۡمُخۡلَصِينَ ٤٠ಖಂಡಿತವಾಗಿಯೂ, ನರಕವೇ ಅವರೆಲ್ಲರಿಗೆ ವಾಗ್ದಾನ ಮಾಡಲಾದ ನೆಲೆಯಾಗಿದೆ قَالَ هَٰذَا صِرَٰطٌ عَلَيَّ مُسۡتَقِيمٌ ٤١ಅದಕ್ಕೆ ಏಳು ಬಾಗಿಲುಗಳಿರುವವು. ಪ್ರತಿಯೊಂದು ಬಾಗಿಲಿಗೂ ಅವರಲ್ಲಿನ ಒಂದು ಪಾಲು ನಿಗದಿತವಾಗಿದೆ إِنَّ عِبَادِي لَيۡسَ لَكَ عَلَيۡهِمۡ سُلۡطَٰنٌ إِلَّا مَنِ ٱتَّبَعَكَ مِنَ ٱلۡغَاوِينَ ٤٢ಧರ್ಮನಿಷ್ಠರು ಖಂಡಿತ ತೋಟಗಳಲ್ಲಿ ಹಾಗೂ ಝರಿಗಳಲ್ಲಿ ಇರುವರು وَإِنَّ جَهَنَّمَ لَمَوۡعِدُهُمۡ أَجۡمَعِينَ ٤٣‘‘ಶಾಂತಿಯೊಂದಿಗೆ ಹಾಗೂ ಸುರಕ್ಷಿತರಾಗಿ ಇವುಗಳೊಳಗೆ ಪ್ರವೇಶಿಸಿರಿ’’ (ಎನ್ನುತ್ತಾ ಅವರನ್ನು ಸ್ವಾಗತಿಸಲಾಗುವುದು) لَهَا سَبۡعَةُ أَبۡوَٰبٍ لِّكُلِّ بَابٍ مِّنۡهُمۡ جُزۡءٌ مَّقۡسُومٌ ٤٤ಅವರ ಎದೆಗಳಲ್ಲಿ ಉಳಿದಿದ್ದ ವೈಷಮ್ಯವನ್ನೆಲ್ಲಾ ನಾವು ಕಿತ್ತೆಸೆದೆವು – ಅವರು ಸಹೋದರರಾಗಿ ಆಸನಗಳಲ್ಲಿ ಎದುರು ಬದುರಾಗಿ ಕುಳಿತಿರುವರು إِنَّ ٱلۡمُتَّقِينَ فِي جَنَّٰتٍ وَعُيُونٍ ٤٥ಅಲ್ಲಿ ಯಾವ ಸಂಕಟವೂ ಅವರನ್ನು ಬಾಧಿಸದು ಮತ್ತು ಅವರನ್ನೆಂದೂ ಅಲ್ಲಿಂದ ಹೊರ ಹಾಕಲಾಗದು ٱدۡخُلُوهَا بِسَلَٰمٍ ءَامِنِينَ ٤٦ನನ್ನ ದಾಸರಿಗೆ ತಿಳಿಸಿ ಬಿಡಿರಿ; ನಾನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ತುಂಬಾ ಕರುಣಾಳುವೆಂದು وَنَزَعۡنَا مَا فِي صُدُورِهِم مِّنۡ غِلٍّ إِخۡوَٰنًا عَلَىٰ سُرُرٍ مُّتَقَٰبِلِينَ ٤٧ಮತ್ತು ನನ್ನ ಶಿಕ್ಷೆಯೂ ತುಂಬಾ ಕಠೋರ ಶಿಕ್ಷೆಯಾಗಿರುವುದೆಂದು لَا يَمَسُّهُمۡ فِيهَا نَصَبٌ وَمَا هُم مِّنۡهَا بِمُخۡرَجِينَ ٤٨ಇಬ್ರಾಹೀಮರ ಅತಿಥಿಗಳ ಕುರಿತು ಅವರಿಗೆ ತಿಳಿಸಿರಿ ۞ نَبِّئۡ عِبَادِيٓ أَنِّيٓ أَنَا ٱلۡغَفُورُ ٱلرَّحِيمُ ٤٩ಅವರು, ಅವರ ಬಳಿಗೆ ಬಂದಾಗ ‘ಸಲಾಮ್’ (ಶಾಂತಿ) ಎಂದರು. ಆಗ ಅವರು (ಇಬ್ರಾಹೀಮರು), ನಮಗೆ ನಿಮ್ಮ ಕುರಿತು ಆತಂಕವಿದೆ ಎಂದರು ۞ وَأَنَّ عَذَابِي هُوَ ٱلۡعَذَابُ ٱلۡأَلِيمُ ٥٠ಅವರು ಹೇಳಿದರು; ಆತಂಕ ಪಡಬೇಡಿ. ನಾವು ನಿಮಗೆ ಒಬ್ಬ ಜ್ಞಾನವಂತ ಪುತ್ರನ ಶುಭವಾರ್ತೆ ನೀಡುತ್ತೇವೆ وَنَبِّئۡهُمۡ عَن ضَيۡفِ إِبۡرَٰهِيمَ ٥١ಅವರು (ಇಬ್ರಾಹೀಮ್) ಹೇಳಿದರು; ನೀವೇನು ಮುದಿತನ ಆವರಿಸಿರುವ ನನಗೆ ಶುಭವಾರ್ತೆ ನೀಡುತ್ತಿರುವಿರಾ – ಅದೆಂತಹ ಶುಭವಾರ್ತೆ ನೀಡುತ್ತಿರುವಿರಿ ನೀವು إِذۡ دَخَلُواْ عَلَيۡهِ فَقَالُواْ سَلَٰمًا قَالَ إِنَّا مِنكُمۡ وَجِلُونَ ٥٢ಅವರು ಹೇಳಿದರು; ನಾವು ನಿಮಗೆ ಸತ್ಯದ ಶುಭವಾರ್ತೆ ನೀಡುತ್ತಿದ್ದೇವೆ. ನೀವು ನಿರಾಶರ ಸಾಲಿಗೆ ಸೇರಬೇಡಿ قَالُواْ لَا تَوۡجَلۡ إِنَّا نُبَشِّرُكَ بِغُلَٰمٍ عَلِيمٍ ٥٣ಅವರು (ಇಬ್ರಾಹೀಮ್) ಹೇಳಿದರು; ದಾರಿಗೆಟ್ಟವರ ಹೊರತು ಇನ್ನಾರು ತಾನೇ ತನ್ನ ಒಡೆಯನ ಅನುಗ್ರಹದ ಬಗ್ಗೆ ನಿರಾಶನಾಗಬಲ್ಲನು قَالَ أَبَشَّرۡتُمُونِي عَلَىٰٓ أَن مَّسَّنِيَ ٱلۡكِبَرُ فَبِمَ تُبَشِّرُونَ ٥٤ಅವರು (ಇಬ್ರಾಹೀಮ್) ಕೇಳಿದರು; ದೂತರುಗಳೇ, ನಿಮ್ಮ ಹೊಣೆಗಾರಿಕೆ ಏನು قَالُواْ بَشَّرۡنَٰكَ بِٱلۡحَقِّ فَلَا تَكُن مِّنَ ٱلۡقَٰنِطِينَ ٥٥ಅವರು ಹೇಳಿದರು; ನಮ್ಮನ್ನು ಅಪರಾಧಿ ಜನಾಂಗದೆಡೆಗೆ ಕಳಿಸಲಾಗಿದೆ قَالَ وَمَن يَقۡنَطُ مِن رَّحۡمَةِ رَبِّهِۦٓ إِلَّا ٱلضَّآلُّونَ ٥٦ಲೂತ್‌ರ ಮನೆಯವರ ಹೊರತು – ಅವರನ್ನೆಲ್ಲಾ ನಾವು ರಕ್ಷಿಸುವೆವು – قَالَ فَمَا خَطۡبُكُمۡ أَيُّهَا ٱلۡمُرۡسَلُونَ ٥٧ಆದರೆ, ಅವರ ಪತ್ನಿಯ ಹೊರತು. ಖಂಡಿತವಾಗಿಯೂ ಆಕೆಯು ಹಿಂದುಳಿದವರಲ್ಲಿ ಒಬ್ಬಳಾಗಿರುವಳೆಂದು ನಾವು ತೀರ್ಮಾನಿಸಿರುವೆವು قَالُوٓاْ إِنَّآ أُرۡسِلۡنَآ إِلَىٰ قَوۡمٍ مُّجۡرِمِينَ ٥٨ಕೊನೆಗೆ ಆ ದೂತರು ಲೂತ್‌ರ ಮನೆಯವರ ಬಳಿಗೆ ಬಂದರು إِلَّآ ءَالَ لُوطٍ إِنَّا لَمُنَجُّوهُمۡ أَجۡمَعِينَ ٥٩ಅವರು (ಲೂತ್); ನೀವು ತೀರಾ ಅಪರಿಚಿತರು! ಎಂದರು إِلَّا ٱمۡرَأَتَهُۥ قَدَّرۡنَآ إِنَّهَا لَمِنَ ٱلۡغَٰبِرِينَ ٦٠ಅವರು ಹೇಳಿದರು; ನಿಜವಾಗಿ, ಅವರು (ಲೂತ್‌ರ ನಾಡಿನವರು) ಯಾವುದರ ಕುರಿತು ಸಂಶಯದಲ್ಲಿದ್ದರೋ ಅದನ್ನೇ (ದೇವರ ಶಿಕ್ಷೆಯನ್ನೇ) ನಾವು ತಂದಿರುವೆವು فَلَمَّا جَآءَ ءَالَ لُوطٍ ٱلۡمُرۡسَلُونَ ٦١ಮತ್ತು ನಾವು ಸತ್ಯದೊಂದಿಗೆ ನಿಮ್ಮ ಬಳಿಗೆ ಬಂದಿರುವೆವು – ನಾವು ಖಂಡಿತ ಸತ್ಯವಂತರು قَالَ إِنَّكُمۡ قَوۡمٌ مُّنكَرُونَ ٦٢ನೀವು ರಾತ್ರಿಯ ಒಂದು ಹಂತದಲ್ಲಿ ನಿಮ್ಮ ಮನೆಯವರ ಜೊತೆ ಹೊರಟು ಹೋಗಿರಿ ಮತ್ತು ನೀವು ಸ್ವತಃ ಅವರನ್ನು ಹಿಂಬಾಲಿಸುತ್ತಾ ಅವರ ಬೆನ್ನು ಬೆನ್ನಿಗೇ ನಡೆಯಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡಬಾರದು ಮತ್ತು ನೀವು ನಿಮಗೆ ಆದೇಶಿಸಲಾಗಿರುವ ಕಡೆಗೇ ಹೋಗಿರಿ قَالُواْ بَلۡ جِئۡنَٰكَ بِمَا كَانُواْ فِيهِ يَمۡتَرُونَ ٦٣ಬೆಳಗಾಗುವ ಹೊತ್ತಿಗೆ ಆ ಜನರ ಮೂಲವನ್ನೇ ಕಡಿದು ಬಿಡಲಾಗಿರುವುದು ಎಂಬ ಆ ವಿಷಯವನ್ನು ನಾವು ಅವರಿಗೆ (ಲೂತ್‌ರಿಗೆ) ಖಚಿತವಾಗಿ ತಿಳಿಸಿದೆವು وَأَتَيۡنَٰكَ بِٱلۡحَقِّ وَإِنَّا لَصَٰدِقُونَ ٦٤ನಗರದವರು ಸಂಭ್ರಮಿಸುತ್ತಾ ಬಂದರು فَأَسۡرِ بِأَهۡلِكَ بِقِطۡعٍ مِّنَ ٱلَّيۡلِ وَٱتَّبِعۡ أَدۡبَٰرَهُمۡ وَلَا يَلۡتَفِتۡ مِنكُمۡ أَحَدٌ وَٱمۡضُواْ حَيۡثُ تُؤۡمَرُونَ ٦٥ಅವರು (ಲೂತ್) ಹೇಳಿದರು; ಇವರು ನನ್ನ ಅತಿಥಿಗಳು . ನೀವು ನನ್ನನ್ನು ನಗೆಪಾಟಲಿಗೆ ಗುರಿಮಾಡಬೇಡಿ وَقَضَيۡنَآ إِلَيۡهِ ذَٰلِكَ ٱلۡأَمۡرَ أَنَّ دَابِرَ هَٰٓؤُلَآءِ مَقۡطُوعٌ مُّصۡبِحِينَ ٦٦ಮತ್ತು ನೀವು ಅಲ್ಲಾಹನಿಗೆ ಅಂಜಿರಿ ಹಾಗೂ ನನ್ನನ್ನು ಅಪಮಾನಿಸಬೇಡಿ وَجَآءَ أَهۡلُ ٱلۡمَدِينَةِ يَسۡتَبۡشِرُونَ ٦٧ಅವರು (ನಾಡಿನವರು) ಹೇಳಿದರು; ನೀವು ಸರ್ವ ಜಗತ್ತಿನವರ ಬೆಂಬಲಕ್ಕೆ ನಿಲ್ಲಬಾರದೆಂದು ನಾವು ನಿಮ್ಮನ್ನು ತಡೆದಿರಲಿಲ್ಲವೇ قَالَ إِنَّ هَٰٓؤُلَآءِ ضَيۡفِي فَلَا تَفۡضَحُونِ ٦٨ಅವರು (ಲೂತ್) ಹೇಳಿದರು; ನೀವೇನಾದರೂ (ವಿವಾಹ) ಮಾಡಿ ಕೊಳ್ಳುವುದಿದ್ದರೆ, ಇದೋ ನನ್ನ ಪುತ್ರಿಯರು ಇಲ್ಲಿದ್ದಾರೆ وَٱتَّقُواْ ٱللَّهَ وَلَا تُخۡزُونِ ٦٩(ದೂತರೇ,) ನಿಮ್ಮ ವಯಸ್ಸಿನಾಣೆ, ಆ ಜನರು ತಮ್ಮ ಮದದಲ್ಲಿ ಖಂಡಿತ ಕುರುಡಾಗಿದ್ದರು قَالُوٓاْ أَوَلَمۡ نَنۡهَكَ عَنِ ٱلۡعَٰلَمِينَ ٧٠ಕೊನೆಗೆ, ಸೂರ್ಯೋದಯದ ವೇಳೆಗೆ ಒಂದು ಭಾರೀ ಸ್ಫೋಟವು ಅವರನ್ನು ಆವರಿಸಿಕೊಂಡಿತು قَالَ هَٰٓؤُلَآءِ بَنَاتِيٓ إِن كُنتُمۡ فَٰعِلِينَ ٧١ನಾವು ಆ ನಾಡನ್ನು ಬುಡಮೇಲು ಗೊಳಿಸಿಬಿಟ್ಟೆವು ಮತ್ತು ನಾವು ಅವರ ಮೇಲೆ ಬೆಂದ ಕಣಗಳ ಮಳೆ ಸುರಿಸಿದೆವು لَعَمۡرُكَ إِنَّهُمۡ لَفِي سَكۡرَتِهِمۡ يَعۡمَهُونَ ٧٢ಚಿಂತನೆ ನಡೆಸುವವರಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆಗಳಿವೆ فَأَخَذَتۡهُمُ ٱلصَّيۡحَةُ مُشۡرِقِينَ ٧٣ಅದು (ಆ ನಾಡು) ಒಂದು ಪರಿಚಿತ ದಾರಿಯಲ್ಲೇ ಇದೆ فَجَعَلۡنَا عَٰلِيَهَا سَافِلَهَا وَأَمۡطَرۡنَا عَلَيۡهِمۡ حِجَارَةً مِّن سِجِّيلٍ ٧٤ವಿಶ್ವಾಸಿಗಳಿಗೆ ಖಂಡಿತವಾಗಿಯೂ ಇದರಲ್ಲಿ ಸೂಚನೆ ಇದೆ إِنَّ فِي ذَٰلِكَ لَأٓيَٰتٍ لِّلۡمُتَوَسِّمِينَ ٧٥ಇನ್ನು, ‘ಐಕಃ’ ದವರು ಖಂಡಿತ ಅಕ್ರಮಿಗಳಾಗಿದ್ದರು وَإِنَّهَا لَبِسَبِيلٍ مُّقِيمٍ ٧٦ನಾವು ಅವರ ವಿರುದ್ಧವೂ ಪ್ರತೀಕಾರ ತೀರಿಸಿದೆವು – ಆ ಎರಡೂ ನಾಡುಗಳು ಹೆದ್ದಾರಿಯಲ್ಲೇ ಇವೆ إِنَّ فِي ذَٰلِكَ لَأٓيَةً لِّلۡمُؤۡمِنِينَ ٧٧‘ಹಿಜ್ರ್’ ಎಂಬಲ್ಲಿನವರು ದೂತರನ್ನು ಧಿಕ್ಕರಿಸಿದ್ದರು وَإِن كَانَ أَصۡحَٰبُ ٱلۡأَيۡكَةِ لَظَٰلِمِينَ ٧٨ನಾವು ಅವರಿಗೆ ನಮ್ಮ ಅನೇಕ ಸೂಚನೆಗಳನ್ನು ನೀಡಿದೆವು. ಆದರೆ ಅವರು ಅವುಗಳನ್ನು ಕಡೆಗಣಿಸಿ ಬಿಟ್ಟರು فَٱنتَقَمۡنَا مِنۡهُمۡ وَإِنَّهُمَا لَبِإِمَامٍ مُّبِينٍ ٧٩ಅವರು ನಿರ್ಭೀತರಾಗಿ ಪರ್ವತಗಳಲ್ಲಿ ನಿವಾಸಗಳನ್ನು ಕೊರೆಯುತ್ತಿದ್ದರು وَلَقَدۡ كَذَّبَ أَصۡحَٰبُ ٱلۡحِجۡرِ ٱلۡمُرۡسَلِينَ ٨٠(ಒಂದು ದಿನ) ಸೂರ್ಯೋದಯದ ವೇಳೆಗೆ, ಒಂದು ಭಾರೀ ಸ್ಫೋಟವು ಅವರನ್ನು ಆವರಿಸಿತು وَءَاتَيۡنَٰهُمۡ ءَايَٰتِنَا فَكَانُواْ عَنۡهَا مُعۡرِضِينَ ٨١ಅವರ ಯಾವ ಸಂಪಾದನೆಯೂ ಅವರ ಯಾವ ಕೆಲಸಕ್ಕೂ ಬರಲಿಲ್ಲ وَكَانُواْ يَنۡحِتُونَ مِنَ ٱلۡجِبَالِ بُيُوتًا ءَامِنِينَ ٨٢ಆಕಾಶಗಳನ್ನು ಹಾಗೂ ಭೂಮಿಯನ್ನು ಹಾಗೂ ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಸತ್ಯದೊಂದಿಗೇ ಸೃಷ್ಟಿಸಿದ್ದೇವೆ. ಅಂತಿಮ ಘಳಿಗೆಯು ಖಂಡಿತ ಬರಲಿದೆ. ನೀವು (ಜನರನ್ನು) ಕ್ಷಮಿಸಿರಿ – ಅದು ಅತ್ಯಂತ ಸುಂದರ ಕ್ಷಮೆಯಾಗಿರಲಿ فَأَخَذَتۡهُمُ ٱلصَّيۡحَةُ مُصۡبِحِينَ ٨٣(ದೂತರೇ,) ಖಂಡಿತವಾಗಿಯೂ ನಿಮ್ಮ ಒಡೆಯನೇ ಮಹಾನ್ ಸೃಷ್ಟಿಕರ್ತನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ فَمَآ أَغۡنَىٰ عَنۡهُم مَّا كَانُواْ يَكۡسِبُونَ ٨٤ಖಂಡಿತವಾಗಿಯೂ ನಾವು ನಿಮಗೆ ಮತ್ತೆ ಮತ್ತೆ ಓದಲಾಗುವ ಏಳು ವಾಕ್ಯಗಳನ್ನು (ಪ್ರಥಮ ಅಧ್ಯಾಯವನ್ನು) ಮತ್ತು ಭವ್ಯವಾದ ಕುರ್‌ಆನನ್ನು ನೀಡಿರುವೆವು وَمَا خَلَقۡنَا ٱلسَّمَٰوَٰتِ وَٱلۡأَرۡضَ وَمَا بَيۡنَهُمَآ إِلَّا بِٱلۡحَقِّۗ وَإِنَّ ٱلسَّاعَةَ لَأٓتِيَةٌۖ فَٱصۡفَحِ ٱلصَّفۡحَ ٱلۡجَمِيلَ ٨٥ಅವರಲ್ಲಿನ ( ಧಿಕ್ಕಾರಿಗಳಲ್ಲಿನ) ವಿವಿಧ ವರ್ಗಗಳಿಗೆ ನಾವು ಏನನ್ನು ನೀಡಿರುವೆವೋ ಅವುಗಳೆಡೆಗೆ ನೀವು ಕಣ್ಣೆತ್ತಿಯೂ ನೋಡಬೇಡಿ ಮತ್ತು ನೀವು ಅವರ ಕುರಿತು ದುಃಖಿಸಬೇಡಿ. ಹಾಗೆಯೇ, ವಿಶ್ವಾಸಿಗಳ ಪಾಲಿಗೆ ನೀವು (ವಿನಯದೆೊಂದಿಗೆ) ನಿಮ್ಮ ಭುಜವನ್ನು ತಗ್ಗಿಸಿಡಿರಿ إِنَّ رَبَّكَ هُوَ ٱلۡخَلَّٰقُ ٱلۡعَلِيمُ ٨٦ಮತ್ತು ನೀವು ‘‘ಖಂಡಿತವಾಗಿಯೂ ನಾನು, ಸುಸ್ಪಷ್ಟ ಎಚ್ಚರಿಕೆ ನೀಡು ವವನಾಗಿದ್ದೇನೆ’’ ಎಂದು ಸಾರಿ ಬಿಡಿರಿ وَلَقَدۡ ءَاتَيۡنَٰكَ سَبۡعًا مِّنَ ٱلۡمَثَانِي وَٱلۡقُرۡءَانَ ٱلۡعَظِيمَ ٨٧(ಈ ಹಿಂದೆ) ವಿಭಜನವಾದಿಗಳ ಮೇಲೆ ನಾವು (ಶಿಕ್ಷೆಯನ್ನು) ಎರಗಿಸಿದ್ದೆವು لَا تَمُدَّنَّ عَيۡنَيۡكَ إِلَىٰ مَا مَتَّعۡنَا بِهِۦٓ أَزۡوَٰجًا مِّنۡهُمۡ وَلَا تَحۡزَنۡ عَلَيۡهِمۡ وَٱخۡفِضۡ جَنَاحَكَ لِلۡمُؤۡمِنِينَ ٨٨ಅವರು ಕುರ್‌ಆನನ್ನು ಛಿದ್ರಗೊಳಿಸಿದ್ದರು (ತಾವಿಚ್ಛಿಸಿದ್ದನ್ನು ಪಾಲಿಸಿ, ಉಳಿದುದನ್ನು ತಿರಸ್ಕರಿಸಿದ್ದರು) وَقُلۡ إِنِّيٓ أَنَا ٱلنَّذِيرُ ٱلۡمُبِينُ ٨٩ನಿಮ್ಮಡೆಯನಾಣೆ! ನಾವು ಅವರೆಲ್ಲರನ್ನೂ ಖಂಡಿತ ಪ್ರಶ್ನಿಸುವೆವು – كَمَآ أَنزَلۡنَا عَلَى ٱلۡمُقۡتَسِمِينَ ٩٠– ಅವರು ಮಾಡುತ್ತಿದ್ದ ಕರ್ಮಗಳ ಕುರಿತು ٱلَّذِينَ جَعَلُواْ ٱلۡقُرۡءَانَ عِضِينَ ٩١ನಿಮಗೆ ಆದೇಶಿಸಲಾಗಿರುವುದನ್ನು ನೀವು ಸ್ಪಷ್ಟವಾಗಿ ಸಾರಿ ಬಿಡಿರಿ ಮತ್ತು ಬಹುದೇವಾರಾಧಕರನ್ನು ಲೆಕ್ಕಿಸಬೇಡಿ فَوَرَبِّكَ لَنَسۡـَٔلَنَّهُمۡ أَجۡمَعِينَ ٩٢ಗೇಲಿ ಮಾಡುವವರ ವಿಷಯದಲ್ಲಿ ನಿಮಗೆ ನಾವೇ ಸಾಕು عَمَّا كَانُواْ يَعۡمَلُونَ ٩٣ಅವರು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿ ಕೊಂಡಿದ್ದಾರೆ. (ಇದರ ಫಲಿತಾಂಶವನ್ನು) ಬಹುಬೇಗನೇ ಅವರು ಅರಿಯುವರು فَٱصۡدَعۡ بِمَا تُؤۡمَرُ وَأَعۡرِضۡ عَنِ ٱلۡمُشۡرِكِينَ ٩٤ನಮಗೆ ತಿಳಿದಿದೆ – ಅವರು ಆಡುವ ಮಾತುಗಳಿಂದ ನಿಮ್ಮ ಮನಸ್ಸಿಗೆ ತುಂಬಾ ಸಂಕಟವಾಗುತ್ತದೆಂದು إِنَّا كَفَيۡنَٰكَ ٱلۡمُسۡتَهۡزِءِينَ ٩٥ನೀವು ನಿಮ್ಮ ಒಡೆಯನನ್ನು ಸ್ತುತಿಸುತ್ತಾ ಅವನ ಪಾವಿತ್ರವನ್ನು ಜಪಿಸಿರಿ ಮತ್ತು ಸಾಷ್ಟಾಂಗ ವಂದಿಸುವವರಾಗಿರಿ ٱلَّذِينَ يَجۡعَلُونَ مَعَ ٱللَّهِ إِلَٰهًا ءَاخَرَۚ فَسَوۡفَ يَعۡلَمُونَ ٩٦ಇನ್ನು, ಖಚಿತವಾದ ಆ ಘಳಿಗೆ (ಮರಣ) ಬರುವ ತನಕವೂ ನೀವು ನಿಮ್ಮ ಒಡೆಯನ ಆರಾಧನೆ ನಡೆಸಿರಿ وَلَقَدۡ نَعۡلَمُ أَنَّكَ يَضِيقُ صَدۡرُكَ بِمَا يَقُولُونَ ٩٧ಬಂದು ಬಿಟ್ಟಿತು, ಅಲ್ಲಾಹನ ಆದೇಶ – ನೀವು ಅದಕ್ಕಾಗಿ ಆತುರ ಪಡಬೇಡಿ. ಅವನು ತುಂಬಾ ಪಾವನನು ಮತ್ತು ಅವರು (ಅವನ ಜೊತೆ) ಪಾಲುಗೊಳಿಸುವ ಎಲ್ಲವುಗಳಿಗಿಂತಲೂ ಅವನು ತುಂಬಾ ಉನ್ನತನು فَسَبِّحۡ بِحَمۡدِ رَبِّكَ وَكُن مِّنَ ٱلسَّٰجِدِينَ ٩٨‘‘ನನ್ನ ಹೊರತು ಬೇರೆ ಯಾರೂ ಪೂಜಾರ್ಹರಲ್ಲ ನನಗೆ ಮಾತ್ರ ಅಂಜಿರಿ’’ – ಎಂದು (ಜನರನ್ನು) ಎಚ್ಚರಿಸಲಿಕ್ಕಾಗಿ ಅವನು ತನ್ನ ಆದೇಶದಂತೆ ದಿವ್ಯವಾಣಿಯನ್ನು ಕೊಟ್ಟು, ತನ್ನ ದಾಸರ ಪೈಕಿ ತಾನಿಚ್ಛಿಸಿದವರ ಬಳಿಗೆ, ಮಲಕ್‌ಗಳನ್ನು ಇಳಿಸಿಕೊಡುತ್ತಾನೆ وَٱعۡبُدۡ رَبَّكَ حَتَّىٰ يَأۡتِيَكَ ٱلۡيَقِينُ ٩٩ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು. ಅವರು (ಅವನ ಜೊತೆ) ಪಾಲುಗೊಳಿಸುತ್ತಿರುವ ಎಲ್ಲವುಗಳಿಗಿಂತ ಅವನು ಉನ್ನತನು

Translation: Abdussalam Puthige.