بِسۡمِ ٱللَّهِ ٱلرَّحۡمَٰنِ ٱلرَّحِيمِ
وَٱلَّيۡلِ إِذَا يَغۡشَىٰ ١ರಾತ್ರಿಯಾಣೆ – ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ وَٱلنَّهَارِ إِذَا تَجَلَّىٰ ٢ಹಗಲಿನಾಣೆ – ಅದು ಬೆಳಗಿದಾಗ وَمَا خَلَقَ ٱلذَّكَرَ وَٱلۡأُنثَىٰٓ ٣ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ إِنَّ سَعۡيَكُمۡ لَشَتَّىٰ ٤ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ فَأَمَّا مَنۡ أَعۡطَىٰ وَٱتَّقَىٰ ٥ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು وَصَدَّقَ بِٱلۡحُسۡنَىٰ ٦ಮತ್ತು ಒಳಿತನ್ನು ಸಮರ್ಥಿಸಿದವನು – فَسَنُيَسِّرُهُۥ لِلۡيُسۡرَىٰ ٧– ಅವನ ಪಾಲಿಗೆ ನಾವು ಸರಳವಾದ ಮಾರ್ಗದ ಸುಲಭ ಗೊಳಿಸುವೆವು وَأَمَّا مَنۢ بَخِلَ وَٱسۡتَغۡنَىٰ ٨ಮತ್ತು ಜಿಪುಣತೆ ತೋರಿದ ಹಾಗೂ ನಿರ್ಲಕ್ಷಿಸಿದವನು وَكَذَّبَ بِٱلۡحُسۡنَىٰ ٩ಮತ್ತು ಒಳಿತನ್ನು ತಿರಸ್ಕರಿಸಿದವನು – فَسَنُيَسِّرُهُۥ لِلۡعُسۡرَىٰ ١٠– ಅವನ ಪಾಲಿಗೆ ನಾವು ಕಠಿಣವಾದ ಮಾರ್ಗವನ್ನು ಸುಲಭಗೊಳಿಸುವೆವು وَمَا يُغۡنِي عَنۡهُ مَالُهُۥٓ إِذَا تَرَدَّىٰٓ ١١ಅವನು ಉರುಳಿ ಬಿದ್ದಾಗ ಅವನ ಸಂಪತ್ತು ಅವನ ಯಾವ ಕೆಲಸಕ್ಕೂ ಬಾರದು إِنَّ عَلَيۡنَا لَلۡهُدَىٰ ١٢ದಾರಿ ತೋರುವ ಹೊಣೆಯು ಖಂಡಿತ ನಮ್ಮ ಮೇಲಿದೆ وَإِنَّ لَنَا لَلۡأٓخِرَةَ وَٱلۡأُولَىٰ ١٣ಪರಲೋಕವೂ ಇಹಲೋಕವೂ ಖಂಡಿತ ನಮಗೇ ಸೇರಿವೆ فَأَنذَرۡتُكُمۡ نَارًا تَلَظَّىٰ ١٤ನಾನು ನಿಮಗೆ ಧಗಧಗಿಸುವ ಅಗ್ನಿಯ ಕುರಿತು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ لَا يَصۡلَىٰهَآ إِلَّا ٱلۡأَشۡقَى ١٥ಭಾಗ್ಯಹೀನನು ಮಾತ್ರ ಅದರೊಳಗೆ ಪ್ರವೇಶಿಸುವನು – ٱلَّذِي كَذَّبَ وَتَوَلَّىٰ ١٦– ಅವನು (ಸತ್ಯವನ್ನು) ತಿರಸ್ಕರಿಸಿದವನು ಹಾಗೂ ಅದರಿಂದ ಮುಖ ತಿರುಗಿಸಿ ಕೊಂಡವನು وَسَيُجَنَّبُهَا ٱلۡأَتۡقَى ١٧ಅಲ್ಲಾಹನು ಧರ್ಮ ನಿಷ್ಠನನ್ನು ಅದರಿಂದ ರಕ್ಷಿಸುವನು ٱلَّذِي يُؤۡتِي مَالَهُۥ يَتَزَكَّىٰ ١٨ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು (ಸನ್ಮಾರ್ಗದಲ್ಲಿ) ದಾನ ಮಾಡುತ್ತಾನೆ وَمَا لِأَحَدٍ عِندَهُۥ مِن نِّعۡمَةٍ تُجۡزَىٰٓ ١٩ಅವನು ಮರು ಪಾವತಿಸಬೇಕಾದ ಯಾವ ಋಣವೂ ಅವನ ಮೇಲಿಲ್ಲ – إِلَّا ٱبۡتِغَآءَ وَجۡهِ رَبِّهِ ٱلۡأَعۡلَىٰ ٢٠ಅವನು (ಮಾಡುವ ದಾನವೆಲ್ಲಾ) ಕೇವಲ ತನ್ನ ಪರಮೋನ್ನತ ಒಡೆಯನನ್ನು (ಅಲ್ಲಾಹನನ್ನು) ಮೆಚ್ಚಿಸುವುದಕ್ಕಾಗಿ ಮಾತ್ರವಾಗಿರುತ್ತದೆ وَلَسَوۡفَ يَرۡضَىٰ ٢١ಮತ್ತು ಅವನು ಬಹು ಬೇಗನೇ ಸಂತೃಪ್ತನಾಗುವನು