Millat al-Islam

Chapter 70 · 44 verses · Abdussalam Puthige

Surah Al-Maarij in Kannada

Arabic with tafsir Listen to Surah Al-Maarij (1275 reciters)

بِسۡمِ ٱللَّهِ ٱلرَّحۡمَٰنِ ٱلرَّحِيمِ

سَأَلَ سَآئِلُۢ بِعَذَابٍ وَاقِعٍ ١ನೀವು ಮಹೋನ್ನತನಾದ ನಿಮ್ಮ ಒಡೆಯನ ನಾಮದ ಪಾವಿತ್ರವನ್ನು ಜಪಿಸಿರಿ لِّلۡكَٰفِرِينَ لَيۡسَ لَهُۥ دَافِعٌ ٢ಪ್ರಶ್ನಿಸುವವನೊಬ್ಬನು, (ಧಿಕ್ಕಾರಿಗಳ ಮೇಲೆ) ಖಂಡಿತ ಬಂದೆರಗಲಿರುವ ಶಿಕ್ಷೆಯ ಕುರಿತು ಪ್ರಶ್ನಿಸಿದ್ದಾನೆ مِّنَ ٱللَّهِ ذِي ٱلۡمَعَارِجِ ٣ಧಿಕ್ಕಾರಿಗಳ ಮೇಲೆ ಅದು ಬಂದೆರಗುವುದನ್ನು ನಿವಾರಿಸಲು ಯಾರಿಂದಲೂ ಸಾಧ್ಯವಾಗದು تَعۡرُجُ ٱلۡمَلَٰٓئِكَةُ وَٱلرُّوحُ إِلَيۡهِ فِي يَوۡمٍ كَانَ مِقۡدَارُهُۥ خَمۡسِينَ أَلۡفَ سَنَةٍ ٤ಅತ್ಯುನ್ನತ ಸ್ಥಾನಗಳ ಒಡೆಯನಾದ ಅಲ್ಲಾಹನ ಕಡೆಯಿಂದ (ಅದು ಬರಲಿದೆ) فَٱصۡبِرۡ صَبۡرًا جَمِيلًا ٥ಐವತ್ತು ಸಾವಿರ ವರ್ಷಗಳಷ್ಟು ಧೀರ್ಘವಾಗಿರುವ ಒಂದು ದಿನ, ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ಅವನೆಡೆಗೆ ಏರಿ ಹೋಗುತ್ತಾರೆ إِنَّهُمۡ يَرَوۡنَهُۥ بَعِيدًا ٦(ದೂತರೇ,) ಸದ್ಯ ನೀವು ಸಂಯಮ ತೋರಿರಿ. ಸಭ್ಯವಾದ ಸಂಯಮ وَنَرَىٰهُ قَرِيبًا ٧ಅವರು ಅದನ್ನು (ವಿಚಾರಣೆಯ ದಿನವನ್ನು) ತುಂಬಾ ದೂರದಲ್ಲಿ ಕಾಣುತ್ತಿದ್ದಾರೆ يَوۡمَ تَكُونُ ٱلسَّمَآءُ كَٱلۡمُهۡلِ ٨ಆದರೆ ನಾವು ಅದನ್ನು ತೀರಾ ಹತ್ತಿರದಲ್ಲಿ ಕಾಣುತ್ತಿದ್ದೇವೆ وَتَكُونُ ٱلۡجِبَالُ كَٱلۡعِهۡنِ ٩ಆಕಾಶವು ಕರಗಿದ ತಾಮ್ರದಂತಾಗುವ ಆ ದಿನ وَلَا يَسۡـَٔلُ حَمِيمٌ حَمِيمًا ١٠ಪರ್ವತಗಳೆಲ್ಲಾ ಉಣ್ಣೆಯ ಚೂರುಗಳಂತಾಗಿ ಬಿಡುವವು يُبَصَّرُونَهُمۡۚ يَوَدُّ ٱلۡمُجۡرِمُ لَوۡ يَفۡتَدِي مِنۡ عَذَابِ يَوۡمِئِذِۭ بِبَنِيهِ ١١(ಅಂದು) ಯಾವ ಮಿತ್ರನೂ ತನ್ನ ಮಿತ್ರನ ಕುರಿತು ವಿಚಾರಿಸಲಾರನು وَصَٰحِبَتِهِۦ وَأَخِيهِ ١٢ನಿಜವಾಗಿ, ಅವರು ಪರಸ್ಪರರನ್ನು ನೋಡುತ್ತಿರುವರು وَفَصِيلَتِهِ ٱلَّتِي تُـٔۡوِيهِ ١٣ಅಂದು ಅಪರಾಧಿಯು ಶಿಕ್ಷೆಗೆ ಪರಿಹಾರವಾಗಿ ತನ್ನ ಪುತ್ರರನ್ನು ನೀಡಲು ಸಿದ್ದನಾಗುವನು وَمَن فِي ٱلۡأَرۡضِ جَمِيعًا ثُمَّ يُنجِيهِ ١٤(ಮಾತ್ರವಲ್ಲ,) ತನ್ನ ಪತ್ನಿ ಮತ್ತು ತನ್ನ ಸಹೋದರರನ್ನೂ ತನಗೆ ಆಶ್ರಯ ನೀಡಿದ ತನ್ನ ಕುಟುಂಬವನ್ನೂ كـَلَّآۖ إِنَّهَا لَظَىٰ ١٥ಮತ್ತು ಭೂಮಿಯಲ್ಲಿರುವ ಎಲ್ಲರನ್ನೂ (ಪರಿಹಾರವಾಗಿ ಕೊಟ್ಟು) ಶಿಕ್ಷೆಯಿಂದ ಪಾರಾಗಲು ಬಯಸುವನು نَزَّاعَةً لِّلشَّوَىٰ ١٦ಖಂಡಿತ ಇಲ್ಲ. ಅದು, ಭುಗಿದೇಳುವ ಬೆಂಕಿಯಾಗಿರುವುದು تَدۡعُواْ مَنۡ أَدۡبَرَ وَتَوَلَّىٰ ١٧ಚರ್ಮವನ್ನು ಸುಲಿದು ಬಿಡುವ ಬೆಂಕಿ وَجَمَعَ فَأَوۡعَىٰٓ ١٨ಸತ್ಯವನ್ನು ಕಡೆಗಣಿಸಿ ದೊಡ್ಡಸ್ತಿಕೆ ಮೆರೆದವನನ್ನು ಅದು (ನರಕವು) ಕರೆಯುವುದು ۞ إِنَّ ٱلۡإِنسَٰنَ خُلِقَ هَلُوعًا ١٩ಸಂಪತ್ತನ್ನು ಸಂಗ್ರಹಿಸಿ ಮುಚ್ಚಿಟ್ಟವನನ್ನೂ (ಅದು ಕರೆಯುವುದು) إِذَا مَسَّهُ ٱلشَّرُّ جَزُوعًا ٢٠ಖಂಡಿತವಾಗಿಯೂ ಮಾನವನನ್ನು ಚಂಚಲನಾಗಿ ಸೃಷ್ಟಿಸಲಾಗಿದೆ وَإِذَا مَسَّهُ ٱلۡخَيۡرُ مَنُوعًا ٢١ಸಂಕಷ್ಟವೇನಾದರೂ ಎದುರಾದೊಡನೆ ಅವನು ಗಾಬರಿಗೊಳ್ಳುತ್ತಾನೆ إِلَّا ٱلۡمُصَلِّينَ ٢٢ಸುಖ ಪ್ರಾಪ್ತವಾದಾಗ ಜಿಪುಣನಾಗಿ ಬಿಡುತ್ತಾನೆ ٱلَّذِينَ هُمۡ عَلَىٰ صَلَاتِهِمۡ دَآئِمُونَ ٢٣ಆದರೆ ನಮಾಝ್ ಸಲ್ಲಿಸುವವರು ಮಾತ್ರ (ಹಾಗಿರುವುದಿಲ್ಲ) وَٱلَّذِينَ فِيٓ أَمۡوَٰلِهِمۡ حَقٌّ مَّعۡلُومٌ ٢٤ಅವರು ಸದಾ ಕಟ್ಟುನಿಟ್ಟಾಗಿ ನಮಾಝನ್ನು ಪಾಲಿಸುತ್ತಾರೆ لِّلسَّآئِلِ وَٱلۡمَحۡرُومِ ٢٥ಅವರ ಸಂಪತ್ತುಗಳಲ್ಲಿ ನಿರ್ದಿಷ್ಟವಾದ ಹಕ್ಕು ಇದೆ وَٱلَّذِينَ يُصَدِّقُونَ بِيَوۡمِ ٱلدِّينِ ٢٦ಬೇಡುವವನಿಗೆ ಮತ್ತು ವಂಚಿತನಿಗೆ وَٱلَّذِينَ هُم مِّنۡ عَذَابِ رَبِّهِم مُّشۡفِقُونَ ٢٧ಪ್ರತಿಫಲದ ದಿನವಿರುವುದು ಸತ್ಯ ಎಂದು ಅವರು ನಂಬುತ್ತಾರೆ إِنَّ عَذَابَ رَبِّهِمۡ غَيۡرُ مَأۡمُونٍ ٢٨ಅವರು ತಮ್ಮೊಡೆಯನ ಶಿಕ್ಷೆಗೆ ಅಂಜುತ್ತಾರೆ وَٱلَّذِينَ هُمۡ لِفُرُوجِهِمۡ حَٰفِظُونَ ٢٩ಅವರ ಒಡೆಯನ ಶಿಕ್ಷೆ ಎಂತಹದ್ದೆಂದರೆ, ಆ ಕುರಿತು ನಿಶ್ಚಿಂತರಾಗಿರಲು ಸಾಧ್ಯವೇ ಇಲ್ಲ إِلَّا عَلَىٰٓ أَزۡوَٰجِهِمۡ أَوۡ مَا مَلَكَتۡ أَيۡمَٰنُهُمۡ فَإِنَّهُمۡ غَيۡرُ مَلُومِينَ ٣٠ಅವರು ತಮ್ಮ ಮಾನವನ್ನು ಕಾಪಾಡಿಕೊಳ್ಳುತ್ತಾರೆ فَمَنِ ٱبۡتَغَىٰ وَرَآءَ ذَٰلِكَ فَأُوْلَٰٓئِكَ هُمُ ٱلۡعَادُونَ ٣١ತಮ್ಮ ಪತ್ನಿಯರು ಮತ್ತು ದಾಸಿಯರ ವಿಷಯದಲ್ಲಿ ಮಾತ್ರ ಅವರು ಖಂಡನಾರ್ಹರಲ್ಲ وَٱلَّذِينَ هُمۡ لِأَمَٰنَٰتِهِمۡ وَعَهۡدِهِمۡ رَٰعُونَ ٣٢ಅದರ ಆಚಿನದನ್ನು ಅಪೇಕ್ಷಿಸುವವರು – ಅವರೇ ಎಲ್ಲೆ ಮೀರುವವರು وَٱلَّذِينَ هُم بِشَهَٰدَٰتِهِمۡ قَآئِمُونَ ٣٣ಅವರು (ಸ್ವರ್ಗಕ್ಕೆ ಅರ್ಹರಾದ ಸಜ್ಜನರು) ತಮ್ಮನ್ನು ನಂಬಿ ಒಪ್ಪಿಸಲಾದ ಹೊಣೆಗಳನ್ನು ನಿಭಾಯಿಸುತ್ತಾರೆ ಮತ್ತು ತಮ್ಮ ಕರಾರುಗಳನ್ನು ಪಾಲಿಸುತ್ತಾರೆ وَٱلَّذِينَ هُمۡ عَلَىٰ صَلَاتِهِمۡ يُحَافِظُونَ ٣٤ಅವರು ತಮ್ಮ ಸಾಕ್ಷಗಳಲ್ಲಿ ಸ್ಥಿರರಾಗಿರುತ್ತಾರೆ أُوْلَٰٓئِكَ فِي جَنَّٰتٍ مُّكۡرَمُونَ ٣٥ಅವರು ತಮ್ಮ ನಮಾಝ್‌ಗಳ ಕುರಿತು ಎಚ್ಚರ ವಹಿಸುತ್ತಾರೆ فَمَالِ ٱلَّذِينَ كَفَرُواْ قِبَلَكَ مُهۡطِعِينَ ٣٦ಅವರೇ, ಗೌರವಾನ್ವಿತರಾಗಿ ಸ್ವರ್ಗ ತೋಟಗಳಲ್ಲಿ ಇರುವವರು عَنِ ٱلۡيَمِينِ وَعَنِ ٱلشِّمَالِ عِزِينَ ٣٧ಇದೇನಾಗಿದೆ ಧಿಕ್ಕಾರಿಗಳಿಗೆ? ಅವರೇಕೆ ನಿಮ್ಮೆಡೆಗೆ ಧಾವಿಸಿ ಬರುತ್ತಿದ್ದಾರೆ أَيَطۡمَعُ كُلُّ ٱمۡرِيٍٕ مِّنۡهُمۡ أَن يُدۡخَلَ جَنَّةَ نَعِيمٍ ٣٨ಬಲಭಾಗದಿಂದಲೂ ಎಡಭಾಗದಿಂದಲೂ ಗುಂಪು ಗುಂಪಾಗಿ ಬರುತ್ತಿದ್ದಾರೆ كـَلَّآۖ إِنَّا خَلَقۡنَٰهُم مِّمَّا يَعۡلَمُونَ ٣٩ಅವರ ಪೈಕಿ ಪ್ರತಿಯೊಬ್ಬರೂ ಅನುಗ್ರಹ ತುಂಬಿದ ಸ್ವರ್ಗದೊಳಗೆ ಪ್ರವೇಶಿಸಲು ಆಶಿಸುತ್ತಿದ್ದಾರೆ فَلَآ أُقۡسِمُ بِرَبِّ ٱلۡمَشَٰرِقِ وَٱلۡمَغَٰرِبِ إِنَّا لَقَٰدِرُونَ ٤٠ಖಂಡಿತ ಸಾಧ್ಯವಿಲ್ಲ. ಅವರಿಗೆ ತಿಳಿದಿರುವ ಒಂದು ವಸ್ತುವಿನಿಂದ ನಾವೇ ಅವರನ್ನು ಸೃಷ್ಟಿಸಿರುವೆವು عَلَىٰٓ أَن نُّبَدِّلَ خَيۡرًا مِّنۡهُمۡ وَمَا نَحۡنُ بِمَسۡبُوقِينَ ٤١ಖಂಡಿತ ಇಲ್ಲ. ನಾನು ಪೂರ್ವಗಳ ಮತ್ತು ಪಶ್ಚಿಮಗಳ ಒಡೆಯನ ಆಣೆ ಹಾಕಿ ಹೇಳುತ್ತಿದ್ದೇನೆ, ನಾವು ಖಂಡಿತ ಅದನ್ನು ಮಾಡಬಲ್ಲೆವು فَذَرۡهُمۡ يَخُوضُواْ وَيَلۡعَبُواْ حَتَّىٰ يُلَٰقُواْ يَوۡمَهُمُ ٱلَّذِي يُوعَدُونَ ٤٢ಅವರ ಸ್ಥಾನದಲ್ಲಿ ನಾವು ಅವರಿಗಿಂತ ಉತ್ತಮರನ್ನು ತರಬಲ್ಲೆವು. ಯಾರೂ ನಮ್ಮನ್ನು ಸೋಲಿಸಲಾರರು يَوۡمَ يَخۡرُجُونَ مِنَ ٱلۡأَجۡدَاثِ سِرَاعًا كَأَنَّهُمۡ إِلَىٰ نُصُبٍ يُوفِضُونَ ٤٣ಅವರನ್ನು ಬಿಟ್ಟು ಬಿಡಿರಿ. ಅವರು, ತಮಗೆ ವಾಗ್ದಾನ ಮಾಡಲಾಗಿರುವ ದಿನವನ್ನು ಎದುರಿಸುವ ತನಕ, ನಿರರ್ಥಕ ಕೆಲಸಗಳಲ್ಲಿ ಮತ್ತು ಆಟ ವಿನೋದಗಳಲ್ಲಿ ನಿರತರಾಗಿರಲಿ خَٰشِعَةً أَبۡصَٰرُهُمۡ تَرۡهَقُهُمۡ ذِلَّةٌۚ ذَٰلِكَ ٱلۡيَوۡمُ ٱلَّذِي كَانُواْ يُوعَدُونَ ٤٤ಅವರು, ತಮ್ಮ ಗೋರಿಗಳಿಂದ ಎದ್ದು ಹೊರ ಬರುವ ದಿನ, ಒಂದು ನಿರ್ದಿಷ್ಟ ಗುರಿಯೆಡೆಗೋ ಎಂಬಂತೆ ಆತುರರಾಗಿ ಧಾವಿಸುತ್ತಿರುವರು

Translation: Abdussalam Puthige.