بِسۡمِ ٱللَّهِ ٱلرَّحۡمَٰنِ ٱلرَّحِيمِ
وَٱلنَّجۡمِ إِذَا هَوَىٰ ١ಹಾಗೆಯೇ, ಇರುಳಲ್ಲೂ, ನಕ್ಷತ್ರಗಳು ಕಣ್ಮರೆಯಾಗುವ ವೇಳೆಯೂ ನೀವು ಅವನ ಪಾವಿತ್ರವನ್ನು ಜಪಿಸಿರಿ مَا ضَلَّ صَاحِبُكُمۡ وَمَا غَوَىٰ ٢ನಕ್ಷತ್ರವು ಕಣ್ಮರೆಯಾಗುವ ಸಮಯದ ಆಣೆ وَمَا يَنطِقُ عَنِ ٱلۡهَوَىٰٓ ٣ನಿಮ್ಮ ಸಂಗಾತಿ (ದೂತರು) ದಾರಿತಪ್ಪಿಲ್ಲ ಮತ್ತು ಅವರು ತಪ್ಪು ದಾರಿಯಲ್ಲಿ ನಡೆಯುತ್ತಿಲ್ಲ إِنۡ هُوَ إِلَّا وَحۡيٌ يُوحَىٰ ٤ಅವರು ತಮ್ಮ ಅಪೇಕ್ಷೆಯಿಂದ ಮಾತನಾಡುವುದಿಲ್ಲ عَلَّمَهُۥ شَدِيدُ ٱلۡقُوَىٰ ٥ಇದು, (ಕುರ್ಆನ್) – ಅವರಿಗೆ ನೀಡಲಾಗಿರುವ ದಿವ್ಯ ಸಂದೇಶವಲ್ಲದೆ ಬೇರೇನಲ್ಲ ذُو مِرَّةٍ فَٱسۡتَوَىٰ ٦ಇದನ್ನು ಅವರಿಗೆ ಶಕ್ತಿಶಾಲಿಯಾಗಿರುವವನು (ಮಲಕ್) ಕಲಿಸಿ ಕೊಟ್ಟಿರುವನು وَهُوَ بِٱلۡأُفُقِ ٱلۡأَعۡلَىٰ ٧ಅವನು ತುಂಬಾ ಬಲಿಷ್ಠನು. ಅವನು (ನಿಜರೂಪದಲ್ಲಿ) ಮುಂದೆ ಬಂದನು ثُمَّ دَنَا فَتَدَلَّىٰ ٨ಅವನು ಬಾನಿನ ಎತ್ತರದ ಅಂಚಿನಲ್ಲಿದ್ದನು فَكَانَ قَابَ قَوۡسَيۡنِ أَوۡ أَدۡنَىٰ ٩ಮತ್ತೆ ಅವನು ಹತ್ತಿರ ಬಂದನು ಮತ್ತು ಇನ್ನಷ್ಟು ನಿಕಟನಾದನು فَأَوۡحَىٰٓ إِلَىٰ عَبۡدِهِۦ مَآ أَوۡحَىٰ ١٠ಕೊನೆಗೆ ಅವನು ಬಿಲ್ಲಿನ ಎರಡು ತುದಿಗಳಷ್ಟು ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿದ್ದನು مَا كَذَبَ ٱلۡفُؤَادُ مَا رَأَىٰٓ ١١ಆಬಳಿಕ, ಅವನು (ಅಲ್ಲಾಹನು) ತನ್ನ ದಾಸನಿಗೆ ನೀಡಬೇಕಾದ ಸಂದೇಶವನ್ನು ನೀಡಿದನು أَفَتُمَٰرُونَهُۥ عَلَىٰ مَا يَرَىٰ ١٢ತಾನು ಕಂಡದ್ದು ಸುಳ್ಳೆಂದು ಅವರ (ದೂತರ) ಮನಸ್ಸು ಹೇಳಲಿಲ್ಲ وَلَقَدۡ رَءَاهُ نَزۡلَةً أُخۡرَىٰ ١٣ನೀವೀಗ, ಅವರು ಕಂಡದ್ದರ ಕುರಿತು ಅವರೊಡನೆ ಜಗಳಾಡುವಿರಾ عِندَ سِدۡرَةِ ٱلۡمُنتَهَىٰ ١٤ಅವರು ಆತನನ್ನು ಎರಡನೇ ಬಾರಿಯೂ ಕಂಡರು عِندَهَا جَنَّةُ ٱلۡمَأۡوَىٰٓ ١٥‘ಸಿದ್ರತುಲ್ ಮುನ್ತಹಾ’ದ ಬಳಿ إِذۡ يَغۡشَى ٱلسِّدۡرَةَ مَا يَغۡشَىٰ ١٦ಅದರ ಬಳಿಯೇ ಇದೆ, ಸ್ವರ್ಗದ ವಿಶ್ರಾಂತಿ ನಿಲಯ مَا زَاغَ ٱلۡبَصَرُ وَمَا طَغَىٰ ١٧ಸಿದ್ರಃವನ್ನು ಏನು ಆವರಿಸಿತೋ ಅದು ಆವರಿಸಿದಾಗ لَقَدۡ رَأَىٰ مِنۡ ءَايَٰتِ رَبِّهِ ٱلۡكُبۡرَىٰٓ ١٨ದೃಷ್ಟಿಯು ಎಡವಲೂ ಇಲ್ಲ, ಮಿತಿಮೀರಲೂ ಇಲ್ಲ أَفَرَءَيۡتُمُ ٱللَّٰتَ وَٱلۡعُزَّىٰ ١٩ಖಚಿತವಾಗಿ ಅವರು ತಮ್ಮ ಒಡೆಯನ ಕೆಲವು ದೊಡ್ಡ ಪ್ರಮಾಣಗಳನ್ನು ಕಂಡರು وَمَنَوٰةَ ٱلثَّالِثَةَ ٱلۡأُخۡرَىٰٓ ٢٠ನೀವು ಕಂಡಿರಾ ‘ಲಾತ್’ ಹಾಗೂ ‘ಉಝ್ಝಾ’ ಗಳನ್ನು أَلَكُمُ ٱلذَّكَرُ وَلَهُ ٱلۡأُنثَىٰ ٢١ಮತ್ತು ‘ಮನಾತ್’ ಎಂಬ ಮೂರನೆಯದೊಂದನ್ನು تِلۡكَ إِذًا قِسۡمَةٌ ضِيزَىٰٓ ٢٢ನಿಮಗೆ ಪುತ್ರರು ಮತ್ತು ಅವನಿಗೆ ಪುತ್ರಿಯರೇ إِنۡ هِيَ إِلَّآ أَسۡمَآءٌ سَمَّيۡتُمُوهَآ أَنتُمۡ وَءَابَآؤُكُم مَّآ أَنزَلَ ٱللَّهُ بِهَا مِن سُلۡطَٰنٍۚ إِن يَتَّبِعُونَ إِلَّا ٱلظَّنَّ وَمَا تَهۡوَى ٱلۡأَنفُسُۖ وَلَقَدۡ جَآءَهُم مِّن رَّبِّهِمُ ٱلۡهُدَىٰٓ ٢٣ಇದು ತೀರಾ ಅಸಮರ್ಪಕ ವಿತರಣೆಯಾಗಿದೆ أَمۡ لِلۡإِنسَٰنِ مَا تَمَنَّىٰ ٢٤ನಿಜವಾಗಿ ಅವೆಲ್ಲಾ ಕೇವಲ ನೀವು ಮತ್ತು ನಿಮ್ಮ ಪೂರ್ವಜರು ಇಟ್ಟು ಬಿಟ್ಟಿರುವ ಕೆಲವು ಹೆಸರುಗಳು ಮಾತ್ರ. ಅದರ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿ ಕೊಟ್ಟಿಲ್ಲ. ಅವರು ಕೇವಲ ತಮ್ಮ ಊಹೆಯನ್ನು ಹಾಗೂ ಸ್ವೇಚ್ಛೆಯನ್ನು ಮಾತ್ರವೇ ಅನುಸರಿಸುತ್ತಿದ್ದಾರೆ. ಇದೀಗ ಅವರ ಬಳಿಗೆ ಅವರ ಒಡೆಯನ ಕಡೆಯಿಂದ ಮಾರ್ಗದರ್ಶನವು ಬಂದಿದೆ فَلِلَّهِ ٱلۡأٓخِرَةُ وَٱلۡأُولَىٰ ٢٥ಮನುಷ್ಯನಿಗೇನು, ಅವನು ಬಯಸಿದ್ದೆಲ್ಲವೂ ಸಿಕ್ಕಿ ಬಿಡುತ್ತದೆಯೇ ۞ وَكَم مِّن مَّلَكٍ فِي ٱلسَّمَٰوَٰتِ لَا تُغۡنِي شَفَٰعَتُهُمۡ شَيۡـًٔا إِلَّا مِنۢ بَعۡدِ أَن يَأۡذَنَ ٱللَّهُ لِمَن يَشَآءُ وَيَرۡضَىٰٓ ٢٦ನಿಜವಾಗಿ, ಅಂತ್ಯವೂ ಆದಿಯೂ ಅಲ್ಲಾಹನಿಗೇ ಸೇರಿದೆ إِنَّ ٱلَّذِينَ لَا يُؤۡمِنُونَ بِٱلۡأٓخِرَةِ لَيُسَمُّونَ ٱلۡمَلَٰٓئِكَةَ تَسۡمِيَةَ ٱلۡأُنثَىٰ ٢٧ಆಕಾಶಗಳಲ್ಲಿ ಅದೆಷ್ಟೋ ‘ಮಲಕ್’ಗಳಿದ್ದಾರೆ. ಅವರ ಶಿಫಾರಸ್ಸಿನಿಂದ ಯಾವ ಲಾಭವೂ ಆಗುವುದಿಲ್ಲ – ತಾನಿಚ್ಛಿಸುವವನ ಪರವಾಗಿ ಅಲ್ಲಾಹನು ಅನುಮತಿ ನೀಡುವ ಹಾಗೂ ಅವನು ಇಷ್ಟ ಪಡುವ ಮುನ್ನ وَمَا لَهُم بِهِۦ مِنۡ عِلۡمٍۖ إِن يَتَّبِعُونَ إِلَّا ٱلظَّنَّۖ وَإِنَّ ٱلظَّنَّ لَا يُغۡنِي مِنَ ٱلۡحَقِّ شَيۡـًٔا ٢٨ಪರಲೋಕದಲ್ಲಿ ನಂಬಿಕೆ ಇಲ್ಲದವರು ಮಲಕ್ಗಳಿಗೆ ಹೆಣ್ಮಕ್ಕಳ ಹೆಸರುಗಳನ್ನಿಡುತ್ತಾರೆ فَأَعۡرِضۡ عَن مَّن تَوَلَّىٰ عَن ذِكۡرِنَا وَلَمۡ يُرِدۡ إِلَّا ٱلۡحَيَوٰةَ ٱلدُّنۡيَا ٢٩ಅವರಿಗೆ ಆ ಕುರಿತು ಯಾವ ಜ್ಞಾನವೂ ಇಲ್ಲ. ಅವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಮತ್ತು ಊಹೆಯು ಸತ್ಯಕ್ಕೆ ಕಿಂಚಿತ್ತೂ ಪರ್ಯಾಯವಲ್ಲ ذَٰلِكَ مَبۡلَغُهُم مِّنَ ٱلۡعِلۡمِۚ إِنَّ رَبَّكَ هُوَ أَعۡلَمُ بِمَن ضَلَّ عَن سَبِيلِهِۦ وَهُوَ أَعۡلَمُ بِمَنِ ٱهۡتَدَىٰ ٣٠ನಮ್ಮ ಉಪದೇಶದಿಂದ ಮುಖ ತಿರುಗಿಸಿ ಕೊಂಡಿರುವವನನ್ನು ಕಡೆಗಣಿಸಿರಿ – ಅವನು ಬಯಸುವುದು ಕೇವಲ ಇಹಲೋಕದ ಬದುಕನ್ನು ಮಾತ್ರ وَلِلَّهِ مَا فِي ٱلسَّمَٰوَٰتِ وَمَا فِي ٱلۡأَرۡضِ لِيَجۡزِيَ ٱلَّذِينَ أَسَٰٓـُٔواْ بِمَا عَمِلُواْ وَيَجۡزِيَ ٱلَّذِينَ أَحۡسَنُواْ بِٱلۡحُسۡنَى ٣١ಅದುವೇ ಅವರ ಜ್ಞಾನದ ಮಿತಿಯಾಗಿದೆ. ಖಂಡಿತವಾಗಿಯೂ ನಿಮ್ಮ ಒಡೆಯನು – ತನ್ನ ಮಾರ್ಗದಿಂದ ದೂರ ಸರಿದಿರುವವನು ಯಾರೆಂಬುದನ್ನು ಚೆನ್ನಾಗಿ ಬಲ್ಲನು ಮತ್ತು ಸರಿದಾರಿಯಲ್ಲಿರುವವನು ಯಾರೆಂಬುದನ್ನೂ ಅವನು ಚೆನ್ನಾಗಿ ಬಲ್ಲನು ٱلَّذِينَ يَجۡتَنِبُونَ كَبَٰٓئِرَ ٱلۡإِثۡمِ وَٱلۡفَوَٰحِشَ إِلَّا ٱللَّمَمَۚ إِنَّ رَبَّكَ وَٰسِعُ ٱلۡمَغۡفِرَةِۚ هُوَ أَعۡلَمُ بِكُمۡ إِذۡ أَنشَأَكُم مِّنَ ٱلۡأَرۡضِ وَإِذۡ أَنتُمۡ أَجِنَّةٌ فِي بُطُونِ أُمَّهَٰتِكُمۡۖ فَلَا تُزَكُّوٓاْ أَنفُسَكُمۡۖ هُوَ أَعۡلَمُ بِمَنِ ٱتَّقَىٰٓ ٣٢ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಅವನು ಅವರ ಕರ್ಮಕ್ಕನುಸಾರವಾದ ಪ್ರತಿಫಲವನ್ನು ನೀಡುವನು ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಸತ್ಫಲವನ್ನು ನೀಡುವನು أَفَرَءَيۡتَ ٱلَّذِي تَوَلَّىٰ ٣٣ಅವರು (ಸತ್ಕರ್ಮಿಗಳು), ಸಣ್ಣ ಪುಟ್ಟ ಪ್ರಮಾದಗಳ ಹೊರತು, ಎಲ್ಲ ದೊಡ್ಡ ಪಾಪಕೃತ್ಯಗಳಿಂದ ಹಾಗೂ ಅಶ್ಲೀಲ ಕಾರ್ಯಗಳಿಂದ ದೂರ ಉಳಿಯುತ್ತಾರೆ. ಖಂಡಿತವಾಗಿಯೂ ನಿಮ್ಮೊಡೆಯನು ವಿಶಾಲ ಕ್ಷಮಾ ಗುಣ ಉಳ್ಳವನಾಗಿದ್ದಾನೆ. ಅವನಂತೂ, ತಾನು ನಿಮ್ಮನ್ನು ಭೂಮಿಯಿಂದ ಹುಟ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಹೊಟ್ಟೆಗಳೊಳಗೆ ಪುಟ್ಟ ಮಕ್ಕಳಾಗಿದ್ದಾಗಲೂ ನಿಮ್ಮನ್ನು ಚೆನ್ನಾಗಿ ಬಲ್ಲನು. ನೀವು ನಿಮ್ಮ ಪಾವಿತ್ರದ ಕುರಿತು ಕೊಚ್ಚಿಕೊಳ್ಳಬೇಡಿ. ಧರ್ಮನಿಷ್ಠನು ಯಾರೆಂಬುದನ್ನು ಅವನು ಚೆನ್ನಾಗಿ ಬಲ್ಲನು وَأَعۡطَىٰ قَلِيلًا وَأَكۡدَىٰٓ ٣٤ನೀವು ನೋಡಿದಿರಾ, ಮುಖ ತಿರುಗಿಸಿ ಕೊಂಡವನನ್ನು أَعِندَهُۥ عِلۡمُ ٱلۡغَيۡبِ فَهُوَ يَرَىٰٓ ٣٥ಅವನು ಸ್ವಲ್ಪವನ್ನು ಮಾತ್ರ (ದಾನವಾಗಿ) ಕೊಟ್ಟನು ಮತ್ತು (ಉಳಿದುದನ್ನು) ತಡೆದಿಟ್ಟುಕೊಂಡನು أَمۡ لَمۡ يُنَبَّأۡ بِمَا فِي صُحُفِ مُوسَىٰ ٣٦ಅವನ ಬಳಿ ಕಾಣದ ಲೋಕದ ಜ್ಞಾನವಿದೆಯೇ ಮತ್ತು ಅವನು ಅದನ್ನು (ಕಾಣದ ಲೋಕವನ್ನು) ಕಾಣುತ್ತಿದ್ದಾನೆಯೇ وَإِبۡرَٰهِيمَ ٱلَّذِي وَفَّىٰٓ ٣٧ಅವನಿಗೆ ತಿಳಿಸಲಾಗಿಲ್ಲವೇ, ಮೂಸಾರ ಹೊತ್ತಗೆಗಳಲ್ಲಿರುವ ವಿಷಯವನ್ನು أَلَّا تَزِرُ وَازِرَةٌ وِزۡرَ أُخۡرَىٰ ٣٨ಮತ್ತು (ದಿವ್ಯಾದೇಶಗಳನ್ನು) ಪಾಲಿಸಿದ ಇಬ್ರಾಹೀಮರ (ಸಮಾಚಾರವನ್ನು) وَأَن لَّيۡسَ لِلۡإِنسَٰنِ إِلَّا مَا سَعَىٰ ٣٩(ಪರಲೋಕದಲ್ಲಿ) ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು وَأَنَّ سَعۡيَهُۥ سَوۡفَ يُرَىٰ ٤٠ಮತ್ತು ಮಾನವನಿಗೆ, ಅವನು ಶ್ರಮಿಸಿದಷ್ಟಲ್ಲದೆ ಬೇರೇನೂ ಸಿಗದು ثُمَّ يُجۡزَىٰهُ ٱلۡجَزَآءَ ٱلۡأَوۡفَىٰ ٤١ಮತ್ತು ಅವನ ಶ್ರಮವು (ಪ್ರತಿಫಲದ ರೂಪದಲ್ಲಿ) ಬೇಗನೇ ಕಾಣಲು ಸಿಗುವುದು وَأَنَّ إِلَىٰ رَبِّكَ ٱلۡمُنتَهَىٰ ٤٢ಆ ಬಳಿಕ ಅವನಿಗೆ ಪೂರ್ಣ ಪ್ರತಿಫಲ ನೀಡಲಾಗುವುದು وَأَنَّهُۥ هُوَ أَضۡحَكَ وَأَبۡكَىٰ ٤٣ಮತ್ತು (ಎಲ್ಲವೂ ತೆರಳುವ) ಅಂತಿಮ ನೆಲೆಯು ನಿಮ್ಮ ಒಡೆಯನ ಕಡೆಗೇ ಇದೆ وَأَنَّهُۥ هُوَ أَمَاتَ وَأَحۡيَا ٤٤ಖಂಡಿತವಾಗಿಯೂ ಅವನೇ (ಅಲ್ಲಾಹನೇ) ನಗಿಸುತ್ತಾನೆ ಮತ್ತು ಅಳಿಸುತ್ತಾನೆ وَأَنَّهُۥ خَلَقَ ٱلزَّوۡجَيۡنِ ٱلذَّكَرَ وَٱلۡأُنثَىٰ ٤٥ಮತ್ತು ಅವನೇ ಸಾಯಿಸುತ್ತಾನೆ ಮತ್ತು ಬದುಕಿಸುತ್ತಾನೆ مِن نُّطۡفَةٍ إِذَا تُمۡنَىٰ ٤٦ಅವನೇ, ಗಂಡು ಮತ್ತು ಹೆಣ್ಣೆಂಬ ಜೊತೆಗಳನ್ನು ಸೃಷ್ಟಿಸಿದವನು – وَأَنَّ عَلَيۡهِ ٱلنَّشۡأَةَ ٱلۡأُخۡرَىٰ ٤٧– ಸುರಿಸಲಾದ ವೀರ್ಯದಿಂದ وَأَنَّهُۥ هُوَ أَغۡنَىٰ وَأَقۡنَىٰ ٤٨ಪುನಃ ಜೀವಂತಗೊಳಿಸುವ ಹೊಣೆಯೂ ಅವನ ಮೇಲೆಯೇ ಇದೆ وَأَنَّهُۥ هُوَ رَبُّ ٱلشِّعۡرَىٰ ٤٩ಅವನೇ, ಸ್ವಾಯತ್ತಗೊಳಿಸಿದವನು ಹಾಗೂ ಸಂಪನ್ನಗೊಳಿಸಿದವನು وَأَنَّهُۥٓ أَهۡلَكَ عَادًا ٱلۡأُولَىٰ ٥٠ಅವನೇ ‘ಶಿಅ್ರಾ’ದ (ತಾರೆಯ) ಒಡೆಯನು وَثَمُودَاْ فَمَآ أَبۡقَىٰ ٥١ಅವನೇ, ಪ್ರಥಮ ‘ಆದ್’ರನ್ನು ನಾಶ ಮಾಡಿದವನು وَقَوۡمَ نُوحٍ مِّن قَبۡلُۖ إِنَّهُمۡ كَانُواْ هُمۡ أَظۡلَمَ وَأَطۡغَىٰ ٥٢ಮತ್ತು ಸಮೂದರನ್ನೂ ಅಷ್ಟೇ. ಅವನು (ಅವರಲ್ಲಿ) ಯಾರನ್ನೂ ಉಳಿಸಲಿಲ್ಲ وَٱلۡمُؤۡتَفِكَةَ أَهۡوَىٰ ٥٣ಈ ಹಿಂದೆ ನೂಹರ ಜನಾಂಗವನ್ನು (ಅವನು ನಾಶಮಾಡಿದ್ದನು). ಖಂಡಿತವಾಗಿಯೂ ಅವರು ತುಂಬಾ ಅಕ್ರಮಿಗಳಾಗಿದ್ದರು ಹಾಗೂ ವಿದ್ರೋಹಿಗಳಾಗಿದ್ದರು فَغَشَّىٰهَا مَا غَشَّىٰ ٥٤ಮತ್ತು ಅವನು ಮಗುಚಿ ಬಿದ್ದ (ಲೂತ್ರ ಜನಾಂಗದ) ನಾಡನ್ನು ನುಚ್ಚು ನೂರು ಮಾಡಿದನು فَبِأَيِّ ءَالَآءِ رَبِّكَ تَتَمَارَىٰ ٥٥ಆವರಿಸುವ ವಸ್ತುವೊಂದು ಅದನ್ನು (ಆ ನಾಡನ್ನು) ಆವರಿಸಿಕೊಂಡಿತ್ತು هَٰذَا نَذِيرٌ مِّنَ ٱلنُّذُرِ ٱلۡأُولَىٰٓ ٥٦(ಮಾನವಾ,) ನೀನಿನ್ನು ನಿನ್ನೊಡೆಯನ ಯಾವೆಲ್ಲ ಕೊಡುಗೆಗಳ ಕುರಿತು ಸಂಶಯಿಸುವೆ أَزِفَتِ ٱلۡأٓزِفَةُ ٥٧ಅವರು (ದೂತರು) ಈ ಹಿಂದೆ ಎಚ್ಚರಿಸಲು ಬಂದವರ ಸಾಲಿನ, ಒಬ್ಬ ಎಚ್ಚರಿಸುವವರಾಗಿದ್ದಾರೆ لَيۡسَ لَهَا مِن دُونِ ٱللَّهِ كَاشِفَةٌ ٥٨ಹತ್ತಿರ ಬರಬೇಕಾದುದು (ಲೋಕಾಂತ್ಯದ ಘಳಿಗೆ) ಹತ್ತಿರ ಬಂದು ಬಿಟ್ಟಿದೆ أَفَمِنۡ هَٰذَا ٱلۡحَدِيثِ تَعۡجَبُونَ ٥٩ಅಲ್ಲಾಹನ ಹೊರತು ಬೇರಾರೂ ಅದನ್ನು ನಿವಾರಿಸಲಾರರು وَتَضۡحَكُونَ وَلَا تَبۡكُونَ ٦٠ನೀವೇನು ಈ ಮಾತಿನ ಕುರಿತು ಅಚ್ಚರಿ ಪಡುತ್ತಿದ್ದೀರಾ وَأَنتُمۡ سَٰمِدُونَ ٦١ಮತ್ತು ನೀವು ನಗುತ್ತೀರಿ, ಅಳುವುದಿಲ್ಲ فَٱسۡجُدُواْۤ لِلَّهِۤ وَٱعۡبُدُواْ ۩ ٦٢ನೀವು ಭಾರೀ ದೊಡ್ಡಸ್ತಿಕೆ ಮೆರೆಯುತ್ತೀರಿ