Millat al-Islam

Chapter 86 · 17 verses · Abdussalam Puthige

Surah At-Tariq in Kannada

Arabic with tafsir Listen to Surah At-Tariq (1312 reciters)
Meccanسورة الطارق17 verses

بِسۡمِ ٱللَّهِ ٱلرَّحۡمَٰنِ ٱلرَّحِيمِ

وَٱلسَّمَآءِ وَٱلطَّارِقِ ١ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ وَمَآ أَدۡرَىٰكَ مَا ٱلطَّارِقُ ٢‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು ٱلنَّجۡمُ ٱلثَّاقِبُ ٣ಅದು ಮಿನುಗುವ ತಾರೆ إِن كُلُّ نَفۡسٍ لَّمَّا عَلَيۡهَا حَافِظٌ ٤ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ فَلۡيَنظُرِ ٱلۡإِنسَٰنُ مِمَّ خُلِقَ ٥ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ خُلِقَ مِن مَّآءٍ دَافِقٍ ٦ಅವರನ್ನು ಜಿಗಿಯುವ ನೀರಿನಿಂದ ಸೃಷ್ಟಿಸಲಾಗಿದೆ يَخۡرُجُ مِنۢ بَيۡنِ ٱلصُّلۡبِ وَٱلتَّرَآئِبِ ٧ಅದು ಬೆನ್ನು ಹಾಗೂ ಎದೆಯ ಮಧ್ಯದಿಂದ ಹೊರಡುತ್ತದೆ إِنَّهُۥ عَلَىٰ رَجۡعِهِۦ لَقَادِرٌ ٨ಅವನು ಅವನನ್ನು (ಮನುಷ್ಯನನ್ನು) ಮತ್ತೊಮ್ಮೆ ಸೃಷ್ಟಿಸಲು ಖಂಡಿತ ಸಮರ್ಥನಾಗಿದ್ದಾನೆ يَوۡمَ تُبۡلَى ٱلسَّرَآئِرُ ٩ಮನದೊಳಗಿನ ರಹಸ್ಯಗಳ ಪರಿಶೀಲನೆ (ಅಂತಿಮ ವಿಚಾರಣೆ) ನಡೆಯುವ ದಿನ فَمَا لَهُۥ مِن قُوَّةٍ وَلَا نَاصِرٍ ١٠ಅಂದು ಅವನ (ಮಾನವನ) ಬಳಿ ಯಾವ ಶಕ್ತಿಯೂ ಇರದು. ಯಾವ ಸಹಾಯಕನೂ ಇರಲಾರನು وَٱلسَّمَآءِ ذَاتِ ٱلرَّجۡعِ ١١ಮಳೆ ಸುರಿಸುವ ಆಕಾಶದಾಣೆ وَٱلۡأَرۡضِ ذَاتِ ٱلصَّدۡعِ ١٢ಬಿರಿಯುವ ಭೂಮಿಯಾಣೆ إِنَّهُۥ لَقَوۡلٌ فَصۡلٌ ١٣ಇದು ನಿರ್ಣಾಯಕ ಸಂದೇಶ وَمَا هُوَ بِٱلۡهَزۡلِ ١٤ಇದು ತಮಾಷೆಯಲ್ಲ إِنَّهُمۡ يَكِيدُونَ كَيۡدًا ١٥ಅವರು ಸಂಚುಗಳನ್ನು ಹೂಡುತ್ತಿದ್ದಾರೆ وَأَكِيدُ كَيۡدًا ١٦ಮತ್ತು ನಾನೊಂದು ಸಂಚು ಹೂಡುತ್ತಿದ್ದೇನೆ فَمَهِّلِ ٱلۡكَٰفِرِينَ أَمۡهِلۡهُمۡ رُوَيۡدَۢا ١٧ನೀವೀಗ ಧಿಕ್ಕಾರಿಗಳಿಗೆ ಕಾಲಾವಕಾಶವನ್ನು ನೀಡಿರಿ. ಕೇವಲ ಸ್ವಲ್ಪ ಕಾಲಾವಕಾಶ

Translation: Abdussalam Puthige.