Millat al-Islam

Chapter 39 · 75 verses · Abdussalam Puthige

Surah Az-Zumar in Kannada

Arabic with tafsir Listen to Surah Az-Zumar (1296 reciters)
Meccanسورة الزمر75 verses

بِسۡمِ ٱللَّهِ ٱلرَّحۡمَٰنِ ٱلرَّحِيمِ

تَنزِيلُ ٱلۡكِتَٰبِ مِنَ ٱللَّهِ ٱلۡعَزِيزِ ٱلۡحَكِيمِ ١ನೆನಪಿರಲಿ, ನಿಷ್ಠೆಯು ಅಲ್ಲಾಹನಿಗೇ ಮೀಸಲಾಗಿರಲಿ. ಅಲ್ಲಾಹನ ಹೊರತು ಇತರರನ್ನು ತಮ್ಮ ಪೋಷಕರಾಗಿಸಿಕೊಂಡವರು, ‘‘ಅವರು ನಮ್ಮನ್ನು ಅಲ್ಲಾಹನಿಗೆ ನಿಕಟಗೊಳಿಸುವರೆಂದು ಮಾತ್ರ ನಾವು ಅವರನ್ನು ಪೂಜಿಸುತ್ತೇವೆ’’ ಎನ್ನುತ್ತಾರೆ. ಅವರು ಭಿನ್ನತೆ ತಾಳಿರುವ ವಿಷಯಗಳಲ್ಲಿ ಅಲ್ಲಾಹನೇ ಅವರ ನಡುವೆ ತೀರ್ಮಾನ ಮಾಡುವನು. ಸುಳ್ಳುಗಾರನಾಗಿರುವ ಕೃತಘ್ನನಿಗೆ ಅಲ್ಲಾಹನು ಖಂಡಿತ ಸರಿ ದಾರಿಯನ್ನು ತೋರುವುದಿಲ್ಲ إِنَّآ أَنزَلۡنَآ إِلَيۡكَ ٱلۡكِتَٰبَ بِٱلۡحَقِّ فَٱعۡبُدِ ٱللَّهَ مُخۡلِصًا لَّهُ ٱلدِّينَ ٢ಅಲ್ಲಾಹನು ಯಾರನ್ನಾದರೂ ತನ್ನ ಪುತ್ರನಾಗಿಸಿಕೊಳ್ಳಲು ಬಯಸಿದ್ದರೆ, ಅವನು ತನ್ನ ಸೃಷ್ಟಿಗಳ ಪೈಕಿ ತಾನಿಚ್ಛಿಸಿದವರನ್ನು ಆರಿಸಿಕೊಳ್ಳುತ್ತಿದ್ದನು. ಅವನು ಪಾವನನು. ಆ ಅಲ್ಲಾಹನು, ಅನುಪಮನಾಗಿದ್ದಾನೆ ಹಾಗೂ ಭಾರೀ ಶಕ್ತಿಶಾಲಿಯಾಗಿದ್ದಾನೆ أَلَا لِلَّهِ ٱلدِّينُ ٱلۡخَالِصُۚ وَٱلَّذِينَ ٱتَّخَذُواْ مِن دُونِهِۦٓ أَوۡلِيَآءَ مَا نَعۡبُدُهُمۡ إِلَّا لِيُقَرِّبُونَآ إِلَى ٱللَّهِ زُلۡفَىٰٓ إِنَّ ٱللَّهَ يَحۡكُمُ بَيۡنَهُمۡ فِي مَا هُمۡ فِيهِ يَخۡتَلِفُونَۗ إِنَّ ٱللَّهَ لَا يَهۡدِي مَنۡ هُوَ كَٰذِبٌ كَفَّارٌ ٣ಅವನು ಆಕಾಶಗಳನ್ನು ಹಾಗೂ ಭೂಮಿಯನ್ನು ಕ್ರಮಬದ್ಧವಾಗಿ ಸೃಷ್ಟಿಸಿರುವನು. ಅವನೇ ರಾತ್ರಿಯನ್ನು ಹಗಲ ಮೇಲೆ ಆವರಿಸುತ್ತಾನೆ ಹಾಗೂ ಹಗಲನ್ನು ರಾತ್ರಿಯ ಮೇಲೆ ಆವರಿಸುತ್ತಾನೆ ಮತ್ತು ಸೂರ್ಯ ಹಾಗೂ ಚಂದ್ರನನ್ನು ವಿಧೇಯಗೊಳಿಸಿದ್ದಾನೆ. ಎಲ್ಲವೂ ಒಂದು ನಿರ್ದಿಷ್ಟ ಅವಧಿಗಾಗಿ ಚಲನೆಯಲ್ಲಿದೆ. ನೆನಪಿರಲಿ, ಅವನು ಪ್ರಚಂಡನೂ ಮಹಾ ಕ್ಷಮಾಶೀಲನೂ ಆಗಿದ್ದಾನೆ لَّوۡ أَرَادَ ٱللَّهُ أَن يَتَّخِذَ وَلَدًا لَّٱصۡطَفَىٰ مِمَّا يَخۡلُقُ مَا يَشَآءُۚ سُبۡحَٰنَهُۥۖ هُوَ ٱللَّهُ ٱلۡوَٰحِدُ ٱلۡقَهَّارُ ٤ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಹಾಗೂ ಅದರಿಂದ ಅದರ ಜೋಡಿಯನ್ನು ಸೃಷ್ಟಿಸಿದನು ಮತ್ತು ಜಾನುವಾರುಗಳಲ್ಲಿ ನಿಮಗಾಗಿ ಎಂಟು ಜೋಡಿಗಳನ್ನು ತಯಾರಿಸಿದನು. ಅವನು ನಿಮ್ಮನ್ನು ನಿಮ್ಮ ತಾಯಂದಿರ ಗರ್ಭಗಳಲ್ಲಿ, ಮೂರು ಕತ್ತಲುಗಳಲ್ಲಿ, ಹಂತ ಹಂತವಾಗಿ ಸೃಷ್ಟಿಸಿರುವನು. ಆ ಅಲ್ಲಾಹನೇ ನಿಮ್ಮ ಒಡೆಯನು. ಅಧಿಕಾರವೆಲ್ಲವೂ ಅವನಿಗೇ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ನೀವು ಅದೆಲ್ಲಿ ಅಲೆಯುತ್ತಿರುವಿರಿ خَلَقَ ٱلسَّمَٰوَٰتِ وَٱلۡأَرۡضَ بِٱلۡحَقِّۖ يُكَوِّرُ ٱلَّيۡلَ عَلَى ٱلنَّهَارِ وَيُكَوِّرُ ٱلنَّهَارَ عَلَى ٱلَّيۡلِۖ وَسَخَّرَ ٱلشَّمۡسَ وَٱلۡقَمَرَۖ كُلٌّ يَجۡرِي لِأَجَلٍ مُّسَمًّىۗ أَلَا هُوَ ٱلۡعَزِيزُ ٱلۡغَفَّٰرُ ٥ನೀವು ಕೃತಘ್ನತೆ ತೋರಿದರೆ, ಅಲ್ಲಾಹನಂತು ನಿಮ್ಮ ಅಗತ್ಯವೇ ಇಲ್ಲದವನಾಗಿದ್ದಾನೆ. ಆದರೆ ಅವನು ತನ್ನ ದಾಸರ ಪಾಲಿಗೆ ಕೃತಘ್ನತೆಯ ನಿಲುವನ್ನು ಮೆಚ್ಚುವುದಿಲ್ಲ. ನೀವು ಕೃತಜ್ಞತೆ ತೋರುವುದಾದರೆ ಅದನ್ನೇ ಅವನು ನಿಮ್ಮ ಪಾಲಿಗೆ ಮೆಚ್ಚುತ್ತಾನೆ. ಹೊರೆ ಹೊರುವ ಯಾರು ಇನ್ನೊಬ್ಬರ ಹೊರೆಯನ್ನು ಹೊರಲಾರನು. ಕೊನೆಗೊಮ್ಮೆ ನೀವು ನಿಮ್ಮ ಒಡೆಯನ ಬಳಿಗೇ ಮರಳಿ ಹೋಗುವಿರಿ ಮತ್ತು ಅವನು, ನೀವು ಏನೆಲ್ಲಾ ಮಾಡುತ್ತಿದ್ದಿರೆಂಬುದನ್ನು ನಿಮಗೆ ತಿಳಿಸುವನು. ಖಂಡಿತವಾಗಿಯೂ ಅವನು ಮನಸ್ಸಿನೊಳಗಿನ ವಿಚಾರಗಳನ್ನೂ ಬಲ್ಲವನಾಗಿದ್ದಾನೆ خَلَقَكُم مِّن نَّفۡسٍ وَٰحِدَةٍ ثُمَّ جَعَلَ مِنۡهَا زَوۡجَهَا وَأَنزَلَ لَكُم مِّنَ ٱلۡأَنۡعَٰمِ ثَمَٰنِيَةَ أَزۡوَٰجٍۚ يَخۡلُقُكُمۡ فِي بُطُونِ أُمَّهَٰتِكُمۡ خَلۡقًا مِّنۢ بَعۡدِ خَلۡقٍ فِي ظُلُمَٰتٍ ثَلَٰثٍۚ ذَٰلِكُمُ ٱللَّهُ رَبُّكُمۡ لَهُ ٱلۡمُلۡكُۖ لَآ إِلَٰهَ إِلَّا هُوَۖ فَأَنَّىٰ تُصۡرَفُونَ ٦ಮತ್ತು ಮಾನವನಿಗೆ ಸಂಕಟವೇನಾದರೂ ತಟ್ಟಿದರೆ, ಅವನು ತನ್ನೊಡೆಯನೆಡೆಗೆ ಒಲಿದು, ಅವನಿಗೆ ಮೊರೆ ಇಡುತ್ತಾನೆ. ತರುವಾಯ ಅವನು (ಅಲ್ಲಾಹನು) ಆತನಿಗೆ ತನ್ನ ಅನುಗ್ರಹವನ್ನು ದಯ ಪಾಲಿಸಿದಾಗ, ಆತನು ಈ ಹಿಂದೆ ತಾನು ಯಾರಿಗೆ ಮೊರೆ ಇಟ್ಟಿದ್ದೆನೆಂಬುದನ್ನೇ ಮರೆತು ಬಿಡುತ್ತಾನೆ ಮತ್ತು ಅಲ್ಲಾಹನಿಗೆ ಪಾಲುದಾರರನ್ನು ನೇಮಿಸುತ್ತಾನೆ – ಅವರು ಆತನನ್ನು ಅವನ (ಅಲ್ಲಾಹನ) ದಾರಿಯಿಂದ ದೂರಗೊಳಿಸಿ ಬಿಡುತ್ತಾರೆ. (ಅಂಥವನಿಗೆ) ಹೇಳಿರಿ; ತುಸುಕಾಲ ನೀನು ನಿನ್ನ ಕೃತಘ್ನತೆಯ ಸುಖವನ್ನು ಅನುಭವಿಸು. ನೀನು ಖಂಡಿತ ನರಕವಾಸಿಯಾಗಿರುವೆ إِن تَكۡفُرُواْ فَإِنَّ ٱللَّهَ غَنِيٌّ عَنكُمۡۖ وَلَا يَرۡضَىٰ لِعِبَادِهِ ٱلۡكُفۡرَۖ وَإِن تَشۡكُرُواْ يَرۡضَهُ لَكُمۡۗ وَلَا تَزِرُ وَازِرَةٌ وِزۡرَ أُخۡرَىٰۚ ثُمَّ إِلَىٰ رَبِّكُم مَّرۡجِعُكُمۡ فَيُنَبِّئُكُم بِمَا كُنتُمۡ تَعۡمَلُونَۚ إِنَّهُۥ عَلِيمُۢ بِذَاتِ ٱلصُّدُورِ ٧(ಅವನು ಶ್ರೇಷ್ಠನೋ, ಅಥವಾ) ರಾತ್ರಿಯ ವೇಳೆ ಸಾಷ್ಟಾಂಗವೆರಗಿಕೊಂಡೂ, ನಿಂತುಕೊಂಡೂ ಆರಾಧಿಸುತ್ತಾ, ಪರಲೋಕದ ಕುರಿತು ಸದಾ ಜಾಗೃತನಾಗಿದ್ದು, ತನ್ನ ಒಡೆಯನ ಅನುಗ್ರಹವನ್ನು ನಿರೀಕ್ಷಿಸುತ್ತಿರುವವನು ಶ್ರೇಷ್ಠನೋ? ಹೇಳಿರಿ; ಅರಿತಿಲ್ಲದವರು ಮತ್ತು ಅರಿತಿರುವವರು ಸಮಾನರಾಗಬಲ್ಲರೇ? ಬುದ್ಧಿಯುಳ್ಳವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ ۞ وَإِذَا مَسَّ ٱلۡإِنسَٰنَ ضُرٌّ دَعَا رَبَّهُۥ مُنِيبًا إِلَيۡهِ ثُمَّ إِذَا خَوَّلَهُۥ نِعۡمَةً مِّنۡهُ نَسِيَ مَا كَانَ يَدۡعُوٓاْ إِلَيۡهِ مِن قَبۡلُ وَجَعَلَ لِلَّهِ أَندَادًا لِّيُضِلَّ عَن سَبِيلِهِۦۚ قُلۡ تَمَتَّعۡ بِكُفۡرِكَ قَلِيلًا إِنَّكَ مِنۡ أَصۡحَٰبِ ٱلنَّارِ ٨ಹೇಳಿರಿ; ನನ್ನ (ಅಲ್ಲಾಹನ) ವಿಶ್ವಾಸಿ ದಾಸರೇ, ನಿಮ್ಮ ಒಡೆಯನಿಗೆ ಅಂಜಿರಿ. ಈ ಲೋಕದಲ್ಲಿ ಒಳಿತನ್ನು ಮಾಡಿದವರಿಗೆ, ಒಳಿತು ಸಿಗಲಿದೆ. ಅಲ್ಲಾಹನ ಭೂಮಿಯು ವಿಶಾಲವಾಗಿದೆ. ಸಹನಶೀಲರಿಗೆ ಅಪಾರ ಪ್ರತಿಫಲ ಸಿಗಲಿದೆ أَمَّنۡ هُوَ قَٰنِتٌ ءَانَآءَ ٱلَّيۡلِ سَاجِدًا وَقَآئِمًا يَحۡذَرُ ٱلۡأٓخِرَةَ وَيَرۡجُواْ رَحۡمَةَ رَبِّهِۦۗ قُلۡ هَلۡ يَسۡتَوِي ٱلَّذِينَ يَعۡلَمُونَ وَٱلَّذِينَ لَا يَعۡلَمُونَۗ إِنَّمَا يَتَذَكَّرُ أُوْلُواْ ٱلۡأَلۡبَٰبِ ٩ಹೇಳಿರಿ; ನನಗಂತು, ನಿಷ್ಠೆಯನ್ನು ಅಲ್ಲಾಹನಿಗೇ ಮಿಸಲಾಗಿಟ್ಟು, ಅವನನ್ನು ಆರಾಧಿಸಲು ಆದೇಶಿಸಲಾಗಿದೆ قُلۡ يَٰعِبَادِ ٱلَّذِينَ ءَامَنُواْ ٱتَّقُواْ رَبَّكُمۡۚ لِلَّذِينَ أَحۡسَنُواْ فِي هَٰذِهِ ٱلدُّنۡيَا حَسَنَةٌۗ وَأَرۡضُ ٱللَّهِ وَٰسِعَةٌۗ إِنَّمَا يُوَفَّى ٱلصَّٰبِرُونَ أَجۡرَهُم بِغَيۡرِ حِسَابٍ ١٠ಮತ್ತು ನಾನೇ ಪ್ರಥಮವಾಗಿ ಮುಸ್ಲಿಮ (ಶರಣಾಗತ)ನಾಗಬೇಕೆಂದು ನನಗೆ ಆದೇಶಿಸಲಾಗಿದೆ قُلۡ إِنِّيٓ أُمِرۡتُ أَنۡ أَعۡبُدَ ٱللَّهَ مُخۡلِصًا لَّهُ ٱلدِّينَ ١١ಹೇಳಿರಿ; ನಾನು ನನ್ನ ಒಡೆಯನ ಆದೇಶವನ್ನು ಮೀರಿ ನಡೆದರೆ ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ وَأُمِرۡتُ لِأَنۡ أَكُونَ أَوَّلَ ٱلۡمُسۡلِمِينَ ١٢ಹೇಳಿರಿ; ನಾನು ನನ್ನ ನಿಷ್ಠೆಯನ್ನು ಅಲ್ಲಾಹನಿಗೇ ಮೀಸಲಾಗಿಟ್ಟು ಅವನನ್ನೇ ಆರಾಧಿಸುತ್ತೇನೆ قُلۡ إِنِّيٓ أَخَافُ إِنۡ عَصَيۡتُ رَبِّي عَذَابَ يَوۡمٍ عَظِيمٍ ١٣ನೀವು ಅವನ ಹೊರತು ಯಾರನ್ನು ಬೇಕಾದರೂ ಆರಾಧಿಸಿರಿ. ಹೇಳಿರಿ; ತಮ್ಮನ್ನು ಹಾಗೂ ತಮ್ಮ ಮನೆಯವರನ್ನು ಪುನರುತ್ಥಾನ ದಿನ ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾಗಿ ನಷ್ಟ ಅನುಭವಿಸುವವರಾಗಿದ್ದಾರೆ. (ನಿಮಗೆ) ತಿಳಿದಿರಲಿ; ಅದುವೇ ಸ್ಪಷ್ಟವಾದ ನಷ್ಟ قُلِ ٱللَّهَ أَعۡبُدُ مُخۡلِصًا لَّهُۥ دِينِي ١٤ಅವರಿಗಾಗಿ (ನರಕದಲ್ಲಿ), ಅವರ ಮೇಲೂ ಅವರನ್ನು ಆವರಿಸುವ ಬೆಂಕಿಯ ಜ್ವಾಲೆಗಳಿರುವವು ಮತ್ತು ಅವರ ಕೆಳಗೂ ಅವರನ್ನು ಆವರಿಸುವ ಜ್ವಾಲೆಗಳಿರುವವು. ಅಲ್ಲಾಹನು ಆ ಕುರಿತು ತನ್ನ ದಾಸರನ್ನು ಎಚ್ಚರಿಸುತ್ತಾನೆ. ನನ್ನ ದಾಸರೇ, ನನಗೆ ಅಂಜಿರಿ فَٱعۡبُدُواْ مَا شِئۡتُم مِّن دُونِهِۦۗ قُلۡ إِنَّ ٱلۡخَٰسِرِينَ ٱلَّذِينَ خَسِرُوٓاْ أَنفُسَهُمۡ وَأَهۡلِيهِمۡ يَوۡمَ ٱلۡقِيَٰمَةِۗ أَلَا ذَٰلِكَ هُوَ ٱلۡخُسۡرَانُ ٱلۡمُبِينُ ١٥ಅವನ ಆರಾಧನೆಗಾಗಿ, ಮಿಥ್ಯ ಶಕ್ತಿಗಳನ್ನೆಲ್ಲಾ ತೊರೆದು ಅಲ್ಲಾಹನೆಡೆಗೆ ಒಲವು ತೋರಿದವರಿಗೆ ಶುಭವಾರ್ತೆ ಇದೆ. ಅಂತಹ ನನ್ನ ಭಕ್ತರಿಗೆ ಶುಭವಾರ್ತೆ ನೀಡಿರಿ لَهُم مِّن فَوۡقِهِمۡ ظُلَلٌ مِّنَ ٱلنَّارِ وَمِن تَحۡتِهِمۡ ظُلَلٌۚ ذَٰلِكَ يُخَوِّفُ ٱللَّهُ بِهِۦ عِبَادَهُۥۚ يَٰعِبَادِ فَٱتَّقُونِ ١٦ಅವರು ಮಾತನ್ನು ಸರಿಯಾಗಿ ಆಲಿಸಿ, ಅದರ ಅತ್ಯುತ್ತಮ ಆಯಾಮವನ್ನು ಅನುಸರಿಸುತ್ತಾರೆ. ಅವರೇ ಅಲ್ಲಾಹನಿಂದ ಮಾರ್ಗದರ್ಶನ ಪಡೆದವರು ಮತ್ತು ಅವರೇ ಬುದ್ಧಿವಂತರು وَٱلَّذِينَ ٱجۡتَنَبُواْ ٱلطَّٰغُوتَ أَن يَعۡبُدُوهَا وَأَنَابُوٓاْ إِلَى ٱللَّهِ لَهُمُ ٱلۡبُشۡرَىٰۚ فَبَشِّرۡ عِبَادِ ١٧ಈಗಾಗಲೇ ಶಿಕ್ಷೆಯ ತೀರ್ಪು ವಿಧಿಸಲ್ಪಟ್ಟವನನ್ನು ಮತ್ತು ಈಗಾಗಲೇ ಬೆಂಕಿಗೆ ಬಿದ್ದು ಬಿಟ್ಟಿರುವವನನ್ನು ನೀವು ರಕ್ಷಿಸಬಲ್ಲಿರಾ ٱلَّذِينَ يَسۡتَمِعُونَ ٱلۡقَوۡلَ فَيَتَّبِعُونَ أَحۡسَنَهُۥٓۚ أُوْلَٰٓئِكَ ٱلَّذِينَ هَدَىٰهُمُ ٱللَّهُۖ وَأُوْلَٰٓئِكَ هُمۡ أُوْلُواْ ٱلۡأَلۡبَٰبِ ١٨ಆದರೆ, ತಮ್ಮ ಒಡೆಯನ ಭಕ್ತರಾಗಿದ್ದವರಿಗಾಗಿ, ಮಾಳಿಗೆಗಳು ಮತ್ತು ಅವುಗಳ ಮೇಲೆ ಮತ್ತಷ್ಟು ಸಿದ್ಧ ಮಾಳಿಗೆಗಳು ಇರುವವು. ಅವುಗಳ ತಳದಲ್ಲಿ ಹರಿಯುವ ನದಿಗಳಿರುವವು. ಇದು ಅಲ್ಲಾಹನ ವಾಗ್ದಾನ. ಅಲ್ಲಾಹನೆಂದೂ ತಾನು ಕೊಟ್ಟ ಮಾತನ್ನು ಮೀರುವುದಿಲ್ಲ أَفَمَنۡ حَقَّ عَلَيۡهِ كَلِمَةُ ٱلۡعَذَابِ أَفَأَنتَ تُنقِذُ مَن فِي ٱلنَّارِ ١٩ನೀವು ಕಾಣಲಿಲ್ಲವೇ? ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ, ಅದನ್ನು ಚಿಲುಮೆಗಳಾಗಿಸಿ ಭೂಮಿಯಲ್ಲಿ ಹರಿಸುತ್ತಾನೆ. ತರುವಾಯ ಅವನು ಅಲ್ಲಿಂದ ವಿವಿಧ ಬಣ್ಣದ ಬೆಳೆಗಳನ್ನು ಹೊರತೆಗೆಯುತ್ತಾನೆ. ಆ ಬಳಿಕ ಅದು ಒಣಗಿ ಬಿಡುತ್ತದೆ ಮತ್ತು ಅದು ಹಳದಿಯಾಗುವುದನ್ನು ನೀವು ಕಾಣುತ್ತೀರಿ. ಆ ಬಳಿಕ ಅವನು ಅದನ್ನು ಚೂರು ಚೂರಾಗಿಸಿ ಬಿಡುತ್ತಾನೆ. ಇದರಲ್ಲಿ ಬುದ್ಧಿವಂತರಿಗೆ ಖಂಡಿತ ಪಾಠವಿದೆ لَٰكِنِ ٱلَّذِينَ ٱتَّقَوۡاْ رَبَّهُمۡ لَهُمۡ غُرَفٌ مِّن فَوۡقِهَا غُرَفٌ مَّبۡنِيَّةٌ تَجۡرِي مِن تَحۡتِهَا ٱلۡأَنۡهَٰرُۖ وَعۡدَ ٱللَّهِ لَا يُخۡلِفُ ٱللَّهُ ٱلۡمِيعَادَ ٢٠ಅಲ್ಲಾಹನು ಯಾರ ಹೃದಯವನ್ನು ಇಸ್ಲಾಮಿಗಾಗಿ ತೆರೆದು ಬಿಟ್ಟನೋ, ಅವನು ತನ್ನ ಒಡೆಯನ ಕಡೆಯಿಂದ ಬೆಳಕಿನಲ್ಲಿದ್ದಾನೆ. ಅಲ್ಲಾಹನನ್ನು ನೆನಪಿಸಲಾಗದಷ್ಟು ಹೃದಯವು ಕಠಿಣವಾಗಿ ಬಿಟ್ಟವರಿಗೆ ವಿನಾಶ ಕಾದಿದೆ. ಅವರು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿದ್ದಾರೆ أَلَمۡ تَرَ أَنَّ ٱللَّهَ أَنزَلَ مِنَ ٱلسَّمَآءِ مَآءً فَسَلَكَهُۥ يَنَٰبِيعَ فِي ٱلۡأَرۡضِ ثُمَّ يُخۡرِجُ بِهِۦ زَرۡعًا مُّخۡتَلِفًا أَلۡوَٰنُهُۥ ثُمَّ يَهِيجُ فَتَرَىٰهُ مُصۡفَرًّا ثُمَّ يَجۡعَلُهُۥ حُطَٰمًاۚ إِنَّ فِي ذَٰلِكَ لَذِكۡرَىٰ لِأُوْلِي ٱلۡأَلۡبَٰبِ ٢١ಅಲ್ಲಾಹನು, ಸಮರೂಪದ, ಆವರ್ತಿತ ವಚನಗಳಿರುವ ಅತ್ಯುತ್ತಮ ಗ್ರಂಥವನ್ನು ಇಳಿಸಿಕೊಟ್ಟಿದ್ದಾನೆ. ತಮ್ಮ ಒಡೆಯನ ಭಕ್ತಿ ಉಳ್ಳವರಿಗೆ ಅದರಿಂದ ರೋಮಾಂಚನವಾಗುತ್ತದೆ. ತರುವಾಯ ಅವರ ಚರ್ಮಗಳೂ (ಬಾಹ್ಯವೂ) ಹೃದಯಗಳೂ (ಅಂತರಂಗವೂ)ಅಲ್ಲಾಹನ ನೆನಪಿನೆಡೆಗೆ ವಾಲಿ ಬಿಡುತ್ತವೆ. ಇದು ಅಲ್ಲಾಹನ ಮಾರ್ಗದರ್ಶನ. ಅವನು ತಾನಿಚ್ಛಿಸಿದವರಿಗೆ ಸರಿದಾರಿಯನ್ನು ತೋರುತ್ತಾನೆ. ಇನ್ನು ಅಲ್ಲಾಹನೇ ದಾರಿ ತಪ್ಪಿಸಿದವನಿಗೆ ಸರಿ ದಾರಿ ತೋರಬಲ್ಲವರು ಯಾರೂ ಇಲ್ಲ أَفَمَن شَرَحَ ٱللَّهُ صَدۡرَهُۥ لِلۡإِسۡلَٰمِ فَهُوَ عَلَىٰ نُورٍ مِّن رَّبِّهِۦۚ فَوَيۡلٌ لِّلۡقَٰسِيَةِ قُلُوبُهُم مِّن ذِكۡرِ ٱللَّهِۚ أُوْلَٰٓئِكَ فِي ضَلَٰلٍ مُّبِينٍ ٢٢ಪುನರುತ್ಥಾನ ದಿನ, ತನ್ನ ಮುಖವನ್ನು ಆ ಕೆಟ್ಟ ಶಿಕ್ಷೆಯಿಂದ ರಕ್ಷಿಸಲು ಹೆಣಗುತ್ತಿರುವವನು (ಸ್ವರ್ಗವಾಸಿಗಳಿಗೆ ಸಮಾನನಾಗಬಲ್ಲನೇ)? ಅಂದು ಅಕ್ರಮಿಗಳೊಡನೆ ‘‘ಸವಿಯಿರಿ, ನೀವು ಮಾಡುತ್ತಿದ್ದ ಕರ್ಮಗಳ ಫಲವನ್ನು’’ ಎನ್ನಲಾಗುವುದು ٱللَّهُ نَزَّلَ أَحۡسَنَ ٱلۡحَدِيثِ كِتَٰبًا مُّتَشَٰبِهًا مَّثَانِيَ تَقۡشَعِرُّ مِنۡهُ جُلُودُ ٱلَّذِينَ يَخۡشَوۡنَ رَبَّهُمۡ ثُمَّ تَلِينُ جُلُودُهُمۡ وَقُلُوبُهُمۡ إِلَىٰ ذِكۡرِ ٱللَّهِۚ ذَٰلِكَ هُدَى ٱللَّهِ يَهۡدِي بِهِۦ مَن يَشَآءُۚ وَمَن يُضۡلِلِ ٱللَّهُ فَمَا لَهُۥ مِنۡ هَادٍ ٢٣ಅವರಿಗಿಂತ ಹಿಂದಿನವರೂ (ಸತ್ಯವನ್ನು) ತಿರಸ್ಕರಿಸಿದ್ದರು. ಕೊನೆಗೆ ಅವರಿಗೆ ಅರಿವೇ ಇಲ್ಲದಂತೆ, ಅವರ ಮೇಲೆ ಶಿಕ್ಷೆಯು ಬಂದೆರಗಿತು أَفَمَن يَتَّقِي بِوَجۡهِهِۦ سُوٓءَ ٱلۡعَذَابِ يَوۡمَ ٱلۡقِيَٰمَةِۚ وَقِيلَ لِلظَّٰلِمِينَ ذُوقُواْ مَا كُنتُمۡ تَكۡسِبُونَ ٢٤ಅಲ್ಲಾಹನು ಈ ಲೋಕದ ಬದುಕಿನಲ್ಲೇ ಅವರಿಗೆ ನಷ್ಟದ ರುಚಿಯನ್ನು ಉಣಿಸಿದನು. ಇನ್ನು ಪರಲೋಕದ ಶಿಕ್ಷೆಯಂತು ಇದಕ್ಕಿಂತ ತುಂಬಾ ದೊಡ್ಡದಾಗಿರುವುದು. ಅವರು ಇದನ್ನು ಅರಿತಿರಬೇಕಿತ್ತು كَذَّبَ ٱلَّذِينَ مِن قَبۡلِهِمۡ فَأَتَىٰهُمُ ٱلۡعَذَابُ مِنۡ حَيۡثُ لَا يَشۡعُرُونَ ٢٥ಖಂಡಿತವಾಗಿಯೂ ನಾವು ಈ ಕುರ್‌ಆನ್‌ನಲ್ಲಿ ಮಾನವರಿಗಾಗಿ ಎಲ್ಲ ಬಗೆಯ ಉದಾಹರಣೆಗಳನ್ನು ಮುಂದಿಟ್ಟಿರುವೆವು – ಅವರು ಉಪದೇಶವನ್ನು ಸ್ವೀಕರಿಸಬೇಕೆಂದು فَأَذَاقَهُمُ ٱللَّهُ ٱلۡخِزۡيَ فِي ٱلۡحَيَوٰةِ ٱلدُّنۡيَاۖ وَلَعَذَابُ ٱلۡأٓخِرَةِ أَكۡبَرُۚ لَوۡ كَانُواْ يَعۡلَمُونَ ٢٦ಅರಬೀ ಭಾಷೆಯಲ್ಲಿರುವ, ಯಾವ ವಕ್ರತೆಯೂ ಇಲ್ಲದ ಕುರ್‌ಆನ್. ಅವರು ಧರ್ಮನಿಷ್ಠರಾಗಬೇಕೆಂದು (ಇದನ್ನು ಕಳುಹಿಸಲಾಗಿದೆ) وَلَقَدۡ ضَرَبۡنَا لِلنَّاسِ فِي هَٰذَا ٱلۡقُرۡءَانِ مِن كُلِّ مَثَلٍ لَّعَلَّهُمۡ يَتَذَكَّرُونَ ٢٧ಅಲ್ಲಾಹನು ಒಂದು ಉದಾಹರಣೆಯನ್ನು ಮುಂದಿಡುತ್ತಾನೆ: ಒಬ್ಬನು ಪರಸ್ಪರರ ಪಾಲಿಗೆ ತೀರಾ ಹಠಮಾರಿಗಳಾಗಿರುವ ಹಲವರ ದಾಸನಾಗಿದ್ದಾನೆ ಮತ್ತು ಇನ್ನೊಬ್ಬನು ಕೇವಲ ಒಬ್ಬನ ದಾಸನಾಗಿದ್ದಾನೆ. ಅವರಿಬ್ಬರ ಸ್ಥಿತಿಯು ಸಮಾನವಾಗಿರಲು ಸಾಧ್ಯವೇ? ಅಲ್ಲಾಹನಿಗೆ ಸ್ತುತಿಗಳು. ಆದರೆ, ಹೆಚ್ಚಿನವರು ಅರಿತಿಲ್ಲ قُرۡءَانًا عَرَبِيًّا غَيۡرَ ذِي عِوَجٍ لَّعَلَّهُمۡ يَتَّقُونَ ٢٨(ದೂತರೇ,) ನೀವು ಖಂಡಿತ ಸಾಯುವಿರಿ ಮತ್ತು ಅವರೂ (ವಿರೋಧಿಗಳೂ) ಖಂಡಿತ ಸಾಯುವರು ضَرَبَ ٱللَّهُ مَثَلًا رَّجُلًا فِيهِ شُرَكَآءُ مُتَشَٰكِسُونَ وَرَجُلًا سَلَمًا لِّرَجُلٍ هَلۡ يَسۡتَوِيَانِ مَثَلًاۚ ٱلۡحَمۡدُ لِلَّهِۚ بَلۡ أَكۡثَرُهُمۡ لَا يَعۡلَمُونَ ٢٩ಮತ್ತು ನೀವು (ವಿರೋಧಿಗಳು) ಪುನರುತ್ಥಾನದಿನ ನಿಮ್ಮ ಒಡೆಯನ ಮುಂದೆ ಖಂಡಿತ ಪರಸ್ಪರ ಜಗಳಾಡುವಿರಿ. ಕಾಂಡ – إِنَّكَ مَيِّتٌ وَإِنَّهُم مَّيِّتُونَ ٣٠ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಹಾಗೂ ಸತ್ಯವು ತನ್ನ ಬಳಿಗೆ ಬಂದಾಗ ಅದನ್ನು ತಿರಸ್ಕರಿಸಿದವನಿಗಿಂತ ದೊಡ್ಡ ಅಕ್ರಮಿ ಯಾರು? ಧಿಕ್ಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ ثُمَّ إِنَّكُمۡ يَوۡمَ ٱلۡقِيَٰمَةِ عِندَ رَبِّكُمۡ تَخۡتَصِمُونَ ٣١ಸತ್ಯವನ್ನು ತಂದವನು ಮತ್ತು ಅದನ್ನು ಸಮರ್ಥಿಸಿದವನು – ಅವರೇ ಧರ್ಮನಿಷ್ಠರು

Juz 24

۞ فَمَنۡ أَظۡلَمُ مِمَّن كَذَبَ عَلَى ٱللَّهِ وَكَذَّبَ بِٱلصِّدۡقِ إِذۡ جَآءَهُۥٓۚ أَلَيۡسَ فِي جَهَنَّمَ مَثۡوًى لِّلۡكَٰفِرِينَ ٣٢ಅವರಿಗಾಗಿ ಅವರ ಒಡೆಯನ ಬಳಿ, ಅವರು ಬಯಸಿದ್ದೆಲ್ಲವೂ ಇದೆ. ಅದುವೇ ಸತ್ಕರ್ಮಿಗಳ ಪ್ರತಿಫಲ وَٱلَّذِي جَآءَ بِٱلصِّدۡقِ وَصَدَّقَ بِهِۦٓ أُوْلَٰٓئِكَ هُمُ ٱلۡمُتَّقُونَ ٣٣ಅಲ್ಲಾಹನು ಅವರ ಕರ್ಮಗಳಲ್ಲಿನ ದೋಷಗಳನ್ನು ನಿವಾರಿಸುವನು ಮತ್ತು ಅವರು ಮಾಡುತ್ತಿದ್ದ ಅತ್ಯುತ್ತಮ ಕರ್ಮಗಳಿಗನುಸಾರ ಅವರಿಗೆ ಅವರ ಪ್ರತಿಫಲವನ್ನು ನೀಡುವನು لَهُم مَّا يَشَآءُونَ عِندَ رَبِّهِمۡۚ ذَٰلِكَ جَزَآءُ ٱلۡمُحۡسِنِينَ ٣٤ತನ್ನ ದಾಸರ ಪಾಲಿಗೆ ಅಲ್ಲಾಹನು ಸಾಕಾಗಲಾರನೇ? ಅವರು ನಿಮ್ಮನ್ನು ಅವನ ಹೊರತು ಇತರರ ಹೆಸರಲ್ಲಿ ಹೆದರಿಸುತ್ತಾರೆ. ಅಲ್ಲಾಹನೇ ದಾರಿ ತಪ್ಪಿಸಿ ಬಿಟ್ಟವರಿಗೆ ಯಾರೂ ಸರಿ ದಾರಿಯನ್ನು ತೋರಲಾರರು لِيُكَفِّرَ ٱللَّهُ عَنۡهُمۡ أَسۡوَأَ ٱلَّذِي عَمِلُواْ وَيَجۡزِيَهُمۡ أَجۡرَهُم بِأَحۡسَنِ ٱلَّذِي كَانُواْ يَعۡمَلُونَ ٣٥ಇನ್ನು, ಅಲ್ಲಾಹನೇ ಸರಿದಾರಿಯಲ್ಲಿ ನಡೆಸಿದವರನ್ನು ಯಾರೂ ದಾರಿ ತಪ್ಪಿಸಲಾರರು. ಪ್ರಬಲನಾದ ಅಲ್ಲಾಹನೇನು ಪ್ರತೀಕಾರ ತೀರಿಸಲಾರನೇ أَلَيۡسَ ٱللَّهُ بِكَافٍ عَبۡدَهُۥۖ وَيُخَوِّفُونَكَ بِٱلَّذِينَ مِن دُونِهِۦۚ وَمَن يُضۡلِلِ ٱللَّهُ فَمَا لَهُۥ مِنۡ هَادٍ ٣٦ಆಕಾಶಗಳನ್ನು ಹಾಗೂ ಭೂಮಿಯನ್ನು ಸೃಷ್ಟಿಸಿದವನು ಯಾರು? ಎಂದು ನೀವು ಅವರೊಡನೆ ಕೇಳಿದರೆ. ಖಂಡಿತ ಅಲ್ಲಾಹನೆಂದೇ ಅವರು ಹೇಳುವರು. ಹೇಳಿರಿ; ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತೀರೋ ಅವರನ್ನು ನೀವು ನೋಡಿದಿರಾ? ಅಲ್ಲಾಹನು ನನಗೇನಾದರೂ ಹಾನಿ ಮಾಡ ಬಯಸಿದರೆ, ಅವರು ಅವನ ಹಾನಿಯನ್ನು ನಿವಾರಿಸಬಲ್ಲರೇ? ಅಥವಾ ಅವನು ನನ್ನನ್ನು ಅನುಗ್ರಹಿಸಲು ಬಯಸಿದರೆ, ಅವರು ಆತನ ಅನುಗ್ರಹವನ್ನು ತಡೆಯಬಲ್ಲರೇ? ಹೇಳಿರಿ; ನನಗಂತು ಅಲ್ಲಾಹನೇ ಸಾಕು. ಅವಲಂಬಿಸುವವರು ಅವನನ್ನೇ ಅವಲಂಬಿಸುತ್ತಾರೆ وَمَن يَهۡدِ ٱللَّهُ فَمَا لَهُۥ مِن مُّضِلٍّۗ أَلَيۡسَ ٱللَّهُ بِعَزِيزٍ ذِي ٱنتِقَامٍ ٣٧ಹೇಳಿರಿ; ನನ್ನ ಜನಾಂಗದವರೇ, ನಿಮ್ಮ ಸ್ಥಾನದಲ್ಲಿ ನೀವು ಸಕ್ರಿಯರಾಗಿರಿ. ನಾನೂ ಸಕ್ರಿಯನಾಗಿರುತ್ತೇನೆ. ನಿಮಗೆ ಬೇಗನೇ ತಿಳಿಯಲಿದೆ – وَلَئِن سَأَلۡتَهُم مَّنۡ خَلَقَ ٱلسَّمَٰوَٰتِ وَٱلۡأَرۡضَ لَيَقُولُنَّ ٱللَّهُۚ قُلۡ أَفَرَءَيۡتُم مَّا تَدۡعُونَ مِن دُونِ ٱللَّهِ إِنۡ أَرَادَنِيَ ٱللَّهُ بِضُرٍّ هَلۡ هُنَّ كَٰشِفَٰتُ ضُرِّهِۦٓ أَوۡ أَرَادَنِي بِرَحۡمَةٍ هَلۡ هُنَّ مُمۡسِكَٰتُ رَحۡمَتِهِۦۚ قُلۡ حَسۡبِيَ ٱللَّهُۖ عَلَيۡهِ يَتَوَكَّلُ ٱلۡمُتَوَكِّلُونَ ٣٨– ಅಪಮಾನಿಕಾರಿಯಾದ ಶಿಕ್ಷೆ ಹಾಗೂ ಶಾಶ್ವತವಾದ ಶಿಕ್ಷೆಯು ಯಾರ ಮೇಲೆ ಬಂದೆರಗುವುದೆಂದು قُلۡ يَٰقَوۡمِ ٱعۡمَلُواْ عَلَىٰ مَكَانَتِكُمۡ إِنِّي عَٰمِلٌۖ فَسَوۡفَ تَعۡلَمُونَ ٣٩(ದೂತರೇ,) ಖಂಡಿತವಾಗಿಯೂ ನಾವು ನಿಮಗೆ ಮಾನವರಿಗಾಗಿ, ಸತ್ಯದೊಂದಿಗೆ, ಗ್ರಂಥವನ್ನು ಇಳಿಸಿ ಕೊಟ್ಟಿರುವೆವು. ಇದೀಗ ಯಾರಾದರೂ ಸನ್ಮಾರ್ಗವನ್ನು ಅನುಸರಿಸಿದರೆ ಅದು ಅವನದೇ ಹಿತಕ್ಕಾಗಿರುವುದು ಮತ್ತು ಯಾರಾದರೂ ತಪ್ಪುದಾರಿ ಹಿಡಿದರೆ, ಅದರ ಹೊಣೆಯೂ ಅವನ ಮೇಲೆಯೇ ಇರುವುದು. ನೀವು ಅವರ ಮೇಲಿನ ಕಾವಲುಗಾರರೇನೂ ಅಲ್ಲ مَن يَأۡتِيهِ عَذَابٌ يُخۡزِيهِ وَيَحِلُّ عَلَيۡهِ عَذَابٌ مُّقِيمٌ ٤٠ಅಲ್ಲಾಹನು ಜೀವಗಳನ್ನು ಅವುಗಳ ಮರಣದ ವೇಳೆ ವಶಪಡಿಸಿಕೊಳ್ಳುತ್ತಾನೆ. ಮತ್ತು ಮೃತವಾಗದ ಜೀವಗಳನ್ನೂ ಅವನು, ಅವುಗಳ ನಿದ್ದೆಯ ವೇಳೆಯಲ್ಲಿ ವಶಪಡಿಸಿಕೊಳ್ಳುತ್ತಾನೆ – ಆ ಪೈಕಿ ಮರಣವು ವಿಧಿಸಲ್ಪಟ್ಟಿರುವ ಜೀವವನ್ನು ಮಾತ್ರ ಅವನು ತಡೆದಿಟ್ಟು ಕೊಳ್ಳುತ್ತಾನೆ ಹಾಗೂ ಇತರ ಜೀವಗಳನ್ನು ಒಂದು ನಿರ್ದಿಷ್ಟ ಅವಧಿಗಾಗಿ ಮರಳಿಸುತ್ತಾನೆ. ಚಿಂತಿಸುವ ಜನರಿಗೆ ಇದರಲ್ಲಿ ಖಂಡಿತ ಪಾಠಗಳಿವೆ إِنَّآ أَنزَلۡنَا عَلَيۡكَ ٱلۡكِتَٰبَ لِلنَّاسِ بِٱلۡحَقِّۖ فَمَنِ ٱهۡتَدَىٰ فَلِنَفۡسِهِۦۖ وَمَن ضَلَّ فَإِنَّمَا يَضِلُّ عَلَيۡهَاۖ وَمَآ أَنتَ عَلَيۡهِم بِوَكِيلٍ ٤١ಅವರೇನು ಅಲ್ಲಾಹನ ಹೊರತು ಅನ್ಯರನ್ನು ಶಿಫಾರಸ್ಸುದಾರರಾಗಿಸಿಕೊಂಡಿರುವರೇ? ಹೇಳಿರಿ; ಅವರ ಬಳಿ ಯಾವುದೇ ಅಧಿಕಾರವಿಲ್ಲದಿದ್ದರೂ, ಅವರಿಗೆ ಏನೂ ಅರ್ಥವಾಗದಿದ್ದರೂ (ನೀವೇನು ಅವರನ್ನೇ ಅವಲಂಬಿಸುವಿರಾ) ٱللَّهُ يَتَوَفَّى ٱلۡأَنفُسَ حِينَ مَوۡتِهَا وَٱلَّتِي لَمۡ تَمُتۡ فِي مَنَامِهَاۖ فَيُمۡسِكُ ٱلَّتِي قَضَىٰ عَلَيۡهَا ٱلۡمَوۡتَ وَيُرۡسِلُ ٱلۡأُخۡرَىٰٓ إِلَىٰٓ أَجَلٍ مُّسَمًّىۚ إِنَّ فِي ذَٰلِكَ لَأٓيَٰتٍ لِّقَوۡمٍ يَتَفَكَّرُونَ ٤٢ಹೇಳಿರಿ; ಶಿಫಾರಸಿನ ಅಧಿಕಾರವು ಸಂಪೂರ್ಣವಾಗಿ ಅಲ್ಲಾಹನಿಗೇ ಸೇರಿದೆ. ಆಕಾಶಗಳ ಹಾಗೂ ಭೂಮಿಯ ಆಧಿಪತ್ಯವೂ ಅವನಿಗೇ ಸೇರಿದೆ. ಕೊನೆಗೆ ನೀವೆಲ್ಲಾ ಅವನೆಡೆಗೇ ಮರಳುವಿರಿ أَمِ ٱتَّخَذُواْ مِن دُونِ ٱللَّهِ شُفَعَآءَۚ قُلۡ أَوَلَوۡ كَانُواْ لَا يَمۡلِكُونَ شَيۡـًٔا وَلَا يَعۡقِلُونَ ٤٣ಏಕಮಾತ್ರನಾದ ಅಲ್ಲಾಹನ ಪ್ರಸ್ತಾಪವೆತ್ತಿದೊಡನೆ, ಪರಲೋಕದಲ್ಲಿ ನಂಬಿಕೆ ಇಲ್ಲದವರ ಮನಸ್ಸುಗಳಲ್ಲಿ ಜಿಗುಪ್ಸೆ ಉಕ್ಕುತ್ತದೆ ಮತ್ತು ಅವನ ಹೊರತು ಇತರರನ್ನು ಪ್ರಸ್ತಾಪಿಸಿದೊಡನೆ ಅವರು ಸಂತುಷ್ಟರಾಗಿ ಬಿಡುತ್ತಾರೆ قُل لِّلَّهِ ٱلشَّفَٰعَةُ جَمِيعًاۖ لَّهُۥ مُلۡكُ ٱلسَّمَٰوَٰتِ وَٱلۡأَرۡضِۖ ثُمَّ إِلَيۡهِ تُرۡجَعُونَ ٤٤ಹೇಳಿರಿ; ಆಕಾಶಗಳನ್ನು ಹಾಗೂ ಭೂಮಿಯನ್ನು ರೂಪಿಸಿರುವ, ಗುಪ್ತ ಹಾಗೂ ವ್ಯಕ್ತವಾದ ಎಲ್ಲವನ್ನೂ ಅರಿತಿರುವ ಅಲ್ಲಾಹನೇ, ನಿನ್ನ ದಾಸರು ಪರಸ್ಪರ ಭಿನ್ನತೆ ತಾಳಿದ್ದ ಎಲ್ಲ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡುವವನು ನೀನೇ وَإِذَا ذُكِرَ ٱللَّهُ وَحۡدَهُ ٱشۡمَأَزَّتۡ قُلُوبُ ٱلَّذِينَ لَا يُؤۡمِنُونَ بِٱلۡأٓخِرَةِۖ وَإِذَا ذُكِرَ ٱلَّذِينَ مِن دُونِهِۦٓ إِذَا هُمۡ يَسۡتَبۡشِرُونَ ٤٥ಅಕ್ರಮವೆಸಗಿದವರ ಬಳಿ, ಭೂಮಿಯಲ್ಲಿರುವ ಎಲ್ಲವೂ ಹಾಗೂ ಅಷ್ಟೇ ಪ್ರಮಾಣದ ಇನ್ನಷ್ಟು (ಸಂಪತ್ತು) ಇದ್ದರೂ ಪುನರುತ್ಥಾನ ದಿನದ ಶಿಕ್ಷೆಯಿಂದ ಮುಕ್ತರಾಗಲು ಅವರು ಅದೆಲ್ಲವನ್ನೂ ಕೊಟ್ಟು ಬಿಡಲು ಮುಂದಾಗುವರು. ಆದರೆ, ಅವರು ಊಹಿಸಿಯೂ ಇಲ್ಲದ್ದನ್ನು (ಅಂತಹ ಘೋರ ಶಿಕ್ಷೆಯನ್ನು) ಅಲ್ಲಾಹನು ಅವರ ಮುಂದೆ ಅನಾವರಣಗೊಳಿಸುವನು قُلِ ٱللَّهُمَّ فَاطِرَ ٱلسَّمَٰوَٰتِ وَٱلۡأَرۡضِ عَٰلِمَ ٱلۡغَيۡبِ وَٱلشَّهَٰدَةِ أَنتَ تَحۡكُمُ بَيۡنَ عِبَادِكَ فِي مَا كَانُواْ فِيهِ يَخۡتَلِفُونَ ٤٦ಮತ್ತು ಆ ದಿನ, ಅವರು ಮಾಡುತ್ತಿದ್ದ ಎಲ್ಲ ದುಷ್ಟ ಕೃತ್ಯಗಳು ಅವರ ಮುಂದೆ ಪ್ರಕಟವಾಗುವವು ಹಾಗೂ ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದುವೇ ಅವರನ್ನು ಆವರಿಸಿಕೊಳ್ಳುವುದು وَلَوۡ أَنَّ لِلَّذِينَ ظَلَمُواْ مَا فِي ٱلۡأَرۡضِ جَمِيعًا وَمِثۡلَهُۥ مَعَهُۥ لَٱفۡتَدَوۡاْ بِهِۦ مِن سُوٓءِ ٱلۡعَذَابِ يَوۡمَ ٱلۡقِيَٰمَةِۚ وَبَدَا لَهُم مِّنَ ٱللَّهِ مَا لَمۡ يَكُونُواْ يَحۡتَسِبُونَ ٤٧ಮನುಷ್ಯನಿಗೆ ಏನಾದರೂ ಸಂಕಟವಾದಾಗ ಅವನು ನಮ್ಮನ್ನು ಪ್ರಾರ್ಥಿಸುತ್ತಾನೆ. ಆ ಬಳಿಕ ನಾವು ನಮ್ಮ ಕಡೆಯಿಂದ ಆತನಿಗೇನಾದರೂ ಕೊಡುಗೆಯನ್ನು ದಯಪಾಲಿಸಿದರೆ ಅವನು, ಅದನ್ನು ನನಗೆ ನನ್ನ ಜ್ಞಾನದ ಆಧಾರದಲ್ಲಿ ನೀಡಲಾಗಿದೆ ಎನ್ನುತ್ತಾನೆ. ನಿಜವಾಗಿ ಅದೊಂದು ಪರೀಕ್ಷೆಯಾಗಿದೆ. ಆದರೆ, ಹೆಚ್ಚಿನವರು ಇದನ್ನು ತಿಳಿದಿಲ್ಲ وَبَدَا لَهُمۡ سَيِّـَٔاتُ مَا كَسَبُواْ وَحَاقَ بِهِم مَّا كَانُواْ بِهِۦ يَسۡتَهۡزِءُونَ ٤٨ಅವರಿಗಿಂತ ಹಿಂದಿನವರೂ ಖಂಡಿತ, ಇದನ್ನೇ ಹೇಳಿದ್ದರು. ಆದರೆ, ತಮ್ಮ ಕೃತ್ಯಗಳಿಂದ ಅವರಿಗೆ ಯಾವ ಲಾಭವೂ ಆಗಲಿಲ್ಲ فَإِذَا مَسَّ ٱلۡإِنسَٰنَ ضُرٌّ دَعَانَا ثُمَّ إِذَا خَوَّلۡنَٰهُ نِعۡمَةً مِّنَّا قَالَ إِنَّمَآ أُوتِيتُهُۥ عَلَىٰ عِلۡمِۭۚ بَلۡ هِيَ فِتۡنَةٌ وَلَٰكِنَّ أَكۡثَرَهُمۡ لَا يَعۡلَمُونَ ٤٩ಅವರು ಮಾಡಿದ ದುಷ್ಟ ಕೃತ್ಯಗಳು ಅವರ ಮೇಲೆಯೇ ಬಂದೆರಗಿದವು. (ಇದೀಗ) ಆ ಜನರ ಪೈಕಿ ಅಕ್ರಮವೆಸಗಿದವರು ಮಾಡಿರುವ ದುಷ್ಟ ಕೃತ್ಯಗಳು ಬಹು ಬೇಗನೇ ಅವರ ಮೇಲೆ ಬಂದೆರಗಲಿವೆ. (ಅಲ್ಲಾಹನನ್ನು) ನಿರ್ಬಂಧಿಸಲು ಅವರಿಂದ ಸಾಧ್ಯವಿಲ್ಲ قَدۡ قَالَهَا ٱلَّذِينَ مِن قَبۡلِهِمۡ فَمَآ أَغۡنَىٰ عَنۡهُم مَّا كَانُواْ يَكۡسِبُونَ ٥٠ಸಂಪನ್ನತೆಯನ್ನು ಅಲ್ಲಾಹನು ತಾನಿಚ್ಛಿಸಿದವರ ಪಾಲಿಗೆ ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರ ಪಾಲಿಗೆ ಸೀಮಿತಗೊಳಿಸುತ್ತಾನೆ ಎಂಬುದು ಅವರಿಗೆ ತಿಳಿಯದೇ? ಖಂಡಿತವಾಗಿಯೂ ವಿಶ್ವಾಸಿಗಳಿಗೆ ಇದರಲ್ಲಿ ಧಾರಾಳ ಪಾಠಗಳಿವೆ فَأَصَابَهُمۡ سَيِّـَٔاتُ مَا كَسَبُواْۚ وَٱلَّذِينَ ظَلَمُواْ مِنۡ هَٰٓؤُلَآءِ سَيُصِيبُهُمۡ سَيِّـَٔاتُ مَا كَسَبُواْ وَمَا هُم بِمُعۡجِزِينَ ٥١ಹೇಳಿರಿ; ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ (ಅಲ್ಲಾಹನ) ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ أَوَلَمۡ يَعۡلَمُوٓاْ أَنَّ ٱللَّهَ يَبۡسُطُ ٱلرِّزۡقَ لِمَن يَشَآءُ وَيَقۡدِرُۚ إِنَّ فِي ذَٰلِكَ لَأٓيَٰتٍ لِّقَوۡمٍ يُؤۡمِنُونَ ٥٢ನೀವಿನ್ನು ನಿಮ್ಮ ಒಡೆಯನ ಕಡೆಗೆ ಗಮನ ಹರಿಸಿರಿ ಮತ್ತು ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವ ಹಾಗೂ ನಿಮಗೆ ಎಲ್ಲಿಂದಲೂ ನೆರವು ಸಿಗದ ಸ್ಥಿತಿ ಬರುವುದಕ್ಕಿಂತ ಮುನ್ನ ಅವನಿಗೆ ಶರಣಾಗಿ ಬಿಡಿರಿ ۞ قُلۡ يَٰعِبَادِيَ ٱلَّذِينَ أَسۡرَفُواْ عَلَىٰٓ أَنفُسِهِمۡ لَا تَقۡنَطُواْ مِن رَّحۡمَةِ ٱللَّهِۚ إِنَّ ٱللَّهَ يَغۡفِرُ ٱلذُّنُوبَ جَمِيعًاۚ إِنَّهُۥ هُوَ ٱلۡغَفُورُ ٱلرَّحِيمُ ٥٣ಮತ್ತು ನಿಮಗೆ ಅರಿವೇ ಇಲ್ಲದಂತೆ, ಹಠಾತ್ತನೆ ನಿಮ್ಮ ಮೇಲೆ ಶಿಕ್ಷೆಯು ಬಂದೆರಗುವುದಕ್ಕೆ ಮುನ್ನ, ನೀವು ನಿಮ್ಮ ಒಡೆಯನ ಕಡೆಯಿಂದ ನಿಮಗೆ ಇಳಿಸಿ ಕೊಡಲಾಗಿರುವ ಸಂದೇಶದ ಅತ್ಯುತ್ತಮ ವ್ಯಾಖ್ಯಾನವನ್ನು ಅನುಸರಿಸಿರಿ وَأَنِيبُوٓاْ إِلَىٰ رَبِّكُمۡ وَأَسۡلِمُواْ لَهُۥ مِن قَبۡلِ أَن يَأۡتِيَكُمُ ٱلۡعَذَابُ ثُمَّ لَا تُنصَرُونَ ٥٤ಏಕೆಂದರೆ ಅಂದು ಯಾರೂ, ಅಯ್ಯೋ ನನ್ನ ದುಸ್ಥಿತಿ! ಅಲ್ಲಾಹನ ವಿಷಯದಲ್ಲಿ ನನ್ನಿಂದ ಪ್ರಮಾದಗಳಾದವು ಹಾಗೂ ನಾನು (ಸತ್ಯವನ್ನು) ಗೇಲಿ ಮಾಡಿದ್ದೆ, ಎನ್ನುವಂತಾಗಬಾರದು وَٱتَّبِعُوٓاْ أَحۡسَنَ مَآ أُنزِلَ إِلَيۡكُم مِّن رَّبِّكُم مِّن قَبۡلِ أَن يَأۡتِيَكُمُ ٱلۡعَذَابُ بَغۡتَةً وَأَنتُمۡ لَا تَشۡعُرُونَ ٥٥ಅಥವಾ ಯಾರೂ, ಅಲ್ಲಾಹನು ನನಗೆ ಸರಿದಾರಿ ತೋರಿದ್ದರೆ ನಾನು ಧರ್ಮ ನಿಷ್ಠನಾಗಿರುತ್ತಿದ್ದೆ ಎನ್ನುವಂತಾಗಬಾರದು أَن تَقُولَ نَفۡسٌ يَٰحَسۡرَتَىٰ عَلَىٰ مَا فَرَّطتُ فِي جَنۢبِ ٱللَّهِ وَإِن كُنتُ لَمِنَ ٱلسَّٰخِرِينَ ٥٦ಅಥವಾ ಯಾರೂ, ಶಿಕ್ಷೆಯನ್ನು ಕಂಡು, ನನಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ನಾನು ಸಜ್ಜನನಾಗಿ ಬುದುಕುತ್ತಿದ್ದೆ ಎನ್ನುವಂತಾಗಬಾರದು أَوۡ تَقُولَ لَوۡ أَنَّ ٱللَّهَ هَدَىٰنِي لَكُنتُ مِنَ ٱلۡمُتَّقِينَ ٥٧(ಆಗ ಅಲ್ಲಾಹನು ಹೇಳುವನು;) ನಿನ್ನ ಬಳಿಗೆ ನನ್ನ ವಚನಗಳು ಬಂದಿದ್ದವು. ಆದರೆ, ನೀನು ಅವುಗಳನ್ನು ತಿರಸ್ಕರಿಸಿದೆ, ಅಹಂಕಾರ ತೋರಿದೆ ಮತ್ತು ನೀನು ಧಿಕ್ಕಾರಿಯಾಗಿದ್ದೆ أَوۡ تَقُولَ حِينَ تَرَى ٱلۡعَذَابَ لَوۡ أَنَّ لِي كَرَّةً فَأَكُونَ مِنَ ٱلۡمُحۡسِنِينَ ٥٨ಪುನರುತ್ಥಾನ ದಿನ ನೀವು ಕಾಣುವಿರಿ; ಅಲ್ಲಾಹನ ಕುರಿತು ಸುಳ್ಳು ಹೇಳಿದವರ ಮುಖಗಳು ಕರಾಳವಾಗಿರುವವು. ಅಹಂಕಾರಿಗಳ ನೆಲೆ ಇರುವುದು ನರಕದಲ್ಲೇ ತಾನೇ بَلَىٰ قَدۡ جَآءَتۡكَ ءَايَٰتِي فَكَذَّبۡتَ بِهَا وَٱسۡتَكۡبَرۡتَ وَكُنتَ مِنَ ٱلۡكَٰفِرِينَ ٥٩ಧರ್ಮನಿಷ್ಠರಾಗಿದ್ದವರಿಗೆ ಅಲ್ಲಾಹನು ಯಶಸ್ಸಿನ ಜೊತೆ ಮುಕ್ತಿಯನ್ನು ನೀಡುವನು. ಯಾವ ಸಂಕಟವೂ ಅವರನ್ನು ತಟ್ಟದು ಮತ್ತು ಅವರು ದುಃಖಿತರಾಗಲಾರರು وَيَوۡمَ ٱلۡقِيَٰمَةِ تَرَى ٱلَّذِينَ كَذَبُواْ عَلَى ٱللَّهِ وُجُوهُهُم مُّسۡوَدَّةٌۚ أَلَيۡسَ فِي جَهَنَّمَ مَثۡوًى لِّلۡمُتَكَبِّرِينَ ٦٠ಅಲ್ಲಾಹನೇ ಎಲ್ಲ ವಸ್ತುಗಳ ಸೃಷ್ಟಿಕರ್ತನು ಮತ್ತು ಅವನೇ ಎಲ್ಲ ವಸ್ತುಗಳ ಮೇಲ್ವಿಚಾರಕನು وَيُنَجِّي ٱللَّهُ ٱلَّذِينَ ٱتَّقَوۡاْ بِمَفَازَتِهِمۡ لَا يَمَسُّهُمُ ٱلسُّوٓءُ وَلَا هُمۡ يَحۡزَنُونَ ٦١ಆಕಾಶಗಳ ಹಾಗೂ ಭೂಮಿಯ ಚಾವಿಗಳು ಅವನ ಬಳಿ ಇವೆ. ಅಲ್ಲಾಹನ ವಚನಗಳನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸುವವರಾಗಿದ್ದಾರೆ ٱللَّهُ خَٰلِقُ كُلِّ شَيۡءٍۖ وَهُوَ عَلَىٰ كُلِّ شَيۡءٍ وَكِيلٌ ٦٢ಹೇಳಿರಿ; ಅಜ್ಞಾನಿಗಳೇ, ನಾನು ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಕೆಂದು ನೀವು ನನಗೆ ಆದೇಶಿಸುತ್ತೀರಾ لَّهُۥ مَقَالِيدُ ٱلسَّمَٰوَٰتِ وَٱلۡأَرۡضِۗ وَٱلَّذِينَ كَفَرُواْ بِـَٔايَٰتِ ٱللَّهِ أُوْلَٰٓئِكَ هُمُ ٱلۡخَٰسِرُونَ ٦٣(ದೂತರೇ,) ನೀವು ಹಲವರ ಆರಾಧಕರಾಗಿ ಬಿಟ್ಟರೆ ನಿಮ್ಮ ಎಲ್ಲ ಕರ್ಮಗಳು ವ್ಯರ್ಥವಾಗುವವು ಮತ್ತು ನೀವು ನಷ್ಟ ಅನುಭವಿಸಿದವರ ಸಾಲಿಗೆ ಸೇರುವಿರೆಂದು ನಿಮಗೂ ನಿಮ್ಮ ಹಿಂದಿನವರಿಗೂ ದಿವ್ಯವಾಣಿಯನ್ನು ಕಳಿಸಲಾಗಿತ್ತು قُلۡ أَفَغَيۡرَ ٱللَّهِ تَأۡمُرُوٓنِّيٓ أَعۡبُدُ أَيُّهَا ٱلۡجَٰهِلُونَ ٦٤ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಕೃತಜ್ಞರ ಸಾಲಿಗೆ ಸೇರಿರಿ وَلَقَدۡ أُوحِيَ إِلَيۡكَ وَإِلَى ٱلَّذِينَ مِن قَبۡلِكَ لَئِنۡ أَشۡرَكۡتَ لَيَحۡبَطَنَّ عَمَلُكَ وَلَتَكُونَنَّ مِنَ ٱلۡخَٰسِرِينَ ٦٥ಅವರು ಅಲ್ಲಾಹನನ್ನು ಗುರುತಿಸಬೇಕಾದ ರೀತಿಯಲ್ಲಿ ಗುರುತಿಸಿಲ್ಲ. ಪುನರುತ್ಥಾನ ದಿನ ಸಂಪೂರ್ಣ ಭೂಮಿಯು ಅವನ ಮುಷ್ಠಿಯೊಳಗಿರುವುದು ಮತ್ತು ಆಕಾಶಗಳೆಲ್ಲಾ ಮಡಚಿದ ಸ್ಥಿತಿಯಲ್ಲಿ ಅವನ ಬಲಗೈಯಲ್ಲಿರುವವು. ಅವನು ಪರಿಶುದ್ಧನು ಹಾಗೂ ಅವರು (ಅವನೊಂದಿಗೆ) ಪಾಲುಗೊಳಿಸುವ ಎಲ್ಲವುಗಳಿಗಿಂತ ತುಂಬಾ ಉನ್ನತನಾಗಿರುವನು بَلِ ٱللَّهَ فَٱعۡبُدۡ وَكُن مِّنَ ٱلشَّٰكِرِينَ ٦٦ಅಂತಿಮ ಕಹಳೆ ಊದಲಾದಾಗ ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಪ್ರತಿಯೊಬ್ಬನೂ ಪ್ರಜ್ಞಾಹೀನನಾಗಿ ಬಿಡುವನು – ಅಲ್ಲಾಹನಿಚ್ಛಿಸಿದವನ ಹೊರತು. ಮತ್ತೊಮ್ಮೆ ಕಹಳೆ ಊದಲಾದಾಗ ಅವರೆಲ್ಲರೂ ಎದ್ದು ನಿಂತು (ಅಚ್ಚರಿಯಿಂದ) ನೋಡ ತೊಡಗುವರು وَمَا قَدَرُواْ ٱللَّهَ حَقَّ قَدۡرِهِۦ وَٱلۡأَرۡضُ جَمِيعًا قَبۡضَتُهُۥ يَوۡمَ ٱلۡقِيَٰمَةِ وَٱلسَّمَٰوَٰتُ مَطۡوِيَّٰتُۢ بِيَمِينِهِۦۚ سُبۡحَٰنَهُۥ وَتَعَٰلَىٰ عَمَّا يُشۡرِكُونَ ٦٧ಮತ್ತು ಭೂಮಿಯು ತನ್ನ ಒಡೆಯನ ಪ್ರಕಾಶದಿಂದ ಬೆಳಗಿ ಬಿಡುವುದು ಹಾಗೂ (ಕರ್ಮಗಳ) ಗ್ರಂಥವನ್ನು ತೆರೆದಿಡಲಾಗುವುದು ಮತ್ತು ದೂತರನ್ನೂ ಸಾಕ್ಷಿಗಳನ್ನೂ ಮುಂದೆ ತರಲಾಗುವುದು ಹಾಗೂ ಅವರ (ಜನರ) ನಡುವೆ ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು. ಅವರ ಮೇಲೆ ಕಿಂಚಿತ್ತೂ ಅನ್ಯಾಯವಾಗದು وَنُفِخَ فِي ٱلصُّورِ فَصَعِقَ مَن فِي ٱلسَّمَٰوَٰتِ وَمَن فِي ٱلۡأَرۡضِ إِلَّا مَن شَآءَ ٱللَّهُۖ ثُمَّ نُفِخَ فِيهِ أُخۡرَىٰ فَإِذَا هُمۡ قِيَامٌ يَنظُرُونَ ٦٨(ಅಂದು) ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವು ಸಿಗುವುದು. ಅವರು ಏನೆಲ್ಲಾ ಮಾಡುತ್ತಿದ್ದರೆಂಬುದನ್ನು ಅವನು ಚೆನ್ನಾಗಿ ಅರಿತಿರುವನು وَأَشۡرَقَتِ ٱلۡأَرۡضُ بِنُورِ رَبِّهَا وَوُضِعَ ٱلۡكِتَٰبُ وَجِاْيٓءَ بِٱلنَّبِيِّـۧنَ وَٱلشُّهَدَآءِ وَقُضِيَ بَيۡنَهُم بِٱلۡحَقِّ وَهُمۡ لَا يُظۡلَمُونَ ٦٩(ಅಂದು) ಧಿಕ್ಕಾರಿಗಳನ್ನು ದಂಡು ದಂಡುಗಳಾಗಿ ಅಟ್ಟಿಸಿಕೊಂಡು ನರಕದೆಡೆಗೆ ಸಾಗಿಸಲಾಗುವುದು. ಅವರು ಅಲ್ಲಿಗೆ ತಲುಪಿದಾಗ ನರಕದ ಬಾಗಿಲುಗಳನ್ನು ತೆರೆದು ಬಿಡಲಾಗುವುದು. ಆಗ ಅಲ್ಲಿನ (ನರಕದ) ಪಾಲಕರು ಅವರೊಡನೆ, ‘‘ನಿಮ್ಮ ಒಡೆಯನ ವಚನಗಳನ್ನು ನಿಮಗೆ ಓದಿ ಕೇಳಿಸುವ ಮತ್ತು ಈ ದಿನವನ್ನು ಎದುರಿಸಲಿಕ್ಕಿದೆ ಎಂದು ನಿಮ್ಮನ್ನು ಎಚ್ಚರಿಸುವ ದೂತರು ಯಾರೂ ನಿಮ್ಮ ಬಳಿಗೆ ಬಂದಿರಲಿಲ್ಲವೇ?’’ ಎಂದು ಕೇಳುವರು. ಅವರು ‘‘ಖಂಡಿತ ಬಂದಿದ್ದರು’’ ಎನ್ನುವರು. ಆದರೆ, ಅದಾಗಲೇ ಧಿಕ್ಕಾರಿಗಳ ವಿರುದ್ಧ ಶಿಕ್ಷೆಯ ಆದೇಶವು ಜಾರಿಯಾಗಿರುವುದು وَوُفِّيَتۡ كُلُّ نَفۡسٍ مَّا عَمِلَتۡ وَهُوَ أَعۡلَمُ بِمَا يَفۡعَلُونَ ٧٠ಅವರೊಡನೆ, ‘‘ನರಕದ ಬಾಗಿಲುಗಳೊಳಗೆ ಪ್ರವೇಶಿಸಿ, ಶಾಶ್ವತವಾಗಿ ಅದರೊಳಗೆ ವಾಸಿಸಿರಿ’’ ಎನ್ನಲಾಗುವುದು. ಹೀಗೆ, ಅಹಂಕಾರಿಗಳ ಅಂತಿಮ ನೆಲೆಯು ತೀರಾ ಕೆಟ್ಟದಾಗಿರುವುದು وَسِيقَ ٱلَّذِينَ كَفَرُوٓاْ إِلَىٰ جَهَنَّمَ زُمَرًاۖ حَتَّىٰٓ إِذَا جَآءُوهَا فُتِحَتۡ أَبۡوَٰبُهَا وَقَالَ لَهُمۡ خَزَنَتُهَآ أَلَمۡ يَأۡتِكُمۡ رُسُلٌ مِّنكُمۡ يَتۡلُونَ عَلَيۡكُمۡ ءَايَٰتِ رَبِّكُمۡ وَيُنذِرُونَكُمۡ لِقَآءَ يَوۡمِكُمۡ هَٰذَاۚ قَالُواْ بَلَىٰ وَلَٰكِنۡ حَقَّتۡ كَلِمَةُ ٱلۡعَذَابِ عَلَى ٱلۡكَٰفِرِينَ ٧١ತಮ್ಮ ಒಡೆಯನಿಗೆ ನಿಷ್ಠರಾಗಿದ್ದವರನ್ನು ದಂಡು ದಂಡುಗಳಾಗಿ ಸ್ವರ್ಗದೆಡೆಗೆ ಕರೆದೊಯ್ಯಲಾಗುವುದು. ಅವರು ಅಲ್ಲಿಗೆ ತಲುಪಿದಾಗ, ಅದರ ಬಾಗಿಲುಗಳನ್ನು ತೆರೆಯಲಾಗುವುದು ಮತ್ತು ಅದರ ಪಾಲಕರು ಅವರೊಡನೆ ಹೇಳುವರು; ‘‘ನಿಮಗೆ ಶಾಂತಿ ಸಿಗಲಿ. ನೀವು ಸಜ್ಜನರು. ಶಾಶ್ವತವಾಗಿ ಇದರೊಳಗೆ ಪ್ರವೇಶಿಸಿರಿ’’ قِيلَ ٱدۡخُلُوٓاْ أَبۡوَٰبَ جَهَنَّمَ خَٰلِدِينَ فِيهَاۖ فَبِئۡسَ مَثۡوَى ٱلۡمُتَكَبِّرِينَ ٧٢ಅವರು ಹೇಳುವರು; ಪ್ರಶಂಸೆಗಳೆಲ್ಲಾ, ನಮಗೆ ನೀಡಿದ ತನ್ನ ವಾಗ್ದಾನವನ್ನು ಈಡೇರಿಸಿದ ಹಾಗೂ ನಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿಸಿದ ಅಲ್ಲಾಹನಿಗೆ ಸಲ್ಲಲಿ. ನಾವೀಗ ಸ್ವರ್ಗದಲ್ಲಿ ನಾವಿಚ್ಛಿಸುವಲ್ಲಿ ನೆಲೆಸಬಹುದು. ಎಷ್ಟೊಂದು ಚೆನ್ನಾಗಿದೆ ಸತ್ಕರ್ಮಿಗಳ ಪ್ರತಿಫಲ وَسِيقَ ٱلَّذِينَ ٱتَّقَوۡاْ رَبَّهُمۡ إِلَى ٱلۡجَنَّةِ زُمَرًاۖ حَتَّىٰٓ إِذَا جَآءُوهَا وَفُتِحَتۡ أَبۡوَٰبُهَا وَقَالَ لَهُمۡ خَزَنَتُهَا سَلَٰمٌ عَلَيۡكُمۡ طِبۡتُمۡ فَٱدۡخُلُوهَا خَٰلِدِينَ ٧٣ಮತ್ತು ನೀವು ಕಾಣುವಿರಿ, ಮಲಕ್‌ಗಳು ವಿಶ್ವ ಸಿಂಹಾಸನದ ಸುತ್ತ ಸಾಲುಗಟ್ಟಿಕೊಂಡು, ತಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರವನ್ನು ಜಪಿಸುತ್ತಿರುವರು. ಅವರ (ಜನರ) ನಡುವೆ ಅಂದು ನ್ಯಾಯೋಚಿತವಾಗಿ ತೀರ್ಪು ನೀಡಲಾಗುವುದು ಮತ್ತು ಹೇಳಲಾಗುವುದು; ‘‘ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು’’ وَقَالُواْ ٱلۡحَمۡدُ لِلَّهِ ٱلَّذِي صَدَقَنَا وَعۡدَهُۥ وَأَوۡرَثَنَا ٱلۡأَرۡضَ نَتَبَوَّأُ مِنَ ٱلۡجَنَّةِ حَيۡثُ نَشَآءُۖ فَنِعۡمَ أَجۡرُ ٱلۡعَٰمِلِينَ ٧٤ಹಾ ಮೀಮ್ وَتَرَى ٱلۡمَلَٰٓئِكَةَ حَآفِّينَ مِنۡ حَوۡلِ ٱلۡعَرۡشِ يُسَبِّحُونَ بِحَمۡدِ رَبِّهِمۡۚ وَقُضِيَ بَيۡنَهُم بِٱلۡحَقِّۚ وَقِيلَ ٱلۡحَمۡدُ لِلَّهِ رَبِّ ٱلۡعَٰلَمِينَ ٧٥ಈ ಗ್ರಂಥವನ್ನು ಅಲ್ಲಾಹನ ಕಡೆಯಿಂದ ಇಳಿಸಿಕೊಡಲಾಗಿದೆ. ಅವನು ಪ್ರಬಲನೂ ಬಲ್ಲವನೂ ಆಗಿದ್ದಾನೆ

Translation: Abdussalam Puthige.