بِسۡمِ ٱللَّهِ ٱلرَّحۡمَٰنِ ٱلرَّحِيمِ
الٓمٓصٓ ١(ದೂತರೇ,) ಈ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಡಲಾಗಿದೆ. ಈ ಕುರಿತು ನಿಮ್ಮ ಮನದಲ್ಲಿ ಯಾವುದೇ ಹಿಂಜರಿಕೆ ಇರಬಾರದು. ಏಕೆಂದರೆ ಈ ಮೂಲಕ ನೀವು (ಮಾನವ ಕುಲವನ್ನು) ಎಚ್ಚರಿಸಬೇಕಾಗಿದೆ ಮತ್ತು ಇದು ವಿಶ್ವಾಸಿಗಳ ಪಾಲಿಗೆ ಉಪದೇಶವಾಗಿದೆ كِتَٰبٌ أُنزِلَ إِلَيۡكَ فَلَا يَكُن فِي صَدۡرِكَ حَرَجٌ مِّنۡهُ لِتُنذِرَ بِهِۦ وَذِكۡرَىٰ لِلۡمُؤۡمِنِينَ ٢(ಜನರೇ,) ನಿಮ್ಮ ಒಡೆಯನ ಕಡೆಯಿಂದ ನಿಮ್ಮೆಡೆಗೆ ಇಳಿಸಿಕೊಡಲಾಗಿರುವುದನ್ನು (ಕುರ್ಆನ್ಅನ್ನು) ಅನುಸರಿಸಿರಿ ಮತ್ತು ಅವನನ್ನು ಬಿಟ್ಟು ಇತರ ಪೋಷಕರನ್ನು ಅನುಸರಿಸಬೇಡಿ. ನೀವು ಉಪದೇಶ ಸ್ವೀಕರಿಸುವುದು ತೀರಾ ಕಡಿಮೆ ٱتَّبِعُواْ مَآ أُنزِلَ إِلَيۡكُم مِّن رَّبِّكُمۡ وَلَا تَتَّبِعُواْ مِن دُونِهِۦٓ أَوۡلِيَآءَۗ قَلِيلًا مَّا تَذَكَّرُونَ ٣ನಾವು ಅದೆಷ್ಟೋ ನಾಡುಗಳನ್ನು ನಾಶಗೊಳಿಸಿರುವೆವು – ನಮ್ಮ ಶಿಕ್ಷೆಯು ರಾತ್ರಿಯ ವೇಳೆ ಅಥವಾ ಹಗಲಲ್ಲಿ ಜನರು ವಿಶ್ರಾಂತಿ ಪಡೆಯುತ್ತಿದ್ದಾಗ ಹಠಾತ್ತನೆ ಬಂದೆರಗಿತ್ತು وَكَم مِّن قَرۡيَةٍ أَهۡلَكۡنَٰهَا فَجَآءَهَا بَأۡسُنَا بَيَٰتًا أَوۡ هُمۡ قَآئِلُونَ ٤ನಮ್ಮ ಶಿಕ್ಷೆಯು ಅವರನ್ನು ತಲುಪಿದಾಗ ‘‘ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವು’’ ಎನ್ನುವುದನ್ನು ಬಿಟ್ಟರೆ ಬೇರೆ ಯಾವ ವಾದವೂ ಅವರ ಬಳಿ ಉಳಿದಿರಲಿಲ್ಲ فَمَا كَانَ دَعۡوَىٰهُمۡ إِذۡ جَآءَهُم بَأۡسُنَآ إِلَّآ أَن قَالُوٓاْ إِنَّا كُنَّا ظَٰلِمِينَ ٥ಯಾರೆಡೆಗೆ ದೂತರನ್ನು ಕಳಿಸಲಾಗಿತ್ತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು ಮತ್ತು ನಾವು ದೂತರನ್ನೂ ಖಂಡಿತ ಪ್ರಶ್ನಿಸುವೆವು فَلَنَسۡـَٔلَنَّ ٱلَّذِينَ أُرۡسِلَ إِلَيۡهِمۡ وَلَنَسۡـَٔلَنَّ ٱلۡمُرۡسَلِينَ ٦ಖಂಡಿತವಾಗಿಯೂ ಜ್ಞಾನದ ಆಧಾರದಲ್ಲಿ ನಾವು, ನಡೆದುದೆಲ್ಲವನ್ನೂ ಅವರಿಗೆ ತಿಳಿಸುವೆವು – ನಾವು ಎಂದೂ ಅನುಪಸ್ಥಿತರಾಗಿರಲಿಲ್ಲ فَلَنَقُصَّنَّ عَلَيۡهِم بِعِلۡمٍۖ وَمَا كُنَّا غَآئِبِينَ ٧ಅಂದು (ಅಂತಿಮ ವಿಚಾರಣೆಯ ದಿನ) ಕರ್ಮಗಳ ತೂಕ ನಡೆಯುವುದು ಖಚಿತ ಸತ್ಯವಾಗಿದೆ. ಅಂದು ಯಾರ (ಸತ್ಕರ್ಮಗಳ) ಭಾರವು ಅಧಿಕವಾಗಿರುವುದೋ ಅವರೇ ವಿಜಯಿಗಳಾಗುವರು وَٱلۡوَزۡنُ يَوۡمَئِذٍ ٱلۡحَقُّۚ فَمَن ثَقُلَتۡ مَوَٰزِينُهُۥ فَأُوْلَٰٓئِكَ هُمُ ٱلۡمُفۡلِحُونَ ٨ಮತ್ತು ಯಾರ (ಸತ್ಕರ್ಮಗಳ) ಭಾರವು ಕಡಿಮೆಯಾಗಿರುವುದೋ ಅವರೇ, ನಮ್ಮ ವಚನಗಳ ವಿಷಯದಲ್ಲಿ ಅಕ್ರಮವೆಸಗುವ ಮೂಲಕ ತಮಗೆ ತಾವೇ ನಷ್ಟವನ್ನುಂಟುಮಾಡಿಕೊಂಡವರು وَمَنۡ خَفَّتۡ مَوَٰزِينُهُۥ فَأُوْلَٰٓئِكَ ٱلَّذِينَ خَسِرُوٓاْ أَنفُسَهُم بِمَا كَانُواْ بِـَٔايَٰتِنَا يَظۡلِمُونَ ٩ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಸಿದೆವು ಮತ್ತು ಅದರಲ್ಲಿ ನಿಮಗೆ ವಿವಿಧ ಸಾಧನಗಳನ್ನು ಒದಗಿಸಿಕೊಟ್ಟೆವು. ಆದರೂ ನೀವು ಕೃತಜ್ಞತೆ ಸಲ್ಲಿಸುವುದು ತೀರಾ ಕಡಿಮೆ وَلَقَدۡ مَكَّنَّٰكُمۡ فِي ٱلۡأَرۡضِ وَجَعَلۡنَا لَكُمۡ فِيهَا مَعَٰيِشَۗ قَلِيلًا مَّا تَشۡكُرُونَ ١٠ನಾವು ನಿಮ್ಮನ್ನು ಸೃಷ್ಟಿಸಿದೆವು, ಆ ಬಳಿಕ ನಿಮಗೆ ನಾವು ರೂಪವನ್ನು ಕೊಟ್ಟೆವು, ಆ ಬಳಿಕ ಮಲಕ್ಗಳೊಡನೆ, ಆದಮರ ಮುಂದೆ ಸಾಷ್ಟಾಂಗವೆರಗಿರಿ ಎಂದು ಹೇಳಿದೆವು. ಅವರೆಲ್ಲಾ ಸಾಷ್ಟಾಂಗವೆರಗಿದರು – ಆದರೆ ಇಬ್ಲೀಸನ (ಶೈತಾನನ) ಹೊರತು. ಅವನು ಮಾತ್ರ ಸಾಷ್ಟಾಂಗವೆರಗಿದವರ ಸಾಲಿಗೆ ಸೇರಲಿಲ್ಲ وَلَقَدۡ خَلَقۡنَٰكُمۡ ثُمَّ صَوَّرۡنَٰكُمۡ ثُمَّ قُلۡنَا لِلۡمَلَٰٓئِكَةِ ٱسۡجُدُواْ لِأٓدَمَ فَسَجَدُوٓاْ إِلَّآ إِبۡلِيسَ لَمۡ يَكُن مِّنَ ٱلسَّٰجِدِينَ ١١ನಾನು ನಿನಗೆ ಆದೇಶಿಸಿದಾಗ, ಸಾಷ್ಟಾಂಗವೆರಗದಂತೆ ನಿನ್ನನ್ನು ತಡೆದುದು ಯಾವುದು? ಎಂದು ಅವನು (ಅಲ್ಲಾಹನು) ಕೇಳಿದಾಗ ಅವನು (ಶೈತಾನನು) ಹೇಳಿದನು; ನಾನು ಅವನಿಗಿಂತ ಶ್ರೇಷ್ಠನು. ನನ್ನನ್ನು ನೀನು ಬೆಂಕಿಯಿಂದ ಸೃಷ್ಟಿಸಿರುವೆ ಮತ್ತು ಅವನನ್ನು ಮಣ್ಣಿನಿಂದ ಸೃಷ್ಟಿಸಿರುವೆ قَالَ مَا مَنَعَكَ أَلَّا تَسۡجُدَ إِذۡ أَمَرۡتُكَۖ قَالَ أَنَا۠ خَيۡرٌ مِّنۡهُ خَلَقۡتَنِي مِن نَّارٍ وَخَلَقۡتَهُۥ مِن طِينٍ ١٢ಅವನು (ಅಲ್ಲಾಹನು) ಹೇಳಿದನು; ನೀನು ಇಲ್ಲಿಂದ ಇಳಿದು ಬಿಡು. ಇಲ್ಲಿ ದೊಡ್ಡಸ್ತಿಕೆ ಮೆರೆಯುವ ಯಾವ ಹಕ್ಕೂ ನಿನಗಿಲ್ಲ – ಹೊರಟು ಹೋಗು. ನೀನು ತೀರಾ ನೀಚನಾಗಿರುವೆ قَالَ فَٱهۡبِطۡ مِنۡهَا فَمَا يَكُونُ لَكَ أَن تَتَكَبَّرَ فِيهَا فَٱخۡرُجۡ إِنَّكَ مِنَ ٱلصَّٰغِرِينَ ١٣ಅವನು (ಶೈತಾನನು) ಹೇಳಿದನು; ಪುನರುತ್ಥಾನ ದಿನದ ತನಕ ನನಗೆ ಕಾಲಾವಕಾಶ ನೀಡು قَالَ أَنظِرۡنِيٓ إِلَىٰ يَوۡمِ يُبۡعَثُونَ ١٤ಅವನು (ಅಲ್ಲಾಹನು) ಹೇಳಿದನು; ಖಂಡಿತವಾಗಿಯೂ ನಿನಗೆ ಕಾಲಾವಕಾಶ ನೀಡಲಾಯಿತು قَالَ إِنَّكَ مِنَ ٱلۡمُنظَرِينَ ١٥ಅವನು(ಶೈತಾನನು) ಹೇಳಿದನು; ‘‘ನೀನೀಗ ನನ್ನನ್ನು ದಾರಿ ತಪ್ಪಿದವನೆಂದು ತೀರ್ಮಾನಿಸಿರುವುದರಿಂದ ನಾನು ಅವರಿಗಾಗಿ (ಸರಿದಾರಿಯಲ್ಲಿ ಇರುವವರಿಗಾಗಿ) ನಿನ್ನ ನೇರ ಮಾರ್ಗದಲ್ಲಿ ಹೊಂಚು ಹಾಕುತ್ತಿರುತ್ತೇನೆ’’ قَالَ فَبِمَآ أَغۡوَيۡتَنِي لَأَقۡعُدَنَّ لَهُمۡ صِرَٰطَكَ ٱلۡمُسۡتَقِيمَ ١٦‘‘ಮಾತ್ರವಲ್ಲ, ಅವರ ಮುಂಭಾಗದಿಂದಲೂ, ಅವರ ಹಿಂಭಾಗದಿಂದಲೂ, ಅವರ ಬಲ ಭಾಗದಿಂದಲೂ, ಅವರ ಎಡ ಭಾಗದಿಂದಲೂ ನಾನು ಖಂಡಿತ ಅವರನ್ನು ತಲುಪುತ್ತೇನೆ. ಅವರಲ್ಲಿ ಹೆಚ್ಚಿನವರನ್ನು ನೀನು ಕೃತಜ್ಞರಾಗಿ ಕಾಣಲಾರೆ.’’ ثُمَّ لَأٓتِيَنَّهُم مِّنۢ بَيۡنِ أَيۡدِيهِمۡ وَمِنۡ خَلۡفِهِمۡ وَعَنۡ أَيۡمَٰنِهِمۡ وَعَن شَمَآئِلِهِمۡۖ وَلَا تَجِدُ أَكۡثَرَهُمۡ شَٰكِرِينَ ١٧ಅವನು (ಅಲ್ಲಾಹನು) ಹೇಳಿದನು; ‘‘ನೀನು ನಿಂದಿತನಾಗಿಯೂ ಶಪಿತನಾಗಿಯೂ ಇಲ್ಲಿಂದ ಹೊರಟು ಹೋಗು. ಅವರ ಪೈಕಿ ನಿನ್ನನ್ನು ಅನುಸರಿಸುವವರಿಂದ ಮತ್ತು ನಿಮ್ಮೆಲ್ಲರಿಂದ ನಾನು ನರಕವನ್ನು ತುಂಬಲಿದ್ದೇನೆ.’’ قَالَ ٱخۡرُجۡ مِنۡهَا مَذۡءُومًا مَّدۡحُورًاۖ لَّمَن تَبِعَكَ مِنۡهُمۡ لَأَمۡلَأَنَّ جَهَنَّمَ مِنكُمۡ أَجۡمَعِينَ ١٨‘‘ಇನ್ನು, ಓ ಆದಮ್, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ (ಇಲ್ಲಿ) ನಿಮಗೆ ಇಷ್ಟವಾದುದನ್ನೆಲ್ಲಾ ತಿನ್ನಿರಿ. ಆದರೆ, ಆ ಮರದ ಹತ್ತಿರ ಹೋಗದಿರಿ – (ಹೋದರೆ) ನೀವಿಬ್ಬರೂ ಅಕ್ರಮಿಗಳಾಗುವಿರಿ.’’ وَيَٰٓـَٔادَمُ ٱسۡكُنۡ أَنتَ وَزَوۡجُكَ ٱلۡجَنَّةَ فَكُلَا مِنۡ حَيۡثُ شِئۡتُمَا وَلَا تَقۡرَبَا هَٰذِهِ ٱلشَّجَرَةَ فَتَكُونَا مِنَ ٱلظَّٰلِمِينَ ١٩ಕೊನೆಗೆ ಅವರ ಪಾಲಿಗೆ ಗುಪ್ತವಾಗಿದ್ದ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಲೆಂದು ಶೈತಾನನು ಅವರಿಬ್ಬರ ಮನದಲ್ಲಿ ಸಂಶಯವನ್ನು ಬಿತ್ತಿದನು. ‘‘ನಿಮ್ಮ ಒಡೆಯನು ಆ ಮರದಿಂದ ನಿಮ್ಮಿಬ್ಬರನ್ನು ತಡೆದಿರುವುದು ನೀವಿಬ್ಬರೂ ಮಲಕ್ಗಳಾಗಬಾರದು ಅಥವಾ ಚಿರಂಜೀವಿಗಳಾಗಿ ಬಿಡಬಾರದು ಎಂಬ ಕಾರಣಕ್ಕಾಗಿ ಮಾತ್ರ’’ ಎಂದು ಅವನು (ಅವರೊಡನೆ) ಹೇಳಿದನು فَوَسۡوَسَ لَهُمَا ٱلشَّيۡطَٰنُ لِيُبۡدِيَ لَهُمَا مَا وُۥرِيَ عَنۡهُمَا مِن سَوۡءَٰتِهِمَا وَقَالَ مَا نَهَىٰكُمَا رَبُّكُمَا عَنۡ هَٰذِهِ ٱلشَّجَرَةِ إِلَّآ أَن تَكُونَا مَلَكَيۡنِ أَوۡ تَكُونَا مِنَ ٱلۡخَٰلِدِينَ ٢٠ಹಾಗೆಯೇ ಅವನು, ‘‘ಖಂಡಿತವಾಗಿಯೂ ನಾನು ನಿಮ್ಮ ಹಿತೈಷಿ’’ ಎಂದು ಅವರ ಮುಂದೆ ಆಣೆ ಹಾಕಿದನು وَقَاسَمَهُمَآ إِنِّي لَكُمَا لَمِنَ ٱلنَّٰصِحِينَ ٢١ಕೊನೆಗೆ ಅವನು ಮೋಸದಿಂದ ಅವರನ್ನು ಒಲಿಸಿಕೊಂಡನು ಮತ್ತು ಅವರಿಬ್ಬರೂ ಆ ಮರದ ಫಲವನ್ನು ಸವಿದಾಗ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಿ ಬಿಟ್ಟವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳ ತೊಡಗಿದರು. (ಆಗ) ಅವರ ಒಡೆಯನು ಅವರನ್ನು ಕರೆದು ಹೇಳಿದನು; ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಅಥವಾ ಶೈತಾನನು ನಿಮ್ಮಿಬ್ಬರ ಪಾಲಿಗೂ ಸ್ಪಷ್ಟ ಶತ್ರುವಾಗಿದ್ದಾನೆಂದು ನಾನು ನಿಮಗೆ ಹೇಳಿರಲಿಲ್ಲವೇ فَدَلَّىٰهُمَا بِغُرُورٍۚ فَلَمَّا ذَاقَا ٱلشَّجَرَةَ بَدَتۡ لَهُمَا سَوۡءَٰتُهُمَا وَطَفِقَا يَخۡصِفَانِ عَلَيۡهِمَا مِن وَرَقِ ٱلۡجَنَّةِۖ وَنَادَىٰهُمَا رَبُّهُمَآ أَلَمۡ أَنۡهَكُمَا عَن تِلۡكُمَا ٱلشَّجَرَةِ وَأَقُل لَّكُمَآ إِنَّ ٱلشَّيۡطَٰنَ لَكُمَا عَدُوٌّ مُّبِينٌ ٢٢ಅವರಿಬ್ಬರೂ ಹೇಳಿದರು; ನಮ್ಮೊಡೆಯಾ! ನಾವು ನಮ್ಮ ಮೇಲೆಯೇ ಅಕ್ರಮವೆಸಗಿದೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ನಾವು ಖಂಡಿತ ನಷ್ಟಕ್ಕೊಳಗಾದವರ ಸಾಲಿಗೆ ಸೇರುವೆವು قَالَا رَبَّنَا ظَلَمۡنَآ أَنفُسَنَا وَإِن لَّمۡ تَغۡفِرۡ لَنَا وَتَرۡحَمۡنَا لَنَكُونَنَّ مِنَ ٱلۡخَٰسِرِينَ ٢٣ಅವನು (ಅಲ್ಲಾಹನು) ಹೇಳಿದನು; ಇಳಿದು ಹೋಗಿರಿ. ನೀವು ಪರಸ್ಪರರ ಪಾಲಿಗೆ ಶತ್ರುಗಳು. ಒಂದು ನಿರ್ದಿಷ್ಟ ಕಾಲದ ತನಕ ನಿಮಗೆ ಭೂಮಿಯಲ್ಲಿ ನೆಲೆ ಇದೆ ಮತ್ತು ಸಾಧನಗಳಿವೆ قَالَ ٱهۡبِطُواْ بَعۡضُكُمۡ لِبَعۡضٍ عَدُوٌّۖ وَلَكُمۡ فِي ٱلۡأَرۡضِ مُسۡتَقَرٌّ وَمَتَٰعٌ إِلَىٰ حِينٍ ٢٤ಅದರಲ್ಲೇ ನೀವು ಬದುಕುವಿರಿ, ಅದರಲ್ಲೇ ನೀವು ಸಾಯುವಿರಿ ಮತ್ತು ಅದರೊಳಗಿಂದಲೇ ನಿಮ್ಮನ್ನು ಹೊರತೆಗೆಯಲಾಗುವುದು قَالَ فِيهَا تَحۡيَوۡنَ وَفِيهَا تَمُوتُونَ وَمِنۡهَا تُخۡرَجُونَ ٢٥ಆದಮ್ರ ಸಂತತಿಗಳೇ, ನಿಮಗೆ ನಾವು, ನಿಮ್ಮ ಮಾನದ ಭಾಗಗಳನ್ನು ಮುಚ್ಚುವ ಮತ್ತು ಅಲಂಕಾರವಾಗುವ ಉಡುಗೆಯನ್ನು ಇಳಿಸಿಕೊಟ್ಟಿರುವೆವು. ನಿಜವಾಗಿ ಧರ್ಮ ನಿಷ್ಠೆಯ ಉಡುಪೇ ಅತ್ಯುತ್ತಮ. ಇದು ಅವರು ಸ್ಮರಿಸುತ್ತಿರಲಿಕ್ಕಾಗಿ ಅಲ್ಲಾಹನು ಒದಗಿಸಿರುವ ಒಂದು ನಿದರ್ಶನ يَٰبَنِيٓ ءَادَمَ قَدۡ أَنزَلۡنَا عَلَيۡكُمۡ لِبَاسًا يُوَٰرِي سَوۡءَٰتِكُمۡ وَرِيشًاۖ وَلِبَاسُ ٱلتَّقۡوَىٰ ذَٰلِكَ خَيۡرٌۚ ذَٰلِكَ مِنۡ ءَايَٰتِ ٱللَّهِ لَعَلَّهُمۡ يَذَّكَّرُونَ ٢٦ಆದಮ್ರ ಸಂತತಿಗಳೇ, ಶೈತಾನನು ನಿಮ್ಮ ತಂದೆ ತಾಯಿಯನ್ನು ಸ್ವರ್ಗದಿಂದ ಹೊರ ಹಾಕಿಸಿದಂತೆ (ಹಾಗೂ) ಅವರ ಮೇಲಿಂದ ಅವರ ಉಡುಗೆಗಳನ್ನು ಕಳಚಿಸಿ ಅವರ ಮಾನದ ಭಾಗಗಳನ್ನು ಅವರ ಮುಂದೆ ಪ್ರಕಟಪಡಿಸಿದಂತೆ ಅವನು ನಿಮ್ಮನ್ನು ದಾರಿಗೆಡಿಸದಿರಲಿ. ಖಂಡಿತವಾಗಿಯೂ, ಅವನು ಮತ್ತು ಅವನ ಪಂಗಡದವರು, ನಿಮಗೆ ಅವರನ್ನು ನೋಡಲಾಗದ ಕಡೆಯಿಂದ, ನಿಮ್ಮನ್ನು ನೋಡುತ್ತಿರುತ್ತಾರೆ. ನಾವಂತು ಶೈತಾನರನ್ನು, ವಿಶ್ವಾಸಿಗಳಲ್ಲದವರ ಪೋಷಕರಾಗಿಸಿದ್ದೇವೆ يَٰبَنِيٓ ءَادَمَ لَا يَفۡتِنَنَّكُمُ ٱلشَّيۡطَٰنُ كَمَآ أَخۡرَجَ أَبَوَيۡكُم مِّنَ ٱلۡجَنَّةِ يَنزِعُ عَنۡهُمَا لِبَاسَهُمَا لِيُرِيَهُمَا سَوۡءَٰتِهِمَآۚ إِنَّهُۥ يَرَىٰكُمۡ هُوَ وَقَبِيلُهُۥ مِنۡ حَيۡثُ لَا تَرَوۡنَهُمۡۗ إِنَّا جَعَلۡنَا ٱلشَّيَٰطِينَ أَوۡلِيَآءَ لِلَّذِينَ لَا يُؤۡمِنُونَ ٢٧ಅವರು ಯಾವುದಾದರೂ ಅಶ್ಲೀಲ ಕೆಲಸ ಮಾಡಿದಾಗ, ‘‘ನಮ್ಮ ಪೂರ್ವಜರನ್ನು ನಾವು ಇದೇ ದಾರಿಯಲ್ಲಿ ಕಂಡಿದ್ದೇವೆ ಮತ್ತು ಅಲ್ಲಾಹನು ಇದನ್ನು ನಮಗೆ ಆದೇಶಿಸಿದ್ದಾನೆ’’ ಎನ್ನುತ್ತಾರೆ. ಹೇಳಿರಿ; ಖಂಡಿತವಾಗಿಯೂ ಅಲ್ಲಾಹನು ಅಶ್ಲೀಲತೆಯನ್ನು ಆದೇಶಿಸುವುದಿಲ್ಲ. ನೀವೇನು, ನಿಮಗೆ ತಿಳಿದಿಲ್ಲದ್ದನ್ನು ಅಲ್ಲಾಹನ ಮೇಲೆ ಆರೋಪಿಸುತ್ತೀರಾ وَإِذَا فَعَلُواْ فَٰحِشَةً قَالُواْ وَجَدۡنَا عَلَيۡهَآ ءَابَآءَنَا وَٱللَّهُ أَمَرَنَا بِهَاۗ قُلۡ إِنَّ ٱللَّهَ لَا يَأۡمُرُ بِٱلۡفَحۡشَآءِۖ أَتَقُولُونَ عَلَى ٱللَّهِ مَا لَا تَعۡلَمُونَ ٢٨ಹೇಳಿರಿ; ನನ್ನ ಒಡೆಯನು ನ್ಯಾಯವನ್ನೇ ಆದೇಶಿಸಿದ್ದಾನೆ. ನೀವಿನ್ನು ಪ್ರತಿಬಾರಿಯೂ ಸಾಷ್ಟಾಂಗವೆರಗುವಾಗ ನಿಮ್ಮ ಮುಖಗಳನ್ನು ಸರಿಯಾದ ದಿಕ್ಕಿನಲ್ಲಿಡಿರಿ ಮತ್ತು ಧರ್ಮವನ್ನು ಅವನಿಗೇ ಮೀಸಲಾಗಿಟ್ಟು (ಕೇವಲ ಅವನಿಗೆ ನಿಷ್ಠರಾಗಿ) ಅವನನ್ನು ಕೂಗಿರಿ. ಅವನು ಮೊದಲ ಬಾರಿಗೆ ನಿಮ್ಮನ್ನು ಸೃಷ್ಟಿಸಿದಂತೆಯೇ ನೀವು ಮತ್ತೆ ಸೃಷ್ಟಿಸಲ್ಪಡುವಿರಿ قُلۡ أَمَرَ رَبِّي بِٱلۡقِسۡطِۖ وَأَقِيمُواْ وُجُوهَكُمۡ عِندَ كُلِّ مَسۡجِدٍ وَٱدۡعُوهُ مُخۡلِصِينَ لَهُ ٱلدِّينَۚ كَمَا بَدَأَكُمۡ تَعُودُونَ ٢٩ಅವನು ಒಂದು ಪಂಗಡಕ್ಕೆ ಮಾರ್ಗದರ್ಶನ ಮಾಡಿರುವನು ಮತ್ತು ಇನ್ನೊಂದು ಪಂಗಡವು ದಾರಿಗೆಟ್ಟಿರುವುದಕ್ಕೆ ಅರ್ಹವೆಂಬುದು ಸಾಬೀತಾಗಿದೆ. ಖಂಡಿತವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ತಮ್ಮ ಆಪ್ತಮಿತ್ರರಾಗಿಸಿಕೊಂಡಿರುವರು ಮತ್ತು ತಾವು ಸನ್ಮಾರ್ಗದಲ್ಲೇ ಇದ್ದೇವೆ ಎಂದುಕೊಂಡಿರುವರು فَرِيقًا هَدَىٰ وَفَرِيقًا حَقَّ عَلَيۡهِمُ ٱلضَّلَٰلَةُۚ إِنَّهُمُ ٱتَّخَذُواْ ٱلشَّيَٰطِينَ أَوۡلِيَآءَ مِن دُونِ ٱللَّهِ وَيَحۡسَبُونَ أَنَّهُم مُّهۡتَدُونَ ٣٠ಆದಮ್ರ ಸಂತತಿಗಳೇ, ನೀವು ನಿಮ್ಮ ಎಲ್ಲ ಆರಾಧನಾ ಸ್ಥಳಗಳಲ್ಲಿ ನಿಮ್ಮ ಅಲಂಕಾರಗಳನ್ನು ಧರಿಸಿರಿ. ತಿನ್ನಿರಿ ಮತ್ತು ಕುಡಿಯಿರಿ ಆದರೆ ಅಪವ್ಯಯ ಮಾಡದಿರಿ. ಖಂಡಿತವಾಗಿಯೂ ಅವನು ಅಪವ್ಯಯ ಮಾಡುವವರನ್ನು ಮೆಚ್ಚುವುದಿಲ್ಲ ۞ يَٰبَنِيٓ ءَادَمَ خُذُواْ زِينَتَكُمۡ عِندَ كُلِّ مَسۡجِدٍ وَكُلُواْ وَٱشۡرَبُواْ وَلَا تُسۡرِفُوٓاْۚ إِنَّهُۥ لَا يُحِبُّ ٱلۡمُسۡرِفِينَ ٣١ಹೇಳಿರಿ; ಅಲ್ಲಾಹನು ತನ್ನ ದಾಸರಿಗಾಗಿ ಉತ್ಪಾದಿಸಿರುವ ಅಲಂಕಾರ ಸಾಮಗ್ರಿಗಳನ್ನು ಮತ್ತು ಶುದ್ಧ ಆಹಾರ ವಸ್ತುಗಳನ್ನು ನಿಷೇಧಿಸಿರುವವರು ಯಾರು? ಹೇಳಿರಿ; ಇಹಲೋಕದಲ್ಲಿ ಇವು ವಿಶ್ವಾಸಿಗಳಿಗೆ ಸಮ್ಮತವಾಗಿವೆ – ಪರಲೋಕದಲ್ಲಂತೂ ಇವು ಅವರಿಗೆಂದೇ ಮೀಸಲಾಗಿರುತ್ತವೆ. ಈ ರೀತಿ ನಾವು ಅರಿವು ಉಳ್ಳವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ قُلۡ مَنۡ حَرَّمَ زِينَةَ ٱللَّهِ ٱلَّتِيٓ أَخۡرَجَ لِعِبَادِهِۦ وَٱلطَّيِّبَٰتِ مِنَ ٱلرِّزۡقِۚ قُلۡ هِيَ لِلَّذِينَ ءَامَنُواْ فِي ٱلۡحَيَوٰةِ ٱلدُّنۡيَا خَالِصَةً يَوۡمَ ٱلۡقِيَٰمَةِۗ كَذَٰلِكَ نُفَصِّلُ ٱلۡأٓيَٰتِ لِقَوۡمٍ يَعۡلَمُونَ ٣٢ಹೇಳಿರಿ; ವ್ಯಕ್ತ ಹಾಗೂ ಗುಪ್ತವಾದ ಎಲ್ಲ ಅಶ್ಲೀಲ ಕೃತ್ಯಗಳನ್ನು, ಪಾಪ ಕೃತ್ಯಗಳನ್ನು, ಅಕ್ರಮ ಬಲಪ್ರಯೋಗವನ್ನು, ಯಾವುದರ ಪರವಾಗಿ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲವೋ ಅದನ್ನು, ಅಲ್ಲಾಹನ ಜೊತೆ ಪಾಲುಗೊಳಿಸುವುದನ್ನು ಮತ್ತು ಅಲ್ಲಾಹನ ಕುರಿತು ನಿಮಗೆ ತಿಳಿದಿಲ್ಲದ್ದನ್ನು ಹೇಳುವುದನ್ನು – ನನ್ನೊಡೆಯನು ನಿಷೇಧಿಸಿರುವನು قُلۡ إِنَّمَا حَرَّمَ رَبِّيَ ٱلۡفَوَٰحِشَ مَا ظَهَرَ مِنۡهَا وَمَا بَطَنَ وَٱلۡإِثۡمَ وَٱلۡبَغۡيَ بِغَيۡرِ ٱلۡحَقِّ وَأَن تُشۡرِكُواْ بِٱللَّهِ مَا لَمۡ يُنَزِّلۡ بِهِۦ سُلۡطَٰنًا وَأَن تَقُولُواْ عَلَى ٱللَّهِ مَا لَا تَعۡلَمُونَ ٣٣ಪ್ರತಿಯೊಂದು ಸಮುದಾಯಕ್ಕೂ ಒಂದು ಕಾಲಾವಧಿ ನಿಗದಿತವಾಗಿದೆ. ತಮ್ಮ ಅವಧಿ ಸಮೀಪಿಸಿದಾಗ ಅದನ್ನು ಕ್ಷಣಮಾತ್ರಕ್ಕಾದರೂ ಮುಂದೂಡಲು ಅಥವಾ ಹಿಂದೂಡಲು ಅವರಿಗೆ ಸಾಧ್ಯವಾಗದು وَلِكُلِّ أُمَّةٍ أَجَلٌۖ فَإِذَا جَآءَ أَجَلُهُمۡ لَا يَسۡتَأۡخِرُونَ سَاعَةً وَلَا يَسۡتَقۡدِمُونَ ٣٤ಆದಮ್ರ ಸಂತತಿಗಳೇ, ನಿಮ್ಮ ಬಳಿಗೆ, ನಿಮ್ಮೊಳಗಿಂದಲೇ, ನಿಮಗೆ ನನ್ನ ವಚನಗಳನ್ನು ಕೇಳಿಸುವ ದೂತರು ಬಂದಾಗ, ಧರ್ಮನಿಷ್ಠನಾಗಿ ತನ್ನ ಸುಧಾರಣೆ ಮಾಡಿಕೊಂಡವನು – ಅವರಿಗೆ ಯಾವ ಭಯವೂ ಇರದು ಮತ್ತು ಅವರು ದುಃಖಿಸಲಾರರು يَٰبَنِيٓ ءَادَمَ إِمَّا يَأۡتِيَنَّكُمۡ رُسُلٌ مِّنكُمۡ يَقُصُّونَ عَلَيۡكُمۡ ءَايَٰتِي فَمَنِ ٱتَّقَىٰ وَأَصۡلَحَ فَلَا خَوۡفٌ عَلَيۡهِمۡ وَلَا هُمۡ يَحۡزَنُونَ ٣٥ನಮ್ಮ ವಚನಗಳನ್ನು ಸುಳ್ಳೆಂದವರು ಮತ್ತು ಅದಕ್ಕೆದುರಾಗಿ ಅಹಂಕಾರ ತೋರಿದವರು – ಅವರೇ ನರಕವಾಸಿಗಳು. ಅವರು ಸದಾ ಕಾಲ ಅದರಲ್ಲೇ ಇರುವರು وَٱلَّذِينَ كَذَّبُواْ بِـَٔايَٰتِنَا وَٱسۡتَكۡبَرُواْ عَنۡهَآ أُوْلَٰٓئِكَ أَصۡحَٰبُ ٱلنَّارِۖ هُمۡ فِيهَا خَٰلِدُونَ ٣٦ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಅಥವಾ ಅವನ ವಚನಗಳನ್ನು ಸುಳ್ಳೆಂದವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? – ನಮ್ಮ (ಮರಣ) ದೂತರು ಅವರ ಬಳಿಗೆ ಬಂದು ಅವರನ್ನು ಸಾಯಿಸುವ ತನಕ, ವಿಧಿ ಗ್ರಂಥದಲ್ಲಿರುವ ಅವರ ಪಾಲು ಅವರಿಗೆ ಸಿಗುತ್ತಲೇ ಇರುವುದು. ಅವರು (ಮರಣ ದೂತರು) ‘‘ಅಲ್ಲಾಹನ ಹೊರತು ನೀವು ಪ್ರಾರ್ಥಿಸುತ್ತಿದ್ದವರೆಲ್ಲಾ ಎಲ್ಲಿದ್ದಾರೆ?’’ ಎಂದು ಕೇಳುವರು. ಅವರು ‘‘ಅವರು ನಮ್ಮಿಂದ ಕಳೆದು ಹೋಗಿರುವರು’’ ಎನ್ನುವರು ಮತ್ತು ತಾವು ಧಿಕ್ಕಾರಿಗಳಾಗಿದ್ದೆವೆಂದು ಅವರೇ ತಮ್ಮ ವಿರುದ್ಧ ಸಾಕ್ಷಿ ಹೇಳುವರು فَمَنۡ أَظۡلَمُ مِمَّنِ ٱفۡتَرَىٰ عَلَى ٱللَّهِ كَذِبًا أَوۡ كَذَّبَ بِـَٔايَٰتِهِۦٓۚ أُوْلَٰٓئِكَ يَنَالُهُمۡ نَصِيبُهُم مِّنَ ٱلۡكِتَٰبِۖ حَتَّىٰٓ إِذَا جَآءَتۡهُمۡ رُسُلُنَا يَتَوَفَّوۡنَهُمۡ قَالُوٓاْ أَيۡنَ مَا كُنتُمۡ تَدۡعُونَ مِن دُونِ ٱللَّهِۖ قَالُواْ ضَلُّواْ عَنَّا وَشَهِدُواْ عَلَىٰٓ أَنفُسِهِمۡ أَنَّهُمۡ كَانُواْ كَٰفِرِينَ ٣٧ಅವನು (ಅಲ್ಲಾಹನು) ಹೇಳಿದನು; ನೀವು, ಜಿನ್ನ್ ಮತ್ತು ಮಾನವರ ಪೈಕಿ ನಿಮಗಿಂತ ಹಿಂದೆ ಗತಿಸಿದ ಸಮುದಾಯಗಳ ಜೊತೆ ನರಕಾಗ್ನಿಯನ್ನು ಪ್ರವೇಶಿಸಿರಿ. (ಅಲ್ಲಿಗೆ) ಪ್ರವೇಶಿಸುವ ಪ್ರತಿಯೊಂದು ಸಮುದಾಯವೂ ತನ್ನ ಸಂಗಾತಿ (ಪೂರ್ವ) ಸಮುದಾಯವನ್ನು ಶಪಿಸುವುದು. ಕೊನೆಗೆ ಅವರೆಲ್ಲರೂ ಅದರೊಳಗೆ ಸೇರುವರು. (ಅಲ್ಲಿ) ಮುಂದಿನವರು ಹಿಂದಿನವರ ಕುರಿತು – ‘‘ನಮ್ಮೊಡೆಯಾ! ಇವರೇ ನಮ್ಮನ್ನು ದಾರಿಗೆಡಿಸಿದವರು. ಇವರಿಗೆ ನರಕಾಗ್ನಿಯ ಇಮ್ಮಡಿ ಶಿಕ್ಷೆ ನೀಡು’’ ಎನ್ನುವರು. ಅವನು (ಅಲ್ಲಾಹನು) ಹೇಳುವನು; ಇಮ್ಮಡಿ ಶಿಕ್ಷೆ ಎಲ್ಲರಿಗೂ ಇದೆ. ಆದರೆ ನಿಮಗೆ ತಿಳಿದಿಲ್ಲ.’’ قَالَ ٱدۡخُلُواْ فِيٓ أُمَمٍ قَدۡ خَلَتۡ مِن قَبۡلِكُم مِّنَ ٱلۡجِنِّ وَٱلۡإِنسِ فِي ٱلنَّارِۖ كُلَّمَا دَخَلَتۡ أُمَّةٌ لَّعَنَتۡ أُخۡتَهَاۖ حَتَّىٰٓ إِذَا ٱدَّارَكُواْ فِيهَا جَمِيعًا قَالَتۡ أُخۡرَىٰهُمۡ لِأُولَىٰهُمۡ رَبَّنَا هَٰٓؤُلَآءِ أَضَلُّونَا فَـَٔاتِهِمۡ عَذَابًا ضِعۡفًا مِّنَ ٱلنَّارِۖ قَالَ لِكُلٍّ ضِعۡفٌ وَلَٰكِن لَّا تَعۡلَمُونَ ٣٨ಅದರಲ್ಲಿನ ಹಿಂದಿನವರು, ಮುಂದಿನವರೊಡನೆ ‘‘ನಮ್ಮೆದುರು ನಿಮಗೆ ಯಾವ ಮೇಲ್ಮೆಯೂ ಇಲ್ಲ. ಈಗ, ನಿಮ್ಮ ಗಳಿಕೆಯ ಫಲವಾಗಿ ಯಾತನೆಯನ್ನು ಸವಿಯಿರಿ’’ ಎನ್ನುವರು وَقَالَتۡ أُولَىٰهُمۡ لِأُخۡرَىٰهُمۡ فَمَا كَانَ لَكُمۡ عَلَيۡنَا مِن فَضۡلٍ فَذُوقُواْ ٱلۡعَذَابَ بِمَا كُنتُمۡ تَكۡسِبُونَ ٣٩ಖಂಡಿತವಾಗಿಯೂ, ನಮ್ಮ ವಚನಗಳನ್ನು ಸುಳ್ಳೆಂದವರ ಮತ್ತು ಆ ಕುರಿತು ಅಹಂಕಾರ ತೋರಿದವರ ಪಾಲಿಗೆ ಆಕಾಶದ ಬಾಗಿಲುಗಳನ್ನು ತೆರೆಯಲಾಗದು ಮತ್ತು ಸೂಜಿಯ ರಂಧ್ರದೊಳಗೆ ಒಂಟೆಯು ಪ್ರವೇಶಿಸುವ ತನಕ ಅವರು ಸ್ವರ್ಗವನ್ನು ಪ್ರವೇಶಿಸಲಾರರು. ನಾವು ಇದೇ ರೀತಿ ಅಪರಾಧಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ إِنَّ ٱلَّذِينَ كَذَّبُواْ بِـَٔايَٰتِنَا وَٱسۡتَكۡبَرُواْ عَنۡهَا لَا تُفَتَّحُ لَهُمۡ أَبۡوَٰبُ ٱلسَّمَآءِ وَلَا يَدۡخُلُونَ ٱلۡجَنَّةَ حَتَّىٰ يَلِجَ ٱلۡجَمَلُ فِي سَمِّ ٱلۡخِيَاطِۚ وَكَذَٰلِكَ نَجۡزِي ٱلۡمُجۡرِمِينَ ٤٠ಅವರ ಪಾಲಿಗೆ ನರಕದ ಭಾಗವೇ ಹಾಸಿಗೆ ಮತ್ತು ನರಕದ ಭಾಗವೇ ಹೊದಿಕೆಯಾಗಿರುವುದು. ನಾವು ಇದೇ ರೀತಿ ಅಕ್ರಮಿಗಳಿಗೆ ಪ್ರತಿಫಲವನ್ನು ನೀಡುತ್ತೇವೆ لَهُم مِّن جَهَنَّمَ مِهَادٌ وَمِن فَوۡقِهِمۡ غَوَاشٍۚ وَكَذَٰلِكَ نَجۡزِي ٱلظَّٰلِمِينَ ٤١ವಿಶ್ವಾಸಿಗಳು ಮತ್ತು ಸತ್ಕರ್ಮ ಮಾಡಿದವರು (ತಿಳಿದಿರಲಿ) ನಾವು ಯಾರ ಮೇಲೂ ಅವರ ಸಾಮರ್ಥ್ಯವನ್ನು ಮೀರಿದ ಹೊರೆಯನ್ನು ಹೊರಿಸುವುದಿಲ್ಲ – ಅವರೇ ಸ್ವರ್ಗದವರು. ಅವರು ಸದಾ ಕಾಲ ಅದರಲ್ಲಿರುವರು وَٱلَّذِينَ ءَامَنُواْ وَعَمِلُواْ ٱلصَّٰلِحَٰتِ لَا نُكَلِّفُ نَفۡسًا إِلَّا وُسۡعَهَآ أُوْلَٰٓئِكَ أَصۡحَٰبُ ٱلۡجَنَّةِۖ هُمۡ فِيهَا خَٰلِدُونَ ٤٢ಅವರ ಮನದೊಳಗಿನ ವೈಷಮ್ಯಗಳನ್ನೆಲ್ಲಾ ನಾವು ತೊಲಗಿಸಿ ಬಿಡುವೆವು. ಅವರ ತಳದಲ್ಲಿ ನದಿಗಳು ಹರಿಯುತ್ತಿರುವವು. ಅವರು ‘‘ಎಲ್ಲ ಪ್ರಶಂಸೆಗಳು, ನಮಗೆ ಇದರತ್ತ ಮಾರ್ಗದರ್ಶನ ಮಾಡಿದ ಅಲ್ಲಾಹನಿಗೆ ಮೀಸಲು. ಅಲ್ಲಾಹನು ಮಾರ್ಗದರ್ಶನ ಮಾಡಿರದಿದ್ದರೆ ನಾವು ಸನ್ಮಾರ್ಗವನ್ನು ಪಡೆಯುತ್ತಿರಲಿಲ್ಲ. ನಮ್ಮ ಒಡೆಯನ ದೂತರು ಸತ್ಯದೊಂದಿಗೆ ನಮ್ಮ ಬಳಿಗೆ ಬಂದಿದ್ದರು’’ ಎನ್ನುವರು. ಇದಕ್ಕುತ್ತರವಾಗಿ, ‘‘ನಿಮ್ಮ ಕರ್ಮಗಳ ಫಲವಾಗಿ, ನೀವು ಸ್ವರ್ಗದ ವಾರಸುದಾರರಾಗುವಿರಿ.’’ ಎಂದು ಅವರನ್ನು ಕರೆದು ಹೇಳಲಾಗುವುದು وَنَزَعۡنَا مَا فِي صُدُورِهِم مِّنۡ غِلٍّ تَجۡرِي مِن تَحۡتِهِمُ ٱلۡأَنۡهَٰرُۖ وَقَالُواْ ٱلۡحَمۡدُ لِلَّهِ ٱلَّذِي هَدَىٰنَا لِهَٰذَا وَمَا كُنَّا لِنَهۡتَدِيَ لَوۡلَآ أَنۡ هَدَىٰنَا ٱللَّهُۖ لَقَدۡ جَآءَتۡ رُسُلُ رَبِّنَا بِٱلۡحَقِّۖ وَنُودُوٓاْ أَن تِلۡكُمُ ٱلۡجَنَّةُ أُورِثۡتُمُوهَا بِمَا كُنتُمۡ تَعۡمَلُونَ ٤٣ಸ್ವರ್ಗದವರು, ನರಕದವರನ್ನು ಕರೆದು ‘‘ನಮ್ಮ ಒಡೆಯನು ನಮಗೆ ನೀಡಿದ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನಾವು ಕಂಡುಕೊಂಡೆವು. ನಿಮ್ಮ ಒಡೆಯನ ವಾಗ್ದಾನಗಳೆಲ್ಲ ಸತ್ಯವಾಗಿರುವುದನ್ನು ನೀವು ಕಂಡಿರಾ? ಎಂದು ಕೇಳುವರು. ಅವರು ‘‘ಹೌದು’’ ಎನ್ನುವರು. ಆಗ ಅವರ ನಡುವೆ ಕೂಗುವವನೊಬ್ಬನು ಕೂಗಿ ಹೇಳುವನು; ‘‘ಅಲ್ಲಾಹನ ಶಾಪವಿದೆ ಅಕ್ರಮಿಗಳ ಮೇಲೆ.’’ وَنَادَىٰٓ أَصۡحَٰبُ ٱلۡجَنَّةِ أَصۡحَٰبَ ٱلنَّارِ أَن قَدۡ وَجَدۡنَا مَا وَعَدَنَا رَبُّنَا حَقًّا فَهَلۡ وَجَدتُّم مَّا وَعَدَ رَبُّكُمۡ حَقًّاۖ قَالُواْ نَعَمۡۚ فَأَذَّنَ مُؤَذِّنُۢ بَيۡنَهُمۡ أَن لَّعۡنَةُ ٱللَّهِ عَلَى ٱلظَّٰلِمِينَ ٤٤‘‘ಅವರು (ಜನರನ್ನು) ಅಲ್ಲಾಹನ ಮಾರ್ಗದಿಂದ ತಡೆಯುತ್ತಿದ್ದರು, ಅದರಲ್ಲಿ ವಕ್ರತೆಯನ್ನು ಹುಡುಕುತ್ತಿದ್ದರು ಮತ್ತು ಅವರು ಪರಲೋಕವನ್ನು ಧಿಕ್ಕರಿಸುವವರಾಗಿದ್ದರು.’’ ٱلَّذِينَ يَصُدُّونَ عَن سَبِيلِ ٱللَّهِ وَيَبۡغُونَهَا عِوَجًا وَهُم بِٱلۡأٓخِرَةِ كَٰفِرُونَ ٤٥ಆ ಎರಡು ವರ್ಗಗಳ ನಡುವೆ ಒಂದು ತೆರೆ ಇರುವುದು ಮತ್ತು ‘ಅಅ್ರಾಫ್’ನಲ್ಲಿ (ತೆರೆಯ ಮೇಲು ತುದಿಯಲ್ಲಿ) ಕೆಲವರು ಇರುವರು. ಅವರು ಪ್ರತಿಯೊಬ್ಬರನ್ನೂ ಅವರ ಮುಖದಿಂದಲೇ ಗುರುತಿಸುವರು. ಅವರು ಸ್ವರ್ಗದವರನ್ನು ಕರೆದು ‘‘ನಿಮಗೆ ಶಾಂತಿ ಸಿಗಲಿ’’ ಎನ್ನುವರು. ಅವರು ಆವರೆಗೂ ಅದನ್ನು (ಸ್ವರ್ಗವನ್ನು) ಪ್ರವೇಶಿಸಿರಲಾರರು, ಆದರೆ ಅದನ್ನು ನಿರೀಕ್ಷಿಸುತ್ತಿರುವರು وَبَيۡنَهُمَا حِجَابٌۚ وَعَلَى ٱلۡأَعۡرَافِ رِجَالٌ يَعۡرِفُونَ كُلَّۢا بِسِيمَىٰهُمۡۚ وَنَادَوۡاْ أَصۡحَٰبَ ٱلۡجَنَّةِ أَن سَلَٰمٌ عَلَيۡكُمۡۚ لَمۡ يَدۡخُلُوهَا وَهُمۡ يَطۡمَعُونَ ٤٦ಇನ್ನು ಅವರ ದೃಷ್ಟಿಗಳು ನರಕದವರ ಕಡೆಗೆ ತಿರುಗಿದಾಗ ಅವರು ‘‘ನಮ್ಮೊಡೆಯಾ, ನಮ್ಮನ್ನು ಅಕ್ರಮಿಗಳ ಜೊತೆ ಸೇರಿಸಬೇಡ’’ ಎನ್ನುವರು ۞ وَإِذَا صُرِفَتۡ أَبۡصَٰرُهُمۡ تِلۡقَآءَ أَصۡحَٰبِ ٱلنَّارِ قَالُواْ رَبَّنَا لَا تَجۡعَلۡنَا مَعَ ٱلۡقَوۡمِ ٱلظَّٰلِمِينَ ٤٧ಮತ್ತು ‘ಅಅ್ರಾಫ್’ನವರು, ತಾವು ಮುಖದಿಂದಲೇ ಗುರುತಿಸಿದ ಕೆಲವರನ್ನು ಕರೆದು ಹೇಳುವರು; ನಿಮ್ಮ ಸಂಖ್ಯಾಬಲದಿಂದಾಗಲಿ, ನೀವು ಅಹಂಕಾರ ಪಡುತ್ತಿದ್ದ ವಸ್ತುಗಳಿಂದಾಗಲಿ ನಿಮಗೆ ಯಾವ ಲಾಭವೂ ಆಗಲಿಲ್ಲ وَنَادَىٰٓ أَصۡحَٰبُ ٱلۡأَعۡرَافِ رِجَالًا يَعۡرِفُونَهُم بِسِيمَىٰهُمۡ قَالُواْ مَآ أَغۡنَىٰ عَنكُمۡ جَمۡعُكُمۡ وَمَا كُنتُمۡ تَسۡتَكۡبِرُونَ ٤٨ಇವರಿಗೆ ಅಲ್ಲಾಹನು ತನ್ನ ಯಾವ ಅನುಗ್ರಹವನ್ನೂ ತಲುಪಿಸಲಾರನೆಂದು ನೀವು ಆಣೆ ಹಾಕಿ ಹೇಳುತ್ತಿದ್ದುದು ಇವರ (ಈ ಸ್ವರ್ಗವಾಸಿಗಳ) ಕುರಿತೇ ಅಲ್ಲವೇ? (ಇಂದು ಅವರೊಡನೆ) ‘‘ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವ ಭಯವೂ ಇಲ್ಲ ಮತ್ತು ನೀವು ದುಃಖಿಸಲಾರಿರಿ’’ (ಎಂದು ಹೇಳಲಾಗಿದೆ) أَهَٰٓؤُلَآءِ ٱلَّذِينَ أَقۡسَمۡتُمۡ لَا يَنَالُهُمُ ٱللَّهُ بِرَحۡمَةٍۚ ٱدۡخُلُواْ ٱلۡجَنَّةَ لَا خَوۡفٌ عَلَيۡكُمۡ وَلَآ أَنتُمۡ تَحۡزَنُونَ ٤٩ಅತ್ತ ನರಕದವರು ಸ್ವರ್ಗದವರನ್ನು ಕೂಗಿ ‘‘ನಮ್ಮ ಕಡೆಗೆ ಒಂದಿಷ್ಟು ನೀರನ್ನು ಹರಿಸಿ ಬಿಡಿರಿ ಅಥವಾ ಅಲ್ಲಾಹನು ನಿಮಗೇನನ್ನು ನೀಡಿರುವನೋ ಅದರಿಂದ (ಒಂದಿಷ್ಟನ್ನು ನಮಗೆ ನೀಡಿರಿ)’’ ಎನ್ನುವರು. ಅವರು ಹೇಳುವರು; ‘‘ಖಂಡಿತವಾಗಿಯೂ ಅಲ್ಲಾಹನು ಅವುಗಳನ್ನು ಧಿಕ್ಕಾರಿಗಳ ಪಾಲಿಗೆ ನಿಷೇಧಿಸಿರುವನು.’’ وَنَادَىٰٓ أَصۡحَٰبُ ٱلنَّارِ أَصۡحَٰبَ ٱلۡجَنَّةِ أَنۡ أَفِيضُواْ عَلَيۡنَا مِنَ ٱلۡمَآءِ أَوۡ مِمَّا رَزَقَكُمُ ٱللَّهُۚ قَالُوٓاْ إِنَّ ٱللَّهَ حَرَّمَهُمَا عَلَى ٱلۡكَٰفِرِينَ ٥٠‘‘ಅವರು (ಧಿಕ್ಕಾರಿಗಳು) ತಮ್ಮ ಧರ್ಮವನ್ನು ಕೇವಲ ಆಟ ಹಾಗೂ ಮೋಜಿನ ವಿಷಯವಾಗಿ ಪರಿಗಣಿಸಿದ್ದರು ಮತ್ತು ಲೌಕಿಕ ಜೀವನವು ಅವರನ್ನು ವಂಚನೆಗೆ ಒಳಪಡಿಸಿತ್ತು. ಅವರು ಈ ದಿನದ ಭೇಟಿಯನ್ನು ಮರೆತಂತೆ ಇಂದು ನಾವು ಅವರನ್ನು ಮರೆತಿರುವೆವು. ಅವರು ನಮ್ಮ ವಚನಗಳನ್ನು ಧಿಕ್ಕರಿಸುತ್ತಿದ್ದರು.’’ ٱلَّذِينَ ٱتَّخَذُواْ دِينَهُمۡ لَهۡوًا وَلَعِبًا وَغَرَّتۡهُمُ ٱلۡحَيَوٰةُ ٱلدُّنۡيَاۚ فَٱلۡيَوۡمَ نَنسَىٰهُمۡ كَمَا نَسُواْ لِقَآءَ يَوۡمِهِمۡ هَٰذَا وَمَا كَانُواْ بِـَٔايَٰتِنَا يَجۡحَدُونَ ٥١ನಾವು ಅವರ ಬಳಿಗೆ ಒಂದು ಗ್ರಂಥವನ್ನು ತಲುಪಿಸಿರುವೆವು. ಅದನ್ನು ನಾವು ಜ್ಞಾನದ ಆಧಾರದಲ್ಲಿ ಸಾಕಷ್ಟು ವಿಶಾಲಗೊಳಿಸಿರುವೆವು. ನಂಬುವವರ ಪಾಲಿಗೆ ಅದು ಮಾರ್ಗದರ್ಶಿ ಹಾಗೂ ಅನುಗ್ರಹವಾಗಿದೆ وَلَقَدۡ جِئۡنَٰهُم بِكِتَٰبٍ فَصَّلۡنَٰهُ عَلَىٰ عِلۡمٍ هُدًى وَرَحۡمَةً لِّقَوۡمٍ يُؤۡمِنُونَ ٥٢ಅವರು ಕಾಯುತ್ತಿರುವುದು, ಅದರ (ಲೋಕಾಂತ್ಯದ ಕುರಿತಾದ ಭವಿಷ್ಯ ವಾಣಿಗಳ) ಈಡೇರಿಕೆಯನ್ನಲ್ಲದೆ ಮತ್ತೇನನ್ನು? ನಿಜವಾಗಿ, ಅದರ ಈಡೇರಿಕೆಯ ದಿನ ಬಂದಾಗ, ಹಿಂದೆ ಅದನ್ನು ಮರೆತಿದ್ದವರು, ‘‘ನಮ್ಮ ಒಡೆಯನ ದೂತರು ಖಂಡಿತ ಸತ್ಯದೊಂದಿಗೇ ಬಂದಿದ್ದರು. (ಈಗ) ನಮ್ಮ ಪರವಾಗಿ ಶಿಫಾರಸು ಮಾಡಲು ಶಿಫಾರಸುದಾರರು ಯಾರಾದರೂ ಇದ್ದಾರೆಯೇ? ಅಥವಾ ನಾವು ಹಿಂದೆ ಮಾಡುತ್ತಿದ್ದುದಕ್ಕಿಂತ ಭಿನ್ನವಾದ ಕರ್ಮಗಳನ್ನು ಮಾಡುವಂತಾಗಲು, ನಮ್ಮನ್ನು ಮರಳಿಸಲಾಗುವುದೇ?’’ ಎನ್ನುವರು. ಖಂಡಿತವಾಗಿಯೂ ಅವರು ಸ್ವತಃ ತಮ್ಮನ್ನು ನಷ್ಟಕ್ಕೆ ಒಳಪಡಿಸಿಕೊಂಡರು ಮತ್ತು ಅವರು ಕಟ್ಟಿಕೊಂಡಿದ್ದ ಸುಳ್ಳುಗಳೆಲ್ಲಾ ಅವರಿಂದ ಕಳೆದು ಹೋದವು هَلۡ يَنظُرُونَ إِلَّا تَأۡوِيلَهُۥۚ يَوۡمَ يَأۡتِي تَأۡوِيلُهُۥ يَقُولُ ٱلَّذِينَ نَسُوهُ مِن قَبۡلُ قَدۡ جَآءَتۡ رُسُلُ رَبِّنَا بِٱلۡحَقِّ فَهَل لَّنَا مِن شُفَعَآءَ فَيَشۡفَعُواْ لَنَآ أَوۡ نُرَدُّ فَنَعۡمَلَ غَيۡرَ ٱلَّذِي كُنَّا نَعۡمَلُۚ قَدۡ خَسِرُوٓاْ أَنفُسَهُمۡ وَضَلَّ عَنۡهُم مَّا كَانُواْ يَفۡتَرُونَ ٥٣ನಿಮ್ಮ ಒಡೆಯನಾದ ಅಲ್ಲಾಹನೇ ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು. ತರುವಾಯ ಅವನು ವಿಶ್ವ ಸಿಂಹಾಸನದಲ್ಲಿ ಆಸೀನನಾದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆವರಿಸುತ್ತಾನೆ – ಅದು (ಹಗಲು) ಅದರ (ರಾತ್ರಿಯ) ಬೆನ್ನಿಗೇ ಧಾವಿಸಿ ಬರುತ್ತದೆ. ಇನ್ನು, ಸೂರ್ಯ ಮತ್ತು ಚಂದ್ರ ಹಾಗೂ ನಕ್ಷತ್ರಗಳು ಅವನ ಆದೇಶದಂತೆ ನಿಯಂತ್ರಿತವಾಗಿವೆ. ತಿಳಿದಿರಲಿ; ಸೃಷ್ಟಿಯೆಲ್ಲವೂ ಅವನಿಗೇ ಸೇರಿದೆ ಮತ್ತು ಅಧಿಕಾರವೂ ಅವನದೇ. ಸರ್ವಲೋಕಗಳ ಒಡೆಯನಾದ ಅಲ್ಲಾಹನು ತುಂಬಾ ಸಮೃದ್ಧನು إِنَّ رَبَّكُمُ ٱللَّهُ ٱلَّذِي خَلَقَ ٱلسَّمَٰوَٰتِ وَٱلۡأَرۡضَ فِي سِتَّةِ أَيَّامٍ ثُمَّ ٱسۡتَوَىٰ عَلَى ٱلۡعَرۡشِۖ يُغۡشِي ٱلَّيۡلَ ٱلنَّهَارَ يَطۡلُبُهُۥ حَثِيثًا وَٱلشَّمۡسَ وَٱلۡقَمَرَ وَٱلنُّجُومَ مُسَخَّرَٰتِۭ بِأَمۡرِهِۦٓۗ أَلَا لَهُ ٱلۡخَلۡقُ وَٱلۡأَمۡرُۗ تَبَارَكَ ٱللَّهُ رَبُّ ٱلۡعَٰلَمِينَ ٥٤ಭಯ ಮತ್ತು ವಿನಯದೊಂದಿಗೆ ನಿಮ್ಮ ಒಡೆಯನನ್ನು ಕರೆದು ಪ್ರಾರ್ಥಿಸಿರಿ. ಖಂಡಿತವಾಗಿಯೂ ಅವನು ಮಿತಿಮೀರುವವರನ್ನು ಮೆಚ್ಚುವುದಿಲ್ಲ ٱدۡعُواْ رَبَّكُمۡ تَضَرُّعًا وَخُفۡيَةًۚ إِنَّهُۥ لَا يُحِبُّ ٱلۡمُعۡتَدِينَ ٥٥ಭೂಮಿಯಲ್ಲಿ ಸುಧಾರಣೆ ಆದ ಬಳಿಕ, ಅಶಾಂತಿಯನ್ನು ಹರಡಬೇಡಿ. ಭಯ ಮತ್ತು ನಿರೀಕ್ಷೆಯೊಂದಿಗೆ ಅವನನ್ನು (ಅಲ್ಲಾಹನನ್ನು) ಕೂಗಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ಅಲ್ಲಾಹನ ಅನುಗ್ರಹವು ಸತ್ಕರ್ಮಿಗಳಿಗೆ ನಿಕಟವಾಗಿರುತ್ತದೆ وَلَا تُفۡسِدُواْ فِي ٱلۡأَرۡضِ بَعۡدَ إِصۡلَٰحِهَا وَٱدۡعُوهُ خَوۡفًا وَطَمَعًاۚ إِنَّ رَحۡمَتَ ٱللَّهِ قَرِيبٌ مِّنَ ٱلۡمُحۡسِنِينَ ٥٦ಅವನೇ (ಅಲ್ಲಾಹನೇ) ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ, ಶುಭವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು. ಕೊನೆಗೆ ಅವು (ನೀರಿಂದ) ಭಾರವಾದ ಮೋಡಗಳನ್ನು ಹೊತ್ತು ತಂದಾಗ ನಾವು ಅವುಗಳನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಮತ್ತು ಅವುಗಳಿಂದ ನೀರನ್ನು ಸುರಿಸುತ್ತೇವೆ ಹಾಗೂ ಅದರ ಮೂಲಕ ನಾವು ಎಲ್ಲ ಬಗೆಯ ಫಲಗಳನ್ನು ಹೊರತರುತ್ತೇವೆ – ಇದೇ ರೀತಿ ನಾವು ಮೃತರನ್ನು (ಜೀವಂತ) ಹೊರ ತರಲಿದ್ದೇವೆ – ನೀವು ಪಾಠ ಕಲಿಯಬೇಕೆಂದು (ಇದನ್ನು ಹೇಳಲಾಗುತ್ತಿದೆ) وَهُوَ ٱلَّذِي يُرۡسِلُ ٱلرِّيَٰحَ بُشۡرَۢا بَيۡنَ يَدَيۡ رَحۡمَتِهِۦۖ حَتَّىٰٓ إِذَآ أَقَلَّتۡ سَحَابًا ثِقَالًا سُقۡنَٰهُ لِبَلَدٍ مَّيِّتٍ فَأَنزَلۡنَا بِهِ ٱلۡمَآءَ فَأَخۡرَجۡنَا بِهِۦ مِن كُلِّ ٱلثَّمَرَٰتِۚ كَذَٰلِكَ نُخۡرِجُ ٱلۡمَوۡتَىٰ لَعَلَّكُمۡ تَذَكَّرُونَ ٥٧ಶುದ್ಧ ನೆಲದಿಂದ, ಅದರ ಒಡೆಯನ ಆದೇಶದಂತೆ, ಉಪಯುಕ್ತ ಬೆಳೆಯು ಉತ್ಪನ್ನವಾಗುತ್ತದೆ. ಆದರೆ ಅಶುದ್ಧ ನೆಲವು ಕೇವಲ ಕಸಕಡ್ಡಿಗಳನ್ನು ಉತ್ಪಾದಿಸುತ್ತದೆ. ಈ ರೀತಿ ನಾವು ಕೃತಜ್ಞ ಜನರಿಗಾಗಿ ನಮ್ಮ ವಚನಗಳನ್ನು ವಿವಿಧ ರೂಪಗಳಲ್ಲಿ ವಿವರಿಸುತ್ತೇವೆ وَٱلۡبَلَدُ ٱلطَّيِّبُ يَخۡرُجُ نَبَاتُهُۥ بِإِذۡنِ رَبِّهِۦۖ وَٱلَّذِي خَبُثَ لَا يَخۡرُجُ إِلَّا نَكِدًاۚ كَذَٰلِكَ نُصَرِّفُ ٱلۡأٓيَٰتِ لِقَوۡمٍ يَشۡكُرُونَ ٥٨ನಾವು ನೂಹರನ್ನು ಅವರ ಜನಾಂಗದೆಡೆಗೆ ಕಳುಹಿಸಿದ್ದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರಾವ ದೇವರೂ ಇಲ್ಲ. ನೀವು ಒಂದು ಮಹಾ ದಿನದ ಶಿಕ್ಷೆಗೆ ತುತ್ತಾಗುವ ಭಯ ನನಗಿದೆ لَقَدۡ أَرۡسَلۡنَا نُوحًا إِلَىٰ قَوۡمِهِۦ فَقَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥٓ إِنِّيٓ أَخَافُ عَلَيۡكُمۡ عَذَابَ يَوۡمٍ عَظِيمٍ ٥٩ಅವರ ಜನಾಂಗದ ಕೆಲವು ನಾಯಕರು ‘‘ನಾವು ನಿಮ್ಮನ್ನು ಸ್ಪಷ್ಟವಾಗಿ ದಾರಿಗೆಟ್ಟ ಸ್ಥಿತಿಯಲ್ಲಿ ಕಾಣುತ್ತಿದ್ದೇವೆ.’’ ಎಂದರು قَالَ ٱلۡمَلَأُ مِن قَوۡمِهِۦٓ إِنَّا لَنَرَىٰكَ فِي ضَلَٰلٍ مُّبِينٍ ٦٠ಅವರು (ನೂಹರು) ಹೇಳಿದರು; ನನ್ನ ಜನಾಂಗದವರೇ, ನಾನೇನೂ ದಾರಿಗೆಟ್ಟಿಲ್ಲ. ನಿಜವಾಗಿ ನಾನು ಸರ್ವಲೋಕಗಳ ಒಡೆಯನ ದೂತನಾಗಿದ್ದೇನೆ قَالَ يَٰقَوۡمِ لَيۡسَ بِي ضَلَٰلَةٌ وَلَٰكِنِّي رَسُولٌ مِّن رَّبِّ ٱلۡعَٰلَمِينَ ٦١ನಾನು ನನ್ನ ಒಡೆಯನ ಸಂದೇಶಗಳನ್ನು ನಿಮಗೆ ತಲುಪಿಸುತ್ತಿದ್ದೇನೆ. ನಾನು ನಿಮ್ಮ ಹಿತೈಷಿಯಾಗಿದ್ದೇನೆ ಮತ್ತು ಅಲ್ಲಾಹನ ಕಡೆಯಿಂದ, ನಿಮಗೆ ತಿಳಿದಿಲ್ಲದ ವಿಷಯಗಳು ನನಗೆ ತಿಳಿದಿವೆ أُبَلِّغُكُمۡ رِسَٰلَٰتِ رَبِّي وَأَنصَحُ لَكُمۡ وَأَعۡلَمُ مِنَ ٱللَّهِ مَا لَا تَعۡلَمُونَ ٦٢ನಿಮ್ಮನ್ನು ಎಚ್ಚರಿಸಲಿಕ್ಕಾಗಿ, ನಿಮ್ಮನ್ನು ಧರ್ಮನಿಷ್ಠರಾಗಿಸಲಿಕ್ಕಾಗಿ ಮತ್ತು ನೀವು ಕರುಣೆಗೆ ಪಾತ್ರರಾಗುವುದಕ್ಕಾಗಿ, ನಿಮ್ಮ ಒಡೆಯನ ಉಪದೇಶವು ನಿಮ್ಮಾಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ನೀವೇನು ಅಚ್ಚರಿ ಪಡುತ್ತೀರಾ أَوَعَجِبۡتُمۡ أَن جَآءَكُمۡ ذِكۡرٌ مِّن رَّبِّكُمۡ عَلَىٰ رَجُلٍ مِّنكُمۡ لِيُنذِرَكُمۡ وَلِتَتَّقُواْ وَلَعَلَّكُمۡ تُرۡحَمُونَ ٦٣ಅವರು (ನೂಹರ ಜನಾಂಗದವರು) ಅವರನ್ನು ಸುಳ್ಳುಗಾರನೆಂದು ತಿರಸ್ಕರಿಸಿದರು ಮತ್ತು ನಾವು ಅವರನ್ನು ಹಾಗೂ ಹಡಗಿನಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿದೆವು. ಇನ್ನು, ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರನ್ನು ನಾವು ಮುಳುಗಿಸಿಬಿಟ್ಟೆವು. ಖಂಡಿತವಾಗಿಯೂ ಅವರು (ಸತ್ಯದ ಪಾಲಿಗೆ) ಒಂದು ಕುರುಡ ಜನಾಂಗವಾಗಿದ್ದರು فَكَذَّبُوهُ فَأَنجَيۡنَٰهُ وَٱلَّذِينَ مَعَهُۥ فِي ٱلۡفُلۡكِ وَأَغۡرَقۡنَا ٱلَّذِينَ كَذَّبُواْ بِـَٔايَٰتِنَآۚ إِنَّهُمۡ كَانُواْ قَوۡمًا عَمِينَ ٦٤ಅತ್ತ, ಆದ್ ಜನಾಂಗದೆಡೆಗೆ ನಾವು ಅವರ ಸಹೋದರ ಹೂದ್ರನ್ನು ಕಳಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನೇ ಆರಾಧಿಸಿರಿ. ಅವನ ಹೊರತು ನಿಮಗೆ ಬೇರಾವ ದೇವರೂ ಇಲ್ಲ. ನೀವೇನು ಅಂಜುವುದಿಲ್ಲವೇ ۞ وَإِلَىٰ عَادٍ أَخَاهُمۡ هُودًاۚ قَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥٓۚ أَفَلَا تَتَّقُونَ ٦٥ಅವರ ಜನಾಂಗದಲ್ಲಿನ ಕೆಲವು ಧಿಕ್ಕಾರಿ ನಾಯಕರು ಹೇಳಿದರು; ಖಂಡಿತವಾಗಿಯೂ ನಾವು ನಿಮ್ಮನ್ನು ಮೂರ್ಖತನದಲ್ಲಿ ಕಾಣುತ್ತಿದ್ದೇವೆ ಮತ್ತು ಖಂಡಿತವಾಗಿಯೂ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ قَالَ ٱلۡمَلَأُ ٱلَّذِينَ كَفَرُواْ مِن قَوۡمِهِۦٓ إِنَّا لَنَرَىٰكَ فِي سَفَاهَةٍ وَإِنَّا لَنَظُنُّكَ مِنَ ٱلۡكَٰذِبِينَ ٦٦ಅವರು (ಹೂದ್) ಹೇಳಿದರು; ನನ್ನಲ್ಲಿ ಯಾವುದೇ ಮೂರ್ಖತನವಿಲ್ಲ. ನಿಜವಾಗಿ ನಾನು ಸರ್ವ ಲೋಕಗಳ ಒಡೆಯನ ದೂತನಾಗಿದ್ದೇನೆ قَالَ يَٰقَوۡمِ لَيۡسَ بِي سَفَاهَةٌ وَلَٰكِنِّي رَسُولٌ مِّن رَّبِّ ٱلۡعَٰلَمِينَ ٦٧ನಾನು ನಿಮಗೆ ನನ್ನ ಒಡೆಯನ ಸಂದೇಶಗಳನ್ನು ತಲುಪಿಸುತ್ತಿದ್ದೇನೆ ಮತ್ತು ನಿಮ್ಮ ಪಾಲಿಗೆ ನಾನು ಒಬ್ಬ ನಂಬಲರ್ಹ ಹಿತೈಷಿಯಾಗಿದ್ದೇನೆ أُبَلِّغُكُمۡ رِسَٰلَٰتِ رَبِّي وَأَنَا۠ لَكُمۡ نَاصِحٌ أَمِينٌ ٦٨ನೀವೇನು, ನಿಮ್ಮನ್ನು ಎಚ್ಚರಿಸಲು, ನಿಮ್ಮ ಒಡೆಯನ ಉಪದೇಶವು ನಿಮ್ಮಳಗಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಕುರಿತು ಅಚ್ಚರಿಪಡುತ್ತೀರಾ? ಸ್ಮರಿಸಿರಿ; ನೂಹರ ಜನಾಂಗದ ಬಳಿಕ, ಅವನು (ಅಲ್ಲಾಹನು) ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಮತ್ತು ರಚನೆಯಲ್ಲಿ ನಿಮಗೆ ಶ್ರೇಷ್ಠತೆಯನ್ನು ನೀಡಿದನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ – ನೀವು ವಿಜಯಿಗಳಾಗಬಹುದು أَوَعَجِبۡتُمۡ أَن جَآءَكُمۡ ذِكۡرٌ مِّن رَّبِّكُمۡ عَلَىٰ رَجُلٍ مِّنكُمۡ لِيُنذِرَكُمۡۚ وَٱذۡكُرُوٓاْ إِذۡ جَعَلَكُمۡ خُلَفَآءَ مِنۢ بَعۡدِ قَوۡمِ نُوحٍ وَزَادَكُمۡ فِي ٱلۡخَلۡقِ بَصۜۡطَةًۖ فَٱذۡكُرُوٓاْ ءَالَآءَ ٱللَّهِ لَعَلَّكُمۡ تُفۡلِحُونَ ٦٩ಅವರು ಹೇಳಿದರು; ನೀವೇನು, ಅಲ್ಲಾಹನೊಬ್ಬನನ್ನು ಮಾತ್ರ ನಾವು ಪೂಜಿಸಬೇಕು ಮತ್ತು ನಮ್ಮ ಪೂರ್ವಜರು ಪೂಜಿಸುತ್ತಿದ್ದವುಗಳನ್ನೆಲ್ಲಾ ಬಿಟ್ಟು ಬಿಡಬೇಕೆಂದು ಹೇಳಲು ನಮ್ಮ ಬಳಿಗೆ ಬಂದಿರುವಿರಾ ? ನೀವು ಸತ್ಯವಂತರಾಗಿದ್ದರೆ, ಯಾವುದು ಬರಲಿದೆ ಎಂದು ನಮ್ಮೆಡನೆ ನೀವು ಹೇಳುತ್ತಿರುವಿರೋ ಅದನ್ನು ತಂದು ಬಿಡಿ قَالُوٓاْ أَجِئۡتَنَا لِنَعۡبُدَ ٱللَّهَ وَحۡدَهُۥ وَنَذَرَ مَا كَانَ يَعۡبُدُ ءَابَآؤُنَا فَأۡتِنَا بِمَا تَعِدُنَآ إِن كُنتَ مِنَ ٱلصَّٰدِقِينَ ٧٠ಅವರು (ಹೂದ್) ಹೇಳಿದರು; ಇದೋ, ನಿಮ್ಮ ಮೇಲೆ ಬಂದೆರಗಿತು ನಿಮ್ಮ ಒಡೆಯನ ಶಿಕ್ಷೆ ಮತ್ತು ಅವನ ಆಕ್ರೋಶ. ನೀವೇನು, ನೀವು ಮತ್ತು ನಿಮ್ಮ ಪೂರ್ವಜರು ಇಟ್ಟುಕೊಂಡಿರುವ ಕೇವಲ ಕೆಲವು ಹೆಸರುಗಳ ಕುರಿತು ನನ್ನೊಡನೆ ಜಗಳಾಡುತ್ತಿರುವಿರಾ? ನಿಜವಾಗಿ ಅವುಗಳ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿಲ್ಲ. ಇದೀಗ ಕಾಯಿರಿ, ನಿಮ್ಮ ಜೊತೆ ನಾನೂ ಕಾಯುತ್ತೇನೆ قَالَ قَدۡ وَقَعَ عَلَيۡكُم مِّن رَّبِّكُمۡ رِجۡسٌ وَغَضَبٌۖ أَتُجَٰدِلُونَنِي فِيٓ أَسۡمَآءٍ سَمَّيۡتُمُوهَآ أَنتُمۡ وَءَابَآؤُكُم مَّا نَزَّلَ ٱللَّهُ بِهَا مِن سُلۡطَٰنٍۚ فَٱنتَظِرُوٓاْ إِنِّي مَعَكُم مِّنَ ٱلۡمُنتَظِرِينَ ٧١ಕೊನೆಗೆ ನಾವು ನಮ್ಮ ಅನುಗ್ರಹದಿಂದ, ಅವರನ್ನು (ಹೂದ್ರನ್ನು) ಮತ್ತು ಅವರ ಜೊತೆಗೆ ಇದ್ದವರನ್ನು ರಕ್ಷಿಸಿದೆವು ಮತ್ತು ನಮ್ಮ ವಚನಗಳನ್ನು ಸುಳ್ಳೆಂದು ತಿರಸ್ಕರಿಸಿದವರ ಮೂಲವನ್ನೇ ಕಡಿದು ಹಾಕಿದೆವು. ಅವರು ನಂಬುವವರಂತು ಆಗಿರಲಿಲ್ಲ فَأَنجَيۡنَٰهُ وَٱلَّذِينَ مَعَهُۥ بِرَحۡمَةٍ مِّنَّا وَقَطَعۡنَا دَابِرَ ٱلَّذِينَ كَذَّبُواْ بِـَٔايَٰتِنَاۖ وَمَا كَانُواْ مُؤۡمِنِينَ ٧٢ಹಾಗೆಯೇ, ಸಮೂದ್ ಜನಾಂಗದೆಡೆಗೆ ನಾವು ಅವರ ಸಹೋದರ ಸಾಲಿಹ್ರನ್ನು ಕಳುಹಿಸಿದೆವು. ಅವರು ಹೇಳಿದರು; ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮೊಡೆಯನ ಕಡೆಯಿಂದ ನಿಮ್ಮ ಬಳಿಗೆ ಒಂದು ಸ್ಪಷ್ಟ ಪುರಾವೆಯು ಬಂದಿದೆ. ಇದು ಅಲ್ಲಾಹನ ಹೆಣ್ಣೊಂಟೆ. ಇದು ನಿಮ್ಮ ಪಾಲಿಗೊಂದು ಸೂಚನೆಯಾಗಿದೆ. ಇದನ್ನು ಇದರ ಪಾಡಿಗೆ ಬಿಟ್ಟು ಬಿಡಿರಿ – ಇದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಕೆಟ್ಟ ಸಂಕಲ್ಪದಿಂದ ಇದನ್ನು ಮುಟ್ಟಬೇಡಿ (ಮುಟ್ಟಿದರೆ) ಭಾರೀ ಕಠಿಣ ಶಿಕ್ಷೆಯು ನಿಮ್ಮನ್ನು ಆವರಿಸಲಿದೆ وَإِلَىٰ ثَمُودَ أَخَاهُمۡ صَٰلِحًاۚ قَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥۖ قَدۡ جَآءَتۡكُم بَيِّنَةٌ مِّن رَّبِّكُمۡۖ هَٰذِهِۦ نَاقَةُ ٱللَّهِ لَكُمۡ ءَايَةًۖ فَذَرُوهَا تَأۡكُلۡ فِيٓ أَرۡضِ ٱللَّهِۖ وَلَا تَمَسُّوهَا بِسُوٓءٍ فَيَأۡخُذَكُمۡ عَذَابٌ أَلِيمٌ ٧٣ನೆನಪಿಸಿಕೊಳ್ಳಿರಿ; ಅವನು (ಅಲ್ಲಾಹನು)ಆದ್ ಜನಾಂಗದ ಬಳಿಕ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡಿದನು ಹಾಗೂ ಅವನು ನಿಮಗೆ ಭೂಮಿಯಲ್ಲಿ ನೆಲೆಯನ್ನು ಒದಗಿಸಿದನು. ನೀವೀಗ ಅದರ ಬಯಲು ಪ್ರದೇಶಗಳಲ್ಲಿ ಅರಮನೆಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳನ್ನು ಕೊರೆದು ನಿವಾಸಗಳನ್ನು ರಚಿಸುತ್ತೀರಿ. ಅಲ್ಲಾಹನ ಕೊಡುಗೆ ಗಳನ್ನು ಸ್ಮರಿಸಿರಿ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವವರಾಗಿ ಅಲೆಯಬೇಡಿ وَٱذۡكُرُوٓاْ إِذۡ جَعَلَكُمۡ خُلَفَآءَ مِنۢ بَعۡدِ عَادٍ وَبَوَّأَكُمۡ فِي ٱلۡأَرۡضِ تَتَّخِذُونَ مِن سُهُولِهَا قُصُورًا وَتَنۡحِتُونَ ٱلۡجِبَالَ بُيُوتًاۖ فَٱذۡكُرُوٓاْ ءَالَآءَ ٱللَّهِ وَلَا تَعۡثَوۡاْ فِي ٱلۡأَرۡضِ مُفۡسِدِينَ ٧٤ಅವರ ಜನಾಂಗದ ಅಹಂಕಾರಿ ನಾಯಕರು, ಸತ್ಯವನ್ನು ನಂಬಿದ್ದ ತಮ್ಮ ಜನಾಂಗದ ಮರ್ದಿತರೊಡನೆ, ‘‘ಸಾಲಿಹ್, ತನ್ನ ಒಡೆಯನ ಕಡೆಯಿಂದ ಕಳುಹಿಸಲ್ಪಟ್ಟವನೆಂದು ನಿಮಗೆ ಗೊತ್ತೇ?’’ ಎಂದು ಕೇಳಿದರು. ಅವರು; ‘‘ಖಂಡಿತವಾಗಿಯೂ, ಅವರನ್ನು ಯಾವುದರ ಜೊತೆ ಕಳುಹಿಸಲಾಗಿದೆಯೋ ಅದನ್ನು ನಾವು ನಂಬಿರುವೆವು.’’ ಎಂದು ಉತ್ತರಿಸಿದರು قَالَ ٱلۡمَلَأُ ٱلَّذِينَ ٱسۡتَكۡبَرُواْ مِن قَوۡمِهِۦ لِلَّذِينَ ٱسۡتُضۡعِفُواْ لِمَنۡ ءَامَنَ مِنۡهُمۡ أَتَعۡلَمُونَ أَنَّ صَٰلِحًا مُّرۡسَلٌ مِّن رَّبِّهِۦۚ قَالُوٓاْ إِنَّا بِمَآ أُرۡسِلَ بِهِۦ مُؤۡمِنُونَ ٧٥ಅಹಂಕಾರಿಗಳು; ‘‘ನೀವು ನಂಬಿರುವುದನ್ನು ನಾವು ಧಿಕ್ಕರಿಸುತ್ತೇವೆ.’’ ಎಂದರು قَالَ ٱلَّذِينَ ٱسۡتَكۡبَرُوٓاْ إِنَّا بِٱلَّذِيٓ ءَامَنتُم بِهِۦ كَٰفِرُونَ ٧٦ಮುಂದೆ, ಅವರು ಆ ಹೆಣ್ಣೊಂಟೆಯನ್ನು ಕೊಂದು ಬಿಟ್ಟರು ಹಾಗೂ ತಮ್ಮ ಒಡೆಯನ ಆದೇಶವನ್ನು ಮೀರಿ ನಡೆದರು ಮತ್ತು ಹೇಳಿದರು; ‘‘ಓ ಸಾಲಿಹ್, ನಿಜಕ್ಕೂ ನೀನೊಬ್ಬ ದೇವದೂತನಾಗಿದ್ದರೆ, ನೀನು ನಮಗೆ ವಾಗ್ದಾನ ಮಾಡುತ್ತಿದ್ದುದನ್ನು ನಮ್ಮ ಬಳಿಗೆ ತಂದು ಬಿಡು.’’ فَعَقَرُواْ ٱلنَّاقَةَ وَعَتَوۡاْ عَنۡ أَمۡرِ رَبِّهِمۡ وَقَالُواْ يَٰصَٰلِحُ ٱئۡتِنَا بِمَا تَعِدُنَآ إِن كُنتَ مِنَ ٱلۡمُرۡسَلِينَ ٧٧ಕೊನೆಗೆ, ಭೀಕರ ಭೂಕಂಪವೊಂದು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು فَأَخَذَتۡهُمُ ٱلرَّجۡفَةُ فَأَصۡبَحُواْ فِي دَارِهِمۡ جَٰثِمِينَ ٧٨ಸಾಲಿಹ್ರು ಅವರನ್ನು ಕಡೆಗಣಿಸಿದರು ಮತ್ತು ‘‘ನನ್ನ ಜನಾಂಗದವರೇ, ನಾನು ನನ್ನ ಒಡೆಯನ ಸಂದೇಶವನ್ನು ನಿಮಗೆ ತಲುಪಿಸಿದೆನು ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆನು. ಆದರೆ ನೀವು ಹಿತೈಷಿಗಳನ್ನು ಪ್ರೀತಿಸುವುದಿಲ್ಲ.’’ ಎಂದರು فَتَوَلَّىٰ عَنۡهُمۡ وَقَالَ يَٰقَوۡمِ لَقَدۡ أَبۡلَغۡتُكُمۡ رِسَالَةَ رَبِّي وَنَصَحۡتُ لَكُمۡ وَلَٰكِن لَّا تُحِبُّونَ ٱلنَّٰصِحِينَ ٧٩ಇನ್ನು ಲೂತ್, ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು ಸರ್ವಲೋಕದಲ್ಲಿ ನಿಮಗಿಂತ ಮೊದಲು ಯಾರೂ ಮಾಡಿಲ್ಲದ ಅಶ್ಲೀಲ ಕೃತ್ಯವನ್ನು ಎಸಗುತ್ತೀರಾ?’’ وَلُوطًا إِذۡ قَالَ لِقَوۡمِهِۦٓ أَتَأۡتُونَ ٱلۡفَٰحِشَةَ مَا سَبَقَكُم بِهَا مِنۡ أَحَدٍ مِّنَ ٱلۡعَٰلَمِينَ ٨٠‘‘ನೀವಂತು, ಕಾಮಾಪೇಕ್ಷೆಯೊಂದಿಗೆ, ಸ್ತ್ರೀಯರ ಬದಲು ಪುರುಷರ ಬಳಿಗೆ ಹೋಗುತ್ತೀರಿ. ಖಂಡಿತವಾಗಿಯೂ ನೀವು ಅತಿರೇಕವೆಸಗುವವರಾಗಿದ್ದೀರಿ.’’ إِنَّكُمۡ لَتَأۡتُونَ ٱلرِّجَالَ شَهۡوَةً مِّن دُونِ ٱلنِّسَآءِۚ بَلۡ أَنتُمۡ قَوۡمٌ مُّسۡرِفُونَ ٨١ಇದಕ್ಕೆ ಅವರ ಜನಾಂಗದ ಉತ್ತರ ‘‘ಇವರನ್ನು ನಿಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡಿರಿ. ಇವರು ಭಾರೀ ಪಾವಿತ್ರ ಬಯಸುವ ಜನರಾಗಿದ್ದಾರೆ’’ ಎನ್ನುವುದಷ್ಟೇ ಆಗಿತ್ತು وَمَا كَانَ جَوَابَ قَوۡمِهِۦٓ إِلَّآ أَن قَالُوٓاْ أَخۡرِجُوهُم مِّن قَرۡيَتِكُمۡۖ إِنَّهُمۡ أُنَاسٌ يَتَطَهَّرُونَ ٨٢ಕೊನೆಗೆ ನಾವು ಅವರನ್ನು (ಲೂತ್ರನ್ನು) ಮತ್ತು ಅವರ ಮನೆಯವರನ್ನು ರಕ್ಷಿಸಿದೆವು – ಅವರ ಪತ್ನಿಯ ಹೊರತು. ಏಕೆಂದರೆ ಆಕೆ ಹಿಂದೆ ಉಳಿಯುವವರ ಸಾಲಿಗೆ ಸೇರಿದ್ದಳು فَأَنجَيۡنَٰهُ وَأَهۡلَهُۥٓ إِلَّا ٱمۡرَأَتَهُۥ كَانَتۡ مِنَ ٱلۡغَٰبِرِينَ ٨٣ಅವರ (ಲೂತ್ರ ಜನಾಂಗದ) ಮೇಲೆ ನಾವು ಒಂದು ಮಳೆಯನ್ನು ಸುರಿಸಿ ಬಿಟ್ಟೆವು. ನೋಡಿರಿ, ಅಪರಾಧಿಗಳ ಗತಿ ಏನಾಯಿತೆಂದು وَأَمۡطَرۡنَا عَلَيۡهِم مَّطَرًاۖ فَٱنظُرۡ كَيۡفَ كَانَ عَٰقِبَةُ ٱلۡمُجۡرِمِينَ ٨٤ಹಾಗೆಯೇ ನಾವು ಮದ್ಯನ್ ಜನಾಂಗದವರೆಡೆಗೆ ಅವರ ಸಹೋದರ ಶುಐಬ್ರನ್ನು ಕಳುಹಿಸಿದೆವು. ಅವರು ಹೇಳಿದರು; ‘‘ನನ್ನ ಜನಾಂಗದವರೇ, ಅಲ್ಲಾಹನನ್ನು ಮಾತ್ರ ಪೂಜಿಸಿರಿ, ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಇದೀಗ ನಿಮ್ಮ ಬಳಿಗೆ ನಿಮ್ಮ ಒಡೆಯನ ಕಡೆಯಿಂದ ಸ್ಪಷ್ಟ ಪುರಾವೆಯು ಬಂದಿದೆ. ನೀವಿನ್ನು, ಪರಿಪೂರ್ಣವಾಗಿ ಅಳೆಯಿರಿ ಮತ್ತು ತೂಗಿರಿ. ಜನರಿಗೆ ಅವರ ಸರಕುಗಳನ್ನು ಕಡಿತಗೊಳಿಸಿ ಕೊಡಬೇಡಿ. ಹಾಗೆಯೇ, ಭೂಮಿಯಲ್ಲಿ ಸುಧಾರಣೆಯಾದ ಬಳಿಕ ನೀವು ಅದರಲ್ಲಿ ಅಶಾಂತಿಯನ್ನು ಹಬ್ಬಬೇಡಿ. ನೀವು ನಂಬುವವರಾಗಿದ್ದರೆ, ಈ ಧೋರಣೆಯೇ ನಿಮ್ಮ ಪಾಲಿಗೆ ಉತ್ತಮ.’’ وَإِلَىٰ مَدۡيَنَ أَخَاهُمۡ شُعَيۡبًاۚ قَالَ يَٰقَوۡمِ ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُۥۖ قَدۡ جَآءَتۡكُم بَيِّنَةٌ مِّن رَّبِّكُمۡۖ فَأَوۡفُواْ ٱلۡكَيۡلَ وَٱلۡمِيزَانَ وَلَا تَبۡخَسُواْ ٱلنَّاسَ أَشۡيَآءَهُمۡ وَلَا تُفۡسِدُواْ فِي ٱلۡأَرۡضِ بَعۡدَ إِصۡلَٰحِهَاۚ ذَٰلِكُمۡ خَيۡرٌ لَّكُمۡ إِن كُنتُم مُّؤۡمِنِينَ ٨٥‘‘ನೀವು ಎಲ್ಲ ದಾರಿಗಳಲ್ಲಿ ಕುಳಿತು, ಜನರನ್ನು ಬೆದರಿಸುವವರೂ ಅಲ್ಲಾಹನಲ್ಲಿ ನಂಬಿಕೆ ಇಟ್ಟವರನ್ನು ಅವನ ದಾರಿಯಿಂದ ತಡೆಯುವವರೂ ಆಗಬೇಡಿ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕಬೇಡಿ. ನೆನಪಿಸಿಕೊಳ್ಳಿರಿ; ನೀವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾಗ ಅವನು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿದನು. ಹಾಗೆಯೇ, ಅಶಾಂತಿ ಹಬ್ಬುವವರ ಗತಿ ಏನಾಯಿತೆಂಬುದನ್ನು ನೋಡಿರಿ.’’ وَلَا تَقۡعُدُواْ بِكُلِّ صِرَٰطٍ تُوعِدُونَ وَتَصُدُّونَ عَن سَبِيلِ ٱللَّهِ مَنۡ ءَامَنَ بِهِۦ وَتَبۡغُونَهَا عِوَجًاۚ وَٱذۡكُرُوٓاْ إِذۡ كُنتُمۡ قَلِيلًا فَكَثَّرَكُمۡۖ وَٱنظُرُواْ كَيۡفَ كَانَ عَٰقِبَةُ ٱلۡمُفۡسِدِينَ ٨٦ಇದೀಗ ನಿಮ್ಮಲ್ಲಿನ ಒಂದು ಗುಂಪು, ನನ್ನನ್ನು ಯಾವುದರ ಜೊತೆಗೆ ಕಳಿಸಲಾಗಿದೆಯೋ ಅದನ್ನು ನಂಬುವವರಾಗಿದ್ದಾರೆ, ಹಾಗೂ ಇನ್ನೊಂದು ಗುಂಪು ಅದನ್ನು ನಂಬುತ್ತಿಲ್ಲ – ಅಲ್ಲಾಹನು ನಮ್ಮ ನಡುವೆ ತೀರ್ಪು ನೀಡುವ ತನಕ ಸಹನೆ ವಹಿಸಿರಿ – ಅವನು ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ وَإِن كَانَ طَآئِفَةٌ مِّنكُمۡ ءَامَنُواْ بِٱلَّذِيٓ أُرۡسِلۡتُ بِهِۦ وَطَآئِفَةٌ لَّمۡ يُؤۡمِنُواْ فَٱصۡبِرُواْ حَتَّىٰ يَحۡكُمَ ٱللَّهُ بَيۡنَنَاۚ وَهُوَ خَيۡرُ ٱلۡحَٰكِمِينَ ٨٧ಅವರ ಜನಾಂಗದ ಅಹಂಕಾರಿ ನಾಯಕರು ಹೇಳಿದರು; ಶುಐಬರೇ, ನಿಮ್ಮನ್ನು ಹಾಗೂ ನಿಮ್ಮ ಜೊತೆ (ಸತ್ಯಧರ್ಮದಲ್ಲಿ) ನಂಬಿಕೆ ಇಟ್ಟವರನ್ನು ನಾವು ನಮ್ಮ ನಾಡಿನಿಂದ ಹೊರಕ್ಕೆ ಅಟ್ಟಿ ಬಿಡುವೆವು. ಅಥವಾ (ಅದು ಬೇಡವಾದರೆ) ನೀವು ನಮ್ಮ ಪಂಥಕ್ಕೆ ಮರಳಿಬರಬೇಕು. ಅವರು (ಶುಐಬರು) ಕೇಳಿದರು; ನಮಗೆ ಇಷ್ಟವಿಲ್ಲದಿದ್ದರೂ (ಮರಳಬೇಕೇ)
۞ قَالَ ٱلۡمَلَأُ ٱلَّذِينَ ٱسۡتَكۡبَرُواْ مِن قَوۡمِهِۦ لَنُخۡرِجَنَّكَ يَٰشُعَيۡبُ وَٱلَّذِينَ ءَامَنُواْ مَعَكَ مِن قَرۡيَتِنَآ أَوۡ لَتَعُودُنَّ فِي مِلَّتِنَاۚ قَالَ أَوَلَوۡ كُنَّا كَٰرِهِينَ ٨٨ಅಲ್ಲಾಹನು ನಿಮ್ಮ ಪಂಥದಿಂದ ನಮ್ಮನ್ನು ರಕ್ಷಿಸಿದ ಬಳಿಕ ನಾವು ಮತ್ತೆ ಅದರೆಡೆಗೆ ಮರಳಿದರೆ ನಾವು ಅಲ್ಲಾಹನ ಮೇಲೆ ಒಂದು ಭಾರೀ ಸುಳ್ಳಾರೋಪವನ್ನು ಹೊರಿಸಿದಂತಾದೀತು. ಹೀಗಿರುತ್ತಾ ನಮ್ಮೊಡೆಯನಾದ ಅಲ್ಲಾಹನೇ ಇಚ್ಛಿಸುವ ತನಕ, ಅದರೆಡೆಗೆ ಮರಳಲು ನಮಗೆ ಸಾಧ್ಯವಿಲ್ಲ. ನಮ್ಮೊಡನೆಯನ ಜ್ಞಾನವು ಎಲ್ಲವನ್ನೂ ಆವರಿಸಿಕೊಂಡಿದೆ. ನಾವು ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಟ್ಟಿರುವೆವು. ನಮ್ಮೊಡೆಯಾ, ನೀನೀಗ ನಮ್ಮ ಹಾಗೂ ನಮ್ಮ ಜನಾಂಗದ ನಡುವೆ ಸತ್ಯದೊಂದಿಗೆ ತೀರ್ಮಾನ ಮಾಡಿಬಿಡು. ನೀನು ಅತ್ಯುತ್ತಮ ತೀರ್ಮಾನ ಮಾಡುವವನಾಗಿರುವೆ قَدِ ٱفۡتَرَيۡنَا عَلَى ٱللَّهِ كَذِبًا إِنۡ عُدۡنَا فِي مِلَّتِكُم بَعۡدَ إِذۡ نَجَّىٰنَا ٱللَّهُ مِنۡهَاۚ وَمَا يَكُونُ لَنَآ أَن نَّعُودَ فِيهَآ إِلَّآ أَن يَشَآءَ ٱللَّهُ رَبُّنَاۚ وَسِعَ رَبُّنَا كُلَّ شَيۡءٍ عِلۡمًاۚ عَلَى ٱللَّهِ تَوَكَّلۡنَاۚ رَبَّنَا ٱفۡتَحۡ بَيۡنَنَا وَبَيۡنَ قَوۡمِنَا بِٱلۡحَقِّ وَأَنتَ خَيۡرُ ٱلۡفَٰتِحِينَ ٨٩ಅವರ ಜನಾಂಗದ ಧಿಕ್ಕಾರಿ ನಾಯಕರು (ಜನರೊಡನೆ) ಹೇಳಿದರು; ನೀವು ಶುಐಬರನ್ನು ಅನುಸರಿಸಿದರೆ, ಖಂಡಿತವಾಗಿಯೂ ನೀವು ನಷ್ಟಕ್ಕೊಳಗಾದವರ ಸಾಲಿಗೆ ಸೇರುವಿರಿ وَقَالَ ٱلۡمَلَأُ ٱلَّذِينَ كَفَرُواْ مِن قَوۡمِهِۦ لَئِنِ ٱتَّبَعۡتُمۡ شُعَيۡبًا إِنَّكُمۡ إِذًا لَّخَٰسِرُونَ ٩٠ಕೊನೆಗೆ ಒಂದು ಭಾರೀ ಭೂಕಂಪವು ಅವರನ್ನು ಆವರಿಸಿಕೊಂಡಿತು ಮತ್ತು ಅವರು ತಮ್ಮ ನಿವಾಸಗಳಲ್ಲೇ ನಿಶ್ಚಲ ಶವಗಳಾಗಿ ಬಿದ್ದುಕೊಂಡಿದ್ದರು فَأَخَذَتۡهُمُ ٱلرَّجۡفَةُ فَأَصۡبَحُواْ فِي دَارِهِمۡ جَٰثِمِينَ ٩١ಶುಐಬರನ್ನು ಧಿಕ್ಕರಿಸಿದವರು, ಹಿಂದೆಂದೂ ಬದುಕಿಯೇ ಇರಲಿಲ್ಲವೋ ಎಂಬಂತೆ ಅಳಿದು ಹೋದರು. ಹೀಗೆ, ಶುಐಬರನ್ನು ಧಿಕ್ಕರಿಸಿದವರೇ ನಷ್ಟ ಅನುಭವಿಸಿದವರಾದರು ٱلَّذِينَ كَذَّبُواْ شُعَيۡبًا كَأَن لَّمۡ يَغۡنَوۡاْ فِيهَاۚ ٱلَّذِينَ كَذَّبُواْ شُعَيۡبًا كَانُواْ هُمُ ٱلۡخَٰسِرِينَ ٩٢ಅವರು (ಶುಐಬರು) ಆ ಜನರಿಂದ ಮುಖ ತಿರುಗಿಸಿಕೊಂಡು ಹೇಳಿದರು; ನನ್ನ ಜನಾಂಗದವರೇ, ನನ್ನ ಒಡೆಯನ ಸಂದೇಶವನ್ನು ನಾನು ನಿಮಗೆ ತಲುಪಿಸಿದೆ ಮತ್ತು ನಾನು ನಿಮ್ಮ ಹಿತೈಷಿಯಾಗಿದ್ದೆ. ಇದೀಗ ಒಂದು ಧಿಕ್ಕಾರಿ ಜನಾಂಗದ ಕುರಿತು ನಾನು ಹೇಗೆ ತಾನೇ ದುಃಖಿಸಲಿ فَتَوَلَّىٰ عَنۡهُمۡ وَقَالَ يَٰقَوۡمِ لَقَدۡ أَبۡلَغۡتُكُمۡ رِسَٰلَٰتِ رَبِّي وَنَصَحۡتُ لَكُمۡۖ فَكَيۡفَ ءَاسَىٰ عَلَىٰ قَوۡمٍ كَٰفِرِينَ ٩٣ನಾವು ಯಾವೆಲ್ಲ ನಾಡುಗಳಿಗೆ ನಮ್ಮ ದೂತರನ್ನು ಕಳುಹಿಸಿರುವೆವೋ ಆ ಎಲ್ಲ ನಾಡುಗಳ ಜನರು ವಿನಯಶೀಲರಾಗಿರಬೇಕೆಂದು ನಾವು ಅವರನ್ನು ಸಂಕಷ್ಟ ಹಾಗೂ ಕಾಠಿಣ್ಯಕ್ಕೆ ಒಳಪಡಿಸಿರುವೆವು وَمَآ أَرۡسَلۡنَا فِي قَرۡيَةٍ مِّن نَّبِيٍّ إِلَّآ أَخَذۡنَآ أَهۡلَهَا بِٱلۡبَأۡسَآءِ وَٱلضَّرَّآءِ لَعَلَّهُمۡ يَضَّرَّعُونَ ٩٤ಆ ಬಳಿಕ ನಾವು (ಅವರ) ದುಸ್ಥಿತಿಯನ್ನು ಸುಸ್ಥಿತಿಯಾಗಿ ಪರಿವರ್ತಿಸಿದೆವು. ಎಷ್ಟೆಂದರೆ, ಅವರು ಸಮೃದ್ಧರಾಗಿ, ಸಂಕಷ್ಟ ಹಾಗೂ ಸಂತೋಷದ ಪರಿಸ್ಥಿತಿಗಳು ನಮ್ಮ ಪೂರ್ವಜರಿಗೆ ಎದುರಾಗುತ್ತಿದ್ದವು ಎನ್ನತೊಡಗಿದರು. ಕೊನೆಗೆ ನಾವು ಹಠಾತ್ತನೆ ಅವರನ್ನು ಹಿಡಿದುಬಿಟ್ಟೆವು – ಅವರಿಗೆ ಅದರ ಅರಿವೇ ಇರಲಿಲ್ಲ ثُمَّ بَدَّلۡنَا مَكَانَ ٱلسَّيِّئَةِ ٱلۡحَسَنَةَ حَتَّىٰ عَفَواْ وَّقَالُواْ قَدۡ مَسَّ ءَابَآءَنَا ٱلضَّرَّآءُ وَٱلسَّرَّآءُ فَأَخَذۡنَٰهُم بَغۡتَةً وَهُمۡ لَا يَشۡعُرُونَ ٩٥ಒಂದು ವೇಳೆ ನಾಡುಗಳ ಜನರು (ಸತ್ಯದಲ್ಲಿ) ನಂಬಿಕೆ ಇಟ್ಟು, ಸತ್ಯ ನಿಷ್ಠರಾಗಿದ್ದರೆ ನಾವು ಅವರ ಪಾಲಿಗೆ ಆಕಾಶದಿಂದಲೂ ಭೂಮಿಯಿಂದಲೂ ಸಮೃದ್ಧಿಯ ಬಾಗಿಲುಗಳನ್ನು ತೆರೆದುಬಿಡುತ್ತಿದ್ದೆವು. ಆದರೆ ಅವರು (ಸತ್ಯವನ್ನು) ಸುಳ್ಳೆಂದರು. ಕೊನೆಗೆ ನಾವು ಅವರ ಕೃತ್ಯಗಳ ಕಾರಣ ಅವರನ್ನು ಹಿಡಿದುಕೊಂಡೆವು وَلَوۡ أَنَّ أَهۡلَ ٱلۡقُرَىٰٓ ءَامَنُواْ وَٱتَّقَوۡاْ لَفَتَحۡنَا عَلَيۡهِم بَرَكَٰتٍ مِّنَ ٱلسَّمَآءِ وَٱلۡأَرۡضِ وَلَٰكِن كَذَّبُواْ فَأَخَذۡنَٰهُم بِمَا كَانُواْ يَكۡسِبُونَ ٩٦ನಾಡುಗಳ ಜನರೇನು, ಇರುಳಲ್ಲಿ ಅವರು ಮಲಗಿರುವಾಗ ನಮ್ಮ ಶಿಕ್ಷೆಯು ಹಠಾತ್ತನೆ ಅವರ ಮೇಲೆ ಬಂದು ಎರಗಲಾರದೆಂದು ನೆಮ್ಮದಿಯಿಂದಿರುವರೇ أَفَأَمِنَ أَهۡلُ ٱلۡقُرَىٰٓ أَن يَأۡتِيَهُم بَأۡسُنَا بَيَٰتًا وَهُمۡ نَآئِمُونَ ٩٧ಅಥವಾ ನಾಡುಗಳ ಜನರೇನು, ಹಗಲಲ್ಲಿ ಅವರು ಆಟೋಟಗಳಲ್ಲಿ ನಿರತರಾಗಿರುವಾಗ ನಮ್ಮ ಶಿಕ್ಷೆಯು ಅವರ ಮೇಲೆ ಬಂದೆರಗಲಾರದೆಂದು ನೆಮ್ಮದಿಯಿಂದಿರುವರೇ أَوَأَمِنَ أَهۡلُ ٱلۡقُرَىٰٓ أَن يَأۡتِيَهُم بَأۡسُنَا ضُحًى وَهُمۡ يَلۡعَبُونَ ٩٨ಅವರೇನು, ಅಲ್ಲಾಹನ ಯೋಜನೆಯ ಕುರಿತು ನಿಶ್ಚಿಂತರೇ? ನಿಜವಾಗಿ, ನಷ್ಟಕ್ಕೊಳಗಾಗುವವರ ಹೊರತು ಬೇರಾರೂ ಅಲ್ಲಾಹನ ಯೋಜನೆಗಳ ಕುರಿತು ನಿಶ್ಚಿಂತರಾಗಿರುವುದಿಲ್ಲ أَفَأَمِنُواْ مَكۡرَ ٱللَّهِۚ فَلَا يَأۡمَنُ مَكۡرَ ٱللَّهِ إِلَّا ٱلۡقَوۡمُ ٱلۡخَٰسِرُونَ ٩٩(ತಮಗಿಂತ ಹಿಂದಿನ) ಭೂವಾಸಿಗಳ ಬಳಿಕ ಭೂಮಿಯ ಉತ್ತರಾಧಿಕಾರಿಗಳಾದವರಿಗೆ ಸೂಚನೆ ಸಿಗಲಿಲ್ಲವೇ, ನಾವು ಬಯಸಿದರೆ ಅವರ ಪಾಪಗಳ ಕಾರಣ ಅವರನ್ನು ಸಂಕಷ್ಟಕ್ಕೆ ಗುರಿಪಡಿಸಬಲ್ಲೆವೆಂದು? ನಿಜವಾಗಿ ನಾವು ಅವರ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುವೆವು. ಅವರು ಏನನ್ನೂ ಕೇಳುತ್ತಿಲ್ಲ أَوَلَمۡ يَهۡدِ لِلَّذِينَ يَرِثُونَ ٱلۡأَرۡضَ مِنۢ بَعۡدِ أَهۡلِهَآ أَن لَّوۡ نَشَآءُ أَصَبۡنَٰهُم بِذُنُوبِهِمۡۚ وَنَطۡبَعُ عَلَىٰ قُلُوبِهِمۡ فَهُمۡ لَا يَسۡمَعُونَ ١٠٠ಇವು ಆ ನಾಡುಗಳು – ನಾವು ಅವುಗಳ ವೃತ್ತಾಂತವನ್ನು ನಿಮಗೆ ವಿವರಿಸುತ್ತಿದ್ದೇವೆ. ಅವರ ಬಳಿಗೆ ಅವರ ದೇವದೂತರುಗಳು ಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಇಷ್ಟಾಗಿಯೂ, ಯಾವುದನ್ನು ಅವರು ಈ ಹಿಂದೆಯೂ ಧಿಕ್ಕರಿಸಿದ್ದರೋ ಅದನ್ನು ಅವರು ನಂಬಲಿಲ್ಲ. ಈ ರೀತಿ ಅಲ್ಲಾಹನು ಧಿಕ್ಕಾರಿಗಳ ಮನಸ್ಸುಗಳ ಮೇಲೆ ಮುದ್ರೆ ಒತ್ತಿರುತ್ತಾನೆ تِلۡكَ ٱلۡقُرَىٰ نَقُصُّ عَلَيۡكَ مِنۡ أَنۢبَآئِهَاۚ وَلَقَدۡ جَآءَتۡهُمۡ رُسُلُهُم بِٱلۡبَيِّنَٰتِ فَمَا كَانُواْ لِيُؤۡمِنُواْ بِمَا كَذَّبُواْ مِن قَبۡلُۚ كَذَٰلِكَ يَطۡبَعُ ٱللَّهُ عَلَىٰ قُلُوبِ ٱلۡكَٰفِرِينَ ١٠١ಅವರ ಪೈಕಿ ಹೆಚ್ಚಿನವರಲ್ಲಿ ನಾವು ವಚನ ಪಾಲನೆಯನ್ನು ಕಾಣಲಿಲ್ಲ. ನಿಜವಾಗಿ ಅವರಲ್ಲಿ ಹೆಚ್ಚಿನವರನ್ನು ನಾವು ದುಷ್ಕರ್ಮಿಗಳಾಗಿ ಕಂಡೆವು وَمَا وَجَدۡنَا لِأَكۡثَرِهِم مِّنۡ عَهۡدٍۖ وَإِن وَجَدۡنَآ أَكۡثَرَهُمۡ لَفَٰسِقِينَ ١٠٢ಅವರ ಬಳಿಕ ಮೂಸಾರನ್ನು ನಾವು ನಮ್ಮ ದೃಷ್ಟಾಂತಗಳೊಂದಿಗೆ ಫಿರ್ಔನ್ ಮತ್ತು ಆತನ (ಜನಾಂಗದ) ನಾಯಕರ ಬಳಿಗೆ ಕಳಿಸಿದೆವು. ಅವರೂ ಅವುಗಳ ವಿಷಯದಲ್ಲಿ ಅಕ್ರಮ ಧೋರಣೆಯನ್ನು ತೋರಿದರು. ನೋಡಿರಿ, ಅಶಾಂತಿ ಹರಡುವವರ ಗತಿ ಏನಾಯಿತೆಂದು ثُمَّ بَعَثۡنَا مِنۢ بَعۡدِهِم مُّوسَىٰ بِـَٔايَٰتِنَآ إِلَىٰ فِرۡعَوۡنَ وَمَلَإِيْهِۦ فَظَلَمُواْ بِهَاۖ فَٱنظُرۡ كَيۡفَ كَانَ عَٰقِبَةُ ٱلۡمُفۡسِدِينَ ١٠٣ಮೂಸಾ ಹೇಳಿದರು; ಓ ಫಿರ್ಔನ್, ನಾನು ಖಚಿತವಾಗಿಯೂ ಸರ್ವಲೋಕಗಳ ಒಡೆಯನ ದೂತನು وَقَالَ مُوسَىٰ يَٰفِرۡعَوۡنُ إِنِّي رَسُولٌ مِّن رَّبِّ ٱلۡعَٰلَمِينَ ١٠٤ಅಲ್ಲಾಹನ ಹೆಸರಲ್ಲಿ, ಸತ್ಯದ ಹೊರತು ಬೇರೇನನ್ನೂ ಹೇಳಬಾರದೆಂಬುದೇ ನನ್ನ ಕರ್ತವ್ಯವಾಗಿದೆ. ನಾನು ನಿಮ್ಮೊಡನೆಯನ ಕಡೆಯಿಂದ ನಿಮ್ಮ ಬಳಿಗೆ ಸ್ಪಷ್ಟ ಪುರಾವೆಗಳನ್ನು ತಂದಿದ್ದೇನೆ. ಇಸ್ರಾಈಲರ ಸಂತತಿಯನ್ನು ನನ್ನ ಜೊತೆ ಕಳಿಸಿಬಿಡು حَقِيقٌ عَلَىٰٓ أَن لَّآ أَقُولَ عَلَى ٱللَّهِ إِلَّا ٱلۡحَقَّۚ قَدۡ جِئۡتُكُم بِبَيِّنَةٍ مِّن رَّبِّكُمۡ فَأَرۡسِلۡ مَعِيَ بَنِيٓ إِسۡرَٰٓءِيلَ ١٠٥ಅವನು (ಫಿರ್ಔನ್) ಹೇಳಿದನು; ನೀನು ದೃಷ್ಟಾಂತದೊಂದಿಗೆ ಬಂದಿದ್ದರೆ (ಹಾಗೂ) ನೀನು ಸತ್ಯವಂತನಾಗಿದ್ದರೆ ಅದನ್ನು ಮುಂದಿಡು قَالَ إِن كُنتَ جِئۡتَ بِـَٔايَةٍ فَأۡتِ بِهَآ إِن كُنتَ مِنَ ٱلصَّٰدِقِينَ ١٠٦ಅವರು (ಮೂಸಾ) ತಮ್ಮ ಊರುಗೋಲನ್ನು ಎಸೆದರು ಮತ್ತು ಹಠಾತ್ತನೆ ಅದು ಸ್ಪಷ್ಟವಾಗಿ ಒಂದು ಹೆಬ್ಬಾವಾಗಿ ಬಿಟ್ಟಿತು فَأَلۡقَىٰ عَصَاهُ فَإِذَا هِيَ ثُعۡبَانٌ مُّبِينٌ ١٠٧ತರುವಾಯ ಅವರು ತಮ್ಮ ಕೈಯನ್ನು ಹೊರತೆಗೆದರು. ಹಠಾತ್ತನೆ ಅದು ನೋಡುವವರಿಗೆ ತುಂಬಾ ಉಜ್ವಲವಾಗಿ ಕಂಡಿತು وَنَزَعَ يَدَهُۥ فَإِذَا هِيَ بَيۡضَآءُ لِلنَّٰظِرِينَ ١٠٨ಫಿರ್ಔನನ ಜನಾಂಗದ ಸರದಾರರು ಹೇಳಿದರು; ಇವನು ಖಂಡಿತ ಒಬ್ಬ ತಜ್ಞ ಜಾದೂಗಾರನಾಗಿದ್ದಾನೆ قَالَ ٱلۡمَلَأُ مِن قَوۡمِ فِرۡعَوۡنَ إِنَّ هَٰذَا لَسَٰحِرٌ عَلِيمٌ ١٠٩ಇವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರದಬ್ಬ ಬಯಸುತ್ತಾನೆ. ಈಗ ನೀವೇನು ಆದೇಶಿಸುತ್ತೀರಿ يُرِيدُ أَن يُخۡرِجَكُم مِّنۡ أَرۡضِكُمۡۖ فَمَاذَا تَأۡمُرُونَ ١١٠ಅವರು (ಫಿರ್ಔನನೊಡನೆ) ಹೇಳಿದರು; ಇವನನ್ನು ಹಾಗೂ ಇವನ ಸಹೋದರನನ್ನು ತಡೆದಿಟ್ಟುಕೊ ಮತ್ತು ವಿವಿಧ ನಗರಗಳಿಗೆ ದೂತರನ್ನು ಕಳುಹಿಸು قَالُوٓاْ أَرۡجِهۡ وَأَخَاهُ وَأَرۡسِلۡ فِي ٱلۡمَدَآئِنِ حَٰشِرِينَ ١١١ಅವರು ಎಲ್ಲ ತಜ್ಞ ಜಾದೂಗಾರರನ್ನು ನಿನ್ನ ಬಳಿಗೆ ತರಲಿ يَأۡتُوكَ بِكُلِّ سَٰحِرٍ عَلِيمٍ ١١٢ಹೀಗೆ, ಜಾದೂಗಾರರು ಫಿರ್ಔನನ ಬಳಿಗೆ ಬಂದರು. ನಾವು ವಿಜಯಿಗಳಾದರೆ ಖಂಡಿತವಾಗಿಯೂ ನಮಗೆ ಪ್ರತಿಫಲ ಸಿಗಲಿದೆ ಎಂದರು وَجَآءَ ٱلسَّحَرَةُ فِرۡعَوۡنَ قَالُوٓاْ إِنَّ لَنَا لَأَجۡرًا إِن كُنَّا نَحۡنُ ٱلۡغَٰلِبِينَ ١١٣ಅವನು (ಫಿರ್ಔನ್) ಹೇಳಿದನು; ಹೌದು, ಜೊತೆಗೆ ನೀವು ನನ್ನ ಆಪ್ತರ ಸಾಲಿಗೆ ಸೇರುವಿರಿ قَالَ نَعَمۡ وَإِنَّكُمۡ لَمِنَ ٱلۡمُقَرَّبِينَ ١١٤ಅವರು (ಜಾದೂಗಾರರು), ಓ ಮೂಸಾ, ನೀನು ಎಸೆಯುವೆಯಾ ಅಥವಾ ನಾವು ಎಸೆಯಬೇಕೇ?ಎಂದು ಕೇಳಿದರು قَالُواْ يَٰمُوسَىٰٓ إِمَّآ أَن تُلۡقِيَ وَإِمَّآ أَن نَّكُونَ نَحۡنُ ٱلۡمُلۡقِينَ ١١٥ಅವರು (ಮೂಸಾ), ನೀವೇ ಎಸೆಯಿರಿ ಎಂದರು. ಹೀಗೆ ಅವರು (ಜಾದೂಗಾರರು ದಾಳಗಳನ್ನು) ಎಸೆದರು, ಜನರ ಕಣ್ಣುಗಳನ್ನು ಮಂಕುಗೊಳಿಸಿದರು ಹಾಗೂ ಅವರನ್ನು ಹೆದರಿಸಿಬಿಟ್ಟರು ಮತ್ತು ಭಾರೀ ಭವ್ಯ ಜಾದುವನ್ನು ಮುಂದಿಟ್ಟರು قَالَ أَلۡقُواْۖ فَلَمَّآ أَلۡقَوۡاْ سَحَرُوٓاْ أَعۡيُنَ ٱلنَّاسِ وَٱسۡتَرۡهَبُوهُمۡ وَجَآءُو بِسِحۡرٍ عَظِيمٍ ١١٦ಆಗ ನಾವು ಮೂಸಾರ ಕಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಎಸೆಯಿರಿ ನಿಮ್ಮ ಊರುಗೋಲನ್ನು, ಅವರ ಎಲ್ಲ ಕೃತಕ ರಚನೆಗಳನ್ನು ಅದು ನುಂಗಿಬಿಡುವುದು – ಎಂದು ۞ وَأَوۡحَيۡنَآ إِلَىٰ مُوسَىٰٓ أَنۡ أَلۡقِ عَصَاكَۖ فَإِذَا هِيَ تَلۡقَفُ مَا يَأۡفِكُونَ ١١٧ಕೊನೆಗೆ, ಸತ್ಯವು ಸಾಬೀತಾಗಿ ಬಿಟ್ಟಿತು ಮತ್ತು ಅವರು (ಜಾದೂಗಾರರು) ಮಾಡಿದ್ದೆಲ್ಲವೂ ಮಿಥ್ಯವಾಯಿತು فَوَقَعَ ٱلۡحَقُّ وَبَطَلَ مَا كَانُواْ يَعۡمَلُونَ ١١٨ಹೀಗೆ, ಅವರು (ಫಿರ್ಔನನ ಕಡೆಯವರು) ಅಲ್ಲೇ ಸೋತು ಹೋದರು ಮತ್ತು ಅಪಮಾನಿತರಾಗಿ ಮರಳಿದರು فَغُلِبُواْ هُنَالِكَ وَٱنقَلَبُواْ صَٰغِرِينَ ١١٩ಅತ್ತ , ಜಾದೂಗಾರರು ಸಾಷ್ಟಾಂಗವೆರಗಿದರು وَأُلۡقِيَ ٱلسَّحَرَةُ سَٰجِدِينَ ١٢٠ಅವರು ಹೇಳಿದರು; ನಾವು ಸರ್ವಲೋಕಗಳ ಒಡೆಯನನ್ನು ನಂಬಿದೆವು قَالُوٓاْ ءَامَنَّا بِرَبِّ ٱلۡعَٰلَمِينَ ١٢١ಮೂಸಾ ಮತ್ತು ಹಾರೂನರ ಒಡೆಯನನ್ನು رَبِّ مُوسَىٰ وَهَٰرُونَ ١٢٢ಫಿರ್ಔನ್ ಹೇಳಿದನು; ನಾನು ನಿಮಗೆ ಅನುಮತಿ ನೀಡುವ ಮುನ್ನವೇ ನೀವು ನಂಬಿ ಬಿಟ್ಟಿರಿ. ಖಂಡಿತವಾಗಿಯೂ ಇದು, ಈ ನಗರದಲ್ಲಿ, ಇಲ್ಲಿಯವರನ್ನು ಇಲ್ಲಿಂದ ಹೊರದಬ್ಬಲು ನೀವು ನಡೆಸಿರುವ ಒಂದು ಸಂಚಾಗಿದೆ. (ಇದರ ಪರಿಣಾಮವನ್ನು) ಬೇಗನೇ ನೀವು ಅರಿಯುವಿರಿ قَالَ فِرۡعَوۡنُ ءَامَنتُم بِهِۦ قَبۡلَ أَنۡ ءَاذَنَ لَكُمۡۖ إِنَّ هَٰذَا لَمَكۡرٌ مَّكَرۡتُمُوهُ فِي ٱلۡمَدِينَةِ لِتُخۡرِجُواْ مِنۡهَآ أَهۡلَهَاۖ فَسَوۡفَ تَعۡلَمُونَ ١٢٣ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ಭಾಗಗಳಲ್ಲಿ ಕಡಿದು ಬಿಡುವೆನು ಆ ಬಳಿಕ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು لَأُقَطِّعَنَّ أَيۡدِيَكُمۡ وَأَرۡجُلَكُم مِّنۡ خِلَٰفٍ ثُمَّ لَأُصَلِّبَنَّكُمۡ أَجۡمَعِينَ ١٢٤ಅವರು (ಜಾದೂಗಾರರು) ಹೇಳಿದರು; ನಾವಂತು ನಮ್ಮ ಒಡೆಯನ ಕಡೆಗೆ ಮರಳುವೆವು قَالُوٓاْ إِنَّآ إِلَىٰ رَبِّنَا مُنقَلِبُونَ ١٢٥ನಮ್ಮ ಒಡೆಯನ ದೃಷ್ಟಾಂತಗಳು ನಮ್ಮ ಮುಂದೆ ಬಂದಾಗ ಅವುಗಳನ್ನು ನಾವು ನಂಬಿದೆವು ಎಂಬುದಷ್ಟೇ ನಿನಗೆ ನಮ್ಮ ಮೇಲಿರುವ ಕೋಪಕ್ಕೆ ಕಾರಣ. (ಮತ್ತು ಅವರು ಹೀಗೆ ಪ್ರಾರ್ಥಿಸಿದರು) ನಮ್ಮೊಡೆಯಾ, ನಮಗೆ ಸ್ಥಿರತೆಯನ್ನು ದಯಪಾಲಿಸು ಮತ್ತು ನಾವು ಮುಸ್ಲಿಮರಾಗಿರುವ ಸ್ಥಿತಿಯಲ್ಲಿ ನಮಗೆ ಮರಣವನ್ನು ನೀಡು وَمَا تَنقِمُ مِنَّآ إِلَّآ أَنۡ ءَامَنَّا بِـَٔايَٰتِ رَبِّنَا لَمَّا جَآءَتۡنَاۚ رَبَّنَآ أَفۡرِغۡ عَلَيۡنَا صَبۡرًا وَتَوَفَّنَا مُسۡلِمِينَ ١٢٦ಫಿರ್ಔನನ ಜನಾಂಗದ ನಾಯಕರು ಹೇಳಿದರು; ನೀನೇನು, ಭೂಮಿಯಲ್ಲಿ ಗೊಂದಲ ಹರಡುತ್ತಿರಲಿಕ್ಕಾಗಿ ಹಾಗೂ ನಿನ್ನನ್ನು ಮತ್ತು ನಿನ್ನ ದೇವರುಗಳನ್ನು ತೊರೆದಿರಲಿಕ್ಕಾಗಿ ಮೂಸಾ ಮತ್ತು ಆತನ ಜನಾಂಗವನ್ನು ಹಾಗೆಯೇ ಬಿಟ್ಟು ಬಿಡುವೆಯಾ? ಅವನು ಹೇಳಿದನು; ನಾನು ಅವರ ಪುತ್ರರನ್ನು ಕೊಂದುಬಿಡುವೆನು ಮತ್ತು ಅವರ ಪುತ್ರಿಯರನ್ನು ಜೀವಂತವಿಡುವೆನು. ಈ ರೀತಿ ನಾವು ಅವರ ಮೇಲೆ ನಿಯಂತ್ರಣ ಸಾಧಿಸುವೆವು وَقَالَ ٱلۡمَلَأُ مِن قَوۡمِ فِرۡعَوۡنَ أَتَذَرُ مُوسَىٰ وَقَوۡمَهُۥ لِيُفۡسِدُواْ فِي ٱلۡأَرۡضِ وَيَذَرَكَ وَءَالِهَتَكَۚ قَالَ سَنُقَتِّلُ أَبۡنَآءَهُمۡ وَنَسۡتَحۡيِۦ نِسَآءَهُمۡ وَإِنَّا فَوۡقَهُمۡ قَٰهِرُونَ ١٢٧ಮೂಸಾ, ತಮ್ಮ ಜನಾಂಗದವರೊಡನೆ ಹೇಳಿದರು; ನೀವು ಅಲ್ಲಾಹನ ನೆರವನ್ನು ಬೇಡಿರಿ ಮತ್ತು ಸಹನಶೀಲರಾಗಿರಿ. ಭೂಮಿಯು ಅಲ್ಲಾಹನಿಗೇ ಸೇರಿದೆ. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು ಅದರ ಉತ್ತರಾಧಿಕಾರಿಗಳಾಗಿ ಮಾಡುತ್ತಾನೆ. ಅಂತಿಮ ವಿಜಯವು ಸತ್ಯನಿಷ್ಠರಿಗೇ ಸೇರಿದೆ قَالَ مُوسَىٰ لِقَوۡمِهِ ٱسۡتَعِينُواْ بِٱللَّهِ وَٱصۡبِرُوٓاْۖ إِنَّ ٱلۡأَرۡضَ لِلَّهِ يُورِثُهَا مَن يَشَآءُ مِنۡ عِبَادِهِۦۖ وَٱلۡعَٰقِبَةُ لِلۡمُتَّقِينَ ١٢٨ಅವರು (ಮೂಸಾರ ಜನಾಂಗದವರು) ಹೇಳಿದರು; ನೀವು ನಮ್ಮ ಬಳಿಗೆ ಬರುವ ಮುನ್ನವೂ ನೀವು ನಮ್ಮ ಬಳಿಗೆ ಬಂದ ಬಳಿಕವೂ ನಮ್ಮನ್ನು ಸತಾಯಿಸಲಾಯಿತು. ಅವರು (ಮೂಸಾ) ಹೇಳಿದರು; ಬಹುಬೇಗನೇ, ನಿಮ್ಮೊಡೆಯನು ನಿಮ್ಮ ಶತ್ರುವನ್ನು ನಾಶಪಡಿಸಿ ಭೂಮಿಯಲ್ಲಿ ನಿಮ್ಮನ್ನು ಉತ್ತರಾಧಿಕಾರಿಗಳಾಗಿ ಮಾಡುವನು ಮತ್ತು ನೀವು ಏನೆಲ್ಲ ಮಾಡುವಿರಿ ಎಂಬುದನ್ನು ನೋಡುವನು قَالُوٓاْ أُوذِينَا مِن قَبۡلِ أَن تَأۡتِيَنَا وَمِنۢ بَعۡدِ مَا جِئۡتَنَاۚ قَالَ عَسَىٰ رَبُّكُمۡ أَن يُهۡلِكَ عَدُوَّكُمۡ وَيَسۡتَخۡلِفَكُمۡ فِي ٱلۡأَرۡضِ فَيَنظُرَ كَيۡفَ تَعۡمَلُونَ ١٢٩ನಾವು ಫಿರ್ಔನನ ಜನಾಂಗವನ್ನು ಸತತ ಬರಗಾಲ ಹಾಗೂ ಬೆಳೆಗಳ ನಷ್ಟದಲ್ಲಿ ಸಿಲುಕಿಸಿದೆವು – ಅವರು ಪಾಠಕಲಿಯಬೇಕೆಂದು وَلَقَدۡ أَخَذۡنَآ ءَالَ فِرۡعَوۡنَ بِٱلسِّنِينَ وَنَقۡصٍ مِّنَ ٱلثَّمَرَٰتِ لَعَلَّهُمۡ يَذَّكَّرُونَ ١٣٠ಅವರ ಬಳಿಗೆ ಒಳಿತೇನಾದರೂ ಬಂದಾಗ ಅವರು, ನಾವು ಇದಕ್ಕೇ ಅರ್ಹರು, ಎನ್ನುತ್ತಿದ್ದರು. ಇನ್ನು ಅವರಿಗೆ ಅಹಿತವೇನಾದರೂ ಸಂಭವಿಸಿದಾಗ, ಅದಕ್ಕಾಗಿ ಅವರು ಮೂಸಾ ಮತ್ತು ಅವರ ಜೊತೆಗಾರರ ಭಾಗ್ಯವನ್ನು ಮೂದಲಿಸುತ್ತಿದ್ದರು. ತಿಳಿದಿರಲಿ! ಖಂಡಿತವಾಗಿಯೂ ಅವರ ಭಾಗ್ಯವೆಲ್ಲವೂ ಅಲ್ಲಾಹನ ಬಳಿಯಲ್ಲೇ ಇದೆ. ಆದರೆ ಹೆಚ್ಚಿನವರು ಅರಿತಿರುವುದಿಲ್ಲ فَإِذَا جَآءَتۡهُمُ ٱلۡحَسَنَةُ قَالُواْ لَنَا هَٰذِهِۦۖ وَإِن تُصِبۡهُمۡ سَيِّئَةٌ يَطَّيَّرُواْ بِمُوسَىٰ وَمَن مَّعَهُۥٓۗ أَلَآ إِنَّمَا طَٰٓئِرُهُمۡ عِندَ ٱللَّهِ وَلَٰكِنَّ أَكۡثَرَهُمۡ لَا يَعۡلَمُونَ ١٣١ಅವರು ಹೇಳುತ್ತಿದ್ದರು; ನೀನು ನಮ್ಮನ್ನು ಮಾಟಕ್ಕೆ ಒಳಪಡಿಸಲು ಅದೆಂತಹ ದೃಷ್ಟಾಂತವನ್ನು ತಂದರೂ ನಾವಂತು ನಿನ್ನನ್ನು ನಂಬುವವರಲ್ಲ وَقَالُواْ مَهۡمَا تَأۡتِنَا بِهِۦ مِنۡ ءَايَةٍ لِّتَسۡحَرَنَا بِهَا فَمَا نَحۡنُ لَكَ بِمُؤۡمِنِينَ ١٣٢ಕೊನೆಗೆ ನಾವು ಅವರ ಮೇಲೆ, ಚಂಡಮಾರುತವನ್ನು ಎರಗಿಸಿದೆವು. ಮಿಡಿತೆಗಳನ್ನು, ಕ್ರಿಮಿಕೀಟಗಳನ್ನು, ಕಪ್ಪೆಗಳನ್ನು ಮತ್ತು ರಕ್ತವನ್ನು ಇಳಿಸಿದೆವು. ಇವೆಲ್ಲಾ ಪ್ರತ್ಯ ಪ್ರತ್ಯೇಕ ಸೂಚನೆಗಳಾಗಿದ್ದವು. ಇಷ್ಟಾಗಿಯೂ ಅವರು ಅಹಂಕಾರ ತೋರಿದರು. ಅವರು ನಿಜಕ್ಕೂ ಒಂದು ಅಪರಾಧಿ ಜನಾಂಗವಾಗಿದ್ದರು فَأَرۡسَلۡنَا عَلَيۡهِمُ ٱلطُّوفَانَ وَٱلۡجَرَادَ وَٱلۡقُمَّلَ وَٱلضَّفَادِعَ وَٱلدَّمَ ءَايَٰتٍ مُّفَصَّلَٰتٍ فَٱسۡتَكۡبَرُواْ وَكَانُواْ قَوۡمًا مُّجۡرِمِينَ ١٣٣ಅವರ ಮೇಲೆ ವಿಪತ್ತು ಎರಗಿದಾಗಲೆಲ್ಲಾ ಅವರು, ಓ ಮೂಸಾ, ನಿನ್ನ ಬಳಿ ಇರುವ ಅವನ (ಅಲ್ಲಾಹನ) ವಾಗ್ದಾನದ ಆಧಾರದಲ್ಲಿ ನೀನು ನಮ್ಮ ಪರವಾಗಿ ನಿನ್ನ ಒಡೆಯನನ್ನು ಪ್ರಾರ್ಥಿಸು. ಒಂದು ವೇಳೆ ನೀನು ನಮ್ಮ ಮೇಲಿಂದ ಈ ವಿಪತ್ತನ್ನು ತೊಲಗಿಸಿದರೆ ನಾವು ಖಂಡಿತ ನಿನ್ನನ್ನು ನಂಬುವೆವು ಮತ್ತು ಇಸ್ರಾಈಲರ ಸಂತತಿಯನ್ನು ನಿನ್ನ ಜೊತೆ ಕಳುಹಿಸಿಕೊಡುವೆವು, ಎನ್ನುತ್ತಿದ್ದರು وَلَمَّا وَقَعَ عَلَيۡهِمُ ٱلرِّجۡزُ قَالُواْ يَٰمُوسَى ٱدۡعُ لَنَا رَبَّكَ بِمَا عَهِدَ عِندَكَۖ لَئِن كَشَفۡتَ عَنَّا ٱلرِّجۡزَ لَنُؤۡمِنَنَّ لَكَ وَلَنُرۡسِلَنَّ مَعَكَ بَنِيٓ إِسۡرَٰٓءِيلَ ١٣٤ಮತ್ತೆ ನಾವು, ಅವರು ಅನುಭವಿಸಬೇಕಾಗಿದ್ದ ಒಂದು ಅವಧಿಯವರೆಗಿನ ವಿಪತ್ತನ್ನು ಅವರಿಂದ ದೂರಗೊಳಿಸಿದಾಗ ಅವರು ತಮ್ಮ ವಚನವನ್ನು ಮುರಿದುಬಿಡುತ್ತಿದ್ದರು فَلَمَّا كَشَفۡنَا عَنۡهُمُ ٱلرِّجۡزَ إِلَىٰٓ أَجَلٍ هُم بَٰلِغُوهُ إِذَا هُمۡ يَنكُثُونَ ١٣٥ಕೊನೆಗೆ ನಾವು ಅವರ ವಿರುದ್ಧ ಪ್ರತೀಕಾರ ತೀರಿಸಿದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟೆವು-ಏಕೆಂದರೆ ಅವರು ನಮ್ಮ ವಚನಗಳನ್ನು ಸುಳ್ಳೆಂದು ಧಿಕ್ಕರಿಸಿದ್ದರು ಮತ್ತು ಆ ಕುರಿತು ನಿರ್ಲಕ್ಷ್ಯ ತೋರಿದ್ದರು فَٱنتَقَمۡنَا مِنۡهُمۡ فَأَغۡرَقۡنَٰهُمۡ فِي ٱلۡيَمِّ بِأَنَّهُمۡ كَذَّبُواْ بِـَٔايَٰتِنَا وَكَانُواْ عَنۡهَا غَٰفِلِينَ ١٣٦ಮತ್ತು ನಾವು ಮರ್ದಿತರಾಗಿದ್ದವರನ್ನು, ನಾವೇ ಸಮೃದ್ಧಗೊಳಿಸಿದ್ದ, ಭೂಮಿಯ ಪೂರ್ವಭಾಗಗಳ ಹಾಗೂ ಪಶ್ಚಿಮ ಭಾಗಗಳ ಉತ್ತರಾಧಿಕಾರಿಗಳಾಗಿ ಮಾಡಿದೆವು. ಹೀಗೆ, ಇಸ್ರಾಈಲರ ಸಂತತಿಗಳು ತೋರಿದ ಸಹನೆಯ ಕಾರಣ, ನಿಮ್ಮ ಒಡೆಯನು ಅವರಿಗೆ ಮಾಡಿದ್ದ ಒಳಿತಿನ ವಾಗ್ದಾನವು ಪೂರ್ತಿಗೊಂಡಿತು ಮತ್ತು ಫಿರ್ಔನ್ ಹಾಗೂ ಅವನ ಜನಾಂಗವು ಕಟ್ಟಿದ್ದ ಹಾಗೂ ಎತ್ತರಕ್ಕೆ ಬೆಳೆಸಿದ್ದ ಎಲ್ಲವನ್ನೂ ನಾವು ನೆಲೆಸಮಗೊಳಿಸಿಬಿಟ್ಟೆವು وَأَوۡرَثۡنَا ٱلۡقَوۡمَ ٱلَّذِينَ كَانُواْ يُسۡتَضۡعَفُونَ مَشَٰرِقَ ٱلۡأَرۡضِ وَمَغَٰرِبَهَا ٱلَّتِي بَٰرَكۡنَا فِيهَاۖ وَتَمَّتۡ كَلِمَتُ رَبِّكَ ٱلۡحُسۡنَىٰ عَلَىٰ بَنِيٓ إِسۡرَٰٓءِيلَ بِمَا صَبَرُواْۖ وَدَمَّرۡنَا مَا كَانَ يَصۡنَعُ فِرۡعَوۡنُ وَقَوۡمُهُۥ وَمَا كَانُواْ يَعۡرِشُونَ ١٣٧ಅತ್ತ , ಇಸ್ರಾಈಲರ ಸಂತತಿಗಳನ್ನು ನಾವು ಕಡಲಾಚೆಯ ದಡಕ್ಕೆ ತಲುಪಿಸಿದೆವು. ಮುಂದೆ ಅವರು, ತಮ್ಮಲ್ಲಿನ ವಿಗ್ರಹಗಳ ಆರಾಧನೆಯಲ್ಲಿ ತಲ್ಲೀನರಾಗಿದ್ದ ಒಂದು ಜನಾಂಗವನ್ನು ಎದುರಿಸಿದರು. ಆಗ ಅವರು (ಇಸ್ರಾಈಲರ ಸಂತತಿಗಳು), ಓ ಮೂಸಾ, ಅವರ ಬಳಿ ಇರುವಂತಹದೇ ದೇವರುಗಳನ್ನು ನಮಗೆ ತಯಾರಿಸಿಕೊಡು ಎಂದರು. ಅವರು (ಮೂಸಾ) ಹೇಳಿದರು; ನೀವು ಅಜ್ಞಾನಿಗಳಾಗಿ ವರ್ತಿಸುತ್ತಿರುವಿರಿ وَجَٰوَزۡنَا بِبَنِيٓ إِسۡرَٰٓءِيلَ ٱلۡبَحۡرَ فَأَتَوۡاْ عَلَىٰ قَوۡمٍ يَعۡكُفُونَ عَلَىٰٓ أَصۡنَامٍ لَّهُمۡۚ قَالُواْ يَٰمُوسَى ٱجۡعَل لَّنَآ إِلَٰهًا كَمَا لَهُمۡ ءَالِهَةٌۚ قَالَ إِنَّكُمۡ قَوۡمٌ تَجۡهَلُونَ ١٣٨ಅವರು ಯಾವುದರಲ್ಲಿ ನಿರತರಾಗಿರುವರೋ ಅದೆಲ್ಲವೂ ಖಂಡಿತ ನಾಶವಾಗಲಿದೆ ಮತ್ತು ಅವರು ಮಾಡುತ್ತಿರುವುದೆಲ್ಲವೂ ಮಿಥ್ಯವಾಗಿದೆ إِنَّ هَٰٓؤُلَآءِ مُتَبَّرٌ مَّا هُمۡ فِيهِ وَبَٰطِلٌ مَّا كَانُواْ يَعۡمَلُونَ ١٣٩ಅವರು (ಮೂಸಾ) ಹೇಳಿದರು; ಅವನು (ಅಲ್ಲಾಹನು) ಸರ್ವಲೋಕಗಳ ಮೇಲೆ ನಿಮಗೆ ಶ್ರೇಷ್ಠತೆಯನ್ನು ದಯಪಾಲಿಸಿರುವಾಗ, ನಾನೇನು ನಿಮಗಾಗಿ ಅಲ್ಲಾಹನ ಹೊರತು ಬೇರೊಬ್ಬ ದೇವರನ್ನು ಹುಡುಕಬೇಕೇ قَالَ أَغَيۡرَ ٱللَّهِ أَبۡغِيكُمۡ إِلَٰهًا وَهُوَ فَضَّلَكُمۡ عَلَى ٱلۡعَٰلَمِينَ ١٤٠ಮತ್ತು (ಸ್ಮರಿಸಿರಿ;) ನಾವು ನಿಮ್ಮನ್ನು ಫಿರ್ಔನನ ಜನಾಂಗದವರಿಂದ ರಕ್ಷಿಸಿದ ವೇಳೆ, ಅವರು ನಿಮ್ಮನ್ನು ಭಾರೀ ಕಠಿಣ ಹಿಂಸೆಗೆ ಗುರಿಪಡಿಸಿದ್ದರು. ಅವರು ನಿಮ್ಮ ಪುತ್ರರನ್ನು ಕೊಂದುಬಿಡುತ್ತಿದ್ದರು. ಮತ್ತು ನಿಮ್ಮ ಮಹಿಳೆಯರನ್ನು ಜೀವಂತವಿಡುತ್ತಿದ್ದರು. ಆ ಸ್ಥಿತಿಯಲ್ಲಿ ನಿಮ್ಮ ಪಾಲಿಗೆ ನಿಮ್ಮ ಒಡೆಯನ ಕಡೆಯಿಂದ ಭಾರೀ ದೊಡ್ಡ ಪರೀಕ್ಷೆ ಇತ್ತು وَإِذۡ أَنجَيۡنَٰكُم مِّنۡ ءَالِ فِرۡعَوۡنَ يَسُومُونَكُمۡ سُوٓءَ ٱلۡعَذَابِ يُقَتِّلُونَ أَبۡنَآءَكُمۡ وَيَسۡتَحۡيُونَ نِسَآءَكُمۡۚ وَفِي ذَٰلِكُم بَلَآءٌ مِّن رَّبِّكُمۡ عَظِيمٌ ١٤١ಮುಂದೆ, ನಾವು ಮೂಸಾರಿಗೆ ಮೂವತ್ತು ರಾತ್ರಿಗಳ ವಾಗ್ದಾನ ಮಾಡಿದೆವು ಮತ್ತು ಹತ್ತು ರಾತ್ರಿಗಳನ್ನು ಸೇರಿಸಿ ಅದನ್ನು ಪೂರ್ತಿಗೊಳಿಸಿದೆವು. ಹೀಗೆ ಅವರ ಒಡೆಯನು ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣಗೊಂಡಿತು. (ಈ ಅವಧಿಗಾಗಿ ತೆರಳುವಾಗ) ಮೂಸಾ ತಮ್ಮ ಸಹೋದರ ಹಾರೂನರೊಡನೆ ಹೇಳಿದರು; ನೀನು ನನ್ನ ಜನಾಂಗದಲ್ಲಿ ನನ್ನ ಪ್ರತಿನಿಧಿಯಾಗಿರು ಮತ್ತು ಸುಧಾರಣೆಯನ್ನು ಮಾಡು. ಅಶಾಂತಿ ಹಬ್ಬುವವರ ದಾರಿಯನ್ನು ಅನುಸರಿಸಬೇಡ ۞ وَوَٰعَدۡنَا مُوسَىٰ ثَلَٰثِينَ لَيۡلَةً وَأَتۡمَمۡنَٰهَا بِعَشۡرٍ فَتَمَّ مِيقَٰتُ رَبِّهِۦٓ أَرۡبَعِينَ لَيۡلَةًۚ وَقَالَ مُوسَىٰ لِأَخِيهِ هَٰرُونَ ٱخۡلُفۡنِي فِي قَوۡمِي وَأَصۡلِحۡ وَلَا تَتَّبِعۡ سَبِيلَ ٱلۡمُفۡسِدِينَ ١٤٢ಮೂಸಾ, ನಾವು ನಿಗದಿಪಡಿಸಿದ ಅವಧಿಗಾಗಿ ಬಂದಾಗ, ತಮ್ಮ ಒಡೆಯನೊಡನೆ ಮಾತನಾಡಿದರು. ನನ್ನೊಡೆಯಾ, ನಾನು ನಿನ್ನನ್ನು ನೋಡಬಲ್ಲಂತಹ ದೃಷ್ಟಿಯನ್ನು ನೀನು ನನಗೆ ನೀಡು ಎಂದು ಅವರು ಹೇಳಿದರು. ಅವನು (ಅಲ್ಲಾಹನು) ಹೇಳಿದನು; ನನ್ನನ್ನು ನೋಡಲು ನಿನಗೆ ಸಾಧ್ಯವಿಲ್ಲ. ಆದರೆ ನೀನು ಆ ಪರ್ವತದೆಡೆಗೆ ನೋಡು, ಅದು ತನ್ನ ಸ್ಥಾನದಲ್ಲೇ ನಿಂತಿದ್ದರೆ ನೀನು ನನ್ನನ್ನು ನೋಡಬಹುದು. ತರುವಾಯ ಅವರ ಒಡೆಯನು ಪರ್ವತದೆಡೆಗೆ ದಿವ್ಯ ಬೆಳಕನ್ನು ಬೀರಿ ಅದನ್ನು ಚೂರು ಚೂರಾಗಿಸಿ ಬಿಟ್ಟನು ಮತ್ತು ಮೂಸಾ ಪ್ರಜ್ಞೆ ಕಳೆದುಕೊಂಡು ಬಿದ್ದುಬಿಟ್ಟರು. ಆ ಬಳಿಕ ಅವರಿಗೆ ಪ್ರಜ್ಞೆ ಬಂದಾಗ ಅವರು ಹೇಳಿದರು; ನೀನು ಪರಮ ಪಾವನನು, ನಾನು ಪಶ್ಚಾತ್ತಾಪ ಪಟ್ಟು ನಿನ್ನೆಡೆಗೆ ಮರಳುತ್ತೇನೆ ಮತ್ತು ನಂಬುವವರ ಪೈಕಿ ನಾನು ಪ್ರಥಮನಾಗುತ್ತೇನೆ وَلَمَّا جَآءَ مُوسَىٰ لِمِيقَٰتِنَا وَكَلَّمَهُۥ رَبُّهُۥ قَالَ رَبِّ أَرِنِيٓ أَنظُرۡ إِلَيۡكَۚ قَالَ لَن تَرَىٰنِي وَلَٰكِنِ ٱنظُرۡ إِلَى ٱلۡجَبَلِ فَإِنِ ٱسۡتَقَرَّ مَكَانَهُۥ فَسَوۡفَ تَرَىٰنِيۚ فَلَمَّا تَجَلَّىٰ رَبُّهُۥ لِلۡجَبَلِ جَعَلَهُۥ دَكًّا وَخَرَّ مُوسَىٰ صَعِقًاۚ فَلَمَّآ أَفَاقَ قَالَ سُبۡحَٰنَكَ تُبۡتُ إِلَيۡكَ وَأَنَا۠ أَوَّلُ ٱلۡمُؤۡمِنِينَ ١٤٣ಅವನು (ಅಲ್ಲಾಹನು) ಹೇಳಿದನು; ಓ ಮೂಸಾ, ನಾನು ನನ್ನ ಸಂದೇಶಗಳಿಗಾಗಿ ಮತ್ತು ನನ್ನ ಸಂಭಾಷಣೆಗಾಗಿ ಎಲ್ಲ ಮಾನವರ ಪೈಕಿ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವೀಗ ನಾನು ನೀಡುವುದನ್ನು ಸ್ವೀಕರಿಸಿರಿ ಮತ್ತು ಕೃತಜ್ಞರಾಗಿರಿ قَالَ يَٰمُوسَىٰٓ إِنِّي ٱصۡطَفَيۡتُكَ عَلَى ٱلنَّاسِ بِرِسَٰلَٰتِي وَبِكَلَٰمِي فَخُذۡ مَآ ءَاتَيۡتُكَ وَكُن مِّنَ ٱلشَّٰكِرِينَ ١٤٤ಆ ಬಳಿಕ ನಾವು ಅವರಿಗಾಗಿ (ಮೂಸಾರಿಗಾಗಿ) ಎಲ್ಲ ವಿಷಯಗಳ ಕುರಿತಾದ ಉಪದೇಶಗಳನ್ನು ಮತ್ತು ಎಲ್ಲ ವಿಷಯಗಳ ಕುರಿತಾದ ಸ್ಪಷ್ಟ ಮಾರ್ಗದರ್ಶನಗಳನ್ನು ಫಲಕಗಳಲ್ಲಿ ಬರೆದೆವು (ಮತ್ತು ಹೇಳಿದೆವು); ನೀವು ಇದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಇದರ ಉತ್ತಮ ಭಾಗವನ್ನು (ಸದ್ ವ್ಯಾಖ್ಯಾನವನ್ನು) ಸ್ವೀಕರಿಸಬೇಕೆಂದು ನಿಮ್ಮ ಜನಾಂಗದವರಿಗೆ ಆದೇಶಿಸಿರಿ. ಅವಿಧೇಯರ ನೆಲೆಯನ್ನು (ಅವರ ಗತಿ ಏನಾಗುತ್ತದೆಂಬುದನ್ನು) ನಾನು ನಿಮಗೆಲ್ಲಾ ತೋರಿಸುವೆನು وَكَتَبۡنَا لَهُۥ فِي ٱلۡأَلۡوَاحِ مِن كُلِّ شَيۡءٍ مَّوۡعِظَةً وَتَفۡصِيلًا لِّكُلِّ شَيۡءٍ فَخُذۡهَا بِقُوَّةٍ وَأۡمُرۡ قَوۡمَكَ يَأۡخُذُواْ بِأَحۡسَنِهَاۚ سَأُوْرِيكُمۡ دَارَ ٱلۡفَٰسِقِينَ ١٤٥ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಮೆರೆಯುವವರನ್ನು ನಾನು ನನ್ನ ದೃಷ್ಟಾಂತಗಳಿಂದ ದೂರ ಸರಿಸಿ ಬಿಡುವೆನು. ಅವರಂತು, ಎಲ್ಲ ದೃಷ್ಟಾಂತಗಳನ್ನು ಕಂಡರೂ ಅದನ್ನು ನಂಬುವವರಲ್ಲ. ಸತ್ಯದ ಮಾರ್ಗವನ್ನು ಕಣ್ಣಾರೆ ಕಂಡರೂ ಆ ಮಾರ್ಗವನ್ನು ಅವರು ಅನುಸರಿಸುವವರಲ್ಲ. ಅವರು ದುಷ್ಟ ಮಾರ್ಗವನ್ನು ಕಂಡರೆ ಅದನ್ನು ಮಾತ್ರ ಮಾರ್ಗವಾಗಿ ಅನುಸರಿಸುವರು. ಇದೇಕೆಂದರೆ, ಅವರು ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸಿದ್ದಾರೆ ಮತ್ತು ಆ ಕುರಿತು ಅರಿವಿಲ್ಲದವರಾಗಿದ್ದಾರೆ سَأَصۡرِفُ عَنۡ ءَايَٰتِيَ ٱلَّذِينَ يَتَكَبَّرُونَ فِي ٱلۡأَرۡضِ بِغَيۡرِ ٱلۡحَقِّ وَإِن يَرَوۡاْ كُلَّ ءَايَةٍ لَّا يُؤۡمِنُواْ بِهَا وَإِن يَرَوۡاْ سَبِيلَ ٱلرُّشۡدِ لَا يَتَّخِذُوهُ سَبِيلًا وَإِن يَرَوۡاْ سَبِيلَ ٱلۡغَيِّ يَتَّخِذُوهُ سَبِيلًاۚ ذَٰلِكَ بِأَنَّهُمۡ كَذَّبُواْ بِـَٔايَٰتِنَا وَكَانُواْ عَنۡهَا غَٰفِلِينَ ١٤٦ಇನ್ನು, ನಮ್ಮ ವಚನಗಳನ್ನು ಹಾಗೂ ಪರಲೋಕದ ಭೇಟಿಯನ್ನು ಧಿಕ್ಕರಿಸಿದವರ ಕರ್ಮಗಳೆಲ್ಲಾ ವ್ಯರ್ಥವಾದವು. ಅವರಿಗೆ, ಅವರೇನು ಮಾಡಿದ್ದರೋ ಅದರ ಹೊರತು ಬೇರೆ ಪ್ರತಿಫಲ ಸಿಕ್ಕೀತೇ وَٱلَّذِينَ كَذَّبُواْ بِـَٔايَٰتِنَا وَلِقَآءِ ٱلۡأٓخِرَةِ حَبِطَتۡ أَعۡمَٰلُهُمۡۚ هَلۡ يُجۡزَوۡنَ إِلَّا مَا كَانُواْ يَعۡمَلُونَ ١٤٧ಮೂಸಾರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ತಮ್ಮ ಆಭರಣಗಳಿಂದ ಒಂದು ಕರುವಿನ ವಿಗ್ರಹವನ್ನು ರಚಿಸಿಕೊಂಡರು. ಅದರಲ್ಲಿ ಗೋವಿನ ಧ್ವನಿ ಇತ್ತು. ಅದು ತಮ್ಮೊಡನೆ ಮಾತನಾಡುವುದೂ ಇಲ್ಲ ಮತ್ತು ತಮಗೆ ದಾರಿ ತೋರುವುದೂ ಇಲ್ಲ ಎಂಬುದನ್ನು ಅವರು ಕಾಣಲಿಲ್ಲವೇ? ಆದರೂ ಅವರು ಅದನ್ನು ನಂಬಿಕೊಂಡರು. ಅವರು ಅಕ್ರಮಿಗಳಾಗಿದ್ದರು وَٱتَّخَذَ قَوۡمُ مُوسَىٰ مِنۢ بَعۡدِهِۦ مِنۡ حُلِيِّهِمۡ عِجۡلًا جَسَدًا لَّهُۥ خُوَارٌۚ أَلَمۡ يَرَوۡاْ أَنَّهُۥ لَا يُكَلِّمُهُمۡ وَلَا يَهۡدِيهِمۡ سَبِيلًاۘ ٱتَّخَذُوهُ وَكَانُواْ ظَٰلِمِينَ ١٤٨ಮುಂದೆ, ಅವರಿಗೆ ತಮ್ಮ ತಪ್ಪಿನ ಅರಿವಾದಾಗ ಮತ್ತು ತಾವು ದಾರಿ ತಪ್ಪಿರುವುದು ಅವರಿಗೆ ಮನವರಿಕೆಯಾದಾಗ, ಅವರು ಹೇಳಿದರು; ನಮ್ಮ ಒಡೆಯನು ನಮ್ಮ ಮೇಲೆ ಕರುಣೆ ತೋರದಿದ್ದರೆ ಮತ್ತು ಅವನು ನಮ್ಮನ್ನು ಕ್ಷಮಿಸದಿದ್ದರೆ ಖಂಡಿತವಾಗಿಯೂ ನಾವು ನಷ್ಟಕ್ಕೊಳಗಾಗುವೆವು وَلَمَّا سُقِطَ فِيٓ أَيۡدِيهِمۡ وَرَأَوۡاْ أَنَّهُمۡ قَدۡ ضَلُّواْ قَالُواْ لَئِن لَّمۡ يَرۡحَمۡنَا رَبُّنَا وَيَغۡفِرۡ لَنَا لَنَكُونَنَّ مِنَ ٱلۡخَٰسِرِينَ ١٤٩ಆ ಬಳಿಕ, ಮೂಸಾ ತಮ್ಮ ಜನಾಂಗದೆಡೆಗೆ ಮರಳಿಬಂದಾಗ ಕೋಪಗೊಂಡರು ಹಾಗೂ ದುಃಖಿತರಾದರು. ಅವರು ಹೇಳಿದರು; ನನ್ನ ಅನುಪಸ್ಥಿತಿಯಲ್ಲಿ ನೀವು ನನ್ನ ಪ್ರಾತಿನಿಧ್ಯದ ಹೊಣೆಯನ್ನು ಬಹಳ ಕೆಟ್ಟದಾಗಿ ನಿರ್ವಹಿಸಿದಿರಿ. ನಿಮ್ಮ ಒಡೆಯನ ಆದೇಶದ ಕುರಿತು ನೀವು ಆತುರ ಪಟ್ಟಿರಾ? – ಮತ್ತು ಮೂಸಾ (ಅಲ್ಲಾಹನು ಕೊಟ್ಟ) ಫಲಕಗಳನ್ನು ಚೆಲ್ಲಿಬಿಟ್ಟರು ಹಾಗೂ ತಮ್ಮ ಸಹೋದರ (ಹಾರೂನ್)ರ ತಲೆಯನ್ನು ಹಿಡಿದು ತಮ್ಮಡೆಗೆ ಎಳೆದರು. ಅವರು (ಹಾರೂನ್) ಹೇಳಿದರು; ನನ್ನ ತಾಯಿಯ ಪುತ್ರನೇ! ಈ ಜನಾಂಗದವರು ನನ್ನನ್ನು ತೀರಾ ದುರ್ಬಲಗೊಳಿಸಿ ಬಿಟ್ಟರು. ಅವರಂತು ನನ್ನನ್ನು ಕೊಲ್ಲುವವರಿದ್ದರು. ನೀನೀಗ ನನ್ನ ಬಗ್ಗೆ ಶತ್ರುಗಳು ನಗುವಂತೆ ಮಾಡಬೇಡ ಮತ್ತು ನನ್ನನ್ನು ಅಕ್ರಮಿಗಳ ಸಾಲಿಗೆ ಸೇರಿಸಬೇಡ وَلَمَّا رَجَعَ مُوسَىٰٓ إِلَىٰ قَوۡمِهِۦ غَضۡبَٰنَ أَسِفًا قَالَ بِئۡسَمَا خَلَفۡتُمُونِي مِنۢ بَعۡدِيٓۖ أَعَجِلۡتُمۡ أَمۡرَ رَبِّكُمۡۖ وَأَلۡقَى ٱلۡأَلۡوَاحَ وَأَخَذَ بِرَأۡسِ أَخِيهِ يَجُرُّهُۥٓ إِلَيۡهِۚ قَالَ ٱبۡنَ أُمَّ إِنَّ ٱلۡقَوۡمَ ٱسۡتَضۡعَفُونِي وَكَادُواْ يَقۡتُلُونَنِي فَلَا تُشۡمِتۡ بِيَ ٱلۡأَعۡدَآءَ وَلَا تَجۡعَلۡنِي مَعَ ٱلۡقَوۡمِ ٱلظَّٰلِمِينَ ١٥٠ಅವರು (ಮೂಸಾ) ಹೇಳಿದರು; ನನ್ನೊಡೆಯಾ, ನನ್ನನ್ನು ಹಾಗೂ ನನ್ನ ಸಹೋದರನನ್ನು ಕ್ಷಮಿಸಿಬಿಡು ಮತ್ತು ನಮ್ಮನ್ನು ನಿನ್ನ ಅನುಗ್ರಹದಲ್ಲಿ ಸೇರಿಸು. ನೀನಂತು ಎಲ್ಲ ಕರುಣಾಳುಗಳಿಗಿಂತ ಮಹಾಕರುಣಾಳುವಾಗಿರುವೆ قَالَ رَبِّ ٱغۡفِرۡ لِي وَلِأَخِي وَأَدۡخِلۡنَا فِي رَحۡمَتِكَۖ وَأَنتَ أَرۡحَمُ ٱلرَّٰحِمِينَ ١٥١ಖಂಡಿತವಾಗಿಯೂ, ಕರುವನ್ನು (ದೇವರಾಗಿ) ನೆಚ್ಚಿಕೊಂಡವರಿಗೆ, ಬಹುಬೇಗನೇ ಅವರ ಒಡೆಯನ ಕೋಪವು ತಟ್ಟಲಿದೆ ಮತ್ತು ಇಹಲೋಕದಲ್ಲಿ ಅವರಿಗೆ ಅಪಮಾನವು ಎದುರಾಗಲಿದೆ. ಸುಳ್ಳುಗಳನ್ನು ಸೃಷ್ಟಿಸುವವರಿಗೆ. ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ إِنَّ ٱلَّذِينَ ٱتَّخَذُواْ ٱلۡعِجۡلَ سَيَنَالُهُمۡ غَضَبٌ مِّن رَّبِّهِمۡ وَذِلَّةٌ فِي ٱلۡحَيَوٰةِ ٱلدُّنۡيَاۚ وَكَذَٰلِكَ نَجۡزِي ٱلۡمُفۡتَرِينَ ١٥٢ಪಾಪಕೃತ್ಯಗಳನ್ನು ಮಾಡಿದ ಬಳಿಕ ಪಶ್ಚಾತ್ತಾಪ ಪಟ್ಟವರು ಮತ್ತು ವಿಶ್ವಾಸವಿಟ್ಟವರು – ಖಂಡಿತವಾಗಿಯೂ ಇಷ್ಟಾದ ಬಳಿಕ ನಿಮ್ಮೊಡೆಯನು (ಅವರ ಪಾಲಿಗೆ) ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ وَٱلَّذِينَ عَمِلُواْ ٱلسَّيِّـَٔاتِ ثُمَّ تَابُواْ مِنۢ بَعۡدِهَا وَءَامَنُوٓاْ إِنَّ رَبَّكَ مِنۢ بَعۡدِهَا لَغَفُورٌ رَّحِيمٌ ١٥٣ಮೂಸಾರ ಕೋಪ ತಣಿದಾಗ, ಅವರು ಫಲಕಗಳನ್ನು ಎತ್ತಿಕೊಂಡರು. ಅವುಗಳ ಬರಹಗಳಲ್ಲಿ ಮಾರ್ಗದರ್ಶನ ಹಾಗೂ ಅನುಗ್ರಹವಿತ್ತು – ತಮ್ಮ ಒಡೆಯನ ಭಕ್ತಿ ಉಳ್ಳವರಿಗಾಗಿ وَلَمَّا سَكَتَ عَن مُّوسَى ٱلۡغَضَبُ أَخَذَ ٱلۡأَلۡوَاحَۖ وَفِي نُسۡخَتِهَا هُدًى وَرَحۡمَةٌ لِّلَّذِينَ هُمۡ لِرَبِّهِمۡ يَرۡهَبُونَ ١٥٤ಮುಂದೆ ಮೂಸಾ, ನಮ್ಮ ಜೊತೆಗಿನ ಕರಾರಿನ ಅವಧಿಗಾಗಿ ತಮ್ಮ ಜನಾಂಗದ ಎಪ್ಪತ್ತು ಮಂದಿ ಪುರುಷರನ್ನು ಆರಿಸಿಕೊಂಡರು. ತರುವಾಯ ಅವರಿಗೆ ಭೂಕಂಪವು ಎದುರಾದಾಗ, ಅವರು (ಮೂಸಾ) ಹೇಳಿದರು; ‘‘ನನ್ನೊಡೆಯಾ ನೀನಿಚ್ಛಿಸಿದ್ದರೆ, ಇವರನ್ನು ಮತ್ತು ನನ್ನನ್ನು ಈ ಹಿಂದೆಯೇ ನಾಶ ಪಡಿಸುತ್ತಿದ್ದೆ. ಇದೀಗ ನಮ್ಮಲ್ಲಿನ ಮೂರ್ಖರ ಕೃತ್ಯಕ್ಕಾಗಿ ನೀನು ನಮ್ಮನ್ನು ನಾಶ ಪಡಿಸುವೆಯಾ? ಇದು ನಿನ್ನ ಪರೀಕ್ಷೆಯಲ್ಲದೆ ಬೇರೇನಲ್ಲ. ಈ ಮೂಲಕ ನೀನು, ನೀನಿಚ್ಛಿಸಿದವರನ್ನು ದಾರಿಗೆಡಿಸುವೆ ಮತ್ತು ನೀನಿಚ್ಛಿಸಿದವರನ್ನು ಸರಿದಾರಿಗೆ ತರುವೆ. ನಮ್ಮ ಪೋಷಕನು ನೀನೇ. ಆದ್ದರಿಂದ ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕ್ಷಮಾಶೀಲನು.’’ وَٱخۡتَارَ مُوسَىٰ قَوۡمَهُۥ سَبۡعِينَ رَجُلًا لِّمِيقَٰتِنَاۖ فَلَمَّآ أَخَذَتۡهُمُ ٱلرَّجۡفَةُ قَالَ رَبِّ لَوۡ شِئۡتَ أَهۡلَكۡتَهُم مِّن قَبۡلُ وَإِيَّٰيَۖ أَتُهۡلِكُنَا بِمَا فَعَلَ ٱلسُّفَهَآءُ مِنَّآۖ إِنۡ هِيَ إِلَّا فِتۡنَتُكَ تُضِلُّ بِهَا مَن تَشَآءُ وَتَهۡدِي مَن تَشَآءُۖ أَنتَ وَلِيُّنَا فَٱغۡفِرۡ لَنَا وَٱرۡحَمۡنَاۖ وَأَنتَ خَيۡرُ ٱلۡغَٰفِرِينَ ١٥٥‘‘ನೀನು ನಮ್ಮ ಪಾಲಿಗೆ ಈ ಲೋಕದಲ್ಲೂ ಪರಲೋಕದಲ್ಲೂ ಒಳಿತನ್ನೇ ವಿಧಿಸು. ನಾವಂತು ನಿನ್ನೆಡೆಗೆ ಮರಳಿರುವೆವು.’’ – ಅವನು (ಅಲ್ಲಾಹನು) ಹೇಳಿದನು; ನಾನು ನನ್ನ ಶಿಕ್ಷೆಯನ್ನು ನಾನಿಚ್ಛಿಸಿದವರಿಗೆ ನೀಡುತ್ತೇನೆ. ಇನ್ನು ನನ್ನ ಅನುಗ್ರಹವು ಎಲ್ಲವನ್ನೂ ಆವರಿಸಿಕೊಂಡಿದೆ. ನಾನು ಅದನ್ನು, ಧರ್ಮನಿಷ್ಠರ, ಝಕಾತ್ ಪಾವತಿಸುವವರ ಮತ್ತು ನಮ್ಮ ವಚನಗಳನ್ನು ನಂಬುವವರ ಪಾಲಿಗೆ ಬರೆದು ಬಿಡುವೆನು ۞ وَٱكۡتُبۡ لَنَا فِي هَٰذِهِ ٱلدُّنۡيَا حَسَنَةً وَفِي ٱلۡأٓخِرَةِ إِنَّا هُدۡنَآ إِلَيۡكَۚ قَالَ عَذَابِيٓ أُصِيبُ بِهِۦ مَنۡ أَشَآءُۖ وَرَحۡمَتِي وَسِعَتۡ كُلَّ شَيۡءٍۚ فَسَأَكۡتُبُهَا لِلَّذِينَ يَتَّقُونَ وَيُؤۡتُونَ ٱلزَّكَوٰةَ وَٱلَّذِينَ هُم بِـَٔايَٰتِنَا يُؤۡمِنُونَ ١٥٦ಅವರು ನಿರಕ್ಷರಿ ಪ್ರವಾದಿಯನ್ನು ಅನುಸರಿಸುತ್ತಾರೆ. ಅವರ (ಆ ಪ್ರವಾದಿಯ) ಕುರಿತು ತಮ್ಮ ಬಳಿ ಇರುವ ತೌರಾತ್ ಮತ್ತು ಇಂಜೀಲ್ಗಳಲ್ಲಿ (ಈ ರೀತಿ) ಬರೆದಿರುವುದನ್ನು ಅವರು ಕಾಣುತ್ತಾರೆ; ‘‘ಅವರು (ಆ ಪ್ರವಾದಿ) ಅವರಿಗೆ, ಒಳಿತನ್ನು ಆದೇಶಿಸುವರು, ಅವರನ್ನು ಕೆಡುಕಿನಿಂದ ತಡೆಯುವರು, ನಿರ್ಮಲವಾದವುಗಳನ್ನು ಅವರ ಪಾಲಿಗೆ ಸಮ್ಮತಗೊಳಿಸುವರು, ಮಲಿನ ವಸ್ತುಗಳನ್ನು ಅವರ ಪಾಲಿಗೆ ನಿಷೇಧಿಸುವರು, ಅವರಿಂದ ಅವರ ಭಾರಗಳನ್ನು ಇಳಿಸುವರು ಮತ್ತು ಅವರ ಮೇಲಿದ್ದ ನೊಗಗಳನ್ನು ಕಳಚುವರು – ಅವರಲ್ಲಿ ನಂಬಿಕೆ ಇಟ್ಟು ಅವರನ್ನು ಸಮರ್ಥಿಸುವವರು, ಅವರಿಗೆ ನೆರವಾಗುವವರು ಮತ್ತು ಅವರ ಜೊತೆಗೆ ಇಳಿಸಲಾಗಿರುವ ಪ್ರಕಾಶವನ್ನು ಅನುಸರಿಸುವವರೇ ವಿಜಯಿಗಳು.’’ ٱلَّذِينَ يَتَّبِعُونَ ٱلرَّسُولَ ٱلنَّبِيَّ ٱلۡأُمِّيَّ ٱلَّذِي يَجِدُونَهُۥ مَكۡتُوبًا عِندَهُمۡ فِي ٱلتَّوۡرَىٰةِ وَٱلۡإِنجِيلِ يَأۡمُرُهُم بِٱلۡمَعۡرُوفِ وَيَنۡهَىٰهُمۡ عَنِ ٱلۡمُنكَرِ وَيُحِلُّ لَهُمُ ٱلطَّيِّبَٰتِ وَيُحَرِّمُ عَلَيۡهِمُ ٱلۡخَبَٰٓئِثَ وَيَضَعُ عَنۡهُمۡ إِصۡرَهُمۡ وَٱلۡأَغۡلَٰلَ ٱلَّتِي كَانَتۡ عَلَيۡهِمۡۚ فَٱلَّذِينَ ءَامَنُواْ بِهِۦ وَعَزَّرُوهُ وَنَصَرُوهُ وَٱتَّبَعُواْ ٱلنُّورَ ٱلَّذِيٓ أُنزِلَ مَعَهُۥٓ أُوْلَٰٓئِكَ هُمُ ٱلۡمُفۡلِحُونَ ١٥٧(ದೂತರೇ) ಹೇಳಿರಿ; ಮಾನವರೇ, ನಾನು ನಿಮ್ಮೆಲ್ಲರ ಪಾಲಿಗೆ ಅಲ್ಲಾಹನ ದೂತನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೆ (ಅಲ್ಲಾಹನಿಗೆ) ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ನೀವೀಗ ಅಲ್ಲಾಹನಲ್ಲೂ ಆತನ ದೂತನಲ್ಲೂ ನಂಬಿಕೆ ಇಡಿರಿ – ಅವರು ನಿರಕ್ಷರಿ ಪ್ರವಾದಿಯಾಗಿದ್ದು, ಅಲ್ಲಾಹನಲ್ಲಿ ಹಾಗೂ ಅವನ ವಚನಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಮಾರ್ಗದರ್ಶನ ಪಡೆಯಲಿಕ್ಕಾಗಿ ನೀವು ಅವರನ್ನು ಅನುಸರಿಸಿ قُلۡ يَٰٓأَيُّهَا ٱلنَّاسُ إِنِّي رَسُولُ ٱللَّهِ إِلَيۡكُمۡ جَمِيعًا ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۖ لَآ إِلَٰهَ إِلَّا هُوَ يُحۡيِۦ وَيُمِيتُۖ فَـَٔامِنُواْ بِٱللَّهِ وَرَسُولِهِ ٱلنَّبِيِّ ٱلۡأُمِّيِّ ٱلَّذِي يُؤۡمِنُ بِٱللَّهِ وَكَلِمَٰتِهِۦ وَٱتَّبِعُوهُ لَعَلَّكُمۡ تَهۡتَدُونَ ١٥٨ಮೂಸಾರ ಜನಾಂಗದಲ್ಲಿ ಸತ್ಯದೊಂದಿಗೆ ಮಾರ್ಗದರ್ಶನ ಮಾಡುವ ಮತ್ತು ಆ ವಿಷಯದಲ್ಲಿ ನ್ಯಾಯ ಪಾಲಿಸುವ ಒಂದು ಸಮುದಾಯವಿದೆ وَمِن قَوۡمِ مُوسَىٰٓ أُمَّةٌ يَهۡدُونَ بِٱلۡحَقِّ وَبِهِۦ يَعۡدِلُونَ ١٥٩ನಾವು ಅವರನ್ನು ಹನ್ನೆರಡು ಕುಲ ಗೋತ್ರಗಳಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನಾಂಗವು ನೀರನ್ನು ಕೇಳಿದಾಗ ‘‘ಆ ಕಲ್ಲಿನ ಮೇಲೆ ನಿಮ್ಮ ಊರುಗೋಲಿನಿಂದ ಹೊಡೆಯಿರಿ’’ ಎಂದು ನಾವು ಅವರೆಡೆಗೆ ದಿವ್ಯವಾಣಿಯನ್ನು ಕಳಿಸಿದೆವು; ಆಗ ಅದರಿಂದ ಹನ್ನೆರಡು ಚಿಲುಮೆಗಳು ಹರಿಯತೊಡಗಿದವು. ಪ್ರತಿಯೊಬ್ಬರೂ ತಮ್ಮ ಜಲಮೂಲವನ್ನು ಗುರುತಿಸಿಕೊಂಡರು. ನಾವು ಅವರ ಮೇಲೆ ಮೋಡದ ನೆರಳನ್ನು ಆವರಿಸಿದೆವು. ಅವರಿಗೆ ಮನ್ನ್ ಮತ್ತು ಸಲ್ವಾ (ಎಂಬ ಆಹಾರ ಸಾಮಗ್ರಿ)ಗಳನ್ನು ಇಳಿಸಿಕೊಟ್ಟೆವು.‘‘ನಿಮಗೆ ಒದಗಿಸಲಾಗಿರುವ ಶುದ್ಧ ವಸ್ತುಗಳಿಂದ ತಿನ್ನಿರಿ’’ (ಎಂದು ಅವರಿಗೆ ಆದೇಶಿಸಲಾಗಿತ್ತು. ಇದನ್ನು ಮೀರುವ ಮೂಲಕ) ಅವರು ನಮ್ಮ ಮೇಲೇನೂ ಅಕ್ರಮ ವೆಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡರು وَقَطَّعۡنَٰهُمُ ٱثۡنَتَيۡ عَشۡرَةَ أَسۡبَاطًا أُمَمًاۚ وَأَوۡحَيۡنَآ إِلَىٰ مُوسَىٰٓ إِذِ ٱسۡتَسۡقَىٰهُ قَوۡمُهُۥٓ أَنِ ٱضۡرِب بِّعَصَاكَ ٱلۡحَجَرَۖ فَٱنۢبَجَسَتۡ مِنۡهُ ٱثۡنَتَا عَشۡرَةَ عَيۡنًاۖ قَدۡ عَلِمَ كُلُّ أُنَاسٍ مَّشۡرَبَهُمۡۚ وَظَلَّلۡنَا عَلَيۡهِمُ ٱلۡغَمَٰمَ وَأَنزَلۡنَا عَلَيۡهِمُ ٱلۡمَنَّ وَٱلسَّلۡوَىٰۖ كُلُواْ مِن طَيِّبَٰتِ مَا رَزَقۡنَٰكُمۡۚ وَمَا ظَلَمُونَا وَلَٰكِن كَانُوٓاْ أَنفُسَهُمۡ يَظۡلِمُونَ ١٦٠ಅವರೊಡನೆ ಹೀಗೆನ್ನಲಾಗಿತ್ತು; ನೀವು ಈ ಪಟ್ಟಣದಲ್ಲಿ ವಾಸಿಸಿರಿ, ಇಲ್ಲಿರುವುದರಲ್ಲಿ ನೀವಿಚ್ಛಿಸುವಂತೆ ತಿನ್ನಿರಿ, ’ಹಿತ್ತಃ’ ಎನ್ನುತ್ತಲಿರಿ (ಕ್ಷಮೆಯಾಚಿಸುತ್ತಲಿರಿ) ಮತ್ತು ಸಾಷ್ಟಾಂಗವೆರಗುತ್ತಾ ಪಟ್ಟಣದ ದ್ವಾರವನ್ನು ಪ್ರವೇಶಿಸಿರಿ. ನಾವು ನಿಮ್ಮ ಪ್ರಮಾದಗಳನ್ನು ಕ್ಷಮಿಸಿ ಬಿಡುವೆವು. ಸತ್ಕರ್ಮಿಗಳಿಗೆ ನಾವು ಬಹುಬೇಗನೇ ಇನ್ನಷ್ಟನ್ನು ನೀಡುವೆವು وَإِذۡ قِيلَ لَهُمُ ٱسۡكُنُواْ هَٰذِهِ ٱلۡقَرۡيَةَ وَكُلُواْ مِنۡهَا حَيۡثُ شِئۡتُمۡ وَقُولُواْ حِطَّةٌ وَٱدۡخُلُواْ ٱلۡبَابَ سُجَّدًا نَّغۡفِرۡ لَكُمۡ خَطِيٓـَٰٔتِكُمۡۚ سَنَزِيدُ ٱلۡمُحۡسِنِينَ ١٦١ಆದರೆ ಅವರಲ್ಲಿನ ಅಕ್ರಮಿಗಳು ತಮಗೆ ನೀಡಲಾಗಿದ್ದ ಶಬ್ದವನ್ನು ಬೇರೆಯದಾಗಿ ಬದಲಿಸಿ ಬಿಟ್ಟರು. ಕೊನೆಗೆ ಅವರು ಎಸಗುತ್ತಿದ್ದ ಅಕ್ರಮದ ಫಲವಾಗಿ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಎರಗಿಸಿಬಿಟ್ಟೆವು فَبَدَّلَ ٱلَّذِينَ ظَلَمُواْ مِنۡهُمۡ قَوۡلًا غَيۡرَ ٱلَّذِي قِيلَ لَهُمۡ فَأَرۡسَلۡنَا عَلَيۡهِمۡ رِجۡزًا مِّنَ ٱلسَّمَآءِ بِمَا كَانُواْ يَظۡلِمُونَ ١٦٢ನೀವು ಅವರೊಡನೆ, ಕಡಲ ತೀರದಲ್ಲಿದ್ದ ಆ ಪಟ್ಟಣದ ಕುರಿತು ಕೇಳಿರಿ. ಅವರು ಸಬ್ತ್ನ (ಶನಿವಾರದ) ನಿಯಮವನ್ನು ಮೀರಿ ಬಿಟ್ಟರು. ಅವರ ಸಬ್ತ್ನ ದಿನವೇ ಮೀನುಗಳು ಅವರ ಮುಂದೆ ಬಂದು ಬಿಡುತ್ತಿದ್ದವು ಮತ್ತು ಸಬ್ತ್ ಅಲ್ಲದ ದಿನಗಳಲ್ಲಿ ಅವು ಅವರ ಮುಂದೆ ಬರುತ್ತಿರಲಿಲ್ಲ. ಈ ರೀತಿ ನಾವು ಅವರನ್ನು ಪರೀಕ್ಷಿಸುತ್ತಿದ್ದೆವು. ಏಕೆಂದರೆ ಅವರು ಅವಿಧೇಯರಾಗಿದ್ದರು وَسۡـَٔلۡهُمۡ عَنِ ٱلۡقَرۡيَةِ ٱلَّتِي كَانَتۡ حَاضِرَةَ ٱلۡبَحۡرِ إِذۡ يَعۡدُونَ فِي ٱلسَّبۡتِ إِذۡ تَأۡتِيهِمۡ حِيتَانُهُمۡ يَوۡمَ سَبۡتِهِمۡ شُرَّعًا وَيَوۡمَ لَا يَسۡبِتُونَ لَا تَأۡتِيهِمۡۚ كَذَٰلِكَ نَبۡلُوهُم بِمَا كَانُواْ يَفۡسُقُونَ ١٦٣ಅವರಲ್ಲಿನ ಒಂದು ಗುಂಪು ‘‘ಅಲ್ಲಾಹನು ನಾಶಮಾಡಲಿರುವ ಅಥವಾ ತೀವ್ರ ಯಾತನೆಗೆ ಗುರಿಪಡಿಸಲಿರುವ ಒಂದು ಜನಾಂಗಕ್ಕೆ ನೀವೇಕೆ ಉಪದೇಶ ನೀಡುತ್ತೀರಿ?’’ಎಂದಿತು. ಅವರು (ಬೋಧಕರು) ಹೇಳಿದರು; ನಿಮ್ಮ ಒಡೆಯನ ಮುಂದೆ ನೆಪವಾಗಲು ಮತ್ತು ಅವರು ದೇವಭಯ ಉಳ್ಳವರಾಗಲೂ ಬಹುದೆಂದು وَإِذۡ قَالَتۡ أُمَّةٌ مِّنۡهُمۡ لِمَ تَعِظُونَ قَوۡمًا ٱللَّهُ مُهۡلِكُهُمۡ أَوۡ مُعَذِّبُهُمۡ عَذَابًا شَدِيدًاۖ قَالُواْ مَعۡذِرَةً إِلَىٰ رَبِّكُمۡ وَلَعَلَّهُمۡ يَتَّقُونَ ١٦٤ಕೊನೆಗೆ ಅವರು, ತಮಗೆ ನೀಡಲಾದ ಉಪದೇಶವನ್ನು ಮರೆತುಬಿಟ್ಟಾಗ, ಅವರನ್ನು ದುಷ್ಟ ಕೆಲಸಗಳಿಂದ ತಡೆಯುತ್ತಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅಕ್ರಮಿಗಳನ್ನು ಅವರ ಅವಿಧೇಯತೆಯ ಕಾರಣ ಹಿಡಿದು, ಭಾರೀ ಕೆಟ್ಟ ಶಿಕ್ಷೆಗೆ ಗುರಿಪಡಿಸಿದೆವು فَلَمَّا نَسُواْ مَا ذُكِّرُواْ بِهِۦٓ أَنجَيۡنَا ٱلَّذِينَ يَنۡهَوۡنَ عَنِ ٱلسُّوٓءِ وَأَخَذۡنَا ٱلَّذِينَ ظَلَمُواْ بِعَذَابِۭ بَـِٔيسِۭ بِمَا كَانُواْ يَفۡسُقُونَ ١٦٥ಅವರಿಗೆ ಹೇರಲಾಗಿದ್ದ ನಿರ್ಬಂಧವನ್ನು ಅವರು ಉಲ್ಲಂಘಿಸಿದಾಗ ನಾವು ಅವರಿಗೆ ‘‘ಅಪಮಾನಿತ ಕೋತಿಗಳಾಗಿ ಬಿಡಿರಿ’’ ಎಂದೆವು فَلَمَّا عَتَوۡاْ عَن مَّا نُهُواْ عَنۡهُ قُلۡنَا لَهُمۡ كُونُواْ قِرَدَةً خَٰسِـِٔينَ ١٦٦ಪುನರುತ್ಥಾನ ದಿನದವರೆಗೂ, ಘೋರ ಹಿಂಸೆಯ ಮೂಲಕ ಅವರನ್ನು ದಂಡಿಸುತ್ತಿರುವವರನ್ನು ಅವರ ಮೇಲೆ ಹೇರುತ್ತಲೇ ಇರುವೆನೆಂದು ನಿಮ್ಮ ಒಡೆಯನು ಘೋಷಿಸಿರುವನು. ನಿಮ್ಮ ಒಡೆಯನು ಕ್ಷಿಪ್ರವಾಗಿ ದಂಡಿಸಬಲ್ಲವನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಅತ್ಯಂತ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ وَإِذۡ تَأَذَّنَ رَبُّكَ لَيَبۡعَثَنَّ عَلَيۡهِمۡ إِلَىٰ يَوۡمِ ٱلۡقِيَٰمَةِ مَن يَسُومُهُمۡ سُوٓءَ ٱلۡعَذَابِۗ إِنَّ رَبَّكَ لَسَرِيعُ ٱلۡعِقَابِ وَإِنَّهُۥ لَغَفُورٌ رَّحِيمٌ ١٦٧ತರುವಾಯ ನಾವು ಅವರನ್ನು ಗುಂಪು ಗುಂಪುಗಳಾಗಿ ಭೂಮಿಯಲ್ಲಿ ಹರಡಿ ಬಿಟ್ಟೆವು. ಅವರಲ್ಲಿ ಸಜ್ಜನರೂ ಇದ್ದಾರೆ ಮತ್ತು ಅವರಲ್ಲಿ ಇತರರೂ ಇದ್ದಾರೆ. ಅವರು (ಸನ್ಮಾರ್ಗದೆಡೆಗೆ) ಮರಳಿ ಬರಲೆಂದು ನಾವು ಅವರನ್ನು ಒಳಿತುಗಳ ಮೂಲಕವೂ ಕೆಡುಕುಗಳ ಮೂಲಕವೂ ಪರೀಕ್ಷೆಗೆ ಒಳಪಡಿಸಿದೆವು وَقَطَّعۡنَٰهُمۡ فِي ٱلۡأَرۡضِ أُمَمًاۖ مِّنۡهُمُ ٱلصَّٰلِحُونَ وَمِنۡهُمۡ دُونَ ذَٰلِكَۖ وَبَلَوۡنَٰهُم بِٱلۡحَسَنَٰتِ وَٱلسَّيِّـَٔاتِ لَعَلَّهُمۡ يَرۡجِعُونَ ١٦٨ಅವರ ಬಳಿಕ ಒಂದು ದುಷ್ಟ ಪೀಳಿಗೆಯು ಗ್ರಂಥದ ಉತ್ತರಾಧಿಕಾರಿಯಾಯಿತು. ಅವರು ಈ ಲೋಕದ ಸುಖವನ್ನೇ ಆರಿಸಿಕೊಂಡರು ಮತ್ತು ನಮ್ಮನ್ನು ಕ್ಷಮಿಸಲಾಗುವುದು ಎನ್ನುತ್ತಿದ್ದರು. ನಿಜವಾಗಿ ಅದೇ ಸಂಪತ್ತು ಮತ್ತೆ ಅವರ ಬಳಿಗೆ ಬಂದರೆ ಅವರು ಅದನ್ನೇ ಆರಿಸುವರು. ಅಲ್ಲಾಹನ ಕುರಿತು ಸತ್ಯವಲ್ಲದ್ದನ್ನು ಹೇಳಬಾರದೆಂದು ಮತ್ತು ಅದರಲ್ಲಿ (ಗ್ರಂಥದಲ್ಲಿ) ಇರುವುದನ್ನು ಅಧ್ಯಯನ ಮಾಡಬೇಕೆಂದು ಗ್ರಂಥದ ಆಧಾರದಲ್ಲಿ ಅವರಿಂದ ಕರಾರನ್ನು ಪಡೆಯಲಾಗಿರಲಿಲ್ಲವೇ? ಧರ್ಮನಿಷ್ಠರ ಪಾಲಿಗೆ ಪರಲೋಕದ ನೆಲೆಯೇ ಶ್ರೇಷ್ಠವಾದುದು. ನೀವೇನು, ಅರ್ಥಯಿಸಿಕೊಳ್ಳುವುದಿಲ್ಲವೇ فَخَلَفَ مِنۢ بَعۡدِهِمۡ خَلۡفٌ وَرِثُواْ ٱلۡكِتَٰبَ يَأۡخُذُونَ عَرَضَ هَٰذَا ٱلۡأَدۡنَىٰ وَيَقُولُونَ سَيُغۡفَرُ لَنَا وَإِن يَأۡتِهِمۡ عَرَضٌ مِّثۡلُهُۥ يَأۡخُذُوهُۚ أَلَمۡ يُؤۡخَذۡ عَلَيۡهِم مِّيثَٰقُ ٱلۡكِتَٰبِ أَن لَّا يَقُولُواْ عَلَى ٱللَّهِ إِلَّا ٱلۡحَقَّ وَدَرَسُواْ مَا فِيهِۗ وَٱلدَّارُ ٱلۡأٓخِرَةُ خَيۡرٌ لِّلَّذِينَ يَتَّقُونَۚ أَفَلَا تَعۡقِلُونَ ١٦٩ಗ್ರಂಥವನ್ನು ಭದ್ರವಾಗಿ ಹಿಡಿದುಕೊಂಡ ಹಾಗೂ ನಮಾಝ್ಅನ್ನು ಪಾಲಿಸುವಂತಹ ಸತ್ಕರ್ಮಿಗಳ ಪ್ರತಿಫಲವನ್ನು ನಾವು ಖಂಡಿತ ವ್ಯರ್ಥಗೊಳಿಸುವುದಿಲ್ಲ وَٱلَّذِينَ يُمَسِّكُونَ بِٱلۡكِتَٰبِ وَأَقَامُواْ ٱلصَّلَوٰةَ إِنَّا لَا نُضِيعُ أَجۡرَ ٱلۡمُصۡلِحِينَ ١٧٠ನಾವು ಪರ್ವತವನ್ನು, ನೆರಳುಕೊಡುವ ಚಪ್ಪರದಂತೆ ಅವರ ಮೇಲೆ ಎತ್ತಿದಾಗ, ಅದು ತಮ್ಮ ಮೇಲೆ ಬಿದ್ದು ಬಿಡುವುದೆಂದು ಅವರು ಭಾವಿಸಿದರು. ‘‘ನಿಮಗೆ ನಾವು ನೀಡಿರುವುದನ್ನು ಭದ್ರವಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲೇನಿದೆಯೋ ಅದನ್ನು ನೆನಪಿಟ್ಟುಕೊಳ್ಳಿರಿ. ನೀವು ಸುರಕ್ಷಿತರಾಗಬಹುದು’’ (ಎಂದು ಅವರಿಗೆ ಆದೇಶಿಸಲಾಗಿತ್ತು) ۞ وَإِذۡ نَتَقۡنَا ٱلۡجَبَلَ فَوۡقَهُمۡ كَأَنَّهُۥ ظُلَّةٌ وَظَنُّوٓاْ أَنَّهُۥ وَاقِعُۢ بِهِمۡ خُذُواْ مَآ ءَاتَيۡنَٰكُم بِقُوَّةٍ وَٱذۡكُرُواْ مَا فِيهِ لَعَلَّكُمۡ تَتَّقُونَ ١٧١ನಿಮ್ಮೊಡೆಯನು ಆದಮ್ರ ಮಕ್ಕಳ ಮೂಲಕ ಜನಿಸಿದ ಅವರ ಸಂತತಿಗಳನ್ನು, ಸ್ವತಃ ತಮ್ಮ ವಿರುದ್ಧವೇ ಸಾಕ್ಷಿಗಳಾಗಿಸಿ ‘‘ನಾನು ನಿಮ್ಮ ಒಡೆಯನಲ್ಲವೇ?’’ ಎಂದು ಕೇಳಿದಾಗ ಅವರು, ‘‘ಯಾಕಲ್ಲ? ಅದಕ್ಕೆ ನಾವೇ ಸಾಕ್ಷಿಗಳು’’ ಎಂದಿದ್ದರು. ನಾಳೆ ಪುನರುತ್ಥಾನ ದಿನ ನೀವು ಈ ಕುರಿತು ನಮಗೇನೂ ತಿಳಿದಿರಲಿಲ್ಲ ಎನ್ನಬಾರದೆಂದು ಹೀಗೆ ಮಾಡಲಾಯಿತು وَإِذۡ أَخَذَ رَبُّكَ مِنۢ بَنِيٓ ءَادَمَ مِن ظُهُورِهِمۡ ذُرِّيَّتَهُمۡ وَأَشۡهَدَهُمۡ عَلَىٰٓ أَنفُسِهِمۡ أَلَسۡتُ بِرَبِّكُمۡۖ قَالُواْ بَلَىٰ شَهِدۡنَآۚ أَن تَقُولُواْ يَوۡمَ ٱلۡقِيَٰمَةِ إِنَّا كُنَّا عَنۡ هَٰذَا غَٰفِلِينَ ١٧٢ಅಥವಾ ನೀವು, ‘‘ಬಹುದೇವಾರಾಧನೆ ಮಾಡಿದವರು ಗತಕಾಲದ ನಮ್ಮ ಪೂರ್ವಜರು. ನಾವು ಅವರ ಸಂತತಿಗಳು ಮಾತ್ರ. ಆ ದಾರಿಗೆಟ್ಟವರ ಕೃತ್ಯಕ್ಕಾಗಿ ನೀನೇನು ನಮ್ಮನ್ನು ನಾಶಪಡಿಸುವೆಯಾ?’’ ಎನ್ನಬಾರದೆಂದು (ಹೀಗೆ ಮಾಡಲಾಯಿತು) أَوۡ تَقُولُوٓاْ إِنَّمَآ أَشۡرَكَ ءَابَآؤُنَا مِن قَبۡلُ وَكُنَّا ذُرِّيَّةً مِّنۢ بَعۡدِهِمۡۖ أَفَتُهۡلِكُنَا بِمَا فَعَلَ ٱلۡمُبۡطِلُونَ ١٧٣ಈ ರೀತಿ, ಅವರು (ಸತ್ಯದೆಡೆಗೆ) ಮರಳಬೇಕೆಂದು ನಾವು ನಮ್ಮ ವಚನಗಳನ್ನು ವಿವರಿಸುತ್ತೇವೆ وَكَذَٰلِكَ نُفَصِّلُ ٱلۡأٓيَٰتِ وَلَعَلَّهُمۡ يَرۡجِعُونَ ١٧٤ಆ ವ್ಯಕ್ತಿಯ ವಿಷಯವನ್ನು ನೀವು ಅವರಿಗೆ ಓದಿ ಹೇಳಿರಿ; ನಾವು ಆತನಿಗೆ ನಮ್ಮ ಪುರಾವೆಗಳನ್ನು ನೀಡಿದ್ದೆವು. ಅವನು ಅವುಗಳಿಂದ ಜಾರಿಕೊಂಡನು. ಶೈತಾನನು ಅವನ ಬೆನ್ನು ಹತ್ತಿದನು. ಕೊನೆಗೆ ಅವನು ಸಂಪೂರ್ಣ ದಾರಿಗೆಟ್ಟವನಾದನು وَٱتۡلُ عَلَيۡهِمۡ نَبَأَ ٱلَّذِيٓ ءَاتَيۡنَٰهُ ءَايَٰتِنَا فَٱنسَلَخَ مِنۡهَا فَأَتۡبَعَهُ ٱلشَّيۡطَٰنُ فَكَانَ مِنَ ٱلۡغَاوِينَ ١٧٥ನಾವು ಬಯಸಿದ್ದರೆ ಅವುಗಳ (ಪುರಾವೆ) ಮೂಲಕ ಆತನನ್ನು ಉನ್ನತಿಗೇರಿಸಬಹುದಿತ್ತು. ಆದರೆ ಅವನು ಮಾತ್ರ ನೆಲದೆಡೆಗೇ ಬಾಗಿದ್ದನು ಮತ್ತು ತನ್ನ ಸ್ವೇಚ್ಛೆಯನ್ನೇ ಅನುಸರಿಸಿದನು. ಅವನ ಉದಾಹರಣೆ ನಾಯಿಯಂತಿದೆ. ನೀವು ಅದನ್ನು ಥಳಿಸಿದರೂ ಅದು ನಾಲಗೆಯನ್ನು ಹೊರಚಾಚಿ ಕಂಪಿಸುತ್ತಿರುತ್ತದೆ. ನೀವು ಅದನ್ನು ಹಾಗೆಯೇ ಬಿಟ್ಟರೂ ಅದು ನಾಲಗೆ ಹೊರಚಾಚಿ ಕಂಪಿಸುತ್ತಿರುತ್ತದೆ. ನಮ್ಮ ವಚನಗಳನ್ನು ಧಿಕ್ಕರಿಸುವವರ ಉದಾಹರಣೆಯೂ ಹೀಗೆಯೇ ಇದೆ. ನೀವು ಅವರಿಗೆ (ಇಂತಹ) ವೃತ್ತಾಂತಗಳನ್ನು ವಿವರಿಸಿರಿ. ಅವರು ಚಿಂತನೆ ನಡೆಸಲಿ وَلَوۡ شِئۡنَا لَرَفَعۡنَٰهُ بِهَا وَلَٰكِنَّهُۥٓ أَخۡلَدَ إِلَى ٱلۡأَرۡضِ وَٱتَّبَعَ هَوَىٰهُۚ فَمَثَلُهُۥ كَمَثَلِ ٱلۡكَلۡبِ إِن تَحۡمِلۡ عَلَيۡهِ يَلۡهَثۡ أَوۡ تَتۡرُكۡهُ يَلۡهَثۚ ذَّٰلِكَ مَثَلُ ٱلۡقَوۡمِ ٱلَّذِينَ كَذَّبُواْ بِـَٔايَٰتِنَاۚ فَٱقۡصُصِ ٱلۡقَصَصَ لَعَلَّهُمۡ يَتَفَكَّرُونَ ١٧٦ನಮ್ಮ ವಚನಗಳನ್ನು ತಿರಸ್ಕರಿಸಿದ ಹಾಗೂ ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿಕೊಂಡ ಜನರ ಅವಸ್ಥೆ ತುಂಬಾ ಕೆಟ್ಟದಾಗಿದೆ سَآءَ مَثَلًا ٱلۡقَوۡمُ ٱلَّذِينَ كَذَّبُواْ بِـَٔايَٰتِنَا وَأَنفُسَهُمۡ كَانُواْ يَظۡلِمُونَ ١٧٧ಅಲ್ಲಾಹನು ಯಾರಿಗೆ ದಾರಿ ತೋರಿದನೋ ಅವನೇ ಸರಿದಾರಿಯಲ್ಲಿರುತ್ತಾನೆ. ಅವನು ಯಾರನ್ನು ದಾರಿಗೆಡಿಸಿದನೋ ಅವರೇ ನಷ್ಟ ಅನುಭವಿಸುವವರಾಗಿದ್ದಾರೆ مَن يَهۡدِ ٱللَّهُ فَهُوَ ٱلۡمُهۡتَدِيۖ وَمَن يُضۡلِلۡ فَأُوْلَٰٓئِكَ هُمُ ٱلۡخَٰسِرُونَ ١٧٨ನಾವು ಜಿನ್ನ್ ಮತ್ತು ಮಾನವರ ಪೈಕಿ ಅನೇಕರನ್ನು ನರಕಕ್ಕಾಗಿಯೇ ಸೃಷ್ಟಿಸಿದ್ದೇವೆ. ಅವರಿಗೆ ಮನಸ್ಸುಗಳಿವೆ, ಆದರೆ ಆ ಮೂಲಕ ಅವರು ಚಿಂತನೆ ನಡೆಸುವುದಿಲ್ಲ. ಅವರಿಗೆ ಕಣ್ಣುಗಳಿವೆ, ಆದರೆ ಆ ಮೂಲಕ ಅವರು ನೋಡುವುದಿಲ್ಲ. ಹಾಗೆಯೇ, ಅವರಿಗೆ ಕಿವಿಗಳಿವೆ, ಆದರೆ ಆ ಮೂಲಕ ಅವರು ಕೇಳುವುದಿಲ್ಲ. ಅವರು ಪ್ರಾಣಿಗಳಂತಿದ್ದಾರೆ, ಮಾತ್ರವಲ್ಲ, ಇನ್ನೂ ಹೆಚ್ಚು ದಾರಿಗೆಟ್ಟಿದ್ದಾರೆ. ಅವರಿಗೆ ಅರಿವಿಲ್ಲ وَلَقَدۡ ذَرَأۡنَا لِجَهَنَّمَ كَثِيرًا مِّنَ ٱلۡجِنِّ وَٱلۡإِنسِۖ لَهُمۡ قُلُوبٌ لَّا يَفۡقَهُونَ بِهَا وَلَهُمۡ أَعۡيُنٌ لَّا يُبۡصِرُونَ بِهَا وَلَهُمۡ ءَاذَانٌ لَّا يَسۡمَعُونَ بِهَآۚ أُوْلَٰٓئِكَ كَٱلۡأَنۡعَٰمِ بَلۡ هُمۡ أَضَلُّۚ أُوْلَٰٓئِكَ هُمُ ٱلۡغَٰفِلُونَ ١٧٩ಅತ್ಯುತ್ತಮ ಹೆಸರುಗಳು ಅಲ್ಲಾಹನಿಗೆ ಸೇರಿವೆ. ನೀವು ಅವನನ್ನು ಅವುಗಳಿಂದಲೇ ಕರೆಯಿರಿ. ಅವನ ಹೆಸರುಗಳಿಗೆ ಅಗೌರವ ತೋರುವವರನ್ನು ಬಿಟ್ಟುಬಿಡಿರಿ. ಅವರು ಮಾಡುತ್ತಿದ್ದುದರ ಫಲವನ್ನು ಅವರು ಉಣ್ಣಲಿದ್ದಾರೆ وَلِلَّهِ ٱلۡأَسۡمَآءُ ٱلۡحُسۡنَىٰ فَٱدۡعُوهُ بِهَاۖ وَذَرُواْ ٱلَّذِينَ يُلۡحِدُونَ فِيٓ أَسۡمَٰٓئِهِۦۚ سَيُجۡزَوۡنَ مَا كَانُواْ يَعۡمَلُونَ ١٨٠ನಾವು ಸೃಷ್ಟಿಸಿರುವ ಒಂದು ಸಮುದಾಯವಿದೆ. ಅವರು (ಜನರಿಗೆ) ಸತ್ಯದೊಂದಿಗೆ ಮಾರ್ಗದರ್ಶನ ಮಾಡುತ್ತಾರೆ ಮತ್ತು ಅದರ ಆಧಾರದಲ್ಲೇ ನ್ಯಾಯಪಾಲನೆ ಮಾಡುತ್ತಾರೆ وَمِمَّنۡ خَلَقۡنَآ أُمَّةٌ يَهۡدُونَ بِٱلۡحَقِّ وَبِهِۦ يَعۡدِلُونَ ١٨١ಇನ್ನು, ನಮ್ಮ ವಚನಗಳನ್ನು ಸುಳ್ಳೆಂದವರನ್ನು (ಶಿಕ್ಷಿಸಲು) ನಾವು, ಅವರಿಗೆ ಅರಿವೇ ಆಗದಂತೆ ಹಂತಹಂತವಾಗಿ ಅವರನ್ನು ಹಿಡಿದುಕೊಳ್ಳುತ್ತೇವೆ وَٱلَّذِينَ كَذَّبُواْ بِـَٔايَٰتِنَا سَنَسۡتَدۡرِجُهُم مِّنۡ حَيۡثُ لَا يَعۡلَمُونَ ١٨٢ನಾನು ಅವರಿಗೆ ಧಾರಾಳ ಕಾಲಾವಕಾಶ ನೀಡುತ್ತೇನೆ. ನನ್ನ ಯೋಜನೆ ಖಂಡಿತ ಬಹಳ ಬಲಿಷ್ಠವಾಗಿರುತ್ತದೆ وَأُمۡلِي لَهُمۡۚ إِنَّ كَيۡدِي مَتِينٌ ١٨٣ಅವರೇನು ಆಲೋಚಿಸುವುದಿಲ್ಲವೇ? ಅವರ ಜೊತೆಗಾರನಿಗೆ (ದೂತರಿಗೆ) ಹುಚ್ಚೇನೂ ಇಲ್ಲ. ಅವರು ಸ್ಪಷ್ಟವಾಗಿ ಎಚ್ಚರಿಸುವವರು ಮಾತ್ರ أَوَلَمۡ يَتَفَكَّرُواْۗ مَا بِصَاحِبِهِم مِّن جِنَّةٍۚ إِنۡ هُوَ إِلَّا نَذِيرٌ مُّبِينٌ ١٨٤ಅವರೇನು, ಆಕಾಶಗಳ ಹಾಗೂ ಭೂಮಿಯ ಸಾಮ್ರಾಜ್ಯವನ್ನು ಮತ್ತು ಅಲ್ಲಾಹನು ಸೃಷ್ಟಿಸಿರುವ ಯಾವ ವಸ್ತುವನ್ನೂ ನೋಡುವುದಿಲ್ಲವೇ? ಅವರ ಅಂತ್ಯ (ಮರಣವು) ಸಮೀಪಿಸಿರಬಹುದು. ಆ ಬಳಿಕ ಅವರು ಏನನ್ನು ತಾನೇ ನಂಬುವರು أَوَلَمۡ يَنظُرُواْ فِي مَلَكُوتِ ٱلسَّمَٰوَٰتِ وَٱلۡأَرۡضِ وَمَا خَلَقَ ٱللَّهُ مِن شَيۡءٍ وَأَنۡ عَسَىٰٓ أَن يَكُونَ قَدِ ٱقۡتَرَبَ أَجَلُهُمۡۖ فَبِأَيِّ حَدِيثِۭ بَعۡدَهُۥ يُؤۡمِنُونَ ١٨٥ಯಾರನ್ನು ಅಲ್ಲಾಹನು ದಾರಿಗೆಡಿಸಿದನೋ ಅವನಿಗೆ ಸರಿದಾರಿ ತೋರಬಲ್ಲವರು ಯಾರೂ ಇಲ್ಲ. ಅವನಂತು ಅವರನ್ನು ತಮ್ಮ ವಿದ್ರೋಹದ ಮರುಳಲ್ಲೇ ಅಲೆಯುತ್ತಿರಲು ಬಿಟ್ಟು ಬಿಡುತ್ತಾನೆ مَن يُضۡلِلِ ٱللَّهُ فَلَا هَادِيَ لَهُۥۚ وَيَذَرُهُمۡ فِي طُغۡيَٰنِهِمۡ يَعۡمَهُونَ ١٨٦(ದೂತರೇ,) ಅವರು ನಿಮ್ಮೊಡನೆ, ಪುನರುತ್ಥಾನದ ಘಳಿಗೆಯ ಕುರಿತು, ಅದು ಯಾವಾಗ ಬರಲಿದೆ ಎಂದು ಪ್ರಶ್ನಿಸುತ್ತಾರೆ. ಹೇಳಿರಿ; ಅದರ ಜ್ಞಾನವು ನನ್ನ ಒಡೆಯನ ಬಳಿ ಇದೆ, ಅದನ್ನು (ಪುನರುತ್ಥಾನವನ್ನು) ಅದರ ಸಮಯದಲ್ಲಿ ಪ್ರಕಟಪಡಿಸುವವನು ಅವನ ಹೊರತು ಬೇರಾರೂ ಅಲ್ಲ. ಅದು ಆಕಾಶಗಳ ಹಾಗೂ ಭೂಮಿಯ ಪಾಲಿಗೆ ತುಂಬಾ ಕಠಿಣವಾಗಿರುವುದು. ನಿಮ್ಮ ಬಳಿಗೆ ಅದು ತೀರಾ ಹಠಾತ್ತನೆ ಬಂದು ಬಿಡುವುದು. ನೀವು ಅದನ್ನೇ ಕಾಯುತ್ತಿರುವಿರೋ ಎಂಬಂತೆ ಅವರು ನಿಮ್ಮೊಡನೆ (ಆ ಕುರಿತು) ಕೇಳುತ್ತಾರೆ. ಹೇಳಿರಿ; ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರ ಇದೆ. ಆದರೆ ಹೆಚ್ಚಿನ ಜನರು ಅರಿತಿಲ್ಲ يَسۡـَٔلُونَكَ عَنِ ٱلسَّاعَةِ أَيَّانَ مُرۡسَىٰهَاۖ قُلۡ إِنَّمَا عِلۡمُهَا عِندَ رَبِّيۖ لَا يُجَلِّيهَا لِوَقۡتِهَآ إِلَّا هُوَۚ ثَقُلَتۡ فِي ٱلسَّمَٰوَٰتِ وَٱلۡأَرۡضِۚ لَا تَأۡتِيكُمۡ إِلَّا بَغۡتَةًۗ يَسۡـَٔلُونَكَ كَأَنَّكَ حَفِيٌّ عَنۡهَاۖ قُلۡ إِنَّمَا عِلۡمُهَا عِندَ ٱللَّهِ وَلَٰكِنَّ أَكۡثَرَ ٱلنَّاسِ لَا يَعۡلَمُونَ ١٨٧ಹೇಳಿರಿ; ನಾನಂತು, ಅಲ್ಲಾಹನು ಇಚ್ಛಿಸದೆ, ಸ್ವತಃ ನನಗೆ ಯಾವುದೇ ಲಾಭ ಅಥವಾ ನಷ್ಟವನ್ನುಂಟುಮಾಡುವ ಅಧಿಕಾರ ಉಳ್ಳವನಲ್ಲ. ಒಂದು ವೇಳೆ ನನಗೆ ಗುಪ್ತ ವಿಷಯಗಳ ಜ್ಞಾನ ಇದ್ದಿದ್ದರೆ ನಾನು ಭಾರೀ ಪ್ರಮಾಣದಲ್ಲಿ ಒಳಿತನ್ನು (ಸಂಪತ್ತನ್ನು) ಸಂಗ್ರಹಿಸುತ್ತಿದ್ದೆ ಮತ್ತು ಯಾವ ಹಾನಿಯೂ ನನಗೆ ಸಂಭವಿಸುತ್ತಿರಲಿಲ್ಲ. ನಾನು, ಎಚ್ಚರಿಕೆ ನೀಡುವ ಮತ್ತು ನಂಬುವವರಿಗೆ ಶುಭವಾರ್ತೆ ನೀಡುವ ಕೇವಲ ಒಬ್ಬ ಮನುಷ್ಯನಲ್ಲದೆ ಬೇರೇನಾದರೂ ಆಗಿರುವೆನೇ قُل لَّآ أَمۡلِكُ لِنَفۡسِي نَفۡعًا وَلَا ضَرًّا إِلَّا مَا شَآءَ ٱللَّهُۚ وَلَوۡ كُنتُ أَعۡلَمُ ٱلۡغَيۡبَ لَٱسۡتَكۡثَرۡتُ مِنَ ٱلۡخَيۡرِ وَمَا مَسَّنِيَ ٱلسُّوٓءُۚ إِنۡ أَنَا۠ إِلَّا نَذِيرٌ وَبَشِيرٌ لِّقَوۡمٍ يُؤۡمِنُونَ ١٨٨ಅವನೇ, ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದವನು ಮತ್ತು ಅದು ಸುಖ ಪಡೆಯಲೆಂದು ಅದರಿಂದಲೇ ಅದರ ಜೊತೆಯನ್ನು ನಿರ್ಮಿಸಿದವನು. ಮುಂದೆ ಅವನು (ಪುರುಷನು) ಅವಳನ್ನು ಆವರಿಸಿದಾಗ, ಅವಳು ಲಘುವಾದ ಗರ್ಭವನ್ನು ಧರಿಸಿದಳು ಮತ್ತು ಅದರ ಜೊತೆ ನಡೆದಾಡಿದಳು. ತರುವಾಯ ಅದು ಭಾರವಾದಾಗ ಅವರಿಬ್ಬರೂ, ‘‘ನೀನು ನಮಗೆ ಸಜ್ಜನ ಸಂತತಿಯನ್ನು ದಯಪಾಲಿಸಿದರೆ ನಾವು ಖಂಡಿತ ನಿನಗೆ ಕೃತಜ್ಞರಾಗಿರುವೆವು’’ ಎಂದು ತಮ್ಮ ಒಡೆಯನಾದ ಅಲ್ಲಾಹನೊಡನೆ ಪ್ರಾರ್ಥಿಸುತ್ತಾರೆ ۞ هُوَ ٱلَّذِي خَلَقَكُم مِّن نَّفۡسٍ وَٰحِدَةٍ وَجَعَلَ مِنۡهَا زَوۡجَهَا لِيَسۡكُنَ إِلَيۡهَاۖ فَلَمَّا تَغَشَّىٰهَا حَمَلَتۡ حَمۡلًا خَفِيفًا فَمَرَّتۡ بِهِۦۖ فَلَمَّآ أَثۡقَلَت دَّعَوَا ٱللَّهَ رَبَّهُمَا لَئِنۡ ءَاتَيۡتَنَا صَٰلِحًا لَّنَكُونَنَّ مِنَ ٱلشَّٰكِرِينَ ١٨٩ಮುಂದೆ ಅವನು (ಅಲ್ಲಾಹನು) ಅವರಿಗೆ ಸಜ್ಜನ ಮಗುವನ್ನು ನೀಡಿದಾಗ, ಅವರು ತಮಗೆ ಅವನು ನೀಡಿದ್ದರಲ್ಲಿ ಇತರರನ್ನು ಪಾಲುದಾರರಾಗಿಸುತ್ತಾರೆ. ನಿಜವಾಗಿ ಅವರು ಪಾಲುದಾರರಾಗಿ ಮಾಡಿದ ಎಲ್ಲರಿಗಿಂತಲೂ ಅಲ್ಲಾಹನು ಉನ್ನತನಾಗಿದ್ದಾನೆ فَلَمَّآ ءَاتَىٰهُمَا صَٰلِحًا جَعَلَا لَهُۥ شُرَكَآءَ فِيمَآ ءَاتَىٰهُمَاۚ فَتَعَٰلَى ٱللَّهُ عَمَّا يُشۡرِكُونَ ١٩٠ಅವರೇನು, ಏನನ್ನೂ ಸೃಷ್ಟಿಸಿಲ್ಲದವರನ್ನು ಮತ್ತು ಸೃಷ್ಟಿಸಲ್ಪಟ್ಟವರನ್ನು (ದೇವರ) ಪಾಲುದಾರರಾಗಿಸುತ್ತಾರೆಯೇ أَيُشۡرِكُونَ مَا لَا يَخۡلُقُ شَيۡـًٔا وَهُمۡ يُخۡلَقُونَ ١٩١ನಿಜವಾಗಿ ಅವರು (ಆ ಪಾಲುದಾರರು) ಅವರಿಗೆ ಯಾವುದೇ ಸಹಾಯಮಾಡಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೂ ಯಾವುದೇ ಸಹಾಯ ಮಾಡಲಾರರು وَلَا يَسۡتَطِيعُونَ لَهُمۡ نَصۡرًا وَلَآ أَنفُسَهُمۡ يَنصُرُونَ ١٩٢ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ, ಅವರು ನಿಮ್ಮನ್ನು ಅನುಸರಿಸಲಾರರು. ನೀವು ಅವರನ್ನು ಕರೆದರೂ ಒಂದೇ ಅಥವಾ ಮೌನವಾಗಿದ್ದರೂ ಒಂದೇ وَإِن تَدۡعُوهُمۡ إِلَى ٱلۡهُدَىٰ لَا يَتَّبِعُوكُمۡۚ سَوَآءٌ عَلَيۡكُمۡ أَدَعَوۡتُمُوهُمۡ أَمۡ أَنتُمۡ صَٰمِتُونَ ١٩٣ಅಲ್ಲಾಹನ ಹೊರತಾಗಿ ನೀವು ಯಾರನ್ನು ಕರೆದು ಪ್ರಾರ್ಥಿಸುವಿರೋ ಅವರು ನಿಮ್ಮಂತಹ ದಾಸರು ಮಾತ್ರ. ನೀವು ಸತ್ಯವಂತರಾಗಿದ್ದರೆ, ಅವರನ್ನು ಕರೆದು ನೋಡಿರಿ, ಅವರು ನಿಮಗೆ ಉತ್ತರಿಸಲಿ إِنَّ ٱلَّذِينَ تَدۡعُونَ مِن دُونِ ٱللَّهِ عِبَادٌ أَمۡثَالُكُمۡۖ فَٱدۡعُوهُمۡ فَلۡيَسۡتَجِيبُواْ لَكُمۡ إِن كُنتُمۡ صَٰدِقِينَ ١٩٤ಅವರ ಬಳಿ, ನಡೆದಾಡುವುದಕ್ಕೇನು ಕಾಲುಗಳಿವೆಯೇ? ಹಿಡಿಯುವುದಕ್ಕೇನು ಅವರ ಬಳಿ ಕೈಗಳಿವೆಯೇ? ನೋಡುವುದಕ್ಕೇನು ಅವರ ಬಳಿ ಕಣ್ಣುಗಳಿವೆಯೇ? ಅಥವಾ ಕೇಳುವುದಕ್ಕೇನು ಅವರ ಬಳಿ ಕಿವಿಗಳಿವೆಯೇ? ಹೇಳಿರಿ; ನೀವು ಆ ನಿಮ್ಮ ಪಾಲುದಾರರನ್ನು ಕರೆದು ನೋಡಿರಿ. ಆ ಬಳಿಕ ನನ್ನ ವಿರುದ್ಧ ಸಂಚು ಹೂಡಿರಿ ಮತ್ತು (ನನಗೆ) ಕಾಲಾವಕಾಶವನ್ನೇ ಕೊಡಬೇಡಿರಿ أَلَهُمۡ أَرۡجُلٌ يَمۡشُونَ بِهَآۖ أَمۡ لَهُمۡ أَيۡدٍ يَبۡطِشُونَ بِهَآۖ أَمۡ لَهُمۡ أَعۡيُنٌ يُبۡصِرُونَ بِهَآۖ أَمۡ لَهُمۡ ءَاذَانٌ يَسۡمَعُونَ بِهَاۗ قُلِ ٱدۡعُواْ شُرَكَآءَكُمۡ ثُمَّ كِيدُونِ فَلَا تُنظِرُونِ ١٩٥ಖಂಡಿತವಾಗಿ ದಿವ್ಯಗ್ರಂಥವನ್ನು ಇಳಿಸಿದ ಅಲ್ಲಾಹನೇ ನನ್ನ ಪರಮ ಪೋಷಕನಾಗಿದ್ದಾನೆ ಮತ್ತು ಅವನೇ ಎಲ್ಲ ಸಜ್ಜನರ ಪರಮ ಪೋಷಕನಾಗಿದ್ದಾನೆ إِنَّ وَلِـِّۧيَ ٱللَّهُ ٱلَّذِي نَزَّلَ ٱلۡكِتَٰبَۖ وَهُوَ يَتَوَلَّى ٱلصَّٰلِحِينَ ١٩٦ಅಲ್ಲಾಹನ ಹೊರತು ನೀವು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುವಿರೋ ಅವರು ನಿಮಗೆ ನೆರವಾಗಲು ಶಕ್ತರಲ್ಲ. ಮಾತ್ರವಲ್ಲ, ಅವರಂತು ಸ್ವತಃ ತಮಗೇ ನೆರವಾಗಲು ಅಶಕ್ತರಾಗಿರುವರು وَٱلَّذِينَ تَدۡعُونَ مِن دُونِهِۦ لَا يَسۡتَطِيعُونَ نَصۡرَكُمۡ وَلَآ أَنفُسَهُمۡ يَنصُرُونَ ١٩٧ನೀವು ಮಾರ್ಗದರ್ಶನಕ್ಕಾಗಿ ಅವರನ್ನು ಕರೆದರೆ ಅವರು ಅದನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ನೋಡುತ್ತಿರುವಂತೆ ನೀವು ಕಾಣುತ್ತೀರಿ. ಆದರೆ ನಿಜವಾಗಿ ಅವರು ಏನನ್ನೂ ನೋಡುವುದಿಲ್ಲ وَإِن تَدۡعُوهُمۡ إِلَى ٱلۡهُدَىٰ لَا يَسۡمَعُواْۖ وَتَرَىٰهُمۡ يَنظُرُونَ إِلَيۡكَ وَهُمۡ لَا يُبۡصِرُونَ ١٩٨ನೀವು (ಜನರನ್ನು) ಕ್ಷಮಿಸಿರಿ, ಒಳಿತನ್ನು ಆದೇಶಿಸಿರಿ ಮತ್ತು ಅಜ್ಞಾನಿಗಳನ್ನು ನಿರ್ಲಕ್ಷಿಸಿರಿ خُذِ ٱلۡعَفۡوَ وَأۡمُرۡ بِٱلۡعُرۡفِ وَأَعۡرِضۡ عَنِ ٱلۡجَٰهِلِينَ ١٩٩(ದೂತರೇ,)ಶೈತಾನನ ಕಡೆಯಿಂದ ನಿಮಗೆ ಯಾವುದೇ ತರದ ಪ್ರಚೋದನೆಯುಂಟಾದರೆ, ಅಲ್ಲಾಹನ ರಕ್ಷಣೆ ಬಯಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನೂ ಕೇಳುವವನು ಮತ್ತು ಬಲ್ಲವನಾಗಿದ್ದಾನೆ وَإِمَّا يَنزَغَنَّكَ مِنَ ٱلشَّيۡطَٰنِ نَزۡغٌ فَٱسۡتَعِذۡ بِٱللَّهِۚ إِنَّهُۥ سَمِيعٌ عَلِيمٌ ٢٠٠ಖಂಡಿತವಾಗಿಯೂ, ಧರ್ಮನಿಷ್ಠರಿಗೆ ಶೈತಾನನ ಕಡೆಯಿಂದ ಯಾವುದೇ ದುಷ್ಟ ಪ್ರೇರಣೆ ಉಂಟಾದಾಗ, ಅವರು (ಅಲ್ಲಾಹನನ್ನು) ಸ್ಮರಿಸುತ್ತಾರೆ ಮತ್ತು ಆಗಲೇ ಅವರು (ಸರಿದಾರಿಯನ್ನು) ಕಂಡುಕೊಳ್ಳುತ್ತಾರೆ إِنَّ ٱلَّذِينَ ٱتَّقَوۡاْ إِذَا مَسَّهُمۡ طَٰٓئِفٌ مِّنَ ٱلشَّيۡطَٰنِ تَذَكَّرُواْ فَإِذَا هُم مُّبۡصِرُونَ ٢٠١ಇನ್ನು ಅವರ (ಶೈತಾನರ) ಸಹೋದರರು ಅವರನ್ನು ತಪ್ಪುದಾರಿಗೆ ಎಳೆಯುತ್ತಲೇ ಇರುತ್ತಾರೆ ಮತ್ತು (ಆ ವಿಷಯದಲ್ಲಿ) ಅವರು ಹಿಂಜರಿಯುವುದಿಲ್ಲ وَإِخۡوَٰنُهُمۡ يَمُدُّونَهُمۡ فِي ٱلۡغَيِّ ثُمَّ لَا يُقۡصِرُونَ ٢٠٢(ದೂತರೇ,) ನೀವು ಅವರ ಬಳಿಗೆ ಯಾವುದೇ ದಿವ್ಯ ವಚನವನ್ನು ತರದೆ ಇದ್ದಾಗ ಅವರು, ‘‘ಸ್ವತಃ ನೀವೇ ಅದನ್ನೇಕೆ ರಚಿಸಿಕೊಳ್ಳುವುದಿಲ್ಲ?’’ ಎಂದು ಕೇಳುತ್ತಾರೆ. ಹೇಳಿರಿ; ‘‘ನಾನಂತು, ನನ್ನ ಒಡೆಯನ ಕಡೆಯಿಂದ ನನಗೆ ನೀಡಲಾಗುವ ದಿವ್ಯವಾಣಿಯನ್ನಷ್ಟೇ ಅನುಸರಿಸುತ್ತೇನೆ. ಇದು (ಕುರ್ಆನ್) ನಿಮ್ಮ ಒಡೆಯನ ಕಡೆಯಿಂದ ಬಂದಿರುವ, ಕಣ್ಣು ತೆರೆಸುವ ಉಪದೇಶವಾಗಿದೆ ಮತ್ತು ಇದು ನಂಬುವವರ ಪಾಲಿಗೆ ಮಾರ್ಗದರ್ಶನ ಹಾಗೂ ಅನುಗ್ರಹವಾಗಿದೆ وَإِذَا لَمۡ تَأۡتِهِم بِـَٔايَةٍ قَالُواْ لَوۡلَا ٱجۡتَبَيۡتَهَاۚ قُلۡ إِنَّمَآ أَتَّبِعُ مَا يُوحَىٰٓ إِلَيَّ مِن رَّبِّيۚ هَٰذَا بَصَآئِرُ مِن رَّبِّكُمۡ وَهُدًى وَرَحۡمَةٌ لِّقَوۡمٍ يُؤۡمِنُونَ ٢٠٣ಕುರ್ಆನ್ ಅನ್ನು ಓದಲಾದಾಗ ಅದನ್ನು ಕೇಳಿರಿ ಮತ್ತು ಮೌನವಾಗಿರಿ – ನೀವು ಕರುಣೆಗೆ ಪಾತ್ರರಾಗಬಹುದು وَإِذَا قُرِئَ ٱلۡقُرۡءَانُ فَٱسۡتَمِعُواْ لَهُۥ وَأَنصِتُواْ لَعَلَّكُمۡ تُرۡحَمُونَ ٢٠٤(ದೂತರೇ,) ನೀವು ನಿಮ್ಮ ಮನದೊಳಗೇ ನಿಮ್ಮೊಡೆಯನನ್ನು ಸ್ಮರಿಸುತ್ತಲಿರಿ – ವಿನಯದೊಂದಿಗೆ ಹಾಗೂ ಭಯ ಭಕ್ತಿಯೊಂದಿಗೆ, ಧ್ವನಿಯನ್ನು ಎತ್ತರಿಸದೆ, ಮುಂಜಾನೆ ಹಾಗೂ ಸಂಜೆ, ಮತ್ತು ನೀವೆಂದೂ (ಅವನನ್ನು) ನಿರ್ಲಕ್ಷಿಸಿದವರಾಗಿರಬೇಡಿ وَٱذۡكُر رَّبَّكَ فِي نَفۡسِكَ تَضَرُّعًا وَخِيفَةً وَدُونَ ٱلۡجَهۡرِ مِنَ ٱلۡقَوۡلِ بِٱلۡغُدُوِّ وَٱلۡأٓصَالِ وَلَا تَكُن مِّنَ ٱلۡغَٰفِلِينَ ٢٠٥ಖಂಡಿತವಾಗಿಯೂ, ನಿಮ್ಮ ಒಡೆಯನ ಬಳಿ ಇರುವವರು ಅವನನ್ನು ಆರಾಧಿಸುವ ವಿಷಯದಲ್ಲಿ ಎಂದೂ ಅಹಂಕಾರ ತೋರುವುದಿಲ್ಲ ಮತ್ತು ಅವರು ಅವನ ಪಾವಿತ್ರವನ್ನು ಜಪಿಸುತ್ತಿರುತ್ತಾರೆ ಹಾಗೂ ಅವನಿಗೇ ಸಾಷ್ಟಾಂಗ ವಂದಿಸುತ್ತಿರುತ್ತಾರೆ إِنَّ ٱلَّذِينَ عِندَ رَبِّكَ لَا يَسۡتَكۡبِرُونَ عَنۡ عِبَادَتِهِۦ وَيُسَبِّحُونَهُۥ وَلَهُۥ يَسۡجُدُونَۤ ۩ ٢٠٦(ದೂತರೇ,) ಅವರು ನಿಮ್ಮೊಡನೆ, ಯುದ್ಧದಲ್ಲಿ ಸಿಕ್ಕಿದ ಸಂಪತ್ತಿನ ಕುರಿತು ಕೇಳುತ್ತಾರೆ. ಹೇಳಿರಿ; ಯುದ್ಧ ಸಂಪತ್ತು ಅಲ್ಲಾಹನಿಗೆ ಮತ್ತು ಅವನ ದೂತನಿಗೆ ಸೇರಿದೆ. ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹನಿಗೆ ಅಂಜಿರಿ ಹಾಗೂ ಪರಸ್ಪರ ಸಂಬಂಧಗಳನ್ನು ಸುಧಾರಿಸಿಕೊಳ್ಳಿರಿ ಮತ್ತು ನೀವು ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡಿರಿ