ملة الإسلام

السورة 85 · 22 آية · Abdussalam Puthige

سورة البروج باللغة الكانادية

السورة بالعربية مع التفسير استمع إلى سورة البروج (1,332 قارئاً)
مكيةسورة البروج٢٢ آية

بِسۡمِ ٱللَّهِ ٱلرَّحۡمَٰنِ ٱلرَّحِيمِ

وَٱلسَّمَآءِ ذَاتِ ٱلۡبُرُوجِ ١ಗೋಪುರಗಳಿರುವ ಆಕಾಶದಾಣೆ وَٱلۡيَوۡمِ ٱلۡمَوۡعُودِ ٢ವಾಗ್ದಾನ ಮಾಡಲಾಗಿರುವ ಆ ದಿನದ ಆಣೆ وَشَاهِدٍ وَمَشۡهُودٍ ٣ಹಾಜರಾಗುವವನ ಮತ್ತು ಯಾರ ಮುಂದೆ ಹಾಜರು ಪಡಿಸಲಾಗುವುದೋ ಅವನಾಣೆ قُتِلَ أَصۡحَٰبُ ٱلۡأُخۡدُودِ ٤ನಾಶವಾದರು, ಕಂದಕಗಳನ್ನು ಅಗೆದವರು ٱلنَّارِ ذَاتِ ٱلۡوَقُودِ ٥ಅವರು ಅದರಲ್ಲಿ ಉರಿಯುವ ಕೆಂಡಗಳನ್ನು ತುಂಬಿದ್ದರು إِذۡ هُمۡ عَلَيۡهَا قُعُودٌ ٦ಅವರು ಅದರ ಸುತ್ತಲೂ ಕುಳಿತಿದ್ದರು وَهُمۡ عَلَىٰ مَا يَفۡعَلُونَ بِٱلۡمُؤۡمِنِينَ شُهُودٌ ٧ಮತ್ತು ಅವರು ವಿಶ್ವಾಸಿಗಳಿಗೆ ತಾವು ನೀಡುತ್ತಿದ್ದುದನ್ನು (ಚಿತ್ರ ಹಿಂಸೆಯನ್ನು) ನೋಡುತ್ತಿದ್ದರು وَمَا نَقَمُواْ مِنۡهُمۡ إِلَّآ أَن يُؤۡمِنُواْ بِٱللَّهِ ٱلۡعَزِيزِ ٱلۡحَمِيدِ ٨ಅವರು ಆ ವಿಶ್ವಾಸಿಗಳ ವಿರುದ್ಧ ಪ್ರತೀಕಾರವೆಸಗಲು ಇಳಿದುದಕ್ಕೆ, ಅವರು (ಆ ವಿಶ್ವಾಸಿಗಳು) ಪ್ರಬಲನೂ ಪ್ರಶಂಸಾರ್ಹನೂ ಆದ ಅಲ್ಲಾಹನಲ್ಲಿ ನಂಬಿಕೆ ಇಟ್ಟರು ಎಂಬುದಷ್ಟೇ ಕಾರಣವಾಗಿತ್ತು ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۚ وَٱللَّهُ عَلَىٰ كُلِّ شَيۡءٍ شَهِيدٌ ٩ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅವನಿಗೇ (ಅಲ್ಲಾಹನಿಗೆ) ಸೇರಿದೆ. ಮತ್ತು ಅಲ್ಲಾಹನು ಎಲ್ಲದಕ್ಕೂ ನೇರ ಸಾಕ್ಷಿಯಾಗಿದ್ದಾನೆ إِنَّ ٱلَّذِينَ فَتَنُواْ ٱلۡمُؤۡمِنِينَ وَٱلۡمُؤۡمِنَٰتِ ثُمَّ لَمۡ يَتُوبُواْ فَلَهُمۡ عَذَابُ جَهَنَّمَ وَلَهُمۡ عَذَابُ ٱلۡحَرِيقِ ١٠ವಿಶ್ವಾಸಿ ಪುರುಷರು ಮತ್ತು ಸ್ತ್ರೀಯರನ್ನು ಹಿಂಸಿಸಿದವರು ಹಾಗೂ ಆ ಕುರಿತು ಪಶ್ಚಾತ್ತಾಪ ಪಡದವರು – ಅವರಿಗೆ ನರಕದ ಶಿಕ್ಷೆ ಕಾದಿದೆ ಮತ್ತು ಅವರಿಗೆ ಸುಡುವ ಶಿಕ್ಷೆ ಕಾದಿದೆ إِنَّ ٱلَّذِينَ ءَامَنُواْ وَعَمِلُواْ ٱلصَّٰلِحَٰتِ لَهُمۡ جَنَّٰتٌ تَجۡرِي مِن تَحۡتِهَا ٱلۡأَنۡهَٰرُۚ ذَٰلِكَ ٱلۡفَوۡزُ ٱلۡكَبِيرُ ١١ವಿಶ್ವಾಸಿಗಳಿಗೆ ಹಾಗೂ ಸತ್ಕರ್ಮಗಳನ್ನು ಮಾಡಿದವರಿಗೆ ತಳದಲ್ಲಿ ನದಿಗಳು ಹರಿಯುವ ಸ್ವರ್ಗ ತೋಟಗಳು ಸಿಗುವವು. ಇದು ನಿಜಕ್ಕೂ ದೊಡ್ಡ ಸೌಭಾಗ್ಯವಾಗಿದೆ إِنَّ بَطۡشَ رَبِّكَ لَشَدِيدٌ ١٢ನಿನ್ನ ಒಡೆಯನ ಹಿಡಿತವು ಬಹಳ ಕಠಿಣವಾಗಿರುತ್ತದೆ إِنَّهُۥ هُوَ يُبۡدِئُ وَيُعِيدُ ١٣ಖಂಡಿತವಾಗಿಯೂ ಅವನೇ ಸೃಷ್ಟಿ ಕಾರ್ಯವನ್ನು ಆರಂಭಿಸಿದವನು ಮತ್ತು ಅವನೇ ಅದನ್ನು ಪುನರಾವರ್ತಿಸುವನು (ಪುನಃ ಸೃಷ್ಟಿಸುವನು) وَهُوَ ٱلۡغَفُورُ ٱلۡوَدُودُ ١٤ಅವನು ಕ್ಷಮಿಸುವವನೂ ಪ್ರೀತಿಸುವವನೂ ಆಗಿದ್ದಾನೆ ذُو ٱلۡعَرۡشِ ٱلۡمَجِيدُ ١٥ಅವನು ಗೌರವಾನ್ವಿತ ವಿಶ್ವ ಪೀಠದ ಒಡೆಯನು فَعَّالٌ لِّمَا يُرِيدُ ١٦ಅವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುತ್ತಾನೆ هَلۡ أَتَىٰكَ حَدِيثُ ٱلۡجُنُودِ ١٧ಪಡೆಗಳ ಸಮಾಚಾರವು ನಿಮಗೆ ತಲುಪಿದೆಯೇ فِرۡعَوۡنَ وَثَمُودَ ١٨ಅಂದರೆ ಫಿರ್‌ಔನ್ ಮತ್ತು ಸಮೂದರ ಪಡೆಗಳು بَلِ ٱلَّذِينَ كَفَرُواْ فِي تَكۡذِيبٍ ١٩ನಿಜವಾಗಿ ಧಿಕ್ಕಾರಿಗಳು (ಸತ್ಯವನ್ನು) ಅಲ್ಲಗಳೆಯುತ್ತಿದ್ದಾರೆ وَٱللَّهُ مِن وَرَآئِهِم مُّحِيطُۢ ٢٠ಅಲ್ಲಾಹನು ಅವರನ್ನು ಎಲ್ಲ ಕಡೆಯಿಂದಲೂ ಸುತ್ತುವರಿದಿದ್ದಾನೆ بَلۡ هُوَ قُرۡءَانٌ مَّجِيدٌ ٢١ನಿಜವಾಗಿ ಇದು ಗೌರವಾನ್ವಿತ ಕುರ್‌ಆನ್ ಆಗಿದೆ فِي لَوۡحٍ مَّحۡفُوظِۭ ٢٢ಇದು ಸುರಕ್ಷಿತ ಗ್ರಂಥದಲ್ಲಿದೆ

الترجمة: Abdussalam Puthige.