ملة الإسلام

السورة 37 · 182 آية · Abdussalam Puthige

سورة الصافات باللغة الكانادية

السورة بالعربية مع التفسير استمع إلى سورة الصافات (1,203 قارئاً)
مكيةسورة الصافات١٨٢ آية

بِسۡمِ ٱللَّهِ ٱلرَّحۡمَٰنِ ٱلرَّحِيمِ

وَٱلصَّٰٓفَّٰتِ صَفًّا ١ಉಗ್ರವಾಗಿ ಗದರಿಸುವವರಾಣೆ فَٱلزَّٰجِرَٰتِ زَجۡرًا ٢ಉಪದೇಶವನ್ನು ಓದುವವರಾಣೆ فَٱلتَّٰلِيَٰتِ ذِكۡرًا ٣ನಿಮ್ಮ ಆರಾಧ್ಯನು ಖಂಡಿತ ಒಬ್ಬನೇ إِنَّ إِلَٰهَكُمۡ لَوَٰحِدٌ ٤ಅವನು ಆಕಾಶಗಳ, ಭೂಮಿಯ ಹಾಗೂ ಅವುಗಳ ನಡುವೆ ಇರುವ ಎಲ್ಲವುಗಳ ಒಡೆಯ ಮತ್ತು ಪೂರ್ವಗಳ ಒಡೆಯನಾಗಿದ್ದಾನೆ رَّبُّ ٱلسَّمَٰوَٰتِ وَٱلۡأَرۡضِ وَمَا بَيۡنَهُمَا وَرَبُّ ٱلۡمَشَٰرِقِ ٥ಖಂಡಿತವಾಗಿಯೂ ನಾವು ಭೂಲೋಕದ ಆಕಾಶವನ್ನು ನಕ್ಷತ್ರಗಳ ಸೊಬಗಿನಿಂದ ಅಲಂಕರಿಸಿರುವೆವು إِنَّا زَيَّنَّا ٱلسَّمَآءَ ٱلدُّنۡيَا بِزِينَةٍ ٱلۡكَوَاكِبِ ٦ಮತ್ತು ನಾವು ಅದನ್ನು ಪ್ರತಿಯೊಬ್ಬ ವಿದ್ರೋಹಿ ಶೈತಾನನಿಂದ ರಕ್ಷಿಸಿಟ್ಟಿರುವೆವು وَحِفۡظًا مِّن كُلِّ شَيۡطَٰنٍ مَّارِدٍ ٧ಮೇಲಿನ ಲೋಕದ ಏನನ್ನೂ ಕೇಳಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಎಲ್ಲ ಕಡೆಯಿಂದಲೂ ಅವರ ಮೇಲೆ ಪ್ರಹಾರವಾಗುತ್ತದೆ لَّا يَسَّمَّعُونَ إِلَى ٱلۡمَلَإِ ٱلۡأَعۡلَىٰ وَيُقۡذَفُونَ مِن كُلِّ جَانِبٍ ٨ಅವರನ್ನು ಬೆನ್ನಟ್ಟಿ ಹಿಮ್ಮೆಟ್ಟಿಸಲಾಗುತ್ತದೆ. ಅಲ್ಲದೆ ಅವರಿಗೆ ಶಾಶ್ವತ ಶಿಕ್ಷೆ ಇದೆ دُحُورًاۖ وَلَهُمۡ عَذَابٌ وَاصِبٌ ٩ಇಷ್ಟಾಗಿಯೂ ಕಿತ್ತುಕೊಂಡು ಓಡಿದವನು – ಒಂದು ಉರಿಯುವ ಜ್ವಾಲೆಯು ಅವನ ಬೆನ್ನು ಹಿಡಿಯುತ್ತದೆ إِلَّا مَنۡ خَطِفَ ٱلۡخَطۡفَةَ فَأَتۡبَعَهُۥ شِهَابٌ ثَاقِبٌ ١٠ನೀವು ಅವರೊಡನೆ ಕೇಳಿ ನೋಡಿರಿ; ಅವರನ್ನು ಸೃಷ್ಟಿಸುವುದು ಹೆಚ್ಚು ಕಷ್ಟವೋ ಅಥವಾ ನಮ್ಮ (ಇತರ) ಸೃಷ್ಟಿಗಳನ್ನೋ? ಅವರನ್ನಂತು ನಾವು ಅಂಟುವ ಮಣ್ಣಿನಿಂದ ಸೃಷ್ಟಿಸಿರುವೆವು فَٱسۡتَفۡتِهِمۡ أَهُمۡ أَشَدُّ خَلۡقًا أَم مَّنۡ خَلَقۡنَآۚ إِنَّا خَلَقۡنَٰهُم مِّن طِينٍ لَّازِبِۭ ١١(ದೂತರೇ,) ನೀವು (ಅಲ್ಲಾಹನ ಮಹಿಮೆಯ ಕುರಿತು) ಅಚ್ಚರಿ ಪಡುತ್ತೀರಿ ಮತ್ತು ಅವರು ಗೇಲಿ ಮಾಡುತ್ತಾರೆ بَلۡ عَجِبۡتَ وَيَسۡخَرُونَ ١٢ಅವರಿಗೆ ಉಪದೇಶಿಸಲಾದಾಗ ಅವರು ಉಪದೇಶವನ್ನು ಸ್ವೀಕರಿಸುವುದಿಲ್ಲ وَإِذَا ذُكِّرُواْ لَا يَذۡكُرُونَ ١٣ಅವರು ಯಾವುದಾದರೂ ಪುರಾವೆಯನ್ನು ಕಂಡಾಗ, ಅದನ್ನು ಗೇಲಿ ಮಾಡುತ್ತಾರೆ وَإِذَا رَأَوۡاْ ءَايَةً يَسۡتَسۡخِرُونَ ١٤ಮತ್ತು ಅವರು, ಇದು ಸ್ಪಷ್ಟವಾದ ಜಾದೂಗಾರಿಕೆಯೇ ಹೊರತು ಬೇರೇನೂ ಅಲ್ಲ ಎಂದು ಬಿಡುತ್ತಾರೆ وَقَالُوٓاْ إِنۡ هَٰذَآ إِلَّا سِحۡرٌ مُّبِينٌ ١٥ನಾವು ಸತ್ತು ಮಣ್ಣಾಗಿಯೂ ಎಲುಬುಗಳಾಗಿಯೂ ಮಾರ್ಪಟ್ಟ ಬಳಿಕ ನಮ್ಮನ್ನೇನು ಪುನಃ ಜೀವಂತ ಗೊಳಿಸಲಾಗುವುದೇ أَءِذَا مِتۡنَا وَكُنَّا تُرَابًا وَعِظَٰمًا أَءِنَّا لَمَبۡعُوثُونَ ١٦ಅಥವಾ, ನಮ್ಮ ತಾತ ಮುತ್ತಾತಂದಿರನ್ನು ಕೂಡಾ (ಜೀವಂತಗೊಳಿಸಲಾಗುವುದೇ? ಎಂದು ಅವರು ಪ್ರಶ್ನಿಸುತ್ತಾರೆ) أَوَءَابَآؤُنَا ٱلۡأَوَّلُونَ ١٧ಹೇಳಿರಿ, ಹೌದು, ಮತ್ತು ನೀವು ಅಪಮಾನಿತರಾಗುವಿರಿ قُلۡ نَعَمۡ وَأَنتُمۡ دَٰخِرُونَ ١٨ಅದು (ಲೋಕಾಂತ್ಯದ ಕಹಳೆ) ಕೇವಲ ಒಂದು ಎಚ್ಚರಿಕೆಯ ಧ್ವನಿಯಾಗಿರುವುದು. ಅಷ್ಟರಲ್ಲೆ ಅವರು ದಂಗಾಗಿ ನೋಡ ತೊಡಗುವರು فَإِنَّمَا هِيَ زَجۡرَةٌ وَٰحِدَةٌ فَإِذَا هُمۡ يَنظُرُونَ ١٩ಮತ್ತು ಅವರು, ‘‘ಅಯ್ಯೋ ನಮ್ಮ ದುಸ್ಥಿತಿ! ಇದುವೇ ಆ ಪ್ರತಿಫಲದ ದಿನ’’ ಎನ್ನುವರು وَقَالُواْ يَٰوَيۡلَنَا هَٰذَا يَوۡمُ ٱلدِّينِ ٢٠ಇದುವೇ, ನೀವು ನಿರಾಕರಿಸುತ್ತಿದ್ದ ತೀರ್ಮಾನದ ದಿನ هَٰذَا يَوۡمُ ٱلۡفَصۡلِ ٱلَّذِي كُنتُم بِهِۦ تُكَذِّبُونَ ٢١(ಅಂದು ಮಲಕ್‌ಗಳೊಡನೆ ಹೇಳಲಾಗುವುದು;) ‘‘ಅಕ್ರಮಿಗಳನ್ನು, ಅವರ ಜೊತೆಗಾರರನ್ನು ಮತ್ತು ಅವರು (ಅಲ್ಲಾಹನ ಹೊರತು) ಯಾರನ್ನೆಲ್ಲಾ ಆರಾಧಿಸುತ್ತಿದ್ದರೋ ಅವರನ್ನೆಲ್ಲಾ ಒಟ್ಟು ಸೇರಿಸಿರಿ‘‘ – ۞ ٱحۡشُرُواْ ٱلَّذِينَ ظَلَمُواْ وَأَزۡوَٰجَهُمۡ وَمَا كَانُواْ يَعۡبُدُونَ ٢٢‘‘ – ಅಲ್ಲಾಹನ ಹೊರತು. ಮತ್ತು ನೀವು ಅವರಿಗೆ ನರಕದ ದಾರಿ ತೋರಿಸಿರಿ مِن دُونِ ٱللَّهِ فَٱهۡدُوهُمۡ إِلَىٰ صِرَٰطِ ٱلۡجَحِيمِ ٢٣ಮತ್ತು ಅವರನ್ನು ತಡೆಯಿರಿ. ಖಂಡಿತವಾಗಿಯೂ ಅವರ ವಿಚಾರಣೆ ನಡೆಯಬೇಕಾಗಿದೆ وَقِفُوهُمۡۖ إِنَّهُم مَّسۡـُٔولُونَ ٢٤ನಿಮಗೇನಾಗಿದೆ? ನೀವೇಕೆ ಪರಸ್ಪರ ನೆರವಾಗುತ್ತಿಲ್ಲ مَا لَكُمۡ لَا تَنَاصَرُونَ ٢٥ನಿಜವಾಗಿ, ಇಂದು ಅವರು ಸಂಪೂರ್ಣ ಶರಣಾಗಿ ಬಿಟ್ಟಿದ್ದಾರೆ بَلۡ هُمُ ٱلۡيَوۡمَ مُسۡتَسۡلِمُونَ ٢٦(ಅಂದು) ಅವರಲ್ಲಿ ಕೆಲವರು ಮತ್ತೆ ಕೆಲವರೆಡೆಗೆ ತಿರುಗಿ ಪ್ರಶ್ನೆಗಳನ್ನು ಕೇಳುವರು وَأَقۡبَلَ بَعۡضُهُمۡ عَلَىٰ بَعۡضٍ يَتَسَآءَلُونَ ٢٧(ಅವರು ತಮ್ಮ ನಾಯಕರೊಡನೆ) ‘‘ನೀವು ಬಲ ಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ (ಸತ್ಯದಿಂದ ನಮ್ಮನ್ನು ತಡೆಯುತ್ತಿದ್ದಿರಿ)’’ ಎನ್ನುವರು قَالُوٓاْ إِنَّكُمۡ كُنتُمۡ تَأۡتُونَنَا عَنِ ٱلۡيَمِينِ ٢٨ಅವರು (ನಾಯಕರು) ಹೇಳುವರು; ‘‘ನಿಜವಾಗಿ, ನೀವು ಸತ್ಯವನ್ನು ನಂಬುವವರೇ ಆಗಿರಲಿಲ್ಲ’’ قَالُواْ بَل لَّمۡ تَكُونُواْ مُؤۡمِنِينَ ٢٩‘‘ನಿಮ್ಮ ಮೇಲೆ ನಮಗೆ ಅಧಿಕಾರವೇನೂ ಇರಲಿಲ್ಲ. ನಿಜವಾಗಿ ನೀವೇ ವಿದ್ರೋಹಿ ಪಂಗಡವಾಗಿದ್ದಿರಿ’’ وَمَا كَانَ لَنَا عَلَيۡكُم مِّن سُلۡطَٰنِۭۖ بَلۡ كُنتُمۡ قَوۡمًا طَٰغِينَ ٣٠‘‘ಇದೀಗ ನಮ್ಮ ಕುರಿತು ನಮ್ಮ ಒಡೆಯನ ಮಾತು ಸತ್ಯವಾಗಿ ಬಿಟ್ಟಿದೆ. ನಾವೀಗ (ಶಿಕ್ಷೆಯನ್ನು) ಖಂಡಿತ ಸವಿಯಲಿದ್ದೇವೆ’’ فَحَقَّ عَلَيۡنَا قَوۡلُ رَبِّنَآۖ إِنَّا لَذَآئِقُونَ ٣١‘‘ನಾವು ನಿಮ್ಮನ್ನು ದಾರಿಗೆಡಿಸಿದ್ದು ಮಾತ್ರವಲ್ಲ, ಸ್ವತಃ ನಾವೇ ದಾರಿಗೆಟ್ಟಿದ್ದೆವು’’ فَأَغۡوَيۡنَٰكُمۡ إِنَّا كُنَّا غَٰوِينَ ٣٢ಕೊನೆಗೆ, ಅವರೆಲ್ಲರೂ ಜೊತೆಯಾಗಿಯೇ ಶಿಕ್ಷೆ ಅನುಭವಿಸುವರು فَإِنَّهُمۡ يَوۡمَئِذٍ فِي ٱلۡعَذَابِ مُشۡتَرِكُونَ ٣٣ನಾವು ಅಪರಾಧಿಗಳಿಗೆ ಹೀಗೆಯೇ ಮಾಡುತ್ತೇವೆ إِنَّا كَذَٰلِكَ نَفۡعَلُ بِٱلۡمُجۡرِمِينَ ٣٤ಅಲ್ಲಾಹನ ಹೊರತು ಬೇರಾರೂ ಪೂಜಾರ್ಹರಲ್ಲ ಎಂದು ಅವರೊಡನೆ ಹೇಳಲಾದಾಗ ಅವರು ಅಹಂಕಾರ ತೋರಿದ್ದರು إِنَّهُمۡ كَانُوٓاْ إِذَا قِيلَ لَهُمۡ لَآ إِلَٰهَ إِلَّا ٱللَّهُ يَسۡتَكۡبِرُونَ ٣٥ಮತ್ತು ‘‘ನಾವೇನು ಒಬ್ಬ ಹುಚ್ಚು ಪೀಡಿತ ಕವಿಗಾಗಿ ನಮ್ಮ ದೇವರುಗಳನ್ನು ಬಿಟ್ಟು ಬಿಡಬೇಕೇ?’’ ಎಂದು ಅವರು ಕೆೇಳುತ್ತಿದ್ದರು وَيَقُولُونَ أَئِنَّا لَتَارِكُوٓاْ ءَالِهَتِنَا لِشَاعِرٍ مَّجۡنُونِۭ ٣٦ನಿಜವಾಗಿ ಅವರು (ದೇವದೂತರು), ಸತ್ಯದೊಂದಿಗೆ ಬಂದಿರುತ್ತಾರೆ ಮತ್ತು ಅವರು (ಹಿಂದಿನ) ದೇವದೂತರುಗಳನ್ನು ಸಮರ್ಥಿಸುತ್ತಾರೆ بَلۡ جَآءَ بِٱلۡحَقِّ وَصَدَّقَ ٱلۡمُرۡسَلِينَ ٣٧ನೀವು ಖಂಡಿತ ಯಾತನಾಮಯ ಶಿಕ್ಷೆಯನ್ನು ಸವಿಯುವಿರಿ إِنَّكُمۡ لَذَآئِقُواْ ٱلۡعَذَابِ ٱلۡأَلِيمِ ٣٨ಮತ್ತು ನಿಮಗೆ ನೀವೆಸಗುತ್ತಿದ್ದ ಕರ್ಮಗಳ ಫಲವಷ್ಟೇ ಸಿಗಲಿದೆ وَمَا تُجۡزَوۡنَ إِلَّا مَا كُنتُمۡ تَعۡمَلُونَ ٣٩ಅಲ್ಲಾಹನ ಆಯ್ದ ದಾಸರ ಹೊರತು إِلَّا عِبَادَ ٱللَّهِ ٱلۡمُخۡلَصِينَ ٤٠ಅವರಿಗಾಗಿ ನಿರ್ದಿಷ್ಟ ಆಹಾರವಿದೆ أُوْلَٰٓئِكَ لَهُمۡ رِزۡقٌ مَّعۡلُومٌ ٤١ಹಣ್ಣುಗಳೂ ಇವೆ ಮತ್ತು ಅವರು ಗೌರವಾನ್ವಿತರಾಗಿರುವರು فَوَٰكِهُ وَهُم مُّكۡرَمُونَ ٤٢ಕೊಡುಗೆಗಳು ತುಂಬಿರುವ ಸ್ವರ್ಗ ತೋಟಗಳಲ್ಲಿ فِي جَنَّٰتِ ٱلنَّعِيمِ ٤٣ಎದುರು ಬದಿರಾಗಿರುವ ಆಸನಗಳಲ್ಲಿ عَلَىٰ سُرُرٍ مُّتَقَٰبِلِينَ ٤٤ಹರಿಯುವ ಚಿಲುಮೆಗಳ ಪಾನೀಯಗಳನ್ನು ಅವರ ಸುತ್ತ ಒಯ್ಯಲಾಗುವುದು يُطَافُ عَلَيۡهِم بِكَأۡسٍ مِّن مَّعِينِۭ ٤٥ಅವು ಶುಭ್ರವಾಗಿದ್ದು, ಕುಡಿಯುವವರಿಗೆ ರುಚಿಕರವಾಗಿರುವವು بَيۡضَآءَ لَذَّةٍ لِّلشَّٰرِبِينَ ٤٦ಅದರಿಂದ, ಯಾವುದೇ ಸಂಕಟವಾಗದು ಮತ್ತು ಅವರು ಮದ ಮತ್ತರಾಗಲಾರರು لَا فِيهَا غَوۡلٌ وَلَا هُمۡ عَنۡهَا يُنزَفُونَ ٤٧ಅವರ ಬಳಿ ದೃಷ್ಟಿ ತಗ್ಗಿಸಿರುವ, ವಿಶಾಲ ಕಣ್ಣಿನವರು (ಸೇವಕಿಯರು) ಇರುವರು وَعِندَهُمۡ قَٰصِرَٰتُ ٱلطَّرۡفِ عِينٌ ٤٨ಅವರು, ಅಡಗಿಸಿಟ್ಟ ಮೊಟ್ಟೆಗಳಂತೆ (ಶುಭ್ರ ಹಾಗೂ ನಿರ್ಮಲರಾಗಿ) ಇರುವರು كَأَنَّهُنَّ بَيۡضٌ مَّكۡنُونٌ ٤٩ಅವರು (ಸ್ವರ್ಗವಾಸಿಗಳು) ಎದುರು ಬದುರಾಗಿ ಪರಸ್ಪರರೊಡನೆ ವಿಚಾರಿಸುವರು فَأَقۡبَلَ بَعۡضُهُمۡ عَلَىٰ بَعۡضٍ يَتَسَآءَلُونَ ٥٠ಅವರಲ್ಲೊಬ್ಬನು ಹೇಳುವನು; ನನಗೊಬ್ಬ ಸಂಗಾತಿ ಇದ್ದನು قَالَ قَآئِلٌ مِّنۡهُمۡ إِنِّي كَانَ لِي قَرِينٌ ٥١ಅವನು ನನ್ನೊಡನೆ ಹೇಳುತ್ತಿದ್ದನು; ‘‘ನೀನೇನು (ಪರಲೋಕವನ್ನು) ನಂಬುವವನಾಗಿರುವೆಯಾ?’’ يَقُولُ أَءِنَّكَ لَمِنَ ٱلۡمُصَدِّقِينَ ٥٢‘‘ನಾವು ಸತ್ತು ಕೇವಲ ಮಣ್ಣು ಹಾಗೂ ಎಲುಬುಗಳಾಗಿ ಬಿಟ್ಟ ಬಳಿಕ ನಮಗೆ ಪ್ರತಿಫಲ ಸಿಗಲಿಕ್ಕಿದೆಯೇ?’’ أَءِذَا مِتۡنَا وَكُنَّا تُرَابًا وَعِظَٰمًا أَءِنَّا لَمَدِينُونَ ٥٣ಅವನು (ಮತ್ತೆ) ‘‘ನೀವೀಗ (ಆತ ಎಲ್ಲಿದ್ದಾನೆಂದು) ಇಣುಕಿ ನೋಡಲು ಬಯಸುತ್ತೀರಾ?’’ ಎಂದು ಕೇಳುವನು قَالَ هَلۡ أَنتُم مُّطَّلِعُونَ ٥٤ತರುವಾಯ ಅವನು (ಸ್ವತಃ) ಇಣುಕಿ ನೋಡುವನು ಹಾಗೂ ತನ್ನ ಸಂಗಾತಿಯನ್ನು ನರಕದ ಮಧ್ಯದಲ್ಲಿ ಕಾಣುವನು فَٱطَّلَعَ فَرَءَاهُ فِي سَوَآءِ ٱلۡجَحِيمِ ٥٥ಮತ್ತು ಅವನು ಹೇಳುವನು; ‘‘ಅಲ್ಲಾಹನಾಣೆ! ನೀನಂತು ನನ್ನನ್ನು ನಾಶ ಮಾಡಿಯೇ ಬಿಡುತ್ತಿದ್ದೆ’’ قَالَ تَٱللَّهِ إِن كِدتَّ لَتُرۡدِينِ ٥٦ನನ್ನ ಒಡೆಯನ ಅನುಗ್ರಹವಿಲ್ಲದೆ ಹೋಗಿದ್ದರೆ, ನಾನೂ (ಬಂಧಿಗಳಾಗಿ) ಹಾಜರುಗೊಳಿಸಲಾದವರ ಸಾಲಿಗೆ ಸೇರಿರುತ್ತಿದ್ದೆ وَلَوۡلَا نِعۡمَةُ رَبِّي لَكُنتُ مِنَ ٱلۡمُحۡضَرِينَ ٥٧(ಸ್ವರ್ಗವಾಸಿಗಳು ಹೇಳುವರು;) ಇನ್ನು ನಮಗೇನು ಮರಣವಿಲ್ಲವೇ أَفَمَا نَحۡنُ بِمَيِّتِينَ ٥٨– ನಮ್ಮ ಪ್ರಥಮ ಮರಣದ ಹೊರತು? ಮತ್ತು ನಾವು ಶಿಕ್ಷೆಗೂ ಗುರಿಯಾಗಲಾರೆವು إِلَّا مَوۡتَتَنَا ٱلۡأُولَىٰ وَمَا نَحۡنُ بِمُعَذَّبِينَ ٥٩ಖಂಡಿತವಾಗಿಯೂ ಇದುವೇ ಮಹಾ ಸೌಭಾಗ್ಯವಾಗಿದೆ إِنَّ هَٰذَا لَهُوَ ٱلۡفَوۡزُ ٱلۡعَظِيمُ ٦٠ಶ್ರಮಿಸುವವರೆಲ್ಲಾ ಇದಕ್ಕಾಗಿಯೇ ಶ್ರಮಿಸಬೇಕು لِمِثۡلِ هَٰذَا فَلۡيَعۡمَلِ ٱلۡعَٰمِلُونَ ٦١ಈ ಆತಿಥ್ಯ ಉತ್ತಮವೋ ಅಥವಾ ‘ಝಕ್ಕೂಮ್’ ಮರವೋ أَذَٰلِكَ خَيۡرٌ نُّزُلًا أَمۡ شَجَرَةُ ٱلزَّقُّومِ ٦٢ಖಂಡಿತವಾಗಿಯೂ ನಾವು ಅದನ್ನು ಅಕ್ರಮಿಗಳ ಪಾಲಿಗೆ ಪರೀಕ್ಷೆಯಾಗಿಸಿರುವೆವು إِنَّا جَعَلۡنَٰهَا فِتۡنَةً لِّلظَّٰلِمِينَ ٦٣ಅದು ನರಕದ ತಳದಿಂದ ಬೆಳೆಯುವ ಮರ إِنَّهَا شَجَرَةٌ تَخۡرُجُ فِيٓ أَصۡلِ ٱلۡجَحِيمِ ٦٤ಅದರ ಗೆಲ್ಲುಗಳು ಶೈತಾನರ ತಲೆಗಳಂತಿರುವವು طَلۡعُهَا كَأَنَّهُۥ رُءُوسُ ٱلشَّيَٰطِينِ ٦٥ಅವರು (ನರಕವಾಸಿಗಳು) ಖಂಡಿತ ಅದನ್ನೇ ತಿನ್ನುವರು ಮತ್ತು ಅದರಿಂದಲೇ ತಮ್ಮ ಹೊಟ್ಟೆ ತುಂಬುವರು فَإِنَّهُمۡ لَأٓكِلُونَ مِنۡهَا فَمَالِـُٔونَ مِنۡهَا ٱلۡبُطُونَ ٦٦ಹಾಗೆಯೇ, ಅಲ್ಲಿ ಅವರಿಗಾಗಿ ಮಾಲಿನ್ಯ ಬೆರೆತ, ಕುದಿಯುತ್ತಿರುವ ಪಾನೀಯವಿರುವುದು ثُمَّ إِنَّ لَهُمۡ عَلَيۡهَا لَشَوۡبًا مِّنۡ حَمِيمٍ ٦٧ಕೊನೆಗೆ, ನರಕವೇ ಅವರು ಮರಳುವ ನೆಲೆಯಾಗಿರುವುದು ثُمَّ إِنَّ مَرۡجِعَهُمۡ لَإِلَى ٱلۡجَحِيمِ ٦٨ಅವರು, ತಮ್ಮ ಪೂರ್ವಜರು ದಾರಿಗೆಟ್ಟಿದ್ದನ್ನು ಕಂಡಿದ್ದರು إِنَّهُمۡ أَلۡفَوۡاْ ءَابَآءَهُمۡ ضَآلِّينَ ٦٩ಆದರೂ, ಅವರು ಅವರ ಹೆಜ್ಜೆ ಗುರುತುಗಳನ್ನೇ ಅನುಸರಿಸಿದರು فَهُمۡ عَلَىٰٓ ءَاثَٰرِهِمۡ يُهۡرَعُونَ ٧٠ನಿಜವಾಗಿ, ಅವರಿಗಿಂತ ಹಿಂದಿನ, ಅವರ ಪೂರ್ವಜರಲ್ಲಿ ಹೆಚ್ಚಿನವರು ದಾರಿಗೆಟ್ಟಿದ್ದರು وَلَقَدۡ ضَلَّ قَبۡلَهُمۡ أَكۡثَرُ ٱلۡأَوَّلِينَ ٧١ನಾವು ಅವರ ನಡುವೆ ದೂತರನ್ನು ಕಳಿಸಿದ್ದೆವು وَلَقَدۡ أَرۡسَلۡنَا فِيهِم مُّنذِرِينَ ٧٢ಹೀಗೆ ಎಚ್ಚರಿಕೆ ಪಡೆದವರ ಗತಿ ಏನಾಯಿತೆಂಬುದನ್ನು ನೋಡಿರಿ فَٱنظُرۡ كَيۡفَ كَانَ عَٰقِبَةُ ٱلۡمُنذَرِينَ ٧٣ಅಲ್ಲಾಹನ ಆಯ್ದ ದಾಸರ ಸ್ಥಿತಿ ಮಾತ್ರ ಭಿನ್ನವಾಗಿದೆ إِلَّا عِبَادَ ٱللَّهِ ٱلۡمُخۡلَصِينَ ٧٤ನೂಹರು ನಮಗೆ ಮೊರೆ ಇಟ್ಟರು. ನಾವು (ಮೊರೆಗಳಿಗೆ) ಅತ್ಯುತ್ತಮ ಉತ್ತರ ನೀಡುವವರಾಗಿದ್ದೇವೆ وَلَقَدۡ نَادَىٰنَا نُوحٌ فَلَنِعۡمَ ٱلۡمُجِيبُونَ ٧٥ನಾವು ಅವರನ್ನೂ ಅವರ ಮನೆಯವರನ್ನೂ ಮಹಾ ವಿಪತ್ತಿನಿಂದ ರಕ್ಷಿಸಿದೆವು وَنَجَّيۡنَٰهُ وَأَهۡلَهُۥ مِنَ ٱلۡكَرۡبِ ٱلۡعَظِيمِ ٧٦ಮತ್ತು ನಾವು ಅವರ ಸಂತತಿಯನ್ನು ಬಹುಕಾಲ ಉಳಿಸಿದೆವು وَجَعَلۡنَا ذُرِّيَّتَهُۥ هُمُ ٱلۡبَاقِينَ ٧٧ಮತ್ತು ನಾವು ಮುಂದಿನವರಲ್ಲಿ ಅವರ ನೆನಪನ್ನು ಸಂರಕ್ಷಿಸಿದೆವು وَتَرَكۡنَا عَلَيۡهِ فِي ٱلۡأٓخِرِينَ ٧٨ನೂಹರಿಗೆ ಶಾಂತಿ, ಸರ್ವಲೋಕಗಳಲ್ಲಿ سَلَٰمٌ عَلَىٰ نُوحٍ فِي ٱلۡعَٰلَمِينَ ٧٩ಖಂಡಿತವಾಗಿಯೂ ನಾವು ಇದೇ ರೀತಿ ಸತ್ಕರ್ಮಿಗಳನ್ನು ಪುರಸ್ಕರಿಸುತ್ತೇವೆ إِنَّا كَذَٰلِكَ نَجۡزِي ٱلۡمُحۡسِنِينَ ٨٠ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಾಗಿದ್ದರು إِنَّهُۥ مِنۡ عِبَادِنَا ٱلۡمُؤۡمِنِينَ ٨١ತರುವಾಯ ನಾವು ಇತರರನ್ನು ಮುಳುಗಿಸಿ ಬಿಟ್ಟೆವು ثُمَّ أَغۡرَقۡنَا ٱلۡأٓخَرِينَ ٨٢ಇನ್ನು, ಇಬ್ರಾಹೀಮರಂತು ಅವರ (ನೂಹರ) ಹಾದಿಯಲ್ಲೇ ನಡೆಯುವವರಾಗಿದ್ದರು ۞ وَإِنَّ مِن شِيعَتِهِۦ لَإِبۡرَٰهِيمَ ٨٣ಅವರು ನಿರ್ಮಲ ಮನಸ್ಸಿನೊಂದಿಗೆ ತಮ್ಮ ಒಡೆಯನ ಸನ್ನಿಧಿಗೆ ಬಂದರು إِذۡ جَآءَ رَبَّهُۥ بِقَلۡبٍ سَلِيمٍ ٨٤ಮತ್ತು ಅವರು ತಮ್ಮ ತಂದೆ ಹಾಗೂ ತಮ್ಮ ಜನಾಂಗದವರೊಡನೆ ಕೇಳಿದರು; ‘‘ನೀವು ಅದೇನನ್ನು ಪೂಜಿಸುತ್ತಿರುವಿರಿ?’’ إِذۡ قَالَ لِأَبِيهِ وَقَوۡمِهِۦ مَاذَا تَعۡبُدُونَ ٨٥‘‘ನೀವೇನು, ಅಲ್ಲಾಹನ ಜೊತೆ ಮಿಥ್ಯ ಶಕ್ತಿಗಳನ್ನು ದೇವರಾಗಿಸಲು ಬಯಸುವಿರಾ?’’ أَئِفۡكًا ءَالِهَةً دُونَ ٱللَّهِ تُرِيدُونَ ٨٦‘‘ಎಲ್ಲ ಲೋಕಗಳ ಒಡೆಯನ ಕುರಿತು ನಿಮ್ಮ ಅಭಿಪ್ರಾಯವೇನು?’’ فَمَا ظَنُّكُم بِرَبِّ ٱلۡعَٰلَمِينَ ٨٧ಆ ಬಳಿಕ ಅವರು ನಕ್ಷತ್ರಗಳೆಡೆಗೆ ದೃಷ್ಟಿ ಬೀರಿದರು فَنَظَرَ نَظۡرَةً فِي ٱلنُّجُومِ ٨٨ಮತ್ತು ನಾನು ಅಸ್ವಸ್ಥನಾಗಿ ಬಿಟ್ಟಿದ್ದೇನೆ ಎಂದರು فَقَالَ إِنِّي سَقِيمٌ ٨٩ಅವರೆಲ್ಲಾ (ಜನಾಂಗದವರೆಲ್ಲಾ) ಅವರನ್ನು (ಇಬ್ರಾಹೀಮರನ್ನು) ಬಿಟ್ಟು ಹೊರಟು ಹೋದರು فَتَوَلَّوۡاْ عَنۡهُ مُدۡبِرِينَ ٩٠ಅವರು (ಇಬ್ರಾಹೀಮರು) ಅವರ (ತಮ್ಮ ಜನಾಂಗದವರ) ದೇವರುಗಳೆಡೆಗೆ (ವಿಗ್ರಹಗಳೆಡೆಗೆ) ಗಮನ ಹರಿಸಿದರು ಮತ್ತು ಕೇಳಿದರು; ‘‘ನೀವು ಏನನ್ನೂ ತಿನ್ನುವುದಿಲ್ಲವೇ?’’ فَرَاغَ إِلَىٰٓ ءَالِهَتِهِمۡ فَقَالَ أَلَا تَأۡكُلُونَ ٩١‘‘ನಿಮಗೇನಾಗಿದೆ? ನೀವೇಕೆ ಮಾತನಾಡುತ್ತಿಲ್ಲ?’’ مَا لَكُمۡ لَا تَنطِقُونَ ٩٢ಕೊನೆಗೆ ಅವರು ಅವುಗಳ ಮೇಲೆ ಮುಗಿಬಿದ್ದು ಬಲವಾಗಿ ಹೊಡೆದರು فَرَاغَ عَلَيۡهِمۡ ضَرۡبَۢا بِٱلۡيَمِينِ ٩٣ಅವರೆಲ್ಲಾ (ಜನಾಂಗದವರೆಲ್ಲಾ) ಅವರೆಡೆಗೆ ಧಾವಿಸಿ ಬಂದರು فَأَقۡبَلُوٓاْ إِلَيۡهِ يَزِفُّونَ ٩٤ಅವರು (ಇಬ್ರಾಹೀಮರು ಹೇಳಿದರು;) ‘‘ನೀವೇನು, ಸ್ವತಃ ನೀವೇ ಕೆತ್ತಿ ನಿರ್ಮಿಸಿದವುಗಳನ್ನು ಪೂಜಿಸುತ್ತೀರಾ?’’ قَالَ أَتَعۡبُدُونَ مَا تَنۡحِتُونَ ٩٥‘‘ನಿಮ್ಮನ್ನು ಮತ್ತು ನೀವು ರಚಿಸುವವುಗಳನ್ನೆಲ್ಲಾ ಅಲ್ಲಾಹನೇ ಸೃಷ್ಟಿಸಿರುವನು’’ وَٱللَّهُ خَلَقَكُمۡ وَمَا تَعۡمَلُونَ ٩٦ಅವರು (ಜನಾಂಗದವರು, ಪರಸ್ಪರರೊಡನೆ) ‘‘ಅವನಿಗಾಗಿ ಒಂದು ಅಗ್ನಿ ಕುಂಡವನ್ನು ರಚಿಸಿರಿ ಮತ್ತು ಅವನನ್ನು ಬೆಂಕಿಗೆಸೆದು ಬಿಡಿರಿ’’ ಎಂದರು قَالُواْ ٱبۡنُواْ لَهُۥ بُنۡيَٰنًا فَأَلۡقُوهُ فِي ٱلۡجَحِيمِ ٩٧ಅವರು (ಜನಾಂಗದವರು), ಅವರಿಗೆ ಹಾನಿ ಮಾಡ ಬಯಸಿದ್ದರು. ಆದರೆ ನಾವು ಅವರನ್ನು ಕೀಳಾಗಿಸಿಬಿಟ್ಟೆವು فَأَرَادُواْ بِهِۦ كَيۡدًا فَجَعَلۡنَٰهُمُ ٱلۡأَسۡفَلِينَ ٩٨ಅವರು (ಇಬ್ರಾಹೀಮ್) ಹೇಳಿದರು; ನಾನು ನನ್ನ ಒಡೆಯನೆಡೆಗೆ ತೆರಳುತ್ತೇನೆ. ಅವನು ನನಗೆ ಸರಿದಾರಿಯನ್ನು ತೋರಬಹುದು وَقَالَ إِنِّي ذَاهِبٌ إِلَىٰ رَبِّي سَيَهۡدِينِ ٩٩‘‘ನನ್ನೊಡೆಯಾ, ನನಗೆ ಶ್ರೇಷ್ಠ ಸಂತತಿಗಳನ್ನು ದಯ ಪಾಲಿಸು’’ (ಎಂದು ಅವರು ಪ್ರಾರ್ಥಿಸಿದರು) رَبِّ هَبۡ لِي مِنَ ٱلصَّٰلِحِينَ ١٠٠ಕೊನೆಗೆ ನಾವು ಅವರಿಗೆ ಒಬ್ಬ ವಿವೇಕವಂತ ಪುತ್ರನ (ಇಸ್ಮಾಈಲರ) ಶುಭವಾರ್ತೆ ನೀಡಿದೆವು فَبَشَّرۡنَٰهُ بِغُلَٰمٍ حَلِيمٍ ١٠١ಅವರು (ಇಸ್ಮಾಈಲರು) ಅವರ ಜೊತೆ ಓಡಾಡಬಲ್ಲವರಾದಾಗ ಅವರು ಹೇಳಿದರು; ‘‘ನಾನು ನಿನ್ನ ಕೊರಳು ಕೊಯ್ಯುತ್ತಿರುವುದಾಗಿ ಸ್ವಪ್ನದಲ್ಲಿ ಕಂಡಿದ್ದೇನೆ. ಈ ಕುರಿತು ನಿನ್ನ ಅನಿಸಿಕೆ ಏನು?’’ ಅವರು (ಇಸ್ಮಾಈಲ್) ಹೇಳಿದರು ; ‘‘ಅಪ್ಪಾ, ನಿಮಗೆ ಆದೇಶಿಸಲಾಗಿರುವುದನ್ನು ನೀವು ಮಾಡಿಬಿಡಿ. ಅಲ್ಲಾಹನಿಚ್ಛಿಸಿದರೆ, ನೀವು ನನ್ನನ್ನು ಸಹನಶೀಲನಾಗಿ ಕಾಣುವಿರಿ’’ فَلَمَّا بَلَغَ مَعَهُ ٱلسَّعۡيَ قَالَ يَٰبُنَيَّ إِنِّيٓ أَرَىٰ فِي ٱلۡمَنَامِ أَنِّيٓ أَذۡبَحُكَ فَٱنظُرۡ مَاذَا تَرَىٰۚ قَالَ يَٰٓأَبَتِ ٱفۡعَلۡ مَا تُؤۡمَرُۖ سَتَجِدُنِيٓ إِن شَآءَ ٱللَّهُ مِنَ ٱلصَّٰبِرِينَ ١٠٢ಹೀಗೆ ಅವರಿಬ್ಬರೂ ವಿಧೇಯತೆ ತೋರಿದರು ಮತ್ತು ಅವರು (ಇಬ್ರಾಹೀಮರು) ಅವರನ್ನು (ಪುತ್ರನನ್ನು), ಮುಖ ಕೆಳಗಾಗಿಸಿ ಮಲಗಿಸಿದರು فَلَمَّآ أَسۡلَمَا وَتَلَّهُۥ لِلۡجَبِينِ ١٠٣ಆಗ ನಾವು ಅವರನ್ನು ಕರೆದೆವು ; ‘‘ಇಬ್ರಾಹೀಮರೇ,’’ وَنَٰدَيۡنَٰهُ أَن يَٰٓإِبۡرَٰهِيمُ ١٠٤‘‘ನೀವು ಸ್ವಪ್ನವನ್ನು ಸಾಕಾರಗೊಳಿಸಿದಿರಿ’’. ನಾವು ಸಜ್ಜನರನ್ನು ಖಂಡಿತ ಇದೇ ರೀತಿ ಪುರಸ್ಕರಿಸುತ್ತೇವೆ قَدۡ صَدَّقۡتَ ٱلرُّءۡيَآۚ إِنَّا كَذَٰلِكَ نَجۡزِي ٱلۡمُحۡسِنِينَ ١٠٥ಅದು ಖಂಡಿತ ಒಂದು ಸ್ಪಷ್ಟ ಪರೀಕ್ಷೆಯಾಗಿತ್ತು إِنَّ هَٰذَا لَهُوَ ٱلۡبَلَٰٓؤُاْ ٱلۡمُبِينُ ١٠٦ನಾವು ಅವರಿಗೆ (ಬಲಿದಾನಕ್ಕಾಗಿ) ಒಂದು ಮಹಾ ಬಲಿಪಶುವನ್ನು ನೀಡಿದೆವು وَفَدَيۡنَٰهُ بِذِبۡحٍ عَظِيمٍ ١٠٧ಮತ್ತು ನಾವು ಅದರ (ಆ ಘಟನೆಯ) ನೆನಪನ್ನು ಮುಂದಿನವರಲ್ಲಿ ಉಳಿಸಿದೆವು وَتَرَكۡنَا عَلَيۡهِ فِي ٱلۡأٓخِرِينَ ١٠٨ಇಬ್ರಾಹೀಮರಿಗೆ ಶಾಂತಿ سَلَٰمٌ عَلَىٰٓ إِبۡرَٰهِيمَ ١٠٩ನಾವು ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ كَذَٰلِكَ نَجۡزِي ٱلۡمُحۡسِنِينَ ١١٠ಅವರು ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು إِنَّهُۥ مِنۡ عِبَادِنَا ٱلۡمُؤۡمِنِينَ ١١١ಮುಂದೆ ನಾವು ಅವರಿಗೆ ಇಸ್‌ಹಾಕ್‌ರ ಶುಭ ವಾರ್ತೆಯನ್ನು ನೀಡಿದೆವು. ಅವರೊಬ್ಬ ಸಜ್ಜನ ದೇವದೂತರಾಗಿದ್ದರು وَبَشَّرۡنَٰهُ بِإِسۡحَٰقَ نَبِيًّا مِّنَ ٱلصَّٰلِحِينَ ١١٢ನಾವು ಅವರಿಗೂ ಇಸ್‌ಹಾಕರಿಗೂ ಸಮೃದ್ಧಿಯನ್ನು ನೀಡಿದೆವು. ಅವರಿಬ್ಬರ ಸಂತತಿಗಳಲ್ಲಿ ಸಜ್ಜನರೂ ಇದ್ದರು, ಸ್ವತಃ ತಮ್ಮ ಮೇಲೆ ಸ್ಪಷ್ಟ ಅಕ್ರಮವೆಸಗಿದವರೂ ಇದ್ದಾರೆ وَبَٰرَكۡنَا عَلَيۡهِ وَعَلَىٰٓ إِسۡحَٰقَۚ وَمِن ذُرِّيَّتِهِمَا مُحۡسِنٌ وَظَالِمٌ لِّنَفۡسِهِۦ مُبِينٌ ١١٣ನಾವು ಮೂಸಾ ಮತ್ತು ಹಾರೂನರ ಮೇಲೆ ಕೃಪೆ ತೋರಿದೆವು وَلَقَدۡ مَنَنَّا عَلَىٰ مُوسَىٰ وَهَٰرُونَ ١١٤ಮತ್ತು ನಾವು ಅವರಿಬ್ಬರನ್ನೂ ಅವರ ಜನಾಂಗದವರನ್ನೂ ಮಹಾ ಸಂಕಟದಿಂದ ವಿಮೋಚಿಸಿದೆವು وَنَجَّيۡنَٰهُمَا وَقَوۡمَهُمَا مِنَ ٱلۡكَرۡبِ ٱلۡعَظِيمِ ١١٥ನಾವು ಅವರಿಗೆ ನೆರವಾದೆವು. ಆದ್ದರಿಂದ ಅವರು ವಿಜಯಿಗಳಾದರು وَنَصَرۡنَٰهُمۡ فَكَانُواْ هُمُ ٱلۡغَٰلِبِينَ ١١٦ನಾವು ಅವರಿಬ್ಬರಿಗೂ ಸವಿಸ್ತಾರವಾದ ಗ್ರಂಥವನ್ನು ನೀಡಿದ್ದೆವು وَءَاتَيۡنَٰهُمَا ٱلۡكِتَٰبَ ٱلۡمُسۡتَبِينَ ١١٧ಮತ್ತು ನಾವು ಅವರಿಗೆ ನೇರ ಮಾರ್ಗವನ್ನು ತೋರಿಸಿದ್ದೆವು وَهَدَيۡنَٰهُمَا ٱلصِّرَٰطَ ٱلۡمُسۡتَقِيمَ ١١٨ಮುಂದಿನವರಲ್ಲಿ ನಾವು ಅವರ ನೆನಪನ್ನು ಉಳಿಸಿದೆವು وَتَرَكۡنَا عَلَيۡهِمَا فِي ٱلۡأٓخِرِينَ ١١٩ಮೂಸಾ ಮತ್ತು ಹಾರೂನರಿಗೆ ಶಾಂತಿ ಸಿಗಲಿ سَلَٰمٌ عَلَىٰ مُوسَىٰ وَهَٰرُونَ ١٢٠ನಾವು ಸಜ್ಜನರನ್ನು ಖಂಡಿತ ಇದೇರೀತಿ ಪುರಸ್ಕರಿಸುತ್ತೇವೆ إِنَّا كَذَٰلِكَ نَجۡزِي ٱلۡمُحۡسِنِينَ ١٢١ಅವರಿಬ್ಬರೂ ನಮ್ಮ ವಿಶ್ವಾಸಿ ದಾಸರಾಗಿದ್ದರು إِنَّهُمَا مِنۡ عِبَادِنَا ٱلۡمُؤۡمِنِينَ ١٢٢ಮತ್ತು ಇಲ್ಯಾಸ್ ಖಂಡಿತ ದೇವದೂತರಲ್ಲೊಬ್ಬರಾಗಿದ್ದರು وَإِنَّ إِلۡيَاسَ لَمِنَ ٱلۡمُرۡسَلِينَ ١٢٣ಅವರು ತಮ್ಮ ಜನಾಂಗದವರೊಡನೆ ಹೇಳಿದರು; ‘‘ನೀವೇನು (ಅಲ್ಲಾಹನಿಗೆ) ಅಂಜುವುದಿಲ್ಲವೇ?’’ إِذۡ قَالَ لِقَوۡمِهِۦٓ أَلَا تَتَّقُونَ ١٢٤‘‘ನೀವೇನು ‘ಬಅ್ಲ್‌’ ದೇವಿಗೆ ಮೊರೆ ಇಡುತ್ತೀರಾ? ಮತ್ತು ಸರ್ವ ಶ್ರೇಷ್ಠ ಸೃಷ್ಟಿಕರ್ತನನ್ನು ಬಿಟ್ಟು ಬಿಡುತ್ತೀರಾ?’’ أَتَدۡعُونَ بَعۡلًا وَتَذَرُونَ أَحۡسَنَ ٱلۡخَٰلِقِينَ ١٢٥‘‘ಅಲ್ಲಾಹನೇ ನಿಮ್ಮ ಒಡೆಯನೂ ಹೌದು ನಿಮ್ಮ ಪೂರ್ವಜರ ಒಡೆಯನೂ ಹೌದು’’ ٱللَّهَ رَبَّكُمۡ وَرَبَّ ءَابَآئِكُمُ ٱلۡأَوَّلِينَ ١٢٦ಅವರು (ಜನಾಂಗದವರು) ಅವರನ್ನು ತಿರಸ್ಕರಿಸಿದರು. ಅವರನ್ನು ಖಂಡಿತ (ಶಿಕ್ಷೆಗಾಗಿ) ಹಾಜರು ಪಡಿಸಲಾಗುವುದು فَكَذَّبُوهُ فَإِنَّهُمۡ لَمُحۡضَرُونَ ١٢٧ಅಲ್ಲಾಹನ ಆಯ್ದ ದಾಸರ ಹೊರತು إِلَّا عِبَادَ ٱللَّهِ ٱلۡمُخۡلَصِينَ ١٢٨ಅವರ (ಇಲ್ಯಾಸರ) ನೆನಪನ್ನು ನಾವು ಮುಂದಿನವರಲ್ಲಿ ಉಳಿಸಿರುವೆವು وَتَرَكۡنَا عَلَيۡهِ فِي ٱلۡأٓخِرِينَ ١٢٩ಇಲ್ಯಾಸ್‌ರಿಗೆ ಶಾಂತಿ ಸಿಗಲಿ سَلَٰمٌ عَلَىٰٓ إِلۡ يَاسِينَ ١٣٠ನಾವು ಖಂಡಿತ ಸಜ್ಜನರನ್ನು ಇದೇ ರೀತಿ ಪುರಸ್ಕರಿಸುತ್ತೇವೆ إِنَّا كَذَٰلِكَ نَجۡزِي ٱلۡمُحۡسِنِينَ ١٣١ಅವರು ಖಂಡಿತ ನಮ್ಮ ವಿಶ್ವಾಸಿ ದಾಸರಲ್ಲೊಬ್ಬರಾಗಿದ್ದರು إِنَّهُۥ مِنۡ عِبَادِنَا ٱلۡمُؤۡمِنِينَ ١٣٢ಇನ್ನು ಲೂತರು ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು وَإِنَّ لُوطًا لَّمِنَ ٱلۡمُرۡسَلِينَ ١٣٣ನಾವು ಅವರನ್ನು ಹಾಗೂ ಅವರ ಮನೆಯವರನ್ನೆಲ್ಲಾ ರಕ್ಷಿಸಿದೆವು إِذۡ نَجَّيۡنَٰهُ وَأَهۡلَهُۥٓ أَجۡمَعِينَ ١٣٤ಹಿಂದೆ ಉಳಿದುಕೊಂಡ ಒಬ್ಬ ವೃದ್ಧೆಯ ಹೊರತು إِلَّا عَجُوزًا فِي ٱلۡغَٰبِرِينَ ١٣٥(ಅವರ ಜನಾಂಗದ) ಇತರರನ್ನು ನಾವು ನಾಶ ಮಾಡಿಬಿಟ್ಟೆವು ثُمَّ دَمَّرۡنَا ٱلۡأٓخَرِينَ ١٣٦ನೀವಂತು ಅವರ (ನಾಡುಗಳ) ಮೇಲಿಂದಲೇ ಹಾದು ಹೋಗುತ್ತೀರಿ – ಹಗಲಲ್ಲಿ – وَإِنَّكُمۡ لَتَمُرُّونَ عَلَيۡهِم مُّصۡبِحِينَ ١٣٧ಮತ್ತು ಇರುಳಲ್ಲಿ. ನೀವೇನು ಆಲೋಚಿಸುವುದಿಲ್ಲವೇ وَبِٱلَّيۡلِۚ أَفَلَا تَعۡقِلُونَ ١٣٨ಯೂನುಸ್ ಖಂಡಿತ ನಮ್ಮ ದೂತರಲ್ಲೊಬ್ಬರಾಗಿದ್ದರು وَإِنَّ يُونُسَ لَمِنَ ٱلۡمُرۡسَلِينَ ١٣٩ಅವರು ತಮ್ಮ ತುಂಬಿದ ಹಡಗಿನೆಡೆಗೆ ಧಾವಿಸಿದರು إِذۡ أَبَقَ إِلَى ٱلۡفُلۡكِ ٱلۡمَشۡحُونِ ١٤٠(ಹಡಗು ಮುಳುಗುವ ಹಂತದಲ್ಲಿ) ಅವರು (ಅದೃಷ್ಟದ) ಚೀಟಿ ಎತ್ತುವುದಕ್ಕೆ ಒಪ್ಪಿದರು ಮತ್ತು ಸೋತು ಹೋದರು فَسَاهَمَ فَكَانَ مِنَ ٱلۡمُدۡحَضِينَ ١٤١ಕೊನೆಗೆ (ಸಮುದ್ರಕ್ಕೆಸೆಯಲಾದ) ಅವರನ್ನು ಮೀನು ನುಂಗಿತು. ಆಗ ಅವರು ತಮ್ಮನ್ನೇ ದೂಷಿಸಿಕೊಂಡರು فَٱلۡتَقَمَهُ ٱلۡحُوتُ وَهُوَ مُلِيمٌ ١٤٢ಒಂದು ವೇಳೆ ಅವರು ಅಲ್ಲಾಹನ ಪಾವಿತ್ರವನ್ನು ಜಪಿಸುತ್ತಿರುವವರಾಗದೆ ಇದ್ದಿದ್ದರೆ فَلَوۡلَآ أَنَّهُۥ كَانَ مِنَ ٱلۡمُسَبِّحِينَ ١٤٣ಪುನರುತ್ಥಾನದ ದಿನದವರೆಗೂ ಅವರು ಅದರ (ಮೀನಿನ) ಹೊಟ್ಟೆಯಲ್ಲೇ ಉಳಿಯುತ್ತಿದ್ದರು لَلَبِثَ فِي بَطۡنِهِۦٓ إِلَىٰ يَوۡمِ يُبۡعَثُونَ ١٤٤ಕೊನೆಗೆ ನಾವು ಅವರನ್ನು ಬಯಲಿಗೆ ಎಸೆದು ಬಿಟ್ಟೆವು. ಆಗ ಅವರು ತುಂಬಾ ಕ್ಷೀಣರಾಗಿದ್ದರು ۞ فَنَبَذۡنَٰهُ بِٱلۡعَرَآءِ وَهُوَ سَقِيمٌ ١٤٥ನಾವು ಅವರ ಬಳಿ ಬಳ್ಳಿಗಳಿರುವ ಗಿಡವನ್ನು ಬೆಳೆಸಿದೆವು وَأَنۢبَتۡنَا عَلَيۡهِ شَجَرَةً مِّن يَقۡطِينٍ ١٤٦ಮತ್ತು ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಜನರಿದ್ದಲ್ಲಿಗೆ ಕಳಿಸಿದೆವು وَأَرۡسَلۡنَٰهُ إِلَىٰ مِاْئَةِ أَلۡفٍ أَوۡ يَزِيدُونَ ١٤٧ಅವರು (ಆ ನಾಡಿನವರು) ನಂಬಿದರು ಮತ್ತು ಒಂದು ನಿರ್ದಿಷ್ಟ ಕಾಲದ ತನಕ ನಾವು ಅವರಿಗೆ ಧಾರಾಳ ಸಂಪನ್ನತೆ ನೀಡಿದೆವು فَـَٔامَنُواْ فَمَتَّعۡنَٰهُمۡ إِلَىٰ حِينٍ ١٤٨ಇದೀಗ ಅವರೊಡನೆ ಕೇಳಿರಿ. ನಿಮ್ಮ ಒಡೆಯನಿಗೆ ಪುತ್ರಿಯರು ಮತ್ತು ಅವರಿಗೆ ಪುತ್ರರೇ فَٱسۡتَفۡتِهِمۡ أَلِرَبِّكَ ٱلۡبَنَاتُ وَلَهُمُ ٱلۡبَنُونَ ١٤٩ನಾವೇನು ಮಲಕ್‌ಗಳನ್ನು ಸ್ತ್ರೀಯರಾಗಿ ಸೃಷ್ಟಿಸಿರುವೆವೇ ? ಅದಕ್ಕೇನು ಅವರು ಸಾಕ್ಷಿಗಳಾಗಿದ್ದರೇ أَمۡ خَلَقۡنَا ٱلۡمَلَٰٓئِكَةَ إِنَٰثًا وَهُمۡ شَٰهِدُونَ ١٥٠ನಿಮಗೆ ತಿಳಿದಿರಲಿ. ಅವರು ಖಂಡಿತ ತಾವೇ ರಚಿಸಿಕೊಂಡ ಸುಳ್ಳುಗಳನ್ನು ಹೇಳುತ್ತಿದ್ದಾರೆ أَلَآ إِنَّهُم مِّنۡ إِفۡكِهِمۡ لَيَقُولُونَ ١٥١ಅಲ್ಲಾಹನಿಗೆ ಸಂತತಿಗಳಿದ್ದಾರೆಂದು (ಅವರು ಹೇಳುತ್ತಾರೆ). ಅವರು ಖಂಡಿತ ಸುಳ್ಳು ಹೇಳುತ್ತಿದ್ದಾರೆ وَلَدَ ٱللَّهُ وَإِنَّهُمۡ لَكَٰذِبُونَ ١٥٢ಅವನೇನು ಪುತ್ರರಿಗಿಂತ ಪುತ್ರಿಯರಿಗೆ ಪ್ರಾಶಸ್ತ್ಯ ನೀಡಿದನೇ أَصۡطَفَى ٱلۡبَنَاتِ عَلَى ٱلۡبَنِينَ ١٥٣ನಿಮಗೇನಾಗಿದೆ? ನೀವು ಅದೆಂತಹ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ مَا لَكُمۡ كَيۡفَ تَحۡكُمُونَ ١٥٤ನೀವು ಪಾಠ ಕಲಿಯುವುದಿಲ್ಲವೇ أَفَلَا تَذَكَّرُونَ ١٥٥ಅಥವಾ ನಿಮ್ಮ ಬಳಿ ಸ್ಪಷ್ಟ ಪುರಾವೆಯೇನಾದರೂ ಇದೆಯೇ أَمۡ لَكُمۡ سُلۡطَٰنٌ مُّبِينٌ ١٥٦ನೀವು ಸತ್ಯವಂತರಾಗಿದ್ದರೆ ತನ್ನಿರಿ, ನಿಮ್ಮ ಗ್ರಂಥವನ್ನು فَأۡتُواْ بِكِتَٰبِكُمۡ إِن كُنتُمۡ صَٰدِقِينَ ١٥٧ಅವರು ಅವನ (ಅಲ್ಲಾಹನ) ಹಾಗೂ ಜಿನ್ನ್‌ಗಳ ನಡುವೆ ಸಂಬಂಧ ಕಲ್ಪಿಸುತ್ತಾರೆ. ತಮ್ಮನ್ನು (ನರಕದೆದುರು) ಹಾಜರುಗೊಳಿಸಲಾಗುವುದೆಂದು (ಧಿಕ್ಕಾರಿ) ಜಿನ್ನ್‌ಗಳಿಗೆ ಖಂಡಿತ ತಿಳಿದಿದೆ وَجَعَلُواْ بَيۡنَهُۥ وَبَيۡنَ ٱلۡجِنَّةِ نَسَبًاۚ وَلَقَدۡ عَلِمَتِ ٱلۡجِنَّةُ إِنَّهُمۡ لَمُحۡضَرُونَ ١٥٨ಅಲ್ಲಾಹನು ಅವರ ಎಲ್ಲ ಆರೋಪಗಳಿಂದ ಮುಕ್ತನಾಗಿದ್ದಾನೆ سُبۡحَٰنَ ٱللَّهِ عَمَّا يَصِفُونَ ١٥٩ಅಲ್ಲಾಹನು ಆಯ್ದುಕೊಂಡ ದಾಸರು ಮಾತ್ರ ಭಿನ್ನರಾಗಿರುತ್ತಾರೆ إِلَّا عِبَادَ ٱللَّهِ ٱلۡمُخۡلَصِينَ ١٦٠ಖಂಡಿತವಾಗಿಯೂ ನೀವು ಮತ್ತು ನೀವು ಪೂಜಿಸುವ ವಸ್ತುಗಳು – فَإِنَّكُمۡ وَمَا تَعۡبُدُونَ ١٦١ಅವನ (ಅಲ್ಲಾಹನ) ವಿಷಯದಲ್ಲಿ ಯಾರನ್ನೂ ಮೋಸಗೊಳಿಸುವಂತಿಲ್ಲ – مَآ أَنتُمۡ عَلَيۡهِ بِفَٰتِنِينَ ١٦٢ನರಕಕ್ಕೆ ಹೋಗುವವನೆಂದು ವಿಧಿಸಲ್ಪಟ್ಟವನ ಹೊರತು إِلَّا مَنۡ هُوَ صَالِ ٱلۡجَحِيمِ ١٦٣(ಮಲಕ್‌ಗಳು ಹೇಳುತ್ತಾರೆ:) ‘‘ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನವು ನಿಶ್ಚಿತವಾಗಿದೆ وَمَا مِنَّآ إِلَّا لَهُۥ مَقَامٌ مَّعۡلُومٌ ١٦٤ಮತ್ತು ನಾವು (ಅಲ್ಲಾಹನ ಮಂದೆ) ಸಾಲುಗಟ್ಟಿ ನಿಂತಿರುತ್ತೇವೆ وَإِنَّا لَنَحۡنُ ٱلصَّآفُّونَ ١٦٥ಮತ್ತು ನಾವು ಖಂಡಿತ (ಅಲ್ಲಾಹನ) ಪಾವಿತ್ರವನ್ನು ಜಪಿಸುತ್ತಿರುತ್ತೇವೆ‘‘ وَإِنَّا لَنَحۡنُ ٱلۡمُسَبِّحُونَ ١٦٦ಈ ಹಿಂದೆ ಅವರು (ಧಿಕ್ಕಾರಿಗಳು) ಹೇಳುತ್ತಿದ್ದರು وَإِن كَانُواْ لَيَقُولُونَ ١٦٧‘‘ನಮ್ಮ ಬಳಿ ಗತ ಕಾಲದವರ ಬೋಧನೆಗಳು (ದಿವ್ಯ ಗ್ರಂಥ) ಇದ್ದಿದ್ದರೆ لَوۡ أَنَّ عِندَنَا ذِكۡرًا مِّنَ ٱلۡأَوَّلِينَ ١٦٨ನಾವು ಖಂಡಿತ ಆಯ್ದ ದಾಸರ ಸಾಲಿಗೆ ಸೇರಿರುತ್ತಿದ್ದೆವು’’ لَكُنَّا عِبَادَ ٱللَّهِ ٱلۡمُخۡلَصِينَ ١٦٩ಆದರೆ (ದಿವ್ಯ ಗ್ರಂಥವು ಬಂದಾಗ) ಅವರು ಅದನ್ನು ಧಿಕ್ಕರಿಸಿದರು. ಇದೀಗ ಅದರ ಪರಿಣಾಮವು ಅವರಿಗೆ ತಿಳಿಯಲಿದೆ فَكَفَرُواْ بِهِۦۖ فَسَوۡفَ يَعۡلَمُونَ ١٧٠ದೂತರಾಗಿರುವ ನಮ್ಮ ದಾಸರ ವಿಷಯದಲ್ಲಿ ನಮ್ಮ ಹೇಳಿಕೆಯು ಈಗಾಗಲೇ ವಿಧಿತವಾಗಿದೆ وَلَقَدۡ سَبَقَتۡ كَلِمَتُنَا لِعِبَادِنَا ٱلۡمُرۡسَلِينَ ١٧١(ಅದೇನೆಂದರೆ), ಅವರಿಗೆ ಖಂಡಿತ ಸಹಾಯ ಸಿಗಲಿದೆ إِنَّهُمۡ لَهُمُ ٱلۡمَنصُورُونَ ١٧٢ಮತ್ತು ಖಂಡಿತವಾಗಿಯೂ ನಮ್ಮ ಪಡೆಗಳೇ ಗೆಲ್ಲುವವು وَإِنَّ جُندَنَا لَهُمُ ٱلۡغَٰلِبُونَ ١٧٣(ದೂತರೇ,) ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು (ಧಿಕ್ಕಾರಿಗಳನ್ನು) ಕಡೆಗಣಿಸಿರಿ فَتَوَلَّ عَنۡهُمۡ حَتَّىٰ حِينٍ ١٧٤ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು وَأَبۡصِرۡهُمۡ فَسَوۡفَ يُبۡصِرُونَ ١٧٥ಅವರೇನು, ನಮ್ಮ ಶಿಕ್ಷೆಗಾಗಿ ಆತುರ ಪಡುತ್ತಿದ್ದಾರೆಯೇ أَفَبِعَذَابِنَا يَسۡتَعۡجِلُونَ ١٧٦ಅದು ಅವರ ಅಂಗಳಕ್ಕೆ ಬಂದಿಳಿದಾಗ, ಈಗಾಗಲೆ ಎಚ್ಚರಿಸಲ್ಪಟ್ಟವರ ಪಾಲಿಗೆ ಅದು ಬಹಳ ಕೆಟ್ಟ ಮುಂಜಾನೆಯಾಗಿರುವುದು فَإِذَا نَزَلَ بِسَاحَتِهِمۡ فَسَآءَ صَبَاحُ ٱلۡمُنذَرِينَ ١٧٧ಸದ್ಯ, ಒಂದು ನಿರ್ದಿಷ್ಟ ಕಾಲದ ತನಕ ನೀವು ಅವರನ್ನು ಕಡೆಗಣಿಸಿರಿ وَتَوَلَّ عَنۡهُمۡ حَتَّىٰ حِينٍ ١٧٨ಮತ್ತು ನೀವು ಅವರನ್ನು ನೋಡುತ್ತಲಿರಿ. ಅವರು ಶೀಘ್ರವೇ (ತಮ್ಮ ಗತಿಯನ್ನು) ಕಾಣುವರು وَأَبۡصِرۡ فَسَوۡفَ يُبۡصِرُونَ ١٧٩ನಿಮ್ಮ ಪಾವನ (ಗೌರವಾನ್ವಿತ) ಒಡೆಯನು, ಅವರು ಹೊರಿಸುವ ಎಲ್ಲ ಆರೋಪಗಳಿಂದ ಸಂಪೂರ್ಣ ಮುಕ್ತನಾಗಿದ್ದಾನೆ سُبۡحَٰنَ رَبِّكَ رَبِّ ٱلۡعِزَّةِ عَمَّا يَصِفُونَ ١٨٠ದೂತರಿಗೆ ಶಾಂತಿ ಸಿಗಲಿ وَسَلَٰمٌ عَلَى ٱلۡمُرۡسَلِينَ ١٨١ಮತ್ತು ಎಲ್ಲ ಪ್ರಶಂಸೆಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು وَٱلۡحَمۡدُ لِلَّهِ رَبِّ ٱلۡعَٰلَمِينَ ١٨٢ಸ್ವಾದ್. ಉಪದೇಶ ತುಂಬಿರುವ ಕುರ್‌ಆನಿನಾಣೆ

الترجمة: Abdussalam Puthige.