بِسۡمِ ٱللَّهِ ٱلرَّحۡمَٰنِ ٱلرَّحِيمِ
وَٱلشَّمۡسِ وَضُحَىٰهَا ١ಸೂರ್ಯನ ಹಾಗೂ ಅದರ ಬೆಳಕಿನಾಣೆ وَٱلۡقَمَرِ إِذَا تَلَىٰهَا ٢ಮತ್ತು ಅದರ (ಸೂರ್ಯನ) ಬೆನ್ನಿಗೇ ಉದಯಿಸುವ ಚಂದ್ರನಾಣೆ وَٱلنَّهَارِ إِذَا جَلَّىٰهَا ٣ಹಗಲಿನ ಹಾಗೂ ಅದನ್ನು ಬೆಳಗಿಸಿದವನಾಣೆ وَٱلَّيۡلِ إِذَا يَغۡشَىٰهَا ٤ಅದನ್ನು ಮರೆ ಮಾಚಿಬಿಡುವ ರಾತ್ರಿಯಾಣೆ وَٱلسَّمَآءِ وَمَا بَنَىٰهَا ٥ಆಕಾಶದ ಹಾಗೂ ಅದನ್ನು ನಿರ್ಮಿಸಿದವನಾಣೆ وَٱلۡأَرۡضِ وَمَا طَحَىٰهَا ٦ಭೂಮಿಯ ಹಾಗೂ ಅದನ್ನು ಹರಡಿದವನಾಣೆ وَنَفۡسٍ وَمَا سَوَّىٰهَا ٧ಮನುಷ್ಯ ಚಿತ್ತದ ಹಾಗೂ ಅದನ್ನು ರೂಪಿಸಿದವನಾಣೆ فَأَلۡهَمَهَا فُجُورَهَا وَتَقۡوَىٰهَا ٨ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ قَدۡ أَفۡلَحَ مَن زَكَّىٰهَا ٩ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು وَقَدۡ خَابَ مَن دَسَّىٰهَا ١٠ಅದನ್ನು ಮಲಿನ ಗೊಳಿಸಿದವನು ಸೋತನು كَذَّبَتۡ ثَمُودُ بِطَغۡوَىٰهَآ ١١ಸಮೂದ್ ಜನಾಂಗದವರು ತಮ್ಮ ಅಹಂಕಾರದ ಕಾರಣ (ದೂತರನ್ನು) ತಿರಸ್ಕರಿಸಿದರು إِذِ ٱنۢبَعَثَ أَشۡقَىٰهَا ١٢ಅವರಲ್ಲಿನ ತೀರಾ ದುಷ್ಟನೊಬ್ಬನು ಎದ್ದು ನಿಂತನು فَقَالَ لَهُمۡ رَسُولُ ٱللَّهِ نَاقَةَ ٱللَّهِ وَسُقۡيَٰهَا ١٣ಆಗ ಅಲ್ಲಾಹನ ದೂತರು – ಅಲ್ಲಾಹನ ಒಂಟೆ ಮತ್ತು ಅವರ ನೀರು ಕುಡಿಯುವ ಸರದಿಯ ಕುರಿತು ಎಚ್ಚರವಿರಲಿ – ಎಂದರು فَكَذَّبُوهُ فَعَقَرُوهَا فَدَمۡدَمَ عَلَيۡهِمۡ رَبُّهُم بِذَنۢبِهِمۡ فَسَوَّىٰهَا ١٤ಆದರೆ ಅವರು ಅವರ (ದೂತರ) ಮಾತನ್ನು (ಸುಳ್ಳೆಂದು) ತಿರಸ್ಕರಿಸಿದರು ಹಾಗೂ ಅದರ (ಒಂಟೆಯ) ಕಾಲುಗಳನ್ನು ಕಡಿದು ಬಿಟ್ಟರು. ಆಗ ಅವರ ಪಾಪದ ಕಾರಣ ಅವರ ಒಡೆಯನು ಅವರ ಮೇಲೊಂದು ಶಿಕ್ಷೆಯನ್ನು ಎರಗಿಸಿದನು ಹಾಗೂ ಅವರನ್ನು ನೆಲಸಮ ಗೊಳಿಸಿಬಿಟ್ಟನು وَلَا يَخَافُ عُقۡبَٰهَا ١٥ಅದರ ಪರಿಣಾಮವೇನಾದೀತು ಎಂದು ಅವನು ಅಂಜಲಿಲ್ಲ