ملة الإسلام

السورة 82 · 19 آية · Abdussalam Puthige

سورة الانفطار باللغة الكانادية

السورة بالعربية مع التفسير استمع إلى سورة الانفطار (1,366 قارئاً)
مكيةسورة الانفطار١٩ آية

بِسۡمِ ٱللَّهِ ٱلرَّحۡمَٰنِ ٱلرَّحِيمِ

إِذَا ٱلسَّمَآءُ ٱنفَطَرَتۡ ١ಆಕಾಶವು ಬಿರಿದು ಬೀಳುವಾಗ وَإِذَا ٱلۡكَوَاكِبُ ٱنتَثَرَتۡ ٢ಮತ್ತು ನಕ್ಷತ್ರಗಳು ಉದುರುವಾಗ وَإِذَا ٱلۡبِحَارُ فُجِّرَتۡ ٣ಸಮುದ್ರಗಳು ವಿಲೀನವಾದಾಗ وَإِذَا ٱلۡقُبُورُ بُعۡثِرَتۡ ٤ಗೋರಿಗಳನ್ನು ಬಿಚ್ಚಲಾದಾಗ عَلِمَتۡ نَفۡسٌ مَّا قَدَّمَتۡ وَأَخَّرَتۡ ٥ಪ್ರತಿಯೊಬ್ಬನೂ ಅರಿಯುವನು, ತಾನು ಮುಂದೆ ಕಳಿಸಿದ್ದನ್ನು ಮತ್ತು ಹಿಂದೆ ಬಿಟ್ಟು ಬಂದುದನ್ನು يَٰٓأَيُّهَا ٱلۡإِنسَٰنُ مَا غَرَّكَ بِرَبِّكَ ٱلۡكَرِيمِ ٦ಮಾನವನೇ, ಆ ನಿನ್ನ ಉದಾರಿ ಒಡೆಯನ ವಿಷಯದಲ್ಲಿ ನಿನ್ನನ್ನು ಮೋಸಗೊಳಿಸಿದ ವಸ್ತು ಯಾವುದು ٱلَّذِي خَلَقَكَ فَسَوَّىٰكَ فَعَدَلَكَ ٧ಅವನೇ ನಿನ್ನನ್ನು ಸೃಷ್ಟಿಸಿದನು (ನಿನ್ನ ಅಂಗಾಂಗಗಳನ್ನು) ಸರಿಪಡಿಸಿದನು, ಸಂತುಲಿತವಾಗಿ ನಿನ್ನನ್ನು ರಚಿಸಿದನು فِيٓ أَيِّ صُورَةٍ مَّا شَآءَ رَكَّبَكَ ٨ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು كـَلَّا بَلۡ تُكَذِّبُونَ بِٱلدِّينِ ٩ಹಾಗಲ್ಲ – ನಿಜವಾಗಿ, ನೀವು ಪ್ರತಿಫಲದ ದಿನವನ್ನು ತಿರಸ್ಕರಿಸುತ್ತೀರಿ وَإِنَّ عَلَيۡكُمۡ لَحَٰفِظِينَ ١٠ನಿಮ್ಮ ಮೇಲೆ ಕಾವಲುಗಾರರು ನಿಯುಕ್ತರಾಗಿದ್ದಾರೆ كِرَامًا كَٰتِبِينَ ١١(ನಿಮ್ಮ ಕರ್ಮಗಳನ್ನು) ಬರೆದಿಡುವ ಗೌರವಾನ್ವಿತರು يَعۡلَمُونَ مَا تَفۡعَلُونَ ١٢ನೀವು ಮಾಡುವುದನ್ನೆಲ್ಲಾ ಅವರು ಬಲ್ಲರು إِنَّ ٱلۡأَبۡرَارَ لَفِي نَعِيمٍ ١٣ಸಜ್ಜನರು ಸ್ವರ್ಗದಲ್ಲಿ ಖಂಡಿತ ಐಶಾರಾಮದಲ್ಲಿರುವರು وَإِنَّ ٱلۡفُجَّارَ لَفِي جَحِيمٍ ١٤ದುಷ್ಟರು ನರಕಾಗ್ನಿಯಲ್ಲಿರುವರು يَصۡلَوۡنَهَا يَوۡمَ ٱلدِّينِ ١٥ಪ್ರತಿಫಲದ ದಿನ ಅವರು ಅದರೊಳಗೆ ಪ್ರವೇಶಿಸುವರು وَمَا هُمۡ عَنۡهَا بِغَآئِبِينَ ١٦ಅದರಿಂದ ಅವಿತಿರಲು ಅವರಿಗೆ ಸಾಧ್ಯವಾಗದು وَمَآ أَدۡرَىٰكَ مَا يَوۡمُ ٱلدِّينِ ١٧ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು ثُمَّ مَآ أَدۡرَىٰكَ مَا يَوۡمُ ٱلدِّينِ ١٨ಹೌದು – ಪ್ರತಿಫಲದ ದಿನವೇನೆಂದು ನಿಮಗೇನು ಗೊತ್ತು يَوۡمَ لَا تَمۡلِكُ نَفۡسٌ لِّنَفۡسٍ شَيۡـًٔاۖ وَٱلۡأَمۡرُ يَوۡمَئِذٍ لِّلَّهِ ١٩ಅಂದು ಯಾರಿಂದಲೂ ಯಾರಿಗೂ ಕಿಂಚಿತ್ತೂ ಪ್ರಯೋಜನವಾಗದು. ಅಧಿಕಾರವು ಅಂದು ಸಂಪೂರ್ಣವಾಗಿ ಅಲ್ಲಾಹನದ್ದಾಗಿರುವುದು

الترجمة: Abdussalam Puthige.