بِسۡمِ ٱللَّهِ ٱلرَّحۡمَٰنِ ٱلرَّحِيمِ
إِذَا ٱلشَّمۡسُ كُوِّرَتۡ ١ಸೂರ್ಯನನ್ನು ಮಡಚಿ ಬಿಡಲಾದಾಗ وَإِذَا ٱلنُّجُومُ ٱنكَدَرَتۡ ٢ನಕ್ಷತ್ರಗಳು ನಿಸ್ತೇಜವಾದಾಗ وَإِذَا ٱلۡجِبَالُ سُيِّرَتۡ ٣ಪರ್ವತಗಳನ್ನು ಚಲಾಯಿಸಲಾದಾಗ وَإِذَا ٱلۡعِشَارُ عُطِّلَتۡ ٤ತುಂಬು ಗರ್ಭಿಣಿಯಾಗಿರುವ ಒಂಟೆಗಳನ್ನು ಬಿಟ್ಟು ಬಿಡಲಾದಾಗ وَإِذَا ٱلۡوُحُوشُ حُشِرَتۡ ٥ಕಾಡು ಪ್ರಾಣಿಗಳನ್ನೆಲ್ಲಾ ಒಟ್ಟು ಸೇರಿಸಲಾದಾಗ وَإِذَا ٱلۡبِحَارُ سُجِّرَتۡ ٦ಸಮುದ್ರಗಳನ್ನು ಉಕ್ಕೇರಿಸಲಾದಾಗ وَإِذَا ٱلنُّفُوسُ زُوِّجَتۡ ٧ಜೀವಗಳನ್ನು (ಶರೀರಗಳೊಂದಿಗೆ) ಜೋಡಿಸಲಾದಾಗ وَإِذَا ٱلۡمَوۡءُۥدَةُ سُئِلَتۡ ٨ಜೀವಂತ ಹೂಳಲ್ಪಟ್ಟವಳೊಡನೆ ಪ್ರಶ್ನಿಸಲಾದಾಗ – بِأَيِّ ذَنۢبٍ قُتِلَتۡ ٩ಯಾವ ಪಾಪಕ್ಕಾಗಿ ಆಕೆಯನ್ನು ಕೊಲ್ಲಲಾಯಿತೆಂದು وَإِذَا ٱلصُّحُفُ نُشِرَتۡ ١٠ಕರ್ಮ ಪತ್ರಗಳನ್ನು ತೆರೆಯಲಾದಾಗ وَإِذَا ٱلسَّمَآءُ كُشِطَتۡ ١١ಮತ್ತು ಆಕಾಶದ ಕವಚವನ್ನು ಸರಿಸಲಾದಾಗ وَإِذَا ٱلۡجَحِيمُ سُعِّرَتۡ ١٢ನರಕದ ಅಗ್ನಿಯನ್ನು ಭುಗಿಲೆಬ್ಬಿಸಲಾದಾಗ وَإِذَا ٱلۡجَنَّةُ أُزۡلِفَتۡ ١٣ಸ್ವರ್ಗವನ್ನು ಹತ್ತಿರ ತರಲಾದಾಗ عَلِمَتۡ نَفۡسٌ مَّآ أَحۡضَرَتۡ ١٤ಪ್ರತಿಯೊಬ್ಬನಿಗೂ ತಿಳಿದು ಬಿಡುವುದು ತಾನೇನು ತಂದಿರುವೆನೆಂದು فَلَآ أُقۡسِمُ بِٱلۡخُنَّسِ ١٥ಹಾಗಲ್ಲ – ನಾನು, ಹಿನ್ನಡೆಯುವ ನಕ್ಷತ್ರಗಳ ಆಣೆ ಹಾಕುತ್ತೇನೆ ٱلۡجَوَارِ ٱلۡكُنَّسِ ١٦ಅವು ಸಂಚರಿಸುತ್ತವೆ ಮತ್ತು ಕಣ್ಮರೆಯಾಗುತ್ತವೆ وَٱلَّيۡلِ إِذَا عَسۡعَسَ ١٧ಮತ್ತು ಇರುಳು ಕಣ್ಮರೆಯಾಗುವ ಹೊತ್ತಿನ ಆಣೆ وَٱلصُّبۡحِ إِذَا تَنَفَّسَ ١٨ಮತ್ತು ಮುಂಜಾವು ಉಸಿರಾಡ ತೊಡಗುವಾಗಿನಾಣೆ إِنَّهُۥ لَقَوۡلُ رَسُولٍ كَرِيمٍ ١٩ಇದು (ಕುರ್ಆನ್) ಗೌರವಾನ್ವಿತ ದೂತನೊಬ್ಬನು ತಲುಪಿಸಿರುವ ಸಂದೇಶವಾಗಿದೆ ذِي قُوَّةٍ عِندَ ذِي ٱلۡعَرۡشِ مَكِينٍ ٢٠ಅವನು ತುಂಬಾ ಬಲಿಷ್ಠನೂ ವಿಶ್ವ ಸಿಂಹಾಸನದ ಒಡೆಯನ ಬಳಿ ಉನ್ನತ ಸ್ಥಾನ ಉಳ್ಳವನೂ ಆಗಿದ್ದಾನೆ مُّطَاعٍ ثَمَّ أَمِينٍ ٢١ಅವನು ಅನುಸರಣೀಯನೂ ವಿಶ್ವಾಸಾರ್ಹನೂ ಆಗಿರುತ್ತಾನೆ وَمَا صَاحِبُكُم بِمَجۡنُونٍ ٢٢ನಿಮ್ಮ ಸಂಗಾತಿ (ದೂತರು) ಹುಚ್ಚರೇನಲ್ಲ وَلَقَدۡ رَءَاهُ بِٱلۡأُفُقِ ٱلۡمُبِينِ ٢٣ಅವರು ತೆರೆದ ಬಾನಿನಂಚಿನಲ್ಲಿ ಆತನನ್ನು (ಜಿಬ್ರೀಲ್ರನ್ನು) ಕಂಡರು وَمَا هُوَ عَلَى ٱلۡغَيۡبِ بِضَنِينٍ ٢٤ಅವರು ಅಜ್ಞಾತ ಲೋಕದ ಮಾಹಿತಿಗಳನ್ನು ತಲುಪಿಸುವುದರಲ್ಲಿ ಜಿಪುಣರಲ್ಲ وَمَا هُوَ بِقَوۡلِ شَيۡطَٰنٍ رَّجِيمٍ ٢٥ಇದು (ಕುರ್ಆನ್) ಶಪಿತ ಶೈತಾನನ ವಚನವಲ್ಲ فَأَيۡنَ تَذۡهَبُونَ ٢٦ನೀವು ಅದೆಲ್ಲಿ ಅಲೆಯುತ್ತಿರುವಿರಿ إِنۡ هُوَ إِلَّا ذِكۡرٌ لِّلۡعَٰلَمِينَ ٢٧ಇದು ಸರ್ವ ಲೋಕಕ್ಕಾಗಿರುವ ಉಪದೇಶವಾಗಿರುತ್ತದೆ لِمَن شَآءَ مِنكُمۡ أَن يَسۡتَقِيمَ ٢٨ನಿಮ್ಮ ಪೈಕಿ ಇಷ್ಟ ಉಳ್ಳವನು ನೇರ ಮಾರ್ಗವನ್ನು ಹಿಡಿಯಲಿ وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلۡعَٰلَمِينَ ٢٩ನಿಮ್ಮ ಇಚ್ಛೆಯಿಂದ ಏನೂ ಆಗುವುದಿಲ್ಲ – ಸರ್ವಲೋಕಗಳ ಒಡೆಯನಾದ ಅಲ್ಲಾಹನು ಇಚ್ಛಿಸುವ ತನಕ